"ಮುಂಬೈ ಸಮಾಚಾರ್ ಭಾರತದ ತತ್ವ ಮತ್ತು ಅಭಿವ್ಯಕ್ತಿಯಾಗಿದೆ"
"ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಭಾರತದ ನವನಿರ್ಮಾಣದವರೆಗೆ, ಪಾರ್ಸಿ ಸಹೋದರಿಯರು ಮತ್ತು ಸಹೋದರರ ಕೊಡುಗೆ ದೊಡ್ಡದು"
"ಮಾಧ್ಯಮಗಳಿಗೆ ಟೀಕೆ ಮಾಡುವ ಹಕ್ಕು ಎಷ್ಟು ಇದೆಯೋ, ಸಕಾರಾತ್ಮಕ ಸುದ್ದಿಗಳನ್ನು ಮುನ್ನಲೆಗೆತರುವ ಜವಾಬ್ದಾರಿಯೂ ಅಷ್ಟೇ ಮುಖ್ಯ"
"ಭಾರತದ ಮಾಧ್ಯಮಗಳ ಸಕಾರಾತ್ಮಕ ಕೊಡುಗೆಯು ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮುಂಬೈನಲ್ಲಿ ಮುಂಬೈ ಸಮಾಚಾರದ ದ್ವಿಶತಾಬ್ದಿ ಮಹೋತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.

ಈ ಐತಿಹಾಸಿಕ ಪತ್ರಿಕೆಯ  ಇನ್ನೂರನೇ ವರ್ಷಾಚರಣೆಯ ಸಂದರ್ಭದಲ್ಲಿ ಮುಂಬೈ ಸಮಾಚಾರದ ಎಲ್ಲಾ ಓದುಗರು, ಪತ್ರಕರ್ತರು ಮತ್ತು ಸಿಬ್ಬಂದಿಗೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು. ಈ ಎರಡು ಶತಮಾನಗಳಲ್ಲಿ ಹಲವು ತಲೆಮಾರುಗಳ ಬದುಕು, ಕಾಳಜಿಗೆ ಮುಂಬಯಿ ಸಮಾಚಾರ ಧ್ವನಿ ನೀಡಿದೆ ಎಂದು ಶ್ಲಾಘಿಸಿದರು. ಮುಂಬೈ ಸಮಾಚಾರ ಕೂಡ ಸ್ವಾತಂತ್ರ್ಯ ಚಳವಳಿಗೆ ಧ್ವನಿ ನೀಡಿತು ಮತ್ತು ನಂತರ 75 ವರ್ಷಗಳ ಸ್ವತಂತ್ರ ಭಾರತವನ್ನು ಎಲ್ಲಾ ವಯಸ್ಸಿನ ಓದುಗರೆಡೆಗೆ ಕೊಂಡೊಯ್ಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾಷೆಯ ಮಾಧ್ಯಮವು ಖಂಡಿತವಾಗಿಯೂ ಗುಜರಾತಿಯಾಗಿತ್ತು, ಆದರೆ ಕಾಳಜಿ ರಾಷ್ಟ್ರೀಯವಾಗಿತ್ತು ಎಂದು ಅವರು ಹೇಳಿದರು. ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಕೂಡ ಮುಂಬೈ ಸಮಾಚಾರವನ್ನು ಉಲ್ಲೇಖಿಸುತ್ತಿದ್ದರು ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಬರುವ ಈ ವಾರ್ಷಿಕೋತ್ಸವದ ಸಂತೋಷದ ಕಾಕತಾಳೀಯತೆಯನ್ನು ಗಮನಿಸಿದರು. "ಆದ್ದರಿಂದ, ಇಂದಿನ ಈ ಸಂದರ್ಭದಲ್ಲಿ, ನಾವು ಭಾರತದ ಪತ್ರಿಕೋದ್ಯಮದ ಉನ್ನತ ಗುಣಮಟ್ಟವನ್ನು ಮತ್ತು ದೇಶಭಕ್ತಿಯ ಕಾಳಜಿಗೆ ಸಂಬಂಧಿಸಿದ ಪತ್ರಿಕೋದ್ಯಮವನ್ನು ಆಚರಿಸುತ್ತಿದ್ದೇವೆ, ಹಾಗು ಈ ಸಂದರ್ಭವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸೇರ್ಪಡೆಯಾಗಿದೆ". ತುರ್ತು ಪರಿಸ್ಥಿತಿಯ ನಂತರದ ಸ್ವಾತಂತ್ರ್ಯ ಹೋರಾಟ ಮತ್ತು ಪ್ರಜಾಪ್ರಭುತ್ವದ ಪುನರ್ ಸ್ಥಾಪನೆಯಲ್ಲಿ ಪತ್ರಿಕೋದ್ಯಮದ ಅದ್ಭುತ ಕೊಡುಗೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

