ಶೇರ್
 
Comments
"ಕ್ರೀಡಾಪಟುಗಳ ಅದ್ಭುತ ಕಠಿಣ ಪರಿಶ್ರಮದಿಂದಾಗಿ, ದೇಶವು ಸ್ಫೂರ್ತಿದಾಯಕ ಸಾಧನೆಯೊಂದಿಗೆ ಆಜಾದಿ ಕಾ ಅಮೃತ್ ಕಾಲ್ ಗೆ ಪ್ರವೇಶಿಸುತ್ತಿದೆ"
"ಕ್ರೀಡಾಪಟುಗಳು ಕ್ರೀಡೆಯಲ್ಲಿ ಮಾತ್ರವಲ್ಲ ಇತರ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಲು ದೇಶದ ಯುವಕರನ್ನು ಪ್ರೇರೇಪಿಸುತ್ತಾರೆ"
"ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಮಹಾನ್ ಶಕ್ತಿಯಾಗಿದ್ದ ಏಕತೆಯ ಚಿಂತನೆ ಮತ್ತು ಗುರಿಯೊಂದಿಗೆ ನೀವು ದೇಶವನ್ನು ಬೆಸೆಯಿರಿ"
"ಉಕ್ರೇನ್ ನಲ್ಲಿ ತ್ರಿವರ್ಣ ಧ್ವಜದ ಶಕ್ತಿಯು ಕಾಣಲು ಸಿಕ್ಕಿತು, ಅಲ್ಲಿ ಅದು ಭಾರತೀಯರಿಗೆ ಮಾತ್ರವಲ್ಲ, ಇತರ ದೇಶಗಳ ನಾಗರಿಕರಿಗೂ ಯುದ್ಧಭೂಮಿಯಿಂದ ಪಾರಾಗಿ ಹೊರಬರುವಲ್ಲಿ ರಕ್ಷಣಾತ್ಮಕ ಗುರಾಣಿಯಾಯಿತು”
"ಜಾಗತಿಕವಾಗಿ ಅತ್ಯುತ್ತಮ, ಎಲ್ಲರನ್ನೂ ಒಳಗೊಳ್ಳುವ ವೈವಿಧ್ಯಮಯ ಮತ್ತು ಕ್ರಿಯಾತ್ಮಕವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಪ್ರತಿಭೆ ಹಿಂದುಳಿಯಲು ಬಿಡಬಾರದು"

2022ರ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ನಲ್ಲಿ ಪಾಲ್ಗೊಂಡ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಸನ್ಮಾನಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಭಾಗವಹಿಸಿದ್ದರು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಮತ್ತು ಮಾಹಿತಿ ಹಾಗು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಉಪಸ್ಥಿತರಿದ್ದರು.

