ಶೇರ್
 
Comments
“ಭಾರತದ ಜೈವಿಕ ಆರ್ಥಿಕತೆ ಕಳೆದ 8 ವರ್ಷಗಳಲ್ಲಿ 8 ಪಟ್ಟು ವೃದ್ಧಿಯಾಗಿದೆ. ನಾವು 10 ಬಿಲಿಯನ್ ಡಾಲರ್ ನಿಂದ 80 ಬಿಲಿಯನ್ ಡಾಲರ್ ಗೆ ಬೆಳೆದಿದ್ದೇವೆ. ಜಾಗತಿಕ ಜೈವಿಕ ತಂತ್ರಜ್ಞಾನ ಪೂರಕ ವ್ಯವಸ್ಥೆಯಲ್ಲಿ ಭಾರತ 10 ಅಗ್ರ ಸ್ಥಾನದಲ್ಲಿ ನಿಲ್ಲಿಲು ಹೆಚ್ಚು ದೂರವೇನೂ ಕ್ರಮಿಸಬೇಕಿಲ್ಲ’’
“ಹಿಂದಿನ ದಶಕಗಳಲ್ಲಿ ನಾವು ಐಟಿ ವೃತ್ತಿಪರರಿಗೆ ಕಾಣುತ್ತಿದ್ದಷ್ಟೇ ಗೌರವ ಮತ್ತು ಸ್ಥಾನಮಾನ ಇದೀಗ ಭಾರತದಲ್ಲಿ ಜೈವಿಕ ವಲಯ ಮತ್ತು ಜೈವಿಕ ವೃತ್ತಿಪರರಿಗೆ ಸಿಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ’’
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರ ಭಾರತದಲ್ಲಿ ಎಲ್ಲ ವಲಯಗಳಿಗೂ ಅನ್ವಯವಾಗುತ್ತದೆ. ‘ಇಡೀ ಸರ್ಕಾರ ಮನೋಭಾವ’ದಡಿ ಎಲ್ಲ ವಲಯಗಳನ್ನೂ ಉತ್ತೇಜಿಸಲಾಗುತ್ತಿದೆ’’
“ಇಂದು 60 ನಾನಾ ಬಗೆಯ ಕೈಗಾರಿಕೆಗಳಲ್ಲಿ 70ಸಾವಿರ ನವೋದ್ಯಮಗಳು ನೋಂದಣಿಯಾಗಿವೆ. ಅವುಗಳಲ್ಲಿ 5ಸಾವಿರಕ್ಕೂ ಅಧಿಕ ನವೋದ್ಯಮಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿವೆ’’
“ಕಳೆದ ವರ್ಷವೇ 1100 ಬಯೋಟೆಕ್ ನವೋದ್ಯಮಗಳು ಉದಯವಾಗಿವೆ’’
“ಸಬ್ ಕಾ ಪ್ರಯಾಸ್- ಎಲ್ಲರ ಪ್ರಯತ್ನ ಮನೋಭಾವದೊಂದಿಗೆ ಸರ್ಕಾರ ಉದ್ಯಮದಲ್ಲಿ ಅತ್ಯುತ್ತಮ ತಜ್ಞರನ್ನೆಲ್ಲಾ ಒಂದೇ ವೇದಿಕೆಗ ತರಲಾಗುತ್ತಿದೆ’’
“ಬಯೋಟೆಕ್ ವಲಯ ಅತ್ಯಂತ ಬೇಡಿಕೆ ಆಧಾರಿತ ವಲಯವಾಗಿದೆ. ಇತ್ತೀಚಿನ ವರ್ಷಗಳಲ್ಲಿನ ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಅಭಿಯಾನದಿಂದಾಗಿ ಬಯೋಟೆಕ್ ವಲಯದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ ಪೋ - 2022 ಅನ್ನು ಉದ್ಘಾಟಿಸಿದರು. ಅವರು ಜೈವಿಕ ತಂತ್ರಜ್ಞಾನ ಉತ್ಪನ್ನಗಳ ಇ-ಪೋರ್ಟಲ್ ಗೂ ಸಹ ಚಾಲನೆ ನೀಡಿದರು. ಈ ವೇಳೆ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಶ್ರೀ ಧರ್ಮೇಂದ್ರ ಪ್ರಧಾನ್, ಡಾ ಜಿತೇಂದ್ರ ಸಿಂಗ್, ಬಯೋಟೆಕ್ ವಲಯದ ಪಾಲುದಾರರು, ತಜ್ಞರು, ಎಸ್‌ಎಂಇಗಳು, ಹೂಡಿಕೆದಾರರು ಈ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಕಳೆದ 8 ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆಯು 8 ಪಟ್ಟು ಬೆಳೆದಿದೆ ಎಂದರು.  “ನಾವು 10 ಶತಕೋಟಿಯಿಂದ ಡಾಲರ್ ನಿಂದ 80 ಶತಕೋಟಿ ಡಾಲರ್ ಗೆ ಬೆಳೆದಿದ್ದೇವೆ. ಬಯೋಟೆಕ್‌ನ ಜಾಗತಿಕ ಪರಿಸರ ವ್ಯವಸ್ಥೆಯಲ್ಲಿ ಅಗ್ರ 10 ದೇಶಗಳ ಗುಂಪು ತಲುಪಲು ಭಾರತವು ತುಂಬಾ ದೂರ ಕ್ರಮಿಸಬೇಕಿಲ್ಲ’’ಎಂದು ಅವರು ಹೇಳಿದರು. ದೇಶದಲ್ಲಿ ಈ ವಲಯದ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವಿನ ಮಂಡಳಿ (ಬಿಐಆರ್ ಎಸಿ-ಬಿರಾಕ್) ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಅಮೃತ ಕಾಲದ ಸಂದರ್ಭದಲ್ಲಿ ದೇಶವು ಇಂದು ಹೊಸ ಪ್ರತಿಜ್ಞೆಗಳನ್ನು ಸ್ವೀಕರಿಸುತ್ತಿರುವಾಗ, ದೇಶದ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು. 

ಜಾಗತಿಕ ಮಟ್ಟದಲ್ಲಿ ಭಾರತೀಯ ವೃತ್ತಿಪರರ ಹೆಚ್ಚುತ್ತಿರುವ ಖ್ಯಾತಿ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, “ನಮ್ಮ ಐಟಿ ವೃತ್ತಿಪರರ ಕೌಶಲ್ಯ ಮತ್ತು ಆವಿಷ್ಕಾರದ ಮೇಲೆ ವಿಶ್ವದ ನಂಬಿಕೆಯು ಹೊಸ ಎತ್ತರದಲ್ಲಿದೆ. ಅದೇ ನಂಬಿಕೆ ಮತ್ತು ಘನತೆ, ಈ ದಶಕದಲ್ಲಿ, ಭಾರತದ ಬಯೋಟೆಕ್ ವಲಯಕ್ಕೆ ಮತ್ತು ಭಾರತದ ಜೈವಿಕ ವೃತ್ತಿಪರರರಿಗೆ ಸಿಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ’’ ಎಂದರು.

ಭಾರತವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳ ತಾಣವೆಂದು ಪರಿಗಣಿಸಲು ಐದು ದೊಡ್ಡ ಕಾರಣಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಮೊದಲನೆಯದು- ಜನಸಂಖ್ಯಾ ವೈವಿಧ್ಯತೆ ಮತ್ತು ವೈವಿಧ್ಯಮಯ ಹವಾಮಾನ ಖುತುಗಳು, ಎರಡನೆಯದು- ಭಾರತದ ಪ್ರತಿಭಾವಂತ ಮಾನವ ಸಂಪನ್ಮೂಲದ ಗುಂಪು, ಮೂರನೆಯದು- ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಹೆಚ್ಚಿನ ಅವಕಾಶಗಳಿರುವುದು, ನಾಲ್ಕನೆಯದು- ಭಾರತದಲ್ಲಿ ಜೈವಿಕ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಐದನೆಯದಾಗಿ- ಭಾರತದ ಬಯೋಟೆಕ್ ವಲಯ ಮತ್ತು ಅದರ ಯಶಸ್ಸಿನ ದಾಖಲೆ. 

ಭಾರತೀಯ ಆರ್ಥಿಕತೆಯ ಸಾಮರ್ಥ್ಯ ಮತ್