ಶೇರ್
 
Comments
'Jal-Shakti Abhiyan' is becoming a huge success with public participation: PM Modi
during Mann Ki Baat Khelo India is encouraging young sporting talent across the country: PM Modi
Nearly 34,000 Bru-Reang refugees will be settled in Tripura: Prime Minister Modi
Violence does not solve any problem: PM Modi
'Gaganyaan Mission' will prove to be a milestone for New India: PM Modi
Padma Awards have become 'People's Awards': PM Modi

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ಜನವರಿ 26. ಗಣರಾಜ್ಯೋತ್ಸವ ದಿನದ ಅನಂತಾನಂತ ಶುಭಾಶಯಗಳು. ಇಂದು 2020 ರ ಮೊದಲ ಮನದ ಮಾತಿನಲ್ಲಿ ನಮ್ಮ ಭೇಟಿ. ಇದು ಈ ವರ್ಷದಲ್ಲಿ ಮೊದಲ ಕಾರ್ಯಕ್ರಮ ಕೂಡ, ಹಾಗೆಯೇ ಈ ದಶಕದ ಮೊದಲ ಕಾರ್ಯಕ್ರಮ ಸಹ ಆಗಿದೆ. ಗೆಳೆಯರೇ, ಈ ಬಾರಿ ಗಣರಾಜ್ಯೋತ್ಸವದ ಸಮಾರಂಭದ ಕಾರಣದಿಂದ ನಿಮ್ಮೊಂದಿಗಿನ ಮನದ ಮಾತಿನ ಸಮಯವನ್ನು ಬದಲಿಸುವುದು ಒಳ್ಳೆಯದು ಅನ್ನಿಸಿತು. ಆದ್ದರಿಂದ ಒಂದು ಬೇರೆ ಸಮಯವನ್ನು ನಿಗದಿಗೊಳಿಸಿ ಇಂದು ನಿಮ್ಮೊಂದಿಗೆ ಮನದ ಮಾತನ್ನು ಆಡುತ್ತಿದ್ದೇನೆ. ಗೆಳೆಯರೇ, ದಿನ ಬದಲಾಗುತ್ತದೆ, ವಾರಗಳು ಬದಲಾಗುತ್ತವೆ, ತಿಂಗಳುಗಳು ಸಹ ಉರುಳುತ್ತವೆ, ವರ್ಷಗಳೂ ಬದಲಾಗುತ್ತವೆ, ಆದರೆ ಭಾರತೀಯರ ಉತ್ಸಾಹ ಮತ್ತು “ನಾವು ಕೂಡ ಯಾರಿಗೂ ಕಡಿಮೆಯಿಲ್ಲ, ಏನಾದರೂ ಮಾಡಿಯೇ ಮಾಡುತ್ತೇವೆ” ಎನ್ನುವ ಈ ‘can do’ ಮನೋಭಾವ, ಸಂಕಲ್ಪದೊಂದಿಗೆ ಹೊರಹೊಮ್ಮುತ್ತಿದೆ. ದೇಶ ಮತ್ತು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ, ಪ್ರತಿದಿನ, ಮೊದಲಿಗಿಂತಲೂ ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತಿದೆ. ಗೆಳೆಯರೇ, ಮನದ ಮಾತು ವೇದಿಕೆಯಲ್ಲಿ ಹೊಸ ಹೊಸ ವಿಷಯಗಳ ಬಗ್ಗೆ ಚರ್ಚೆ ಮಾಡಲು ಮತ್ತು ಭಾರತವನ್ನು ವಿಜೃಂಭಿಸಲು ಮತ್ತೊಮ್ಮೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಮನದ ಮಾತು – sharing, caring and growing together ಎನ್ನುವುದಕ್ಕೆ ಒಂದು ಒಳ್ಳೆಯ ಹಾಗೂ ಸಾಮಾನ್ಯ ವೇದಿಕೆ ಆಗಿಬಿಟ್ಟಿದೆ. ಪ್ರತೀ ತಿಂಗಳೂ ಸಾವಿರಾರು ಸಂಖ್ಯೆಯಲ್ಲಿ ಜನರು, ತಮ್ಮ ಸಲಹೆಗಳು, ಪ್ರಯತ್ನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವುಗಳಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಕೆಲವು ಮಾತುಗಳು, ಜನರ ಅಸಾಧಾರಣ ಪ್ರಯತ್ನಗಳು ಇವುಗಳ ಬಗ್ಗೆ ನಮಗೆ ಚರ್ಚೆ ಮಾಡುವ ಅವಕಾಶ ಸಿಗುತ್ತದೆ.

