ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಕ್ ಲ್ಯಾಂಡ್ ನಲ್ಲಿ ನಡೆದ 'ಕಿಯಾ ಔರಾ ಮೋದಿ' ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ವಲಸಿಗರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸನ್ನಿವೇಶದಲ್ಲಿ, ನ್ಯೂಜಿಲೆಂಡ್ ನ ಪ್ರಧಾನಮಂತ್ರಿ ಯವರಾದ ಗೌರವಾನ್ವಿತ ಆರ್. ಕ್ರಿಸ್ಟೋಫರ್ ಲಕ್ಸನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ವಲಸಿಗರ 10,000ಕ್ಕೂ ಹೆಚ್ಚು ಸದಸ್ಯರ ಶಕ್ತಿ, ಉತ್ಸಾಹ ಮತ್ತು ಉಲ್ಲಾಸದಿಂದ ಈ ಸಭೆ ತುಂಬಿತ್ತು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಆರಂಭಿಸಿ, ಪ್ರಧಾನ ಮಂತ್ರಿ ಲಕ್ಸನ್ ಅವರ ಸೌಹಾರ್ದಯುತ ಉಪಸ್ಥಿತಿಗಾಗಿ ಮತ್ತು ಕಿವಿ ಭಾರತೀಯ ಸಮುದಾಯದ ಕಲ್ಯಾಣ ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಗೆ ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಭಾರತೀಯ ಸಮುದಾಯವು ಅವರಿಗೆ ನೀಡಿದ ವಿಶೇಷ ಸ್ವಾಗತಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ದೃಢ ನಿಶ್ಚಯ, ಕಠಿಣ ಪರಿಶ್ರಮದಿಂದ ಇದನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.
ಕಿವಿ ಭಾರತೀಯ ಸಮುದಾಯವು ಕ್ರಿಯಾತ್ಮಕ ಶಕ್ತಿಯಾಗಿ ಹೊರಹೊಮ್ಮಿದ್ದು, ಇದು ನ್ಯೂಜಿಲೆಂಡ್ ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ. ನ್ಯೂಜಿಲ್ಯಾಂಡ್ ನ ಬಹುಸಾಂಸ್ಕೃತಿಕ ರಚನೆಯನ್ನು ಶ್ರೀಮಂತಗೊಳಿಸುತ್ತಾ, ತಮ್ಮ ಸಂಸ್ಕೃತಿ, ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತಿರುವ ಸಮುದಾಯವನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದರು. ಈ ಸಮುದಾಯದ ಸ್ವಯಂಸೇವಕತ್ವ ಮತ್ತು ಸಮುದಾಯದ ಕಲ್ಯಾಣದ ಮಾದರಿ ದಾಖಲೆಯನ್ನು ಗಮನಿಸಿದ ಅವರು, ಸಮುದಾಯದ ಸೆವಾ (ನಿಸ್ವಾರ್ಥ ಸೇವಾ) ಮನೋಭಾವವನ್ನು ವಿಶೇಷವಾಗಿ ಶ್ಲಾಘಿಸಿದರು.

ಈ ಸಭೆಯು ಭಾರತೀಯ ವಲಸಿಗರದ್ದಾಗಿರಬಹುದು, ಆದರೆ ಇದು ಭಾರತ-ನ್ಯೂಜಿಲೆಂಡ್ ನ ಸ್ನೇಹ, ಕ್ರೀಡಾ ಬಾಂಧವ್ಯ ಮತ್ತು ಆರ್ಥಿಕ ಪಾಲುದಾರಿಕೆಯ ಆಚರಣೆಯಾಗಿದೆ ಎಂದು ಪ್ರಧಾನಿಯವರು ಹೇಳಿದರು. 2026ರಲ್ಲಿ ಕ್ರೀಡಾ ಸಹಯೋಗದ 100 ವರ್ಷಗಳನ್ನು ಆಚರಿಸಲಾಗುವುದು ಎಂದು ತಿಳಿಸಿದ ಅವರು, ಎರಡೂ ದೇಶಗಳು ತಮ್ಮ ಕ್ರೀಡಾ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಉತ್ಸುಕವಾಗಿದೆ ಎಂದು ಹೇಳಿದರು. ಸ್ಥಳೀಯ ಮಾವೊರಿ ಸಂಸ್ಕೃತಿಯನ್ನು ಅವರ ಅಂತರ್ಗತ ಮತ್ತು ಸುಸ್ಥಿರ ವಿಧಾನಕ್ಕಾಗಿ ಪ್ರಶಂಸಿಸಿದ ಅವರು, ಭಾರತವೂ ಸಹ ತನ್ನ ಪರಂಪರೆಯನ್ನು ಬೆಳವಣಿಗೆಯೊಂದಿಗೆ ಹೊಂದಿಸುವ ಅಭಿವೃದ್ಧಿ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹ, ವಿಶ್ವಾಸ ಮತ್ತು ಸಹಕಾರದ ಸೇತುವೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಭಾರತೀಯ ಸಮುದಾಯಕ್ಕೆ ಪ್ರಧಾನಿಯವರು ಕರೆ ನೀಡಿ, ಎರಡೂ ರಾಷ್ಟ್ರಗಳ ಅನುಕೂಲಕ್ಕಾಗಿ ಕಾರ್ಯತಂತ್ರದ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹ, ವಿಶ್ವಾಸ ಮತ್ತು ಸಹಕಾರದ ಸೇತುವೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಭಾರತೀಯ ಸಮುದಾಯಕ್ಕೆ ಪ್ರಧಾನಿಯವರು ಕರೆ ನೀಡಿ, ಎರಡೂ ರಾಷ್ಟ್ರಗಳ ಅನುಕೂಲಕ್ಕಾಗಿ ಕಾರ್ಯತಂತ್ರದ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಿದರು.
Click here to read full text speech
The India-New Zealand relationship is built on cherished memories, enduring friendship, shared values and a common commitment. pic.twitter.com/WDPFJgTwHy
— PMO India (@PMOIndia) July 11, 2026
India is always willing to learn from others. For us, it is not the size of a country's population that matters, but its commitment to the welfare of its people. pic.twitter.com/YVnYj0WEA6
— PMO India (@PMOIndia) July 11, 2026
There is a similarity between India and New Zealand.
— PMO India (@PMOIndia) July 11, 2026
It is our indigenous cultures... and our resolve to celebrate and preserve them. pic.twitter.com/SmqLhjsu7h
Even amid global uncertainties, India's pace of development is truly unprecedented. pic.twitter.com/ej5dwCMc1G
— PMO India (@PMOIndia) July 11, 2026
Just as India places great importance on its economy and ecology, it accords equal importance to its heritage. pic.twitter.com/TLG29peF0V
— PMO India (@PMOIndia) July 11, 2026


