Not only other participants but also compete with yourself: PM Modi to youngsters
Khelo India Games have become extremely popular among youth: PM Modi
Numerous efforts made in the last 5-6 years to promote sports as well as increase participation: PM Modi

ಒಡಿಶಾದಲ್ಲಿಂದು ಆರಂಭಗೊಂಡ ಪ್ರಥಮ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಸಂಪರ್ಕ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇಂದು ಕ್ರೀಡಾಕೂಟದ ಆರಂಭ ಮಾತ್ರ ಆಗಿರುವುದಲ್ಲ, ಭಾರತದಲ್ಲಿ ಮುಂದಿನ ಹಂತದ ಕ್ರೀಡಾ ಚಳವಳಿಯ ಆರಂಭ ಎಂದರು. ಇಲ್ಲಿ ನೀವು ಪರಸ್ಪರ ಸ್ಪರ್ಧಿಸುತ್ತಿರುವುದು ಮಾತ್ರವಲ್ಲ ನಿಮ್ಮೊಂದಿಗೆ ನೀವೇ ಸ್ಪರ್ಧೆ ಮಾಡುತ್ತಿದ್ದೀರಿ ಎಂದವರು ಹೇಳಿದರು.

“ನಾನು ತಂತ್ರಜ್ಞಾನದ ಮೂಲಕ ನಿಮ್ಮೊಂದಿಗೆ ಸಂಪರ್ಕದಲ್ಲಿದ್ದೇನೆ, ಆದರೆ ನಾನು ಅಲ್ಲಿರುವ ವಾತಾವರಣ, ಉತ್ಸಾಹ, ಭಾವೋದ್ವೇಗ ಮತ್ತು ಶಕ್ತಿಯ ಅನುಭವವನ್ನು ಪಡೆಯಬಲ್ಲೆ. ಭಾರತದ ಇತಿಹಾಸದಲ್ಲಿ ಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಇಂದು ಒಡಿಶಾದಲ್ಲಿ ಆರಂಭಗೊಳ್ಳುತ್ತಿದೆ. ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಚಾರಿತ್ರಿಕ ಘಟನೆ . ಮತ್ತು ಇದು ಭಾರತದ ಕ್ರೀಡಾ ಭವಿಷ್ಯಕ್ಕೆ ಒಂದು ದೊಡ್ಡ ಹೆಜ್ಜೆ “ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಖೇಲೋ ಇಂಡಿಯಾ ಆಂದೋಲನ ಕ್ರೀಡಾ ಕ್ಷೇತ್ರದತ್ತ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ ಮತ್ತು ದೇಶದ ಪ್ರತೀ ಮೂಲೆಯ ಯುವ ಪ್ರತಿಭೆಯನ್ನು ಗುರುತಿಸಲು ನೆರವಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು 2018 ರಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟ ಆರಂಭಗೊಂಡಾಗ 3,500 ಆಟಗಾರರು ಇದರಲ್ಲಿ ಭಾಗವಹಿಸಿದ್ದರು. ಆದರೆ ಬರೇ ಮೂರು ವರ್ಷಗಳಲ್ಲಿ ಆಟಗಾರರ ಸಂಖ್ಯೆ ದುಪ್ಪಟ್ಟಾಗಿ 6 ಸಾವಿರವನ್ನು ದಾಟಿದೆ ಎಂದೂ ವಿವರಿಸಿದರು.