ಯಾರೋ ಮಾಡಿ ತೋರಿಸಿದ್ದಾರೆ ಅಂದರೆ ನಾವೂ ಕೂಡ ಮಾಡಬಹುದೇ? ಆ ಪ್ರಯೋಗವನ್ನು ಇಡೀ ದೇಶದಲ್ಲಿ ಪುನರಾವರ್ತಿಸಿ ಒಂದು ದೊಡ್ಡ ಪರಿವರ್ತನೆಯನ್ನು ತರಬಹುದೇ? ಅದನ್ನು ಸಮಾಜದಲ್ಲಿ ಒಂದು ಸಹಜ ಅಭ್ಯಾಸದ ರೂಪದಲ್ಲಿ ವಿಕಸನಗೊಳಿಸಿ ಆ ಪರಿಪರ್ತನೆಗೆ ಒಂದು ಮಾನ್ಯತೆ ದೊರಕಿಸಿಕೊಡಬಹುದೇ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹುಡುಕುತ್ತಾ ಪ್ರತಿ ತಿಂಗಳು ಮನದ ಮಾತಿನಲ್ಲಿ ಕೆಲವು ಮನವಿಗಳು, ಆಹ್ವಾನಗಳು, ಏನನ್ನಾದರೂ ಮಾಡಿ ತೋರಿಸುವ ಸಂಕಲ್ಪಗಳು -ಇವುಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಕಳೆದ ಎμÉ್ಟೂೀ ವರ್ಷಗಳಲ್ಲಿ ನಾವು ‘No to single use plastic’, ‘ಖಾದಿ’, ಮತ್ತು ‘ಸ್ಥಳೀಯ ಖರೀದಿ’ ಇವುಗಳ ಬಗ್ಗೆ, ಸ್ವಚ್ಚತೆಯ ವಿಷಯವಾಗಿ, ಹೆಣ್ಣುಮಕ್ಕಳ ಮಾನ-ಸಮ್ಮಾನದ ಚರ್ಚೆಗಳು, less cash Economy ಯಂತಹ ಹೊಸ ವಿಚಾರಗಳು ಮತ್ತು ಅವುಗಳನ್ನು ಬಲಪಡಿಸುವುದು – ಇಂತಹ ಹಲವಾರು ಸಣ್ಣ ಸಣ್ಣ ಸಂಕಲ್ಪಗಳನ್ನು ಮಾಡಿರಬಹುದು. ಇಂತಹ ಹಲವಾರು ಸಂಕಲ್ಪಗಳ ಹುಟ್ಟು ನಮ್ಮ ಈ ಸಣ್ಣ ಪುಟ್ಟ ಮನದ ಮಾತುಗಳಲ್ಲೇ ಆಗಿದೆ. ಮತ್ತು ಅದಕ್ಕೆ ನೀವೇ ಬಲವನ್ನೂ ನೀಡಿದ್ದೀರಿ.

