65 ವರ್ಷಗಳ ಸುದೀರ್ಘ ಕಾಲದ ನಂತರ ಭಾರತದಲ್ಲಿ ನಡೆಯುತ್ತಿರುವ ಸಮ್ಮೇಳನ; 120 ದಶಲಕ್ಷ ರೈತರ ಪರವಾಗಿ ಪ್ರತಿನಿಧಿಗಳನ್ನು ಸ್ವಾಗತಿಸಿದ ಪ್ರಧಾನಿ ಶ್ರೀ ಮೋದಿ, ರೈತರು ಅದರಲ್ಲೂ 30 ದಶಲಕ್ಷಕ್ಕಿಂತ ಹೆಚ್ಚಿನ ರೈತ ಮಹಿಳೆಯರು, 30 ದಶಲಕ್ಷ ಮೀನುಗಾರರು ಮತ್ತು 80 ದಶಲಕ್ಷ ಹೈನುಗಾರರು ಭಾರತದಲ್ಲಿದ್ದಾರೆ
"ಭಾರತೀಯ ಕೃಷಿ ಸಂಪ್ರದಾಯದಲ್ಲಿ ವಿಜ್ಞಾನ ಮತ್ತು ತರ್ಕಶಾಸ್ತ್ರಕ್ಕೆ ಆದ್ಯತೆ ನೀಡಲಾಗಿದೆ"
"ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ಸದೃಢ ವ್ಯವಸ್ಥೆ ಹೊಂದಿದೆ"
"ಭಾರತ ಇಂದು ಸಾಕಷ್ಟು ಆಹಾರ ಉತ್ಪಾದನೆ ಮತ್ತು ದಾಸ್ತಾನು ಹೊಂದಿರುವ ದೇಶವಾಗಿದೆ"
"ಭಾರತದ ಆಹಾರ ಭದ್ರತೆಯು ಜಾಗತಿಕ ಮಟ್ಟದಲ್ಲಿ ಕಳವಳಕಾರಿಯಾಗಿದ್ದ ಸಮಯ ಒಂದಿತ್ತು, ಆದರೆ ಇಂದು ಅದೇ ಭಾರತವೇ ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಪರಿಹಾರಗಳನ್ನು ಒದಗಿಸುತ್ತಿದೆ"
"ಭಾರತವು 'ವಿಶ್ವ ಬಂಧು'ವಾಗಿ ಜಾಗತಿಕ ಕಲ್ಯಾಣಕ್ಕೆ ಬದ್ಧವಾಗಿದೆ"
"ಸುಸ್ಥಿರ ಕೃಷಿ ಮತ್ತು ಆಹಾರ ವ್ಯವಸ್ಥೆಗಳ ಮುಂದಿರುವ ಸವಾಲುಗಳನ್ನು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂಬ ಸಮಗ್ರ ಕಾರ್ಯವಿಧಾನದ ಅಡಿ ಮಾತ್ರ ನಿಭಾಯಿಸಬಹುದು"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) "ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ" ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 65 ವರ್ಷಗಳ ಸುದೀರ್ಘ ಕಾಲದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ (ಐಸಿಎಇ) ನಡೆಯುತ್ತಿರುವುದು ಸಂತಸ ತಂದಿದೆ. ಭಾರತದ 120 ದಶಲಕ್ಷ ರೈತರು, 30 ದಶಲಕ್ಷಕ್ಕೂ ಹೆಚ್ಚು ರೈತ ಮಹಿಳೆಯರು, 30 ದಶಲಕ್ಷ ಮೀನುಗಾರರು ಮತ್ತು 80 ದಶಲಕ್ಷ ಹೈನುಗಾರರ ಪರವಾಗಿ ಪ್ರಧಾನಿ ಅವರು ನೆರೆದಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. “ನೀವು 500 ದಶಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ನೆಲೆಯಾಗಿರುವ ಪುಣ್ಯಭೂಮಿಯಲ್ಲಿದ್ದೀರಿ. ಕೃಷಿ ಮತ್ತು ಪ್ರಾಣಿ-ಪ್ರೀತಿಯ ಭಾರತ ದೇಶಕ್ಕೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ” ಎಂದರು.

 

ಕೃಷಿ ಮತ್ತು ಆಹಾರದ ಬಗ್ಗೆ ಪ್ರಾಚೀನ ಭಾರತೀಯ ನಂಬಿಕೆಗಳು ಮತ್ತು ಅನುಭವಗಳ ದೀರ್ಘಾಯುಷ್ಯವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಭಾರತೀಯ ಕೃಷಿ ಸಂಪ್ರದಾಯ ಅಥವಾ ಪದ್ಧತಿಯಲ್ಲಿ ವಿಜ್ಞಾನ ಮತ್ತು ತರ್ಕಶಾಸ್ತ್ರಕ್ಕೆ ಆದ್ಯತೆ ನೀಡಲಾಗಿದೆ. ಆಹಾರದ ಔಷಧೀಯ ಗುಣಗಳ ಹಿಂದೆ ಸಂಪೂರ್ಣ ವಿಜ್ಞಾನದ ಅಸ್ತಿತ್ವವಿದೆ ಎಂದು ತಿಳಿಸಿದರು. ಶ್ರೀಮಂತ ಪರಂಪರೆಯ ಆಧಾರದ ಮೇಲೆ ಕೃಷಿಯ ಕುರಿತು ಸುಮಾರು 2000 ವರ್ಷಗಳ ಹಿಂದೆ ಬರೆದಿರುವ ‘ಕೃಷಿ ಪರಾಶರ’ ಎಂಬ ಗ್ರಂಥ ಉಲ್ಲೇಖಿಸಿದ ಪ್ರಧಾನಿ, ಈ ಸಾವಿರಾರು ವರ್ಷಗಳ ಹಿಂದಿನ ದೃಷ್ಟಿಯ ತಳಹದಿಯ ಮೇಲೆ ಕೃಷಿ ಬೆಳೆದಿದೆ. ಭಾರತದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಸದೃಢವಾದ ವ್ಯವಸ್ಥೆಯೇ ಇದೆ. "ಐಸಿಎಆರ್ ಸ್ವತಃ 100ಕ್ಕೂ ಹೆಚ್ಚಿನ ಸಂಶೋಧನಾ ಸಂಸ್ಥೆಗಳನ್ನು ಹೊಂದಿದೆ". ಕೃಷಿ ಶಿಕ್ಷಣಕ್ಕಾಗಿ 500ಕ್ಕೂ ಹೆಚ್ಚು ಕಾಲೇಜುಗಳು ಮತ್ತು 700ಕ್ಕೂ ಹೆಚ್ಚಿನ ಕೃಷಿ ವಿಜ್ಞಾನ ಕೇಂದ್ರಗಳಿವೆ ಎಂದರು.

ಭಾರತದ ಕೃಷಿ ಯೋಜನೆಯಲ್ಲಿ ಎಲ್ಲಾ 6 ಋತುಗಳ ಪ್ರಸ್ತುತತೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಭಾರತವು 15 ಕೃಷಿ-ಹವಾಮಾನ ವಲಯಗಳ ವಿಶಿಷ್ಟ ಗುಣಗಳನ್ನು ಹೊಂದಿದೆ. ದೇಶದಲ್ಲಿ ಸುಮಾರು 100 ಕಿಲೋಮೀಟರ್ ಪ್ರಯಾಣಿಸಿದರೆ ಕೃಷಿ ಉತ್ಪನ್ನಗಳು ಬದಲಾಗುತ್ತವೆ. "ಅದು ಭೂಮಿಯ ಮೇಲಿನ ಕೃಷಿ ಆಗಿರಲಿ, ಹಿಮಾಲಯ, ಮರುಭೂಮಿ, ನೀರಿನ ಕೊರತೆಯ ಪ್ರದೇಶಗಳು ಅಥವಾ ಕರಾವಳಿ ಪ್ರದೇಶಗಳ ಕೃಷಿಯೇ ಆಗಿರಲಿ, ಜಾಗತಿಕ ಆಹಾರ ಭದ್ರತೆಗೆ ಈ ವೈವಿಧ್ಯತೆಯ ಭೂಪ್ರದೇಶಗಳು ನಿರ್ಣಾಯಕವಾಗಿದೆ, ಇವು ಭಾರತವನ್ನು ವಿಶ್ವ ಮಟ್ಟದಲ್ಲಿ ಭರವಸೆಯ ಕಿರಣವನ್ನಾಗಿ ಮಾಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

65 ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಕೃಷಿ ಅರ್ಥಶಾಸ್ತ್ರಜ್ಞರ ಕೊನೆಯ ಅಂತಾರಾಷ್ಟ್ರೀಯ ಸಮ್ಮೇಳನ ನೆನಪಿಸಿಕೊಂಡ ಪ್ರಧಾನಿ, ಭಾರತವು ಹೊಸದಾಗಿ ಸ್ವತಂತ್ರ ರಾಷ್ಟ್ರವಾಗಿದ್ದು, ಭಾರತದ ಆಹಾರ ಭದ್ರತೆ ಮತ್ತು ಕೃಷಿಗೆ ಇದು ಸವಾಲಿನ ಸಮಯವಾಗಿದೆ. ಇಂದು, ಭಾರತವು ಸಾಕಷ್ಟು ಆಹಾರ ಉತ್ಪಾದನೆ ಮತ್ತು ದಾಸ್ತಾನು ಹೊಂದಿರುವ ಸಮೃದ್ಧ ದೇಶವಾಗಿದೆ, ಹಾಲು, ಬೇಳೆಕಾಳುಗಳು ಮತ್ತು ಸಾಂಬಾರ ಪದಾರ್ಥಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಆಹಾರ ಧಾನ್ಯ, ಹಣ್ಣುಗಳು, ತರಕಾರಿಗಳು, ಹತ್ತಿ, ಸಕ್ಕರೆ, ಚಹಾ ಮತ್ತು ಮೀನುಗಳ ಸಾಕಣೆಯಲ್ಲಿ ವಿಶ್ವದಲ್ಲೇ 2ನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಭಾರತದ ಆಹಾರ ಭದ್ರತೆಯು ಒಂದು ಕಾಲದಲ್ಲಿ ವಿಶ್ವ ಮಟ್ಟದಲ್ಲಿ ಕಳವಳಕಾರಿಯ ವಿಷಯವಾಗಿತ್ತು. ಆದರೆ ಇಂದು ಭಾರತವು ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಹಲವಾರು ಪರಿಹಾರಗಳನ್ನು ನೀಡುತ್ತಿದೆ. ಆದ್ದರಿಂದ, ಆಹಾರ ವ್ಯವಸ್ಥೆಯ ಪರಿವರ್ತನೆ ಅಥವಾ ರೂಪಾಂತರದ ಚರ್ಚೆಗಳಿಗೆ ಭಾರತದ ಅನುಭವವು ಮೌಲ್ಯಯುತವಾಗಿದೆ, ಇದು ಜಾಗತಿಕ ದಕ್ಷಿಣಕ್ಕೆ ಖಂಡಿತವಾಗಿಯೂ ಪ್ರಯೋಜನಗಳನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

 

ಜಾಗತಿಕ ಕಲ್ಯಾಣಕ್ಕಾಗಿ ಭಾರತದ ಬದ್ಧತೆ ಮುಂದುವರಿದಿದ್ದು, ಅದು ವಿಶ್ವ ಬಂಧು'ವಾಗಿದೆ. ಜಾಗತಿಕ ಕಲ್ಯಾಣಕ್ಕಾಗಿ ಭಾರತದ ದೃಷ್ಟಿಕೋನ ವಿಶಾಲವಾಗಿದೆ. ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ', 'ಮಿಷನ್ ಲೈಫ್' ಮತ್ತು 'ಒಂದು ಭೂಮಿ ಒಂದು ಆರೋಗ್ಯ' ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಭಾರತವು ಮುಂದಿಟ್ಟಿರುವ ವಿವಿಧ ಮಂತ್ರಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. "ಸುಸ್ಥಿರ ಕೃಷಿ ಮತ್ತು ಆಹಾರ ವ್ಯವಸ್ಥೆಗಳ ಮುಂದಿರುವ ಸವಾಲುಗಳನ್ನು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂಬ ಸಮಗ್ರ ಕಾರ್ಯವಿಧಾನದ ಅಡಿ ಮಾತ್ರ ನಿಭಾಯಿಸಬಹುದು" ಎಂದು ಹೇಳಿದರು.

