ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಗೌರವಾನ್ವಿತ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಭೇಟಿ ಮಾಡಿದರು.
ಇಬ್ಬರೂ ನಾಯಕರು ಭಾರತ ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಬೆಳೆಯುತ್ತಿರುವ ಆಳ ಮತ್ತು ವೈವಿಧ್ಯತೆಯ ಕುರಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಳೆಯುತ್ತಿರುವ ಆರ್ಥಿಕ ಪಾಲುದಾರಿಕೆಯನ್ನು ಅವರು ಸ್ವಾಗತಿಸಿದರು ಮತ್ತು ವ್ಯಾಪಾರ, ಹೂಡಿಕೆ, ಶಿಕ್ಷಣ ಹಾಗೂ ನಾವೀನ್ಯತೆಗಳ ಸಂಪರ್ಕಗಳನ್ನು ವಿಸ್ತರಿಸುವುದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಮತ್ತು ಉಭಯ ದೇಶಗಳ ಜನರಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡಲಿವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಇಬ್ಬರೂ ನಾಯಕರು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಕ್ರೀಡಾ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತ ಆತಿಥ್ಯ ವಹಿಸಲಿರುವ ಕಾಮನ್ ವೆಲ್ತ್ ಕ್ರಿಡಾಕೂಟ 2030 ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ 2032ರ ಹಿನ್ನೆಲೆಯಲ್ಲಿ ನಿಕಟ ಸಹಕಾರಕ್ಕೆ ಕರೆ ನೀಡಿದರು.

ಉಭಯ ದೇಶಗಳ ನಡುವಿನ ಚೈತನ್ಯಯುಕ್ತ ಜನರಿಂದ ಜನರ ನಡುವಿನ ಸಂಪರ್ಕಗಳು ಈ ಬಾಂಧವ್ಯಕ್ಕೆ ನಿರಂತರ ಶಕ್ತಿಯ ಮೂಲವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು
ಭಾರತ ಮತ್ತು ಆಸ್ಟ್ರೇಲಿಯಾದ ಸಂಬಂಧಗಳನ್ನು ಮುನ್ನಡೆಸುವಲ್ಲಿ ಗವರ್ನರ್ ಜನರಲ್ ಮೋಸ್ಟಿನ್ ಅವರ ದೃಢವಾದ ಬೆಂಬಲವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.
It was a delight to meet the Governor-General of Australia, Hon. Sam Mostyn, in Melbourne. We discussed the strong and enduring bonds between India and Australia, anchored in our shared values, vibrant people-to-people ties and expanding cooperation across diverse sectors. pic.twitter.com/gEPz3noqrB
— Narendra Modi (@narendramodi) July 9, 2026