ಬಿಹಾರದ ಶ್ರೀಮಾನ್ ಶೈಲೇಶ್ ಅವರು ಬರೆದಿರುವ ಬಹಳ ಪ್ರೀತಿಯ ಒಂದು ಪತ್ರ ನನಗೆ ಸಿಕ್ಕಿದೆ. ಅಂದಹಾಗೆ, ಅವರು ಈಗ ಬಿಹಾರದಲ್ಲಿ ವಾಸಿಸುತ್ತಿಲ್ಲ. ಅವರು ದೆಹಲಿಯಲ್ಲಿ ಇದ್ದು ಯಾವುದೋ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು – “ಮೋದಿಯವರೇ, ನೀವು ಪ್ರತಿ ಮನದ ಮಾತು ಕಾರ್ಯಕ್ರಮದಲ್ಲಿ ಏನಾದರೂ ಅಪೀಲು ಮಾಡುತ್ತೀರಿ. ನಾನು ಅವುಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಈ ಛಳಿಗಾಲದಲ್ಲಿ ನಾನು ಜನರ ಮನೆಗಳಿಂದ ಬಟ್ಟೆಗಳನ್ನು ಒಟ್ಟು ಸೇರಿಸಿ ಅವಶ್ಯಕತೆ ಇದ್ದವರಿಗೆ ಹಂಚಿದ್ದೇನೆ. ಮನದ ಮಾತಿನಿಂದ ನಾನು ಬಹಳಷ್ಟು ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದೇನೆ. ಆದರೆ ನಿಧಾನವಾಗಿ ಕೆಲವನ್ನು ನಾನು ಮರೆತುಬಿಟ್ಟೆ ಮತ್ತೆ ಕೆಲವು ವಿಷಯಗಳು ಬಿಟ್ಟು ಹೋದವು. ನಾನು ಈ ಹೊಸವರ್ಷದಲ್ಲಿ ಮನದ ಮಾತಿನ ಬಗ್ಗೆ ಒಂದು ಚಾರ್ಟರ್ ಮಾಡಿದ್ದೇನೆ. ಅದರಲ್ಲಿ ಈ ಎಲ್ಲಾ ವಿಷಯಗಳ ಒಂದು ಪಟ್ಟಿ ಮಾಡಿದ್ದೇನೆ. ಹೇಗೆ ಜನರು ಹೊಸವರ್ಷದ ಸಂಕಲ್ಪ ಮಾಡುತ್ತಾರೋ ಅದೇ ರೀತಿ ಇದು ನನ್ನ ಹೊಸವರ್ಷದ ಸಾಮಾಜಿಕ ಸಂಕಲ್ಪ. ಇವೆಲ್ಲಾ ಸಣ್ಣ ಸಣ್ಣ ವಿಷಯಗಳು, ಆದರೆ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ನನಗೆ ಅನ್ನಿಸುತ್ತದೆ. ನೀವು ನನ್ನ ಈ ಚಾರ್ಟರ್‍ಗೆ ಆಟೋಗ್ರಾಫ್ ನೀಡಿ ನನಗೆ ಹಿಂತಿರುಗಿ ಕಳುಹಿಸುವುದಕ್ಕಾಗುತ್ತದೆಯೇ?” ಎಂದು ಬರೆದಿದ್ದಾರೆ. ಶೈಲೇಶ್ ಅವರೇ, ನಿಮಗೆ ಅನಂತಾನಂತ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಹೊಸವರ್ಷದ ಸಂಕಲ್ಪಕ್ಕೆ ಮನದ ಮಾತಿನ ಚಾರ್ಟರ್ ತುಂಬಾ ಹೊಸತನದಿಂದ ಕೂಡಿದೆ. ನಾನು ನನ್ನ ಕಡೆಯಿಂದ ಶುಭಕಾಮನೆಗಳನ್ನು ಬರೆದು ಇದನ್ನು ಖಂಡಿತವಾಗಿ ನಿಮಗೆ ಹಿಂತಿರುಗಿಸಿ ಕಳುಹಿಸುತ್ತೇನೆ. ಸ್ನೇಹಿತರೇ, ಈ ಮನದ ಮಾತಿನ ಚಾರ್ಟರ್‍ನ್ನು ನಾನು ಓದುತ್ತಿರುವಾಗ ಇಷ್ಟೊಂದು ಮಾತುಗಳಿವೆಯೇ ಎಂದು ನನಗೆ ಕೂಡ ಆಶ್ಚರ್ಯವಾಯಿತು. ಎಷ್ಟೊಂದು ಹ್ಯಾಶ್ ಟ್ಯಾಗ್ ಗಳಿವೆ,, ಮತ್ತು ನಾವೆಲ್ಲಾ ಸೇರಿ ಬಹಳಷ್ಟು ಪ್ರಯತ್ನವನ್ನೂ ಪಟ್ಟಿದ್ದೇವೆ. ಒಮ್ಮೆ ನಾವು ‘ಸಂದೇಶ್ ಟು ಸೋಲ್ಜರ್ಸ್’ ನ ಜೊತೆಗೆ ನಮ್ಮ ಸೈನಿಕರ ಜೊತೆ ಭಾವನಾತ್ಮಕವಾಗಿ ಮತ್ತು ಸಧೃಢವಾಗಿ ಬೆಸೆದುಕೊಳ್ಳುವ ಅಭಿಯಾನವನ್ನು ನಡೆಸಿದೆವು, ‘Khadi for Nation – Khadi for Fashion’ ನ ಜೊತೆಗೆ ಖಾದಿಯ ವ್ಯಾಪಾರವನ್ನು ಹೊಸ ಗುರಿಯತ್ತ ತಲುಪಿಸಿದೆವು, ‘buy local’ ಎನ್ನುವ ಮಂತ್ರವನ್ನು ನಮ್ಮದಾಗಿಸಿಕೊಂಡೆವು, ‘ನಾವು ಸಧೃಢರಾಗಿದ್ದರೆ ಭಾರತ ಸಧೃಢ’ ಎನ್ನುತ್ತಾ ಫಿಟ್ನೆಸ್‍ನ ವಿಷಯವಾಗಿ ಜಾಗೃತಿಯನ್ನು ಹೆಚ್ಚಿಸಿದೆವು, ‘My Clean India’ ಅಥವಾ ‘Statue Cleaning’ ನ ಪ್ರಯತ್ನದಿಂದ ಸ್ವಚ್ಚತೆಯನ್ನು ಒಂದು mಚಿss movemeಟಿಣ ಮಾಡಿದೆವು, #ಓoಖಿoಆಡಿugs, #NoToDrugs, #BharatKiLakshami, #Self4Society, #StressFreeExams, #SurakshaBandhan, #DigitalEconomy, #RoadSafety,,,,,, ಅಬ್ಬಬ್ಬಾ,,, ಎಣಿಸುವುದಕ್ಕೆ ಆಗುತ್ತಿಲ್ಲ..

