ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾಗ್ರೆಬ್‌ನಲ್ಲಿ ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಭೇಟಿ ಮಾಡಿದರು. ಇದು ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದ್ದು, ಭಾರತ-ಕ್ರೊಯೇಷಿಯಾ ಸಂಬಂಧಗಳಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಐತಿಹಾಸಿಕ ಬನ್ಸ್ಕಿ ಡ್ವೋರಿ ಅರಮನೆಗೆ ಆಗಮಿಸಿದ ಪ್ರಧಾನ ಮಂತ್ರಿ ಅವರನ್ನು ಕ್ರೊಯೇಷಿಯಾ ಪ್ರಧಾನಿ ಪ್ಲೆಂಕೋವಿಕ್ ಬರಮಾಡಿಕೊಂಡು, ಔಪಚಾರಿಕ ಸ್ವಾಗತ ನೀಡಿದರು. ದಿನದ ಆರಂಭದಲ್ಲಿ, ಪ್ರಧಾನ ಮಂತ್ರಿಯವರು ಜಾಗ್ರೆಬ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಿಶೇಷ ಮತ್ತು ಆತ್ಮೀಯ ಗೌರವ ಸೂಚಕವಾಗಿ, ಅವರನ್ನು ಪ್ರಧಾನಿ ಪ್ಲೆಂಕೋವಿಕ್ ಸ್ವಾಗತಿಸಿದರು.

 

ಇಬ್ಬರೂ ನಾಯಕರು ನಿಯೋಗ ಮಟ್ಟದ ಮಾತುಕತೆ ನಡೆಸಿದರು. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ಬಾಹ್ಯಾಕಾಶ, ಸಾಂಸ್ಕೃತಿಕ ಸಹಕಾರ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯ ವಿವಿಧ ವಿಚಾರಗಳ ಕುರಿತು ಅವರು ವ್ಯಾಪಕ ಚರ್ಚೆಗಳಲ್ಲಿ ತೊಡಗಿದರು. ಮೂಲಸೌಕರ್ಯ, ಬಂದರುಗಳು ಮತ್ತು ಸಾಗಣೆ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಔಷಧ ಮತ್ತು ಪ್ರವಾಸೋದ್ಯಮ ಮತ್ತು ಆತಿಥ್ಯದಂತಹ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಗಮನಾರ್ಹ ಅವಕಾಶಗಳಿವೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಕ್ರೊಯೇಷಿಯಾದಲ್ಲಿ ಭಾರತೀಯ ಸಂಸ್ಕೃತಿ, ಭಾರತಶಾಸ್ತ್ರ ಮತ್ತು ಯೋಗದ ಜನಪ್ರಿಯತೆಯು ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತಂದಿದೆ ಎಂದು ಅವರು ಗಮನಿಸಿದರು. ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕ್ರೊಯೇಷಿಯಾದ ಎಲ್ಲಾ ಯೋಗ ಉತ್ಸಾಹಿಗಳಿಗೆ ಪ್ರಧಾನ ಮಂತ್ರಿ ಮೋದಿ ಶುಭಾಶಯಗಳನ್ನು ತಿಳಿಸಿದರು.

