ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಎನ್ ಎಕ್ಸ್ ಟಿ ಕಾನ್ಕ್ಲೇವ್ ನಲ್ಲಿ ವಿವಿಧ ಗಣ್ಯರನ್ನು ಭೇಟಿ ಮಾಡಿ ಸಂವಾದ ನಡೆಸಿದರು. 

ಶ್ರೀ ಕಾರ್ಲೋಸ್ ಮಾಂಟೆಸ್, ಪ್ರೊ.ಜೊನಾಥನ್ ಫ್ಲೆಮಿಂಗ್, ಡಾ. ಆನ್ ಲೀಬರ್ಟ್, ಪ್ರೊ. ವೆಸೆಲಿನ್ ಪೊಪೊವ್ಸ್ಕಿ, ಡಾ. ಬ್ರಿಯಾನ್ ಗ್ರೀನ್, ಶ್ರೀ. ಅಲೆಕ್ ರಾಸ್, ಶ್ರೀ. ಒಲೆಗ್ ಆರ್ಟೆಮಿಯೆವ್ ಮತ್ತು ಶ್ರೀ. ಮೈಕ್ ಮಾಸ್ಸಿಮಿನೊ ಗಣ್ಯರ ಪಟ್ಟಿಯಲ್ಲಿ  ಸೇರಿದ್ದಾರೆ.

ಸಾಮಾಜಿಕ ಮಾಧ್ಯಮ X ನಲ್ಲಿ ಈ ಸಂಬಂಧ ಪ್ರತ್ಯೇಕ ಪೋಸ್ಟ್‌ಗಳಲ್ಲಿ ಪ್ರಧಾನಿ ಸಂದೇಶ ನೀಡಿದ್ದಾರೆ.

“ಇಂದು ಎನ್ ಎಕ್ಸ್ ಟಿ ಕಾನ್ಕ್ಲೇವ್‌ನಲ್ಲಿ ಶ್ರೀ ಕಾರ್ಲೋಸ್ ಮಾಂಟೆಸ್ ಅವರೊಂದಿಗೆ ಸಂವಾದ ನಡೆಸಿದರು. ಸಾಮಾಜಿಕ ಆವಿಷ್ಕಾರಗಳನ್ನು ಹೆಚ್ಚಿಸಲು ಅವರು ಶ್ರೀಮಂತ ಕೊಡುಗೆಗಳನ್ನು ನೀಡಿದ್ದಾರೆ. ಡಿಜಿಟಲ್ ತಂತ್ರಜ್ಞಾನ, ಫಿನ್‌ಟೆಕ್ ಮತ್ತು ಹೆಚ್ಚಿನವುಗಳಲ್ಲಿ ಭಾರತದ ಪ್ರಗತಿಯನ್ನು ಅವರು ಶ್ಲಾಘಿಸಿದ್ದಾರೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

"MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಬಂಧ ಹೊಂದಿರುವ ಪ್ರೊ. ಜೊನಾಥನ್ ಫ್ಲೆಮಿಂಗ್ ಅವರನ್ನು ಭೇಟಿ ಮಾಡಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜೀವ ವಿಜ್ಞಾನದಲ್ಲಿ ಅವರ ಕೆಲಸವು ಅನುಕರಣೀಯವಾಗಿದೆ. ಈ ಕ್ಷೇತ್ರದಲ್ಲಿ ಮುಂಬರುವ ಪ್ರತಿಭೆ ಮತ್ತು ನಾವೀನ್ಯತೆಗೆ ಮಾರ್ಗದರ್ಶನ ನೀಡುವ ಅವರ ಉತ್ಸಾಹವು ಸಮಾನವಾಗಿ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿಗಳು ವಿವರಿಸಿದ್ದಾರೆ

“ಡಾ. ಆನ್ ಲೀಬರ್ಟ್ ಅವರನ್ನು ಭೇಟಿಯಾಗಲು ಸಂತೋಷವಾಯಿತು. ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಅವರ ಕೆಲಸವು ಶ್ಲಾಘನೀಯವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಹಲವಾರು ಜನರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

"ಪ್ರೊ. ವೆಸ್ಸೆಲಿನ್ ಪೊಪೊವ್ಸ್ಕಿ ಅವರನ್ನು ಭೇಟಿಯಾಗಿದ್ದು ಸಂತೋಷದ ಸಂಗತಿ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಭೌಗೋಳಿಕ-ರಾಜಕೀಯಗಳ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಅವರು ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.