ಶೈಲೇಶ್ ಅವರೇ, ನಿಮ್ಮ ಈ ಮನದ ಮಾತಿನ ಚಾರ್ಟರ್ ನೋಡಿ ಈ ಪಟ್ಟಿ ತುಂಬಾ ದೊಡ್ಡದಿದೆ ಎಂದು ನನಗೆ ಅರಿವಾಯಿತು. ಬನ್ನಿ, ಈ ಯಾತ್ರೆಯನ್ನು ಮುಂದುವರೆಸೋಣ. ಮನದ ಮಾತಿನ ಚಾರ್ಟರ್‍ನಿಂದ ನಿಮ್ಮ ಇಷ್ಟದ ಯಾವುದೇ ರೀತಿಯ ವಿಷಯಗಳಿಗೆ ಕೈಜೋಡಿಸಿ. ಹ್ಯಾಷ್ ಟ್ಯಾಗ್ ಉಪಯೋಗಿಸಿ ಎಲ್ಲರೊಂದಿಗೆ ಹೆಮ್ಮೆಯಿಂದ ನಿಮ್ಮ ಕೊಡುಗೆಯನ್ನು ಹಂಚಿಕೊಳ್ಳಿ. ಸ್ನೇಹಿತರು, ಸಂಬಂಧಿಕರು ಮತ್ತು ಎಲ್ಲರನ್ನೂ ಪ್ರೇರೇಪಿಸಿ. ಪ್ರತಿಯೊಬ್ಬ ಭಾರತೀಯನೂ ಒಂದು ಹೆಜ್ಜೆ ನಡೆದರೆ ನಮ್ಮ ದೇಶವು 130 ಕೋಟಿ ಹೆಜ್ಜೆಗಳಷ್ಟು ಮುನ್ನುಗ್ಗುತ್ತದೆ. ಚರೈವೇತಿ – ಚರೈವೇತಿ – ಚರೈವೇತಿ – ಮುಂದೆ ಸಾಗುತ್ತಿರು – ಸಾಗುತ್ತಿರು – ಮುಂದೆ ಸಾಗುತ್ತಿರು ಎನ್ನುವ ಮಂತ್ರವನ್ನು ಮನಗಂಡು ನಮ್ಮ ಪ್ರಯತ್ನ ಮಾಡುತ್ತಲೇ ಇರೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಮನದ ಮಾತು ಚಾರ್ಟರ್‍ನ ಬಗ್ಗೆ ಮಾತನಾಡಿದೆವು. ಸ್ವಚ್ಚತೆಯ ನಂತರ ಜನರ ಪಾಲ್ಗೊಳ್ಳುವಿಕೆಯ ಭಾವನೆ ಅಂದರೆ participative spirit ಇಂದು ಮತ್ತೊಂದು ಕ್ಷೇತ್ರದಲ್ಲಿ ಬಹಳ ವೇಗವನ್ನು ಪಡೆದುಕೊಳ್ಳುತ್ತಿದೆ – ಅದು … “ಜಲ ಸಂರಕ್ಷಣೆ”. ನೀರಿನ ಸಂರಕ್ಷಣೆಗಾಗಿ ಬಹಳಷ್ಟು ಹೊಸ ಕಲ್ಪನೆಯ ಪ್ರಯತ್ನಗಳು ದೇಶದ ಮೂಲೆ ಮೂಲೆಯಲ್ಲೂ ವ್ಯಾಪಕವಾಗಿ ನಡೆಯುತ್ತಿವೆ. ಕಳೆದ ಮಾನ್ಸೂನ್ ಸಮಯದಲ್ಲಿ ಪ್ರಾರಂಭವಾದ ಈ ‘ಜಲ-ಶಕ್ತಿ ಅಭಿಯಾನ’, ಜನರ ಪಾಲ್ಗೊಳ್ಳುವಿಕೆಯಿಚಿದ, ಸಫಲತೆಯ ಕಡೆಗೆ ಮುಂದುವರೆಯುತ್ತಿದೆ ಎಂದು ಹೇಳುವುದಕ್ಕೆ ನನಗೆ ಬಹಳ ಸಂತೋಷವಾಗುತ್ತದೆ. ಹೆಚ್ಚಿನ ಸಂಖ್ಯೆಯ ಕೆರೆ -ಕುಂಟೆಗಳ ನಿರ್ಮಾಣವಾಗಿದೆ. ಈ ಅಭಿಯಾನದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರೂ ತಮ್ಮ ಕೊಡುಗೆ ನೀಡಿದ್ದಾರೆ ಎನ್ನುವುದು ಎಲ್ಲಕ್ಕಿಂತ ದೊಡ್ಡ ವಿಷಯ. ಈಗ ರಾಜಾಸ್ಥಾನದ ಝಾಲೋರ್ ಜಿಲ್ಲೆಯನ್ನೇ ನೋಡಿ, ಇಲ್ಲಿಯ ಎರಡು ಐತಿಹಾಸಿಕ ನೀರಿನ ಕೊಳಗಳು, ಕೊಳಚೆ ಮತ್ತು ದುರ್ನಾತ ಬೀರುವ ನೀರಿನ ಆಗರವಾಗಿದ್ದವು. ಆಮೇಲೇನು.. ಭದ್ರಾಯು ಮತ್ತು ಥಾನ್‍ವಾಲಾ ಪಂಚಾಯ್ತಿಯ ನೂರಾರು ಜನರು ಜಲಶಕ್ತಿ ಅಭಿಯಾನದ ಅಡಿಯಲ್ಲಿ ಇವುಗಳನ್ನು ಪುನರುಜ್ಜೀವನಗೊಳಿಸುವ ಪ್ರತಿಜ್ಞೆ ಮಾಡಿದರು. ಆ ಜನರು ಮಳೆಗಾಲಕ್ಕೆ ಮುಂಚೆಯೇ ಈ ಕೊಳಗಳಲ್ಲಿ ಸೇರಿಕೊಂಡಿದ್ದ ಕೊಳಚೆ ನೀರು, ಕಸ, ಕೆಸರು ಇವನ್ನೆಲ್ಲ ಸ್ವಚ್ಚಗೊಳಿಸುವುದಕ್ಕೆ ಸೇರಿಕೊಂಡರು. ಈ ಅಭಿಯಾನಕ್ಕಾಗಿ ಕೆಲವರು ಶ್ರಮದಾನ ಮಾಡಿದರೆ ಕೆಲವರು ಧನಸಹಾಯ ಮಾಡಿದರು. ಇದರ ಪರಿಣಾಮ . . ಇಂದು ಆ ಕೊಳಗಳು ಅಲ್ಲಿಯ ಜನರ ಜೀವನಾಡಿಯಾಗಿವೆ. ಉತ್ತರ ಪ್ರದೇಶದ ಬಾರಾಬಂಕಿಯ ಕಥೆ ಕೂಡ ಇದೇ ರೀತಿಯದ್ದಾಗಿದೆ. ಇಲ್ಲಿ 43 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸರಾಹಿ ಸರೋವರ ತನ್ನ ಕೊನೆಯುಸಿರನ್ನು ಎಳೆಯುತ್ತಿತ್ತು. ಆದರೆ ಗ್ರಾಮೀಣ ಜನರು ತಮ್ಮ ಸಂಕಲ್ಪ ಶಕ್ತಿಯಿಂದ ಇದಕ್ಕೆ ಹೊಸ ಜೀವ ತುಂಬಿದರು. ಇಷ್ಟು ದೊಡ್ಡ ಕೆಲಸದ ದಾರಿಯಲ್ಲಿ ಇವರು ಯಾವುದೇ ರೀತಿಯ ಕೊರತೆಯೂ ಬಾರದಂತೆ ನೋಡಿಕೊಂಡರು. ಒಂದರ ಹಿಂದೆ ಒಂದರಂತೆ ಎμÉ್ಟೂೀ ಹಳ್ಳಿಗಳು ಇದರಲ್ಲಿ ಬೆಸೆದುಕೊಂಡವು. ಇವರೆಲ್ಲ ಸರೋವರದ ನಾಲ್ಕೂ ಕಡೆ ಒಂದು ಮೀಟರ್ ಎತ್ತರದ ಕಟ್ಟೆಯನ್ನು ನಿರ್ಮಿಸಿದರು. ಇಂದು ಸರೋವರದಲ್ಲಿ ನೀರು ತುಂಬಿ ಕಂಗೊಳಿಸುತ್ತಿದೆ ಮತ್ತು ಸುತ್ತಮುತ್ತಲ ವಾತಾವರಣದಲ್ಲಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ.