ಬರ್ಮಿಂಗ್ಹ್ಯಾಮ್ನಲ್ಲಿ ನಡೆದ 2022ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ವಿವಿಧ ವಿಭಾಗಗಳಲ್ಲಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದ್ದಕ್ಕಾಗಿ ಆಟಗಾರರು ಮತ್ತು ತರಬೇತುದಾರರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. ಪ್ರಧಾನಮಂತ್ರಿಯವರು ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಸ್ವಾಗತಿಸಿದರು ಮತ್ತು ಸಿಡಬ್ಲ್ಯೂಜಿ 2022 ರಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ಕ್ರೀಡಾಪಟುಗಳ ಅದ್ಭುತ ಕಠಿಣ ಪರಿಶ್ರಮದಿಂದಾಗಿ, ದೇಶವು ಸ್ಫೂರ್ತಿದಾಯಕ, ಪ್ರೇರಣಾದಾಯಕ ಸಾಧನೆಯೊಂದಿಗೆ 'ಆಜಾದಿ ಕಾ ಅಮೃತ್ ಕಾಲ್'ಗೆ ಪ್ರವೇಶಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಕಳೆದ ಕೆಲವು ವಾರಗಳಲ್ಲಿ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ಮಾಡಿರುವುದನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಪ್ರದರ್ಶನ ಹಾಗು ಸಾಧನೆಯ ಜೊತೆಗೆ, ದೇಶವು ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ನ್ನು ಆಯೋಜಿಸಿದೆ ಎಂದರು. ಅಥ್ಲೀಟ್ ಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, "ನೀವೆಲ್ಲರೂ ಬರ್ಮಿಂಗ್ ಹ್ಯಾಮ್ ನಲ್ಲಿ ಸ್ಪರ್ಧಿಸುತ್ತಿದ್ದಾಗ, ಕೋಟ್ಯಂತರ ಭಾರತೀಯರು ಭಾರತದಲ್ಲಿ ತಡರಾತ್ರಿಯವರೆಗೂ ಎಚ್ಚರವಾಗಿದ್ದರು, ನಿಮ್ಮ ಪ್ರತಿಯೊಂದು ಆಟದ ನಡೆಯನ್ನು ಗಮನಿಸುತ್ತಿದ್ದರು. ಅನೇಕ ಜನರು ಅಲಾರಂಗಳನ್ನು ಅಳವಡಿಸಿ ಮಲಗುತ್ತಿದ್ದರು, ಇದರಿಂದಾಗಿ ಅವರು ಪ್ರದರ್ಶನಗಳ ಬಗ್ಗೆ ಅಪ್ ಡೇಟ್ ಆಗಿದ್ದರು." ಎಂದೂ ಹೇಳಿದರು. ತಂಡಕ್ಕೆ ಬೀಳ್ಕೊಡುಗೆ ನೀಡಿದ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ನಾವು ಇಂದು ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಮಹಾನ್ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸಂಖ್ಯೆಗಳು ಇಡೀ ಕಥೆಯನ್ನು ಪ್ರತಿಬಿಂಬಿಸುವುದಿಲ್ಲ ಏಕೆಂದರೆ ಅನೇಕ ಪದಕಗಳು ಅತ್ಯಂತ ಸಣ್ಣ ಅಂತರದಲ್ಲಿ ತಪ್ಪಿಹೋಗಿವೆ, ಇದರ ಬಗ್ಗೆ ದೃಢ ನಿರ್ಧಾರವನ್ನು ಕೈಗೊಂಡಿರುವ ಆಟಗಾರರು ಶೀಘ್ರದಲ್ಲೇ ಸರಿಪಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. . ಕಳೆದ ಬಾರಿಗೆ ಹೋಲಿಸಿದರೆ ಭಾರತವು 4 ಹೊಸ ಆಟಗಳಲ್ಲಿ ಗೆಲ್ಲುವ ಮೂಲಕ ಹೊಸ ಮಾರ್ಗವನ್ನು ಹುಡುಕಿಕೊಂಡಿದೆ ಎಂದು ಅವರು ಹೇಳಿದರು. ಲಾನ್ ಬಾಲ್ ಗಳಿಂದ ಹಿಡಿದು ಅಥ್ಲೆಟಿಕ್ಸ್ ವರೆಗೆ, ಕ್ರೀಡಾಪಟುಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ, ದೇಶದಲ್ಲಿ ಹೊಸ ಕ್ರೀಡೆಗಳತ್ತ ಯುವಜನರ ಒಲವು ಸಾಕಷ್ಟು ಹೆಚ್ಚಾಗಲಿದೆ ಎಂದು ಪ್ರಧಾನಿ ಹೇಳಿದರು. 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಾಕ್ಸಿಂಗ್, ಜೂಡೋ, ಕುಸ್ತಿಗಳಲ್ಲಿ ಭಾರತದ ಹೆಣ್ಣು ಮಕ್ಕಳ ಸಾಧನೆಗಳನ್ನು ಮತ್ತು ಅವರ ಪ್ರಾಬಲ್ಯವನ್ನು ಪ್ರಧಾನಮಂತ್ರಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಬಾರಿ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಆಟಗಾರರಿಂದ ಚೊಚ್ಚಲ ಪ್ರಯತ್ನದಲ್ಲಿ 31 ಪದಕಗಳು ಬಂದಿದ್ದು, ಇದು ಯುವಕರಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದೂ ಅವರು ಹೇಳಿದರು.

ಅಥ್ಲೀಟ್ ಗಳು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಸಂಕಲ್ಪವನ್ನು ಕೇವಲ ದೇಶಕ್ಕೆ ಪದಕವನ್ನು ಉಡುಗೊರೆಯಾಗಿ ನೀಡುವ ಮೂಲಕ ಮಾತ್ರವಲ್ಲ, ಅದನ್ನು ಆಚರಿಸಿ ಸಂಭ್ರಮಿಸಲು ಮತ್ತು ಹೆಮ್ಮೆಪಡಲು ಅವಕಾಶವನ್ನು ನೀಡುವ ಮೂಲಕ ಇನ್ನಷ್ಟು ಬಲಪಡಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು. ಕ್ರೀಡಾಪಟುಗಳು ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಲು ದೇಶದ ಯುವಕರಿಗೆ ಪ್ರೇರಣೆ ನೀಡುತ್ತಾರೆ ಎಂದವರು ನುಡಿದರು. . "ನೀವು ನಮ್ಮ ಸ್ವಾತಂತ್ರ್ಯ ಹೋರಾಟದ ದೊಡ್ಡ ಶಕ್ತಿಯಾದ ಏಕತೆಯ ಚಿಂತನೆ ಮತ್ತು ಗುರಿಯಲ್ಲಿ ದೇಶವನ್ನು ನೇಯ್ಗೆ ಮಾಡುತ್ತೀರಿ" ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ತಂಡವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವಿಧಾನಗಳಲ್ಲಿ ವ್ಯತ್ಯಾಸವಿದ್ದರೂ, ಅವರೆಲ್ಲರೂ ಸ್ವಾತಂತ್ರ್ಯದ ಸಮಾನ ಗುರಿಯನ್ನು ಹೊಂದಿದ್ದರು ಎಂದು ಹೇಳಿದರು. ಅದೇ ರೀತಿ, ನಮ್ಮ ಆಟಗಾರರು ದೇಶದ ಪ್ರತಿಷ್ಠೆಗಾಗಿ ಆಖಾಡಕ್ಕೆ ಇಳಿಯುತ್ತಾರೆ ಎಂದರು. ಉಕ್ರೇನ್ ನಲ್ಲಿ ತ್ರಿವರ್ಣ ಧ್ವಜದ ಶಕ್ತಿ ಪ್ರದರ್ಶನವಾದುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು , ಅಲ್ಲಿ ಅದು ಭಾರತೀಯರಿಗೆ ಮಾತ್ರವಲ್ಲ, ಯುದ್ಧಭೂಮಿಯಿಂದ ಪಾರಾಗಿ ಹೊರಬರುವಲ್ಲಿ ಇತರ ದೇಶಗಳ ನಾಗರಿಕರಿಗೂ ರಕ್ಷಣಾತ್ಮಕ ಗುರಾಣಿಯಾಯಿತು ಎಂದೂ ಹೇಳಿದರು.

ಖೇಲೋ ಇಂಡಿಯಾ ವೇದಿಕೆಯಿಂದ ಮೂಡಿ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು. ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ನ ಧನಾತ್ಮಕ ಪರಿಣಾಮವನ್ನು ಉಲ್ಲೇಖಿಸಿದ ಅವರು, ಅದೀಗ ನಮಗೆ ಕಾಣಿಸುತ್ತಿದೆ ಎಂದರು. ಹೊಸ ಪ್ರತಿಭೆಗಳನ್ನು ಕಂಡುಹಿಡಿಯಲು ಮತ್ತು ಅವರನ್ನು ವೇದಿಕೆಗೆ ಕರೆದೊಯ್ಯುವ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಜಾಗತಿಕವಾಗಿ ಅತ್ಯುತ್ತಮ, ಎಲ್ಲರನ್ನೂ ಒಳಗೊಳ್ಳುವ, ವೈವಿಧ್ಯಮಯ ಮತ್ತು ಕ್ರಿಯಾತ್ಮಕವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಪ್ರತಿಭೆಯನ್ನು ಹಿಂದುಳಿಯಲು ಬಿಡಬಾರದು" ಎಂದು ಅವರು ಒತ್ತಿ ಹೇಳಿದರು. ಆಟಗಾರರ ಯಶಸ್ಸಿನಲ್ಲಿ ತರಬೇತುದಾರರು, ಕ್ರೀಡಾ ಆಡಳಿತಗಾರರು ಮತ್ತು ಸಹಾಯಕ ಸಿಬ್ಬಂದಿಯ ಪಾತ್ರವನ್ನು ಪ್ರಧಾನಮಂತ್ರಿಯವರು ಗುರುತಿಸಿದರು.

