ಸ್ವಿಸ್ ಒಕ್ಕೂಟದ ಅಧ್ಯಕ್ಷರು ನವದೆಹಲಿಯಲ್ಲಿ ಫೆಬ್ರವರಿ 19–20, 2026 ರವರೆಗೆ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆ, 2026ರಲ್ಲಿ ಭಾಗವಹಿಸಲು ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ.
ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಸ್ನೇಹಪರ ಮತ್ತು ಬಹುಮುಖಿ ಸಂಬಂಧವನ್ನು ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ವಿಸ್ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಗಯ್ ಪಾರ್ಮೆಲಿನ್ ಪುನರುಚ್ಚರಿಸಿದರು. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ, ಸಾಂಸ್ಕೃತಿಕ ವಿನಿಮಯ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಅವರು ಪರಿಶೀಲಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಆಸಕ್ತಿಯ ವಿಷಯಗಳ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಆರ್ಥಿಕ ಸಂಬಂಧ ಗಟ್ಟಿಯಾಗುತ್ತಿರುವ ಬಗ್ಗೆ ಉಭಯ ನಾಯಕರು ಸ್ವಾಗತಿಸಿದರು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಐತಿಹಾಸಿಕ ಭಾರತ - EFTA ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (TEPA) ಅನುಷ್ಠಾನದಿಂದಾಗುವ ಸಕಾರಾತ್ಮಕ ವೇಗದ ಬಗ್ಗೆ ಹೇಳಿದರು, ಇದರಲ್ಲಿ ಸ್ವಿಟ್ಜರ್ಲೆಂಡ್ ಪ್ರಮುಖ ಸದಸ್ಯವಾಗಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ಗಮನಾರ್ಹವಾಗಿ ವಿಸ್ತರಿಸಲು TEPA ಅಪಾರ ಸಾಮರ್ಥ್ಯವನ್ನು ಹೊಂದಿದೆ.

ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ನಾವೀನ್ಯತೆ, ಬೆಳವಣಿಗೆ, ಜಂಟಿ ಸಂಶೋಧನೆ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಉಭಯತ್ರರು ಒಪ್ಪಿಕೊಂಡರು. ಭಾರತ - ಸ್ವಿಟ್ಜರ್ಲೆಂಡ್ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಏರಿಸುವ ಹಂಚಿಕೆಯ ದೃಷ್ಟಿಕೋನದೊಂದಿಗೆ ಸಭೆ ಮುಕ್ತಾಯವಾಯಿತು.

ಮುಂದಿನ AI ಶೃಂಗಸಭೆಯನ್ನು ಆಯೋಜಿಸಲು ಮುಂದಾಗಿರುವ ಸ್ವಿಟ್ಜರ್ಲೆಂಡ್‌ನ ನಿರ್ಧಾರವನ್ನ ಪ್ರಧಾನಮಂತ್ರಿ ಸ್ವಾಗತಿಸಿದರು.ಆ ನಂತರ ಯುಎಇ ಈ ಶೃಂಗಸಭೆಯನ್ನ ಆಯೋಜಿಸಲಿದೆ.
On the sidelines of the AI Impact Summit, had an excellent meeting with Mr. Guy Parmelin, President of the Swiss Confederation. We reviewed the full range of India-Switzerland relations, especially ways to boost linkages in education, technology and talent mobility. 2026 began on… pic.twitter.com/cE9SZIiULW
— Narendra Modi (@narendramodi) February 19, 2026