ಉತ್ತರಾಖಂಡದ ಅಲ್ಮೋರಾ – ಹಲ್‍ದ್ವಾನಿ ಹೈವೇಗೆ ತಾಕಿಕೊಂಡಿರುವ ಸುನಿಯಾಕೊಟ್ ಹಳ್ಳಿಯಿಂದ ಕೂಡ ಜನರ ಪಾಲ್ಗೊಳ್ಳುವಿಕೆಯ ಇಂತಹದೇ ಒಂದು ಉದಾಹರಣೆ ನಮ್ಮ ಮುಂದಿದೆ. ಜಲಕ್ಷಾಮದಿಂದ ಪಾರಾಗಲು ಹಳ್ಳಿಯ ಜನರು ತಾವೇ ಸ್ವತಃ ಹಳ್ಳಿಯವರೆಗೆ ನೀರನ್ನು ತರುವ ಸಂಕಲ್ಪ ಮಾಡಿದರು. ಆಮೇಲೇನು? ಜನರು ತಮ್ಮಲ್ಲೇ ದುಡ್ಡು ಹೊಂದಿಸಿದರು, ಯೋಜನೆ ತಯಾರಾಯಿತು, ಶ್ರಮದಾನ ನಡೆಯಿತು ಮತ್ತು ಒಂದು ಕಿಲೋಮೀಟರ್ ದೂರದಿಂದ ಹಳ್ಳಿಯವರೆಗೆ ಕೊಳವೆಗಳನ್ನು ಅಳವಡಿಸಲಾಯಿತು, ಪಂಪಿಂಗ್ ಸ್ಟೇಷನ್ ಹಾಕಲಾಯಿತು, ಎರಡು ದಶಕಗಳಿಗೂ ಹೆಚ್ಚಿನ ಕಾಲದ ಸಮಸ್ಯೆ ನೋಡುನೋಡುತ್ತಿದ್ದಂತೆ ನಿವಾರಣೆಯಾಯಿತು.