ವಿದೇಶಿಯರ ಪ್ರಭಾವದಿಂದ ನಗರವು ಬಾಂಬೆಯಾದಾಗ, ಮುಂಬೈ ಸಮಾಚಾರ್ ತನ್ನ ಸ್ಥಳೀಯ ಸಂಪರ್ಕ ಮತ್ತು ಅದರ ಬೇರುಗಳೊಂದಿಗಿನ ಸಂಪರ್ಕವನ್ನು ಬಿಡಲಿಲ್ಲ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಆಗಲೂ ಅದು ಸಾಮಾನ್ಯ ಮುಂಬೈಕರ್ ನ ಪತ್ರಿಕೆಯಾಗಿತ್ತು ಮತ್ತು ಇಂದಿಗೂ ಅದೇ - ಮುಂಬೈ ಸಮಾಚಾರ. ಮುಂಬೈ ಸಮಾಚಾರ ಕೇವಲ ಸುದ್ದಿ ಮಾಧ್ಯಮವಲ್ಲ, ಅದೊಂದು ಪರಂಪರೆಯಾಗಿದೆ ಎಂದು ಅವರು ಹೇಳಿದರು. ಮುಂಬೈ ಸಮಾಚಾರ್ ಭಾರತದ ತತ್ವ ಮತ್ತು ಅಭಿವ್ಯಕ್ತಿಯಾಗಿದೆ. ಮುಂಬೈ ಸಮಾಚಾರದಲ್ಲಿ ಪ್ರತಿ ಸಂಕಷ್ಟಗಳ ನಡುವೆಯೂ ಭಾರತ ಹೇಗೆ ದೃಢವಾಗಿ ನಿಂತಿದೆ ಎನ್ನುವುದರ ಒಂದು ನೋಟವನ್ನು ನಾವು ಪಡೆಯುತ್ತೇವೆ ಎಂದು ಅವರು ಹೇಳಿದರು.

ಮುಂಬೈ ಸಮಾಚಾರ ಆರಂಭವಾದಾಗ ಗುಲಾಮಗಿರಿಯ ಕರಿನೆರಳು ಹೆಚ್ಚಾಗುತ್ತಿತ್ತು, ಆ ಅವಧಿಯಲ್ಲಿ ಗುಜರಾತಿಯಂತಹ ಭಾರತೀಯ ಭಾಷೆಯಲ್ಲಿ ಪತ್ರಿಕೆ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆ ಸಮಯದಲ್ಲಿ ಮುಂಬೈ ಸಮಾಚಾರ್ ಭಾಷಾ ಪತ್ರಿಕೋದ್ಯಮವನ್ನು ವಿಸ್ತರಿಸಿತು ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು.

ಭಾರತದ ಸಾವಿರಾರು ವರ್ಷಗಳ ಇತಿಹಾಸ ನಮಗೆ ಬಹಳಷ್ಟು ಕಲಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ನೆಲದ ಎಲ್ಲರನ್ನೂ ಸ್ವಾಗತಿಸುವ ಗುಣದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಲ್ಲಿಗೆ ಯಾರೇ ಬಂದರೂ ತಾಯಿ ಭಾರತಿ ತನ್ನ ಮಡಿಲಲ್ಲಿ ಅರಳಲು ಎಲ್ಲರಿಗೂ ಸಾಕಷ್ಟು ಅವಕಾಶವನ್ನು ನೀಡಿದ್ದಾಳೆ ಎಂದು ಉಲ್ಲೇಖಿಸಿದರು. "ಪಾರ್ಸಿ ಸಮುದಾಯಕ್ಕಿಂತ ಉತ್ತಮ ಉದಾಹರಣೆ ಬೇಕೆ?" ಎಂದು ಅವರು ಕೇಳಿದರು. ಸ್ವಾತಂತ್ರ್ಯ ಚಳವಳಿಯಿಂದ ಭಾರತದ ನವನಿರ್ಮಾಣಕ್ಕೆ ಪಾರ್ಸಿ ಸಹೋದರಿಯರು ಮತ್ತು ಸಹೋದರರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು. ಈ ಸಮುದಾಯವು ಸಂಖ್ಯಾಬಲದಲ್ಲಿ ದೇಶದ ಅತ್ಯಂತ ಚಿಕ್ಕ ಸಮುದಾಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು, ಒಂದು ರೀತಿಯಲ್ಲಿ ಅತಿ ಅಲ್ಪಸಂಖ್ಯಾತರು, ಆದರೆ ಸಾಮರ್ಥ್ಯ ಮತ್ತು ಸೇವೆಯ ದೃಷ್ಟಿಯಿಂದ ದೊಡ್ಡದಾಗಿದೆ ಎಂದು ಅವರು ಹೇಳಿದರು.

