ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಾನಗರದಲ್ಲಿ ಇಂದು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿರುವ ಸ್ಥಳೀಯ ವ್ಯಾಪಾರಿಗಳು ಮತ್ತು ಚಿಲ್ಲರೆ ವರ್ತಕರನ್ನು ಭೇಟಿಯಾದರು. "ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಸುಧಾರಣೆಗಳ ಬಗ್ಗೆ ವರ್ತಕರು ಸಂತೋಷ ವ್ಯಕ್ತಪಡಿಸಿದ್ದಾರೆ. ‘ಹೆಮ್ಮೆಯಿಂದ ಸ್ವದೇಶಿ ಎಂದು ಹೇಳಿ' ಎಂಬ ಪೋಸ್ಟರ್‌ಗಳನ್ನು ಅವರಿಗೆ ನೀಡಿದೆ. ಇದನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶಿಸುವುದಾಗಿ ಅವರು ಉತ್ಸಾಹದಿಂದ ಹೇಳಿದರು" ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರ ಎಕ್ಸ್ ಪೋಸ್ಟ್ ನಾಲ್ಲಿ ಹೀಗೆ ಹೇಲಿದ್ದಾರೆ:
"ಇಂದಿನ ಸೂರ್ಯೋದಯದೊಂದಿಗೆ ಜಿ.ಎಸ್.ಟಿ ಉಳಿತಾಯ ಉತ್ಸವ ಆರಂಭವಾಗಿದ್ದು, ಭಾರತದ ಆರ್ಥಿಕ ಪಯಣದಲ್ಲಿ ಹೊಸ ಅಧ್ಯಾಯವೂ ಪ್ರಾರಂಭವಾಗಿದೆ. ಭಾರತದ ಸೂರ್ಯೋದಯದ ಸುಂದರ ಭೂಮಿ ಅರುಣಾಚಲ ಪ್ರದೇಶಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ.

ಇಟಾನಗರದಲ್ಲಿ, ನಾನು ಸ್ಥಳೀಯ ವ್ಯಾಪಾರಿಗಳು ಮತ್ತು ಚಿಲ್ಲರೆ ವರ್ತಕರನ್ನು ಭೇಟಿ ಮಾಡಿದೆ, ಅವರು ಪರಿಮಳಯುಕ್ತ ಚಹಾಗಳು, ರುಚಿಕರ ಉಪ್ಪಿನಕಾಯಿ, ಅರಿಶಿನ, ಬೇಕರಿ ಪದಾರ್ಥಗಳು, ಕರಕುಶಲ ವಸ್ತುಗಳು ಮೊದಲಾದ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸಿದರು.

ಜಿ.ಎಸ್.ಟಿ ಸುಧಾರಣೆಗಳ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಅವರಿಗೆ ‘ಹೆಮ್ಮೆಯಿಂದ ಸ್ವದೇಶಿ ಎಂದು ಹೇಳಿರಿ’ ಎಂಬ ಘೋಷವಾಕ್ಯದ ಪೋಸ್ಟರ್‌ಗಳನ್ನು ನೀಡಿದೆ. ಈ ಪೋಸ್ಟರ್ ಅನ್ನು ತಮ್ಮ ಅಂಗಡಿಗಳ ಮೇಲೆ ಉತ್ಸಾಹದಿಂದ ಪ್ರದರ್ಶಿಸುವುದಾಗಿ ಅವರು ಹೇಳಿದರು.”
As the sun rose today, so did a new chapter in India’s economic journey, with the start of GST Bachat Utsav. And, what better place to be than Arunachal Pradesh, India’s beautiful Land of the Rising Sun.
— Narendra Modi (@narendramodi) September 22, 2025
In Itanagar, I met local traders and retailers who showcased a vibrant… pic.twitter.com/wqFWGPISkr