ಅದೇ ರೀತಿ ತಮಿಳುನಾಡಿನಿಂದ ಬೋರ್ ವೆಲ್ ಗೆ ಮಳೆನೀರು ಸಂಗ್ರಹಿಸಿಕೊಡುವ ಬಹಳ ಒಳ್ಳೆಯ ಬಹಳ ಒಳ್ಳೆಯ ನವೀನ ಮಾದರಿಯ ಉಪಾಯ ತಿಳಿದು ಬಂದಿದೆ. ದೇಶದೆಲ್ಲೆಡೆ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂತಹ ಬಹಳಷ್ಟು ಕಥೆಗಳಿವೆ. ಮತ್ತು ಇವು ನವ ಭಾರತದ ಸಂಕಲ್ಪಕ್ಕೆ ಬಲ ನೀಡುತ್ತಿವೆ. ಇಂದು ನಮ್ಮ ಜಲಶಕ್ತಿ ಚಾಂಪಿಯನ್‍ಗಳ ಕಥೆಗಳನ್ನು ಕೇಳುವುದಕ್ಕೆ ಇಡೀ ದೇಶ ಉತ್ಸುಕತೆ ತೋರುತ್ತಿದೆ. ನೀರಿನ ಉಳಿತಾಯ ಮತ್ತು ನೀರಿನ ಸಂರಕ್ಷಣೆಗಾಗಿ ಆಗುತ್ತಿರುವ ನಿಮ್ಮ ಅಥವಾ ನಿಮ್ಮ ಸುತ್ತಮುತ್ತಲ ಜನರ ಪ್ರಯತ್ನಗಳ ಕಥೆಗಳನ್ನು, ಭಾವಚಿತ್ರಗಳು ಮತ್ತು ವೀಡಿಯೊಗಳನ್ನು #jalshakti4India ಇದರಲ್ಲಿ ಖಂಡಿತವಾಗಿ ಹಂಚಿಕೊಳ್ಳಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿ.

ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ಇಂದು ಮನದ ಮಾತಿನ ಮುಖಾಂತರ ನಾನು ಅಸ್ಸಾಂ ಸರ್ಕಾರಕ್ಕೂ ಮತ್ತು ಅಸ್ಸಾಂ ಜನತೆಗೂ ‘ಖೇಲೋ ಇಂಡಿಯಾ’ ದ ಅತ್ಯುತ್ತಮ ಆತಿಥ್ಯಕ್ಕ್ಕೆ ಅನಂತಾನಂತ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಗೆಳೆಯರೇ, ಇದೇ ಜನವರಿ 22 ರಂದು ಗುವಹಾಟಿಯಲ್ಲಿ ಮೂರನೇ ‘ಖೇಲೋ ಇಂಡಿಯಾ ಗೇಮ್ಸ್’ ಇದರ ಮುಕ್ತಾಯ ಸಮಾರಂಭ ಆಗಿದೆ. ಇದರಲ್ಲಿ ವಿಭಿನ್ನ ರಾಜ್ಯಗಳ ಸುಮಾರು 6 ಸಾವಿರ ಆಟಗಾರರು ಭಾಗವಹಿಸಿದ್ದರು. ಆಟಗಳ ಈ ಮಹೋತ್ಸವದಲ್ಲಿ 80 ರೆಕಾರ್ಡ್‍ಗಳು ಮುರಿಯಲ್ಪಟ್ಟವು ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು ಮತ್ತು ಅವುಗಳಲ್ಲಿ 56 ರೆಕಾರ್ಡ್‍ಗಳನ್ನು ಮುರಿಯುವ ಕೆಲಸವನ್ನು ನಮ್ಮ ಹೆಣ್ಣುಮಕ್ಕಳು ಮಾಡಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಈ ಸಾಧನೆಯ ಶ್ರೇಯಸ್ಸು ಹೆಣ್ಣುಮಕ್ಕಳಿಗೆ ಸಲ್ಲುತ್ತದೆ. ವಿಜೇತರೂ ಸೇರಿದಂತೆ ಭಾಗವಹಿಸಿದ ಎಲ್ಲಾ ಆಟಗಾರರಿಗೂ ನಾನು ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಜೊತೆಗೆ ಖೇಲೋ ಇಂಡಿಯಾ ಗೇಮ್ಸ್‍ನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಇದರೊಂದಿಗೆ ಕಾರ್ಯ ನಿರ್ವಹಿಸಿದ ಎಲ್ಲಾ ಜನರಿಗೂ, ತರಬೇತುದಾರರಿಗೂ ಮತ್ತು ತಾಂತ್ರಿಕ ಅಧಿಕಾರಿಗಳಿಗೂ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. ಪ್ರತಿ ವರ್ಷವೂ ಖೇಲೋ ಇಂಡಿಯಾ ಗೇಮ್ಸ್‍ನಲ್ಲಿ ಆಟಗಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಎನ್ನುವುದು ನಮಗೆಲ್ಲರಿಗೂ ಬಹಳ ಸಂತಸದ ವಿಚಾರ. ಇದು, ಶಾಲಾ ಮಟ್ಟದಲ್ಲಿ ಮಕ್ಕಳಲ್ಲಿ ಆಟಗಳ ಬಗ್ಗೆ ಒಲವು ಎಷ್ಟು ಹೆಚ್ಚಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. 2018 ರಲ್ಲಿ ಖೇಲೋ ಇಂಡಿಯಾ ಗೇಮ್ಸ್ ಪ್ರಾರಂಭವಾದಾಗ ಇದರಲ್ಲಿ 3500 ಆಟಗಾರರು ಭಾಗವಹಿಸಿದ್ದರು. ಆದರೆ ಕಳೆದ ಮೂರು ವರ್ಷಗಳಲ್ಲಿ ಆಟಗಾರರ ಸಂಖ್ಯೆ 6 ಸಾವಿರಕ್ಕೂ ಅಧಿಕವಾಗಿದೆ ಅಂದರೆ ಸುಮಾರು ಎರಡರಷ್ಡಾಗಿದೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಇದಿಷ್ಟೆ ಅಲ್ಲ, ಬರೀ ಮೂರು ವರ್ಷಗಳಲ್ಲಿ ಖೇಲೋ ಇಂಡಿಯಾ ಗೇಮ್ಸ್‍ನ ಮೂಲಕ 3200 ಪ್ರತಿಭಾವಂತ ಮಕ್ಕಳು ಹೊರಹೊಮ್ಮಿದ್ದಾರೆ. ಇವರಲ್ಲಿ ಬಹಳಷ್ಟು ಮಕ್ಕಳು ಅಭಾವ ಮತ್ತು ಬಡತನದ ಮಧ್ಯೆ ಅರಳಿ ದೊಡ್ಡವರಾಗಿದ್ದಾರೆ. ಖೇಲೋ ಇಂಡಿಯಾ ಗೇಮ್ಸ್‍ನಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಅವರ ತಂದೆ ತಾಯಿಯರ ಧೈರ್ಯ ಮತ್ತು ಧೃಢ ಸಂಕಲ್ಪದ ಕಥೆಗಳು ಹೇಗಿವೆ ಎಂದರೆ ಅವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುತ್ತವೆ. ಗುವಹಾಟಿಯ ಪೂರ್ಣಿಮಾ ಮಂಡಲ್ ಅವರನ್ನೇ ನೋಡಿ, ಅವರು ಗುವಹಾಟಿ ನಗರಸಭೆಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಾರೆ, ಆದರೆ ಅವರ ಮಗಳು ಮಾಳವಿಕಾ ಅಲ್ಲಿ ಫುಟ್‍ಬಾಲ್‍ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿದಳು, ಅವರ ಒಬ್ಬ ಮಗ ಸುಜಿತ್ ಖೋಖೋನಲ್ಲಿ ಮತ್ತು ಎರಡನೇ ಮಗ ಪ್ರದೀಪ್ ಹಾಕಿಯಲ್ಲಿ ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸಿದ್ದರು.

