ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ನಾಲ್ವರು ಉದ್ಯಮದ ನಾಯಕರೊಂದಿಗೆ ಸಂವಾದ ನಡೆಸಿದರು. ಅವರು ಪೆಟ್ರೋನಾಸ್‌ನ ಅಧ್ಯಕ್ಷ  ಮತ್ತು ಗ್ರೂಪ್‌ ಸಿಇಒ ತಾನ್‌ ಶ್ರೀ ಟೆಂಕು ಮುಹಮ್ಮದ್‌ ತೌಫಿಕ್‌; ಟಾನ್‌ ಶ್ರೀ ಡಾಟೊ ಸೆರಿ ವಿನ್ಸೆಂಟ್‌ ಟಾನ್‌ ಚೀ ಯಿಯೋನ್‌, ಬೆರ್ಜಯಾ ಕಾರ್ಪೊರೇಷನ್‌ ಬರ್ಹಾದ್‌ನ ಸಂಸ್ಥಾಪಕ; ಡಾಟೊ ಅಮಿರುಲ್‌ ಫೈಸಲ್‌ ವಾನ್‌ ಜಹೀರ್‌, ಖಜಾನಾ ನ್ಯಾಷನಲ್‌ ಬೆರ್ಹಾದ್‌ನ ವ್ಯವಸ್ಥಾಪಕ ನಿರ್ದೇಶಕ; ಮತ್ತು ಫಿಸನ್‌ ಎಲೆಕ್ಟ್ರಾನಿಕ್ಸ್‌ನ ಸಂಸ್ಥಾಪಕ ಡಾಟೊ ಪುವಾ ಖೈನ್‌ ಸೆಂಗ್‌ ಅವರನ್ನು ಭೇಟಿಯಾದರು.

ಭಾರತ ಮತ್ತು ಮಲೇಷ್ಯಾ ನಡುವೆ ಬೆಳೆಯುತ್ತಿರುವ ಬಿ2ಬಿ ಸಂಪರ್ಕಗಳು ಮತ್ತು ಭಾರತದ ಬೆಳವಣಿಗೆಯ ಕಥೆಯಲ್ಲಿಮಲೇಷ್ಯಾದ ಕಂಪನಿಗಳ ಬಲವಾದ ಆಸಕ್ತಿಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಸುಗಮ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಸ್ಥಿರ, ಪರಿಣಾಮಕಾರಿ ಮತ್ತು ಊಹಿಸಬಹುದಾದ ವ್ಯಾಪಾರ ಮತ್ತು ನೀತಿ ವಾತಾವರಣವನ್ನು ಸೃಷ್ಟಿಸಲು ಇತ್ತೀಚಿನ ವರ್ಷಗಳಲ್ಲಿಭಾರತದಲ್ಲಿ ಕೈಗೊಂಡ ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಅವರು ಉಲ್ಲೇಖಿಸಿದರು. ಭಾರತವು ನೀಡುವ ಅವಕಾಶಗಳನ್ನು ಅದರಲ್ಲೂ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಡಿಜಿಟಲ್‌ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿಅನ್ವೇಷಿಸುವಂತೆ ಅವರು ಮಲೇಷ್ಯಾದಲ್ಲಿನ ವ್ಯವಹಾರಗಳನ್ನು ಪ್ರೋತ್ಸಾಹಿಸಿದರು. ಈ ನಿಟ್ಟಿನಲ್ಲಿ, 2026ರ ಫೆಬ್ರವರಿ 07ರಂದು ಕೌಲಾಲಂಪುರದಲ್ಲಿ10ನೇ ಭಾರತ-ಮಲೇಷ್ಯಾ ಸಿಇಒ ಫೋರಂ ಅನ್ನು ಆಯೋಜಿಸಿರುವುದನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು ಮತ್ತು ಅದರ ಚರ್ಚೆಗಳು ಭಾರತ-ಮಲೇಷ್ಯಾ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಗಾಢವಾಗಿಸಲು ಕಾರಣವಾಗುತ್ತವೆ ಎಂದು ಆಶಾವಾದ ವ್ಯಕ್ತಪಡಿಸಿದರು.

ವಿಕಸಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡ ಸುಧಾರಣೆಗಳನ್ನು ಉದ್ಯಮದ ನಾಯಕರು ಶ್ಲಾಘಿಸಿದರು ಮತ್ತು ಭಾರತದ ಬೆಳವಣಿಗೆಯ ಕಥೆಯಲ್ಲಿ ಬಲವಾದ ವಿಶ್ವಾಸವನ್ನು ವ್ಯಕ್ತಪಡಿಸಿದರು. ತಮ್ಮ ಹೂಡಿಕೆ ಬಂಡವಾಳಗಳನ್ನು ವಿಸ್ತರಿಸುವ ಮೂಲಕ ಮತ್ತು ಭಾರತೀಯ ಸಹವರ್ತಿಗಳೊಂದಿಗೆ ಜಂಟಿ ಉದ್ಯಮಗಳನ್ನು ಅನ್ವೇಷಿಸುವ ಮೂಲಕ ಭಾರತದಲ್ಲಿತಮ್ಮ ವ್ಯಾಪಾರ ಉಪಸ್ಥಿತಿಯನ್ನು ಹೆಚ್ಚಿಸಲು ಅವರು ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
EPFO settles 8.3 crore claims in FY26; cheque leaf upload reform benefits 7 crore members, says govt

Media Coverage

EPFO settles 8.3 crore claims in FY26; cheque leaf upload reform benefits 7 crore members, says govt
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 08 ಆಗಸ್ಟ್ 2026
August 08, 2026

Infrastructure + Inclusion + Innovation: How PM Modi’s Agenda is Rewiring India’s Growth Engine