ಬರಲಿರುವ ಏಷ್ಯನ್ ಗೇಮ್ಸ್ ಮತ್ತು ಒಲಂಪಿಕ್ಸ್ ಗೆ ಉತ್ತಮ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿಯವರು ಕ್ರೀಡಾಪಟುಗಳಿಗೆ ಮನವಿ ಮಾಡಿದರು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಕಳೆದ ವರ್ಷ ದೇಶದ 75 ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಪ್ರಧಾನಮಂತ್ರಿಯವರು ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರನ್ನು ವಿನಂತಿಸಿದ್ದರು. 'ಮೀಟ್ ದಿ ಚಾಂಪಿಯನ್' ಅಭಿಯಾನದಡಿ ಬಹಳಷ್ಟು ಕ್ರೀಡಾಪಟುಗಳು ಈ ಕಾರ್ಯವನ್ನು ಕೈಗೆತ್ತಿಕೊಂಡು ಅದನ್ನು ಪೂರೈಸಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ರಾಷ್ಟ್ರದ ಯುವಕರು ಕ್ರೀಡಾಪಟುಗಳನ್ನು ರೋಲ್ ಮಾಡೆಲ್ ಗಳಾಗಿ ನೋಡುತ್ತಿರುವುದರಿಂದ ಈ ಅಭಿಯಾನವನ್ನು ಮುಂದುವರಿಸುವಂತೆ ಅವರು ಮನವಿ ಮಾಡಿದರು. "ಹೆಚ್ಚುತ್ತಿರುವ ನಿಮ್ಮ ಮನ್ನಣೆ, ಸಾಮರ್ಥ್ಯ ಮತ್ತು ಅಂಗೀಕಾರಾರ್ಹತೆಯನ್ನು ದೇಶದ ಯುವ ಪೀಳಿಗೆಗೆ ಬಳಸಿಕೊಳ್ಳಬೇಕು" ಎಂದು ಪ್ರಧಾನ ಮಂತ್ರಿ ಹೇಳಿದರು. ಕ್ರೀಡಾಪಟುಗಳ 'ವಿಜಯ ಯಾತ್ರೆ'ಯನ್ನು ಅಭಿನಂದಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಪ್ರಧಾನ ಮಂತ್ರಿಯವರು ಕೈಗೊಂಡ ಈ ಸನ್ಮಾನ ಕಾರ್ಯಕ್ರಮವು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಪ್ರೇರೇಪಿಸುವ ಅವರ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ. ಕಳೆದ ವರ್ಷ, ಪ್ರಧಾನಮಂತ್ರಿಯವರು ಟೋಕಿಯೋ 2020 ರ ಒಲಿಂಪಿಕ್ಸ್ ಗೆ ತೆರಳುವ ಭಾರತೀಯ ಅಥ್ಲೀಟ್ ಗಳ ತಂಡ ಮತ್ತು ಟೋಕಿಯೊ 2020ರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ತೆರಳುವ ಭಾರತೀಯ ಪ್ಯಾರಾ-ಅಥ್ಲೀಟ್ಗಳ ತಂಡದೊಂದಿಗೆ ಸಂವಾದ ನಡೆಸಿದ್ದರು. 2022ರ ಕಾಮನ್ ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲೂ ಪ್ರಧಾನಮಂತ್ರಿಯವರು ಅಥ್ಲೀಟ್ ಗಳ ಪ್ರಗತಿಯ ಬಗ್ಗೆ ತೀವ್ರ ಆಸಕ್ತಿ ವಹಿಸಿ, ಅವರ ಯಶಸ್ಸು ಮತ್ತು ಪ್ರಾಮಾಣಿಕ ಪ್ರಯತ್ನಗಳಿಗಾಗಿ ಅವರನ್ನು ಅಭಿನಂದಿಸಿದರಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸಲು ಅವರನ್ನು ಪ್ರೇರೇಪಿಸಿದ್ದರು.

2022ರ ಜುಲೈ 28 ರಿಂದ 2022 ರ ಆಗಸ್ಟ್ 08 ರವರೆಗೆ ಬರ್ಮಿಂಗ್ಹ್ಯಾಮ್ನಲ್ಲಿ ಸಿಡಬ್ಲ್ಯೂಜಿ ನಡೆಯಿತು. 19 ಕ್ರೀಡಾ ಶಿಸ್ತುಗಳ 141 ಸ್ಪರ್ಧೆಗಳಲ್ಲಿ ಒಟ್ಟು 215 ಕ್ರೀಡಾಪಟುಗಳು ಭಾಗವಹಿಸಿದ್ದಾರೆ, ಅದರಲ್ಲಿ ಭಾರತವು ವಿವಿಧ ವಿಭಾಗಗಳಲ್ಲಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
India's 1.4 bn population could become world economy's new growth engine

Media Coverage

India's 1.4 bn population could become world economy's new growth engine
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜನವರಿ 2023
January 29, 2023
ಶೇರ್
 
Comments

Support & Appreciation Pours in For Another Episode of PM Modi’s ‘Mann Ki Baat’ filled with Inspiration and Motivation

A Transformative Chapter for New India filled with Growth, Development & Prosperity