ದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದಲ್ಲಿ ತಮ್ಮ ಕುಟುಂಬದೊಂದಿಗೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಭೇಟಿ ಮಾಡಿದರು.
ಪ್ರಜ್ಞಾನಂದ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು ಟ್ವೀಟ್ ಮಾಡಿ:
“ಇವತ್ತು 7, ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಇಂದು ವಿಶೇಷ ಸಂದರ್ಶಕರನ್ನು ಭೇಟಿ ಮಾಡಿದೆ.
ಪ್ರಜ್ಞಾನಂದ ಅವರೇ ನಿಮ್ಮ ಕುಟುಂಬದವರೊಂದಿಗೆ ನಿಮ್ಮನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ಈ ಸಂದರ್ಭದಲ್ಲಿ ನೀವು ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸಿದ್ದೀರಿ. ಭಾರತದ ಯುವಜನತೆ ಯಾವುದೇ ಕ್ಷೇತ್ರದಲ್ಲಿ ಹೇಗೆ ಜಯಿಸಬಹುದು ಎಂಬುದನ್ನು ನಿಮ್ಮ ಉದಾಹರಣೆ ತೋರಿಸುತ್ತದೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ!
Had very special visitors at 7, LKM today.
— Narendra Modi (@narendramodi) August 31, 2023
Delighted to meet you, @rpragchess along with your family.
You personify passion and perseverance. Your example shows how India's youth can conquer any domain. Proud of you! https://t.co/r40ahCwgph