ಸ್ವಲ್ಪ ಇದೇ ರೀತಿಯ ಹೆಮ್ಮೆ ನೀಡುವ ಕಥೆ ತಮಿಳುನಾಡಿನ ಯೋಗಾನಾಥನ್ ಅವರದ್ದು. ಅವರು ತಮಿಳುನಾಡಿನಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಆದರೆ ಇವರ ಮಗಳು ಪೂರ್ಣಶ್ರೀ ವೆಯಿಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಪಡೆದುಕೊಂಡು ಪ್ರತಿಯೊಬ್ಬರ ಮನ ಗೆದ್ದಳು. ನಾನು ಡೇವಿಡ್ ಬೆಕ್‍ಹ್ಯಾಮ್ ಅವರ ಹೆಸರನ್ನು ಹೇಳಿದರೆ ಅವರು ಪ್ರಸಿದ್ಧ ಅಂತರರಾಷ್ಟ್ರೀಯ ಫುಟ್ ಬಾಲ್ ಆಟಗಾರ ಎಂದು ನೀವು ಹೇಳುತ್ತೀರಿ. ಆದರೆ ಈಗ ನಮ್ಮ ಬಳಿಯಲ್ಲಿಯೂ ಒಬ್ಬ ಡೇವಿಡ್ ಬೆಕ್‍ಹ್ಯಾಮ್ ಇದ್ದಾನೆ. ಅವನು ಗುವಹಾಟಿಯ ಯೂಥ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಅದೂ ಸಹ 200 ಮೀಟರ್‍ನ ಸೈಕ್ಲಿಂಗ್ ಸ್ಪರ್ಧೆಯ ಸ್ಪ್ರಿಂಟ್ ಇವೆಂಟ್‍ನಲ್ಲಿ!! ಕಾರ್ ನಿಕೊಬಾರ್ ದ್ವೀಪದಲ್ಲಿ ವಾಸಿಸೋ ಡೇವಿಡ್‍ಗೆ ತಂದೆ ತಾಯಿಯ ನೆರಳು ಬಾಲ್ಯದಲ್ಲೇ ಅಳಿಸಿಹೋಗಿತ್ತು. ಚಿಕ್ಕಪ್ಪ ಇವನನ್ನು ಫುಟ್‍ಬಾಲ್ ಆಟಗಾರನನ್ನಾಗಿ ಮಾಡಬೇಕು ಎಂದು ಆಶಿಸಿದ್ದರು ಅದಕ್ಕಾಗಿ ಪ್ರಖ್ಯಾತ ಫುಟ್‍ಬಾಲ್ ಆಟಗಾರನ ಹೆಸರನ್ನು ಇವನಿಗೆ ಇಟ್ಟಿದ್ದರು. ಆದರೆ ಇವನ ಮನಸ್ಸು ಸೈಕ್ಲಿಂಗ್‍ನಲ್ಲಿ ನೆಟ್ಟಿತ್ತು. ಖೇಲೋ ಇಂಡಿಯಾ ಸ್ಕೀಮ್‍ನ ಮುಖಾಂತರ ಇವನ ಆಸೆಯೂ ಪೂರೈಸಿತು ಮತ್ತು ನೋಡಿ, ಇಂದು ಇವನು ಸೈಕ್ಲಿಂಗ್‍ನಲ್ಲಿ ಒಂದು ಹೊಸ ರೆಕಾರ್ಡ್ ಮಾಡಿದ್ದಾನೆ.

ಭಿವಾನಿಯ ಪ್ರಶಾಂತ್ ಸಿಂಗ್ ಕನ್ಹಯ್ಯ ಪೋಲ್‍ವಾಲ್ಟ್‍ನಲ್ಲಿ ತನ್ನದೇ ಆದ ರಾಷ್ಟ್ರಮಟ್ಟದ ರೆಕಾರ್ಡ್ ಮುರಿದ. 19 ವರ್ಷದ ಪ್ರಶಾಂತ್ ಒಬ್ಬ ರೈತ ಕುಟುಂಬದವನು. ಪ್ರಶಾಂತ್ ಮಣ್ಣಿನಲ್ಲಿ ಪೋಲ್‍ವಾಲ್ಟ್‍ ಅಭ್ಯಾಸ ಮಾಡುತ್ತಿದ್ದ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದನ್ನು ತಿಳಿದ ಮೇಲೆ ಕ್ರೀಡಾ ಇಲಾಖೆ ಅವನ

 

 

 

 

 

 

 

 

 

 

 

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
'Foreign investment in India at historic high, streak to continue': Piyush Goyal

Media Coverage

'Foreign investment in India at historic high, streak to continue': Piyush Goyal
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಜುಲೈ 2021
July 25, 2021
ಶೇರ್
 
Comments

PM Narendra Modi’s Mann Ki Baat strikes a chord with the nation

India is on the move and growing everyday under the leadership of Modi Govt