"ಕೃಷಿಯು ಭಾರತದ ಆರ್ಥಿಕ ನೀತಿಗಳ ಕೇಂದ್ರಬಿಂದುವಾಗಿದೆ". ಅಲ್ಪ ಭೂಮಿ ಹೊಂದಿರುವ ಭಾರತದ 90% ಸಣ್ಣ ರೈತರು ಭಾರತದ ಆಹಾರ ಭದ್ರತೆಯ ದೊಡ್ಡ ಶಕ್ತಿಯಾಗಿದ್ದಾರೆ. ಏಷ್ಯಾದ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಪ್ರಚಲಿತದಲ್ಲಿದೆ. ಇದು ಭಾರತದ ಮಾದರಿಯನ್ನು ಅನ್ವಯಿಸುತ್ತದೆ. ನೈಸರ್ಗಿಕ ಕೃಷಿಯ ಉದಾಹರಣೆ ನೀಡಿದ ಅವರು, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುವ ಸಕಾರಾತ್ಮಕ ಫಲಿತಾಂಶಗಳನ್ನು ದೇಶದಲ್ಲಿ ಕಾಣಬಹುದು. ಈ ವರ್ಷದ ಬಜೆಟ್‌ನಲ್ಲಿ ಸುಸ್ಥಿರ ಮತ್ತು ಹವಾಮಾನಕ್ಕೆ ಒಗ್ಗುವ ಅಥವಾ ಹೊಂದಾಣಿ ಆಗುವ  ಕೃಷಿಯ ಮೇಲೆ ಹೆಚ್ಚಿನ ಗಮನ ಹರಿಸುವ ಜತೆಗೆ, ಭಾರತದ ರೈತರನ್ನು ಬೆಂಬಲಿಸಲು ಸಂಪೂರ್ಣ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುವುದನ್ನು ಉಲ್ಲೇಖಿಸಲಾಗಿದೆ. ಹವಾಮಾನ-ನಿರೋಧಕ ಬೆಳೆಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರವು ಒತ್ತು ನೀಡಿದೆ. ಕಳೆದ 10 ವರ್ಷಗಳಲ್ಲಿ ಸುಮಾರು 900 ಹೊಸ ಹವಾಮಾನ-ನಿರೋಧಕ ತಳಿಗಳನ್ನು ರೈತರಿಗೆ ಹಸ್ತಾಂತರಿಸಲಾಗಿದೆ. ಸಾಂಪ್ರದಾಯಿಕ ತಳಿಗಳಿಗಿಂತ 25% ಕಡಿಮೆ ನೀರು ಹೀರುವ  ಅಕ್ಕಿ ತಳಿಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಪ್ಪು ಅಕ್ಕಿ ಉತ್ಕೃಷ್ಟ ಆಹಾರವಾಗಿ ಹೊರಹೊಮ್ಮಿದೆ. "ಮಣಿಪುರ, ಅಸ್ಸಾಂ ಮತ್ತು ಮೇಘಾಲಯದ ಕಪ್ಪು ಅಕ್ಕಿಯು ಅದರ ಔಷಧೀಯ ಮೌಲ್ಯದಿಂದಾಗಿ ಆದ್ಯತೆಯ ಆಯ್ಕೆಯಾಗಿದೆ". ವಿಶ್ವ ಸಮುದಾಯದೊಂದಿಗೆ ಈ ಅಕ್ಕಿಯ ಸಂಬಂಧಿತ ಅನುಭವಗಳನ್ನು ಹಂಚಿಕೊಳ್ಳಲು ಭಾರತವು ಸಮಾನವಾಗಿ ಉತ್ಸುಕವಾಗಿದೆ.

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯೊಂದಿಗೆ ಪೌಷ್ಟಿಕತೆಯ ಸವಾಲಿನ ಗಂಭೀರತೆ ಇದೆ. 'ಕನಿಷ್ಠ ನೀರು ಮತ್ತು ಗರಿಷ್ಠ ಉತ್ಪಾದನೆ'ಯ ಸಿರಿಧಾನ್ಯವು ಉತ್ಕೃಷ್ಟ ಗುಣಮಟ್ಟದ ಸರ್ವಶ್ರೇಷ್ಠ ಆಹಾರವಾಗಿದೆ. ಭಾರತದ ಸಿರಿಧಾನ್ಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಭಾರತ ಇಚ್ಛೆ ಹೊಂದಿದೆ. ಕಳೆದ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗಿದೆ ಎಂದರು.

 

ಕೃಷಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ಉಪಕ್ರಮಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಮಣ್ಣಿನ ಆರೋಗ್ಯ ಕಾರ್ಡ್, ಸೋಲಾರ್ ಬೇಸಾಯದಿಂದ ರೈತರನ್ನು ಇಂಧನ ಪೂರೈಕೆದಾರರಾಗಿ ಪರಿವರ್ತಿಸಲು, ಡಿಜಿಟಲ್ ಕೃಷಿ ಮಾರುಕಟ್ಟೆ ಅಂದರೆ ಇ-ನಾಮ್, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿಯ ಔಪಚಾರಿಕೀಕರಣ (ಕಾನೂನುಬದ್ಧ ಅಥವಾ ನ್ಯಾಯಬದ್ಧಗೊಳಿಸು) ಮತ್ತು ಸಾಂಪ್ರದಾಯಿಕ ರೈತರಿಂದ ಕೃಷಿ ಸ್ಟಾರ್ಟಪ್‌ಗಳವರೆಗೆ, ನೈಸರ್ಗಿಕ ಕೃಷಿಯಿಂದ ಫಾರ್ಮ್‌ಸ್ಟೇ ಮತ್ತು ಕೃಷಿ ಭೂಮಿಯಿಂದ ಊಟದ ಟೇಬಲ್(ಫಾರ್ಮ್-ಟು-ಟೇಬಲ್‌)ನವರೆಗೆ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ 90 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಲಾಗಿದೆ. 20% ಎಥೆನಾಲ್ ಮಿಶ್ರಣ ಮಾಡುವ ಗುರಿಯತ್ತ ಭಾರತ ವೇಗವಾಗಿ ಮುನ್ನುಗ್ಗುತ್ತಿರುವುದರಿಂದ, ಕೃಷಿ ಮತ್ತು ಪರಿಸರ ಎರಡಕ್ಕೂ ಪ್ರಯೋಜನವಾಗುತ್ತಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ,  ಒಂದೇ ಕ್ಲಿಕ್‌ನಲ್ಲಿ 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗುತ್ತದೆ. ಡಿಜಿಟಲ್ ಬೆಳೆ ಸಮೀಕ್ಷೆಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನೈಜ ಸಮಯದಲ್ಲಿ ಒದಗಿಸುತ್ತದೆ. - ರೈತರಿಗೆ ಸಮಯ ಮಾಹಿತಿ ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮದಿಂದ ಕೋಟ್ಯಂತರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ, ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ರೈತರ ಭೂಮಿಗೆ ಡಿಜಿಟಲ್ ಗುರುತಿನ ಸಂಖ್ಯೆ ನೀಡುವ ಭೂಮಿ ಡಿಜಿಟಲೀಕರಣ ಮತ್ತು ಡ್ರೋನ್ ದೀದಿಗಳಿಗೆ ಡ್ರೋನ್‌ಗಳನ್ನು ನಿರ್ವಹಿಸಲು ತರಬೇತಿ ನೀಡುವ ಮೂಲಕ ಕೃಷಿಯಲ್ಲಿ ಡ್ರೋನ್‌ಗಳನ್ನು ಉತ್ತೇಜಿಸುವ ಬೃಹತ್ ಅಭಿಯಾನ ನಡೆಸಲಾಗುತ್ತಿದೆ. ಈ ಎಲ್ಲಾ ಕ್ರಮಗಳು ಭಾರತದ ರೈತರಿಗೆ ಪ್ರಯೋಜನವಾಗುವ ಜತೆಗೆ, ಜಾಗತಿಕ ಆಹಾರ ಭದ್ರತೆಯನ್ನು ಬಲಪಡಿಸುತ್ತಿದೆ ಎಂದರು.

ಹೆಚ್ಚಿನ ಸಂಖ್ಯೆಯ ಯುವಜನರ ಉಪಸ್ಥಿತಿಯನ್ನು ಗಮನಿಸಿದ ಪ್ರಧಾನಿ, ಮುಂದಿನ 5 ದಿನಗಳು ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳೊಂದಿಗೆ ಜಗತ್ತನ್ನು ಸಂಪರ್ಕಿಸುವ ಮಾರ್ಗಗಳಿಗೆ ಸಾಕ್ಷಿಯಾಗಲಿವೆ. "ನಾವು ಪರಸ್ಪರ ಕಲಿಯುತ್ತೇವೆ ಮತ್ತು ಪರಸ್ಪರ ಕಲಿಸುತ್ತೇವೆ" ಎಂದು ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ನೀತಿ ಆಯೋಗದ ಸದಸ್ಯ ಪ್ರೊ. ರಮೇಶ್ ಚಂದ್, ಸಮ್ಮೇಳನಾಧ್ಯಕ್ಷ ಪ್ರೊ. ಮಾಟಿನ್ ಕೈಮ್, ಐಸಿಎಆರ್ ನ ಡಿಎಆರ್ ಇ ಮತ್ತು ಡಿಜಿ ಕಾರ್ಯದರ್ಶಿ ಡಾ. ಹಿಮಾನ್ಶು ಪಾಠಕ್ ಉಪಸ್ಥಿತರಿದ್ದರು.

ಹಿನ್ನೆಲೆ

ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಆಯೋಜಿಸಿರುವ ತ್ರೈವಾರ್ಷಿಕ ಸಮ್ಮೇಳನವು 2024 ಆಗಸ್ಟ್ 2ರಿಂದ 7ರ ವರೆಗೆ ರವರೆಗೆ ನಡೆಯಲಿದ್ದು, 65 ಸುದೀರ್ಘ ವರ್ಷಗಳ ನಂತರ ಭಾರತದಲ್ಲಿ ಜರುಗುತ್ತಿದೆ.

 

ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) "ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ" ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನವು ಜಾಗತಿಕ ಕೃಷಿ ಸವಾಲುಗಳಿಗೆ ಭಾರತದ ಪೂರ್ವಭಾವಿ ಕಾರ್ಯವಿಧಾನದ ಮೇಲೆ ಬೆಳಕು ಚೆಲ್ಲಲಿದೆ, ಅಲ್ಲದ ರಾಷ್ಟ್ರದ ಕೃಷಿ ಸಂಶೋಧನೆ ಮತ್ತು ನೀತಿ ಪ್ರಗತಿಗಳನ್ನು ಪ್ರದರ್ಶಿಸುತ್ತದೆ.

ಐಸಿಎಇ-2024 ವೇದಿಕೆಯು ಯುವ ಸಂಶೋಧಕರು ಮತ್ತು ಪ್ರಮುಖ ವೃತ್ತಿಪರರು ತಮ್ಮ ಕೆಲಸ ಮತ್ತು ಸಂಪರ್ಕ ಜಾಲವನ್ನು ಜಾಗತಿಕ ಗೆಳೆಯರೊಂದಿಗೆ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸುತ್ತದೆ. ಇದು ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಪಾಲುದಾರಿಕೆ ಬಲಪಡಿಸುವ ಗುರಿ ಹೊಂದಿದೆ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ನೀತಿ ರಚನೆಯ ಮೇಲೆ ಪ್ರಭಾವ ಬೀರುತ್ತದೆ. ಡಿಜಿಟಲ್ ಕೃಷಿ ಮತ್ತು ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳಲ್ಲಿನ ಪ್ರಗತಿ ಸೇರಿದಂತೆ ಭಾರತದ ಕೃಷಿ ಪ್ರಗತಿಯನ್ನು ಸಾರಲಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Oh My God! Maha Kumbh drives 162% jump in flight bookings; hotels brimming with tourists

Media Coverage

Oh My God! Maha Kumbh drives 162% jump in flight bookings; hotels brimming with tourists
NM on the go

Nm on the go

Always be the first to hear from the PM. Get the App Now!
...
The establishment of the National Turmeric Board is a matter of immense joy, particularly for our hardworking turmeric farmers across India: Prime Minister
January 14, 2025

Hailing the establishment of the National Turmeric Board, the Prime Minister Shri Narendra Modi said it would ensure better opportunities for innovation, global promotion and value addition in turmeric production.

Responding to a post on X by Union Minister Shri Piyush Goyal, Shri Modi said:

“The establishment of the National Turmeric Board is a matter of immense joy, particularly for our hardworking turmeric farmers across India!

This will ensure better opportunities for innovation, global promotion and value addition in turmeric production. It will strengthen the supply chains, benefiting both farmers and consumers alike.”