ಪತ್ರಿಕೆಗಳು ಮತ್ತು ಮಾಧ್ಯಮಗಳ ಕೆಲಸವೆಂದರೆ ಸುದ್ದಿಗಳನ್ನು ತಲುಪಿಸುವುದು ಮತ್ತು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮತ್ತು ಸಮಾಜ ಮತ್ತು ಸರ್ಕಾರದಲ್ಲಿ ಕೆಲವು ನ್ಯೂನತೆಗಳಿದ್ದರೆ ಅವುಗಳನ್ನು ಮುನ್ನೆಲೆಗೆ ತರುವುದು ಅವರ ಜವಾಬ್ದಾರಿಯಾಗಿದೆ. ಮಾಧ್ಯಮಗಳಿಗೆ ಟೀಕೆ ಮಾಡುವ ಹಕ್ಕು ಎಷ್ಟು ಇದೆಯೋ, ಸಕಾರಾತ್ಮಕ ಸುದ್ದಿಗಳನ್ನು ಮುನ್ನಲೆಗೆತರುವ ಜವಾಬ್ದಾರಿಯೂ ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಅವಧಿಯಲ್ಲಿ ಪತ್ರಕರ್ತರು ರಾಷ್ಟ್ರದ ಹಿತದೃಷ್ಟಿಯಿಂದ ಕರ್ಮಯೋಗಿಗಳಂತೆ ಕೆಲಸ ಮಾಡಿದ ರೀತಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಮಾಧ್ಯಮಗಳ ಸಕಾರಾತ್ಮಕ ಕೊಡುಗೆಯು 100 ವರ್ಷಗಳ ಈ ದೊಡ್ಡ ಬಿಕ್ಕಟ್ಟನ್ನು ಎದುರಿಸಲು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿತು. ಡಿಜಿಟಲ್ ಪಾವತಿ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ಉಪಕ್ರಮಗಳನ್ನು ಉತ್ತೇಜಿಸುವಲ್ಲಿ ಮಾಧ್ಯಮದ ಪಾತ್ರವನ್ನು ಅವರು ಶ್ಲಾಘಿಸಿದರು.
 
ಈ ದೇಶವು ಶ್ರೀಮಂತ ಸಂಪ್ರದಾಯದ ದೇಶವಾಗಿದ್ದು, ಇದನ್ನು ಮಾತುಕತೆ ಮತ್ತು ಚರ್ಚೆಯ ಮೂಲಕ ಮುನ್ನಡೆಸಲಾಗುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಸಾವಿರಾರು ವರ್ಷಗಳಿಂದ, ನಾವು ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಆರೋಗ್ಯಕರ ಚರ್ಚೆ, ಆರೋಗ್ಯಕರ ಟೀಕೆ ಮತ್ತು ಸರಿಯಾದ ತಾರ್ಕಿಕ ಸಂಪ್ರದಾಯವನ್ನು ನಡೆಸಿದ್ದೇವೆ. ನಾವು ತುಂಬಾ ಕಷ್ಟಕರವಾದ ಸಾಮಾಜಿಕ ವಿಷಯಗಳ ಬಗ್ಗೆ ಮುಕ್ತ ಮತ್ತು ಆರೋಗ್ಯಕರ ಚರ್ಚೆಗಳನ್ನು ನಡೆಸುತ್ತೇವೆ. ಇದು ಭಾರತದ ಸಂಪ್ರದಾಯವಾಗಿದೆ. ಅದನ್ನು ನಾವು ಬಲಪಡಿಸಬೇಕಾಗಿದೆ.

ಮುಂಬೈ ಸಮಾಚಾರ್ ವಾರಪತ್ರಿಕೆಯಾಗಿ ಪ್ರಕಟಣೆಯನ್ನು ಜುಲೈ 1, 1822 ರಂದು ಶ್ರೀ ಫರ್ದುಂಜಿ ಮರ್ಜ್ಬಾಂಜಿ ಅವರು ಪ್ರಾರಂಭಿಸಿದರು. ಇದು 1832 ರಲ್ಲಿ ದಿನಪತ್ರಿಕೆಯಾಯಿತು. ಪತ್ರಿಕೆ 200 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Semicon India 2024: Top semiconductor CEOs laud India and PM Modi's leadership

Media Coverage

Semicon India 2024: Top semiconductor CEOs laud India and PM Modi's leadership
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಸೆಪ್ಟೆಂಬರ್ 2024
September 12, 2024

Appreciation for the Modi Government’s Multi-Sectoral Reforms