ನವೋದ್ಯಮ ಮತ್ತು ನಾವೀನ್ಯತೆ ಪಾಲುದಾರಿಕೆಗಳನ್ನು ನಿರ್ಮಿಸುವಲ್ಲಿನ ಇತ್ತೀಚಿನ ಉಪಕ್ರಮಗಳು ಮತ್ತು ಬೆಳವಣಿಗೆಗಳನ್ನು ನಾಯಕರು ಗಮನಿಸಿದರು. ಎರಡೂ ದೇಶಗಳಲ್ಲಿ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆ ಹೆಚ್ಚಿಸಲು ಹೆಚ್ಚಿನ ವ್ಯಾಪಾರ-ವ್ಯವಹಾರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ, ಹೂಡಿಕೆ ಪಾಲುದಾರಿಕೆಗಳು ಮತ್ತು ಜಂಟಿ ಉದ್ಯಮಗಳನ್ನು ಸುಗಮಗೊಳಿಸುವ ಅಗತ್ಯವನ್ನು ಅವರು ಗುರುತಿಸಿದರು. ಈ ಉದ್ದೇಶಕ್ಕಾಗಿ, ಕ್ರೊಯೇಷಿಯಾ ಭಾರತದ ಕೌಶಲ್ಯಪೂರ್ಣ ಪ್ರತಿಭೆಯನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಚಲನಶೀಲತೆಯ ಕ್ಷೇತ್ರದಲ್ಲಿ ಸಾಂಸ್ಥಿಕ ಸಹಭಾಗಿತ್ವ ಸ್ಥಾಪಿಸಲು ಅವರು ಕರೆ ನೀಡಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್(ಐಎಂಇಸಿ) ಸೇರಿದಂತೆ ಸಂಪರ್ಕ  ಸುಧಾರಿಸುವ ಮಹತ್ವವಿದೆ ಎಂದು ಅವರು ಒಪ್ಪಿಕೊಂಡರು. ಕ್ರೊಯೇಷಿಯಾವು ಮಧ್ಯ ಮತ್ತು ಆಗ್ನೇಯ ಯುರೋಪಿಗೆ ಭಾರತದ ಪ್ರವೇಶ ದ್ವಾರವಾಗಿ ಕಾರ್ಯ ನಿರ್ವಹಿಸಬಹುದು ಎಂದರು.

 

ಉಭಯ ನಾಯಕರು ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು. ವಿಶ್ವಸಂಸ್ಥೆ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳ ಸುಧಾರಣೆ, ಹವಾಮಾನ ಬದಲಾವಣೆಯ ಕ್ರಮ ಮತ್ತು ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಗಳ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಕ್ರೊಯೇಷಿಯಾ ನೀಡಿದ ಬಲವಾದ ಬೆಂಬಲ ಮತ್ತು ಒಗ್ಗಟ್ಟಿಗೆ ಪ್ರಧಾನಿ ಮೋದಿ ಅವರು ಪ್ಲೆಂಕೋವಿಕ್‌ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಭಾರತ-ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಸಂಬಂಧಗಳು ಗಾಢವಾಗುತ್ತಿರುವುದಕ್ಕೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು, ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವು ತ್ವರಿತವಾಗಿ ಅಂತಿಮವಾಗುವುದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

ಮಾತುಕತೆಯ ನಂತರ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಕ್ಷೇತ್ರಗಳಲ್ಲಿ 4 ತಿಳಿವಳಿಕೆ ಪತ್ರ(ಎಂಒಯು)ಗಳಿಗೆ ಸಹಿ ಹಾಕಲಾಯಿತು, ಹಿಂದಿ ಪೀಠದ ನವೀಕರಣ ಕುರಿತು ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು [ಲಿಂಕ್].

 

ಪ್ರಧಾನಿ ಪ್ಲೆಂಕೋವಿಕ್ ಅವರು ಪ್ರಧಾನ ಮಂತ್ರಿ ಮೋದಿ ಗೌರವಾರ್ಥ ಭೋಜನ ಕೂಟ ಆಯೋಜಿಸಿದ್ದರು. ಪ್ರಧಾನ ಮಂತ್ರಿ ಮೋದಿ ಅವರು ಪ್ರಧಾನ ಮಂತ್ರಿ ಪ್ಲೆಂಕೋವಿಕ್ ಅವರನ್ನು ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Most NE districts now ‘front runners’ in development goals: Niti report

Media Coverage

Most NE districts now ‘front runners’ in development goals: Niti report
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಗೌರವಗಳು
July 09, 2025

ಪ್ರಧಾನಿ ನರೇಂದ್ರ ಮೋದಿಯವರಿಗೆ ಹಲವಾರು ರಾಷ್ಟ್ರಗಳು ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿ ಗೌರವಿಸಿವೆ. ಈ ಮನ್ನಣೆಗಳು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೃಷ್ಟಿಯ ಪ್ರತಿಬಿಂಬವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಹೊರಹೊಮ್ಮುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರಿಗೆ ನೀಡಿದ ಪ್ರಶಸ್ತಿಗಳನ್ನು ನೋಡೋಣ.

ದೇಶಗಳು ನೀಡುವ ಪ್ರಶಸ್ತಿಗಳು:

1. ಏಪ್ರಿಲ್ 2016 ರಲ್ಲಿ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಗೌರವ- ಕಿಂಗ್ ಅಬ್ದುಲ್ ಅಜೀಜ್ ಸಾಶ್ ಅನ್ನು ನೀಡಲಾಯಿತು. ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ಪ್ರಧಾನಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2. ಅದೇ ವರ್ಷ, ಪ್ರಧಾನಿ  ಮೋದಿಯವರಿಗೆ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವವಾದ ಘಾಜಿ ಅಮೀರ್ ಅಮಾನುಲ್ಲಾ ಖಾನ್ ಅವರ ರಾಜ್ಯ ಆದೇಶವನ್ನು ನೀಡಲಾಯಿತು.

3. 2018 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್‌ಗೆ ಐತಿಹಾಸಿಕ ಭೇಟಿ ನೀಡಿದಾಗ, ಅವರಿಗೆ ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಪ್ರಶಸ್ತಿಯನ್ನು ನೀಡಲಾಯಿತು. ಇದು ವಿದೇಶಿ ಗಣ್ಯರಿಗೆ ನೀಡುವ ಪ್ಯಾಲೆಸ್ತೀನ್‌ನ ಅತ್ಯುನ್ನತ ಗೌರವವಾಗಿದೆ.

4. 2019 ರಲ್ಲಿ, ಪ್ರಧಾನ ಮಂತ್ರಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿಯನ್ನು ನೀಡಲಾಯಿತು. ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವವಾಗಿದೆ.

5. ರಷ್ಯಾವು ಪ್ರಧಾನಿ ಮೋದಿಯವರಿಗೆ ತಮ್ಮ ಅತ್ಯುನ್ನತ ನಾಗರಿಕ ಗೌರವ - 2019 ರಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿಯನ್ನು ನೀಡಿತು.

6. ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್- ವಿದೇಶಿ ಗಣ್ಯರಿಗೆ ನೀಡಲಾಗುವ ಮಾಲ್ಡೀವ್ಸ್‌ನ ಅತ್ಯುನ್ನತ ಗೌರವವನ್ನು 2019 ರಲ್ಲಿ ಪ್ರಧಾನಿ ಮೋದಿಯವರಿಗೆ ನೀಡಲಾಯಿತು.

7. ಪ್ರಧಾನಿ ಮೋದಿ ಅವರು 2019 ರಲ್ಲಿ ಪ್ರತಿಷ್ಠಿತ ಕಿಂಗ್ ಹಮದ್ ಆರ್ಡರ್ ಆಫ್ ರಿನೈಸಾನ್ಸ್ ಅನ್ನು ಪಡೆದರು. ಈ ಗೌರವವನ್ನು ಬಹ್ರೇನ್ ನೀಡಿತು.

8. ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್, ಅತ್ಯುತ್ತಮ ಸೇವೆಗಳು ಮತ್ತು ಸಾಧನೆಗಳ ಕಾರ್ಯಕ್ಷಮತೆಯಲ್ಲಿ ಅಸಾಧಾರಣವಾದ ಅರ್ಹತೆಯ ನಡವಳಿಕೆಗಾಗಿ ನೀಡಲಾಗುವ ಯುನೈಟೆಡ್ ಸ್ಟೇಟ್ಸ್ ಸಶಸ್ತ್ರ ಪಡೆಗಳ ಪ್ರಶಸ್ತಿಯನ್ನು 2020 ರಲ್ಲಿ ಪಿಎಂ ಮೋದಿಯವರಿಗೆ ನೀಡಲಾಯಿತು.

9. ಡಿಸೆಂಬರ್ 2021 ರಲ್ಲಿ ಭೂತಾನ್ ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಅಲಂಕಾರ, ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ನೀಡಿ ಗೌರವಿಸಿದೆ
 
ಅತ್ಯುನ್ನತ ನಾಗರಿಕ ಗೌರವಗಳ ಹೊರತಾಗಿ,  ಪ್ರಧಾನಿ   ಮೋದಿಯವರಿಗೆ ಪ್ರಪಂಚದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ.

1. ಸಿಯೋಲ್ ಶಾಂತಿ ಪ್ರಶಸ್ತಿ: ಮನುಕುಲದ ಸಾಮರಸ್ಯ, ರಾಷ್ಟ್ರಗಳ ನಡುವಿನ ಸಮನ್ವಯ ಮತ್ತು ವಿಶ್ವ ಶಾಂತಿಗೆ ಕೊಡುಗೆಗಳ ಮೂಲಕ ತಮ್ಮ ಛಾಪು ಮೂಡಿಸಿದ ವ್ಯಕ್ತಿಗಳಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಧಾನಿ ಮೋದಿ ಅವರಿಗೆ 2018 ರಲ್ಲಿ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.

2. ಯುಎನ್ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ: ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. 2018 ರಲ್ಲಿ, ಜಾಗತಿಕ ವೇದಿಕೆಯಲ್ಲಿ ಅವರ ದಿಟ್ಟ ಪರಿಸರ ನಾಯಕತ್ವಕ್ಕಾಗಿ ಯುಎನ್ ಪ್ರಧಾನಿ ಮೋದಿಯನ್ನು ಗುರುತಿಸಿತು.

3. ಮೊದಲ ಬಾರಿಗೆ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿಯನ್ನು 2019 ರಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ರಾಷ್ಟ್ರದ ನಾಯಕನಿಗೆ ನೀಡಲಾಗುತ್ತದೆ. ಪ್ರಧಾನಿ ಮೋದಿಯವರು "ರಾಷ್ಟ್ರಕ್ಕೆ ಅತ್ಯುತ್ತಮ ನಾಯಕತ್ವ" ಕ್ಕಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿಯ ಉಲ್ಲೇಖವು ಹೇಳಿದೆ.

4. 2019 ರಲ್ಲಿ, ಪ್ರಧಾನಿ ಮೋದಿಯವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ 'ಗ್ಲೋಬಲ್ ಗೋಲ್‌ಕೀಪರ್' ಪ್ರಶಸ್ತಿಯನ್ನು ನೀಡಲಾಯಿತು. ಸ್ವಚ್ಛ ಭಾರತ ಅಭಿಯಾನವನ್ನು "ಜನರ ಆಂದೋಲನ" ಆಗಿ ಪರಿವರ್ತಿಸಿದ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಭಾರತೀಯರಿಗೆ ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಅರ್ಪಿಸಿದರು.

5. 2021 ರಲ್ಲಿ, ಪ್ರಧಾನಿ ಮೋದಿಯವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ 'ಗ್ಲೋಬಲ್ ಗೋಲ್‌ಕೀಪರ್' ಪ್ರಶಸ್ತಿಯನ್ನು ನೀಡಲಾಯಿತು. ಸ್ವಚ್ಛ ಭಾರತ ಅಭಿಯಾನವನ್ನು "ಜನರ ಆಂದೋಲನ" ಆಗಿ ಪರಿವರ್ತಿಸಿದ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಭಾರತೀಯರಿಗೆ ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಅರ್ಪಿಸಿದರು.