"ಭೌತಶಾಸ್ತ್ರ ಮತ್ತು ಗಣಿತದ ಕಡೆಗೆ ಬಲವಾದ ಉತ್ಸಾಹ ಹೊಂದಿರುವ ಪ್ರಮುಖ ಶಿಕ್ಷಣತಜ್ಞ ಡಾ. ಬ್ರಿಯಾನ್ ಗ್ರೀನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಸಂತೋಷವಾಗಿದೆ. ಅವರ ಕೃತಿಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ ಮತ್ತು ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಪ್ರವಚನವನ್ನು ರೂಪಿಸುತ್ತವೆ ಎಂದು ಪ್ರಧಾನಿ ವಿವರಿಸಿದ್ದಾರೆ. @bgreene

“ಇಂದು ಶ್ರೀ ಅಲೆಕ್ ರಾಸ್ ಅವರನ್ನು ಭೇಟಿಯಾಗಲು ಸಂತೋಷವಾಯಿತು. ಅವರು ಸಮೃದ್ಧ ಚಿಂತಕ ಮತ್ತು ಲೇಖಕರಾಗಿ ಛಾಪು ಮೂಡಿಸಿದ್ದಾರೆ, ನಾವೀನ್ಯತೆ ಮತ್ತು ಕಲಿಕೆಗೆ ಸಂಬಂಧಿಸಿದ ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

“ರಷ್ಯಾದ ಪ್ರಮುಖ ಗಗನಯಾತ್ರಿ ಶ್ರೀ ಒಲೆಗ್ ಆರ್ಟೆಮಿಯೆವ್ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದು ಸಂತೋಷವಾಯಿತು. ಅವರ ಪ್ರವಾಸ ಕಥನಗಳು, ಯಾತ್ರೆಗಳು ಕಂಡು ಅಚ್ಚರಿಯಾಗಿದೆ. ಅವರ ವಿಶೇಷ ರೀತಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಸಾಧನೆಗಳು ಅನೇಕ ಯುವಕರನ್ನು ವಿಜ್ಞಾನ ಮತ್ತು ಬಾಹ್ಯಾಕಾಶ ಜಗತ್ತಿನಲ್ಲಿ ಬೆಳಗಲು ಪ್ರೇರೇಪಿಸುತ್ತವೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. @OlegMKS

“ವಿಶಿಷ್ಟ ಗಗನಯಾತ್ರಿ ಶ್ರೀ ಮೈಕ್ ಮಾಸ್ಸಿಮಿನೊ ಅವರ ಭೇಟಿ ಸ್ಮರಣೀಯವಾಗಿದೆ. ಬಾಹ್ಯಾಕಾಶದ ಬಗ್ಗೆ ಅವರ ಉತ್ಸಾಹ ಮತ್ತು ಅದನ್ನು ಯುವಜನರಲ್ಲಿ ಜನಪ್ರಿಯಗೊಳಿಸುತ್ತಿರುವುದು ಶ್ಲಾಘನೀಯ. ಕಲಿಕೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಮೆಚ್ಚುಗೆಗೆ ಅರ್ಹ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸರಣಿ ಸಂದೇಶಗಳಲ್ಲಿ ವಿವರಿಸಿದ್ದಾರೆ. @Astro_Mike

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Microsoft to invest $17.5 billion in India; CEO Satya Nadella thanks PM Narendra Modi

Media Coverage

Microsoft to invest $17.5 billion in India; CEO Satya Nadella thanks PM Narendra Modi
NM on the go

Nm on the go

Always be the first to hear from the PM. Get the App Now!
...
Prime Minister Shares Timeless Wisdom from Yoga Shlokas in Sanskrit
December 10, 2025

The Prime Minister, Shri Narendra Modi, today shared a Sanskrit shloka highlighting the transformative power of yoga. The verses describe the progressive path of yoga—from physical health to ultimate liberation—through the practices of āsana, prāṇāyāma, pratyāhāra, dhāraṇā, and samādhi.

In a post on X, Shri Modi wrote:

“आसनेन रुजो हन्ति प्राणायामेन पातकम्।
विकारं मानसं योगी प्रत्याहारेण सर्वदा॥

धारणाभिर्मनोधैर्यं याति चैतन्यमद्भुतम्।
समाधौ मोक्षमाप्नोति त्यक्त्त्वा कर्म शुभाशुभम्॥”