“ ಈ ವರ್ಷ , ಖೇಲೋ ಇಂಡಿಯಾ ಶಾಲೆಗಳ ಕ್ರೀಡಾಕೂಟಗಳು 80 ದಾಖಲೆಗಳನ್ನು ಮುರಿದಿವೆ. ಇದರಲ್ಲಿ 56 ದಾಖಲೆಗಳು ನಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿವೆ, ನಮ್ಮ ಹೆಣ್ಣು ಮಕ್ಕಳು ಗೆದ್ದಿದ್ದಾರೆ, ನಮ್ಮ ಹೆಣ್ಣು ಮಕ್ಕಳು ಅದ್ಭುತಗಳನ್ನು ಸಾಧಿಸಿದ್ದಾರೆ. ಬಹಳ ಪ್ರಮುಖವಾದ ಸಂಗತಿ ಎಂದರೆ ಈ ಆಂದೋಲನದಲ್ಲಿ ಹೊರಬರುತ್ತಿರುವ ಪ್ರತಿಭೆಗಳು ದೊಡ್ಡ ನಗರಗಳಿಂದ ಬಂದಂತಹವಲ್ಲ, ಬದಲು ಅವು ಸಣ್ಣ ಪಟ್ಟಣಗಳಿಂದ ಬಂದಿವೆ. “ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಕಳೆದ 5-6 ವರ್ಷಗಳಿಂದ ಭಾರತದಲ್ಲಿ ಕ್ರೀಡಾ ಉತ್ತೇಜನಕ್ಕೆ ಮತ್ತು ಅದರಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಪ್ರತಿಭೆಗಳ ಗುರುತಿಸುವಿಕೆ, ತರಬೇತಿ, ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲಾಗುತ್ತಿದೆ ಎಂದರು.

“ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಆಟಗಾರರು ಇವರು. ಈ ಯೋಜನೆಯಿಂದ ಪ್ರಯೋಜನ ಪಡೆದ ಆಟಗಾರರು ಕಾಮನ್ ವೆಲ್ತ್ ಕ್ರೀಡಾಕೂಟ, ಏಶ್ಯನ್ ಕ್ರೀಡಾಕೂಟ, ಏಶ್ಯನ್ ಪಾರಾ ಕ್ರೀಡಾಕೂಟ, ಯುವ ಒಲಿಂಪಿಕ್ಸ್ ಗಳಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದೇಶಕ್ಕೆ 200 ಕ್ಕೂ ಅಧಿಕ ಪದಕಗಳನ್ನು ತಂದಿದ್ದಾರೆ. ಬರಲಿರುವ ದಿನಗಳಲ್ಲಿ 200 ಕ್ಕೂ ಅಧಿಕ ಚಿನ್ನದ ಪದಕಗಳನ್ನು ಗೆಲ್ಲುವ ಗುರಿ ಇದೆ. ಮತ್ತು ಬಹಳ ಮುಖ್ಯವಾಗಿ ನಿಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡು ನಿಮ್ಮದೇ ಸಾಮರ್ಥ್ಯಕ್ಕೆ ಹೊಸ ಎತ್ತರವನ್ನು ಒದಗಿಸಿಕೊಳ್ಳುವುದು ಅವಶ್ಯವಾಗಿದೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 

Click here to read PM's speech 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Silicon Sprint: Why Google, Microsoft, Intel And Cognizant Are Betting Big On India

Media Coverage

Silicon Sprint: Why Google, Microsoft, Intel And Cognizant Are Betting Big On India
NM on the go

Nm on the go

Always be the first to hear from the PM. Get the App Now!
...
PM Modi speaks with PM Netanyahu of Israel
December 10, 2025
The two leaders discuss ways to strengthen India-Israel Strategic Partnership.
Both leaders reiterate their zero-tolerance approach towards terrorism.
PM Modi reaffirms India’s support for efforts towards a just and durable peace in the region.

Prime Minister Shri Narendra Modi received a telephone call from the Prime Minister of Israel, H.E. Mr. Benjamin Netanyahu today.

Both leaders expressed satisfaction at the continued momentum in India-Israel Strategic Partnership and reaffirmed their commitment to further strengthening these ties for mutual benefit.

The two leaders strongly condemned terrorism and reiterated their zero-tolerance approach towards terrorism in all its forms and manifestations.

They also exchanged views on the situation in West Asia. PM Modi reaffirmed India’s support for efforts towards a just and durable peace in the region, including early implementation of the Gaza Peace Plan.

The two leaders agreed to remain in touch.