ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪಿತನ ಜನುಮದಿನವಾದ ಇಂದು ಗಾಂಧಿ ಜಯಂತಿ ಆಚರಣೆ ಸಂದರ್ಭದಲ್ಲಿ ಮಹಾತ್ಮಗಾಂಧಿ ಅವರಿಗೆ ಹೃದಯಪೂರ್ವಕ ಗೌರವ ನಮನ ಸಲ್ಲಿಸಿದ್ದಾರೆ.
ಮಹಾತ್ಮಾ ಗಾಂಧಿಯವರ ಸತ್ಯ, ಅಹಿಂಸೆ ಮತ್ತು ನೈತಿಕ ಧೈರ್ಯದ ನಿರಂತರ ಪರಂಪರೆ ವಿಶ್ವದಾದ್ಯಂತ ಹಲವು ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಂಡ ಭಾರತದತ್ತ ಸಾಮೂಹಿಕ ಪಯಣದಲ್ಲಿ ಗಾಂಧೀಜಿಯವರ ಆದರ್ಶಗಳನ್ನು ಮಾರ್ಗದರ್ಶಿ ತತ್ವಗಳಾಗಿ ಪಾಲಿಸುವ ದೇಶದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಖಾತೆಯ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಗಾಂಧಿ ಜಯಂತಿ ಎಂದರೆ ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವುದು, ಅವರ ಆದರ್ಶಗಳು ಮಾನವ ಇತಿಹಾಸದ ಪಥವನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆಯು ಹೇಗೆ ಮಹತ್ವದ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ಪ್ರದರ್ಶಿಸಿದರು. ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಅನುಕಂಪದ ಶಕ್ತಿಯನ್ನು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆ’’.
Gandhi Jayanti is about paying homage to the extraordinary life of beloved Bapu, whose ideals transformed the course of human history. He demonstrated how courage and simplicity could become instruments of great change. He believed in the power of service and compassion as… pic.twitter.com/LjvtFauWIr
— Narendra Modi (@narendramodi) October 2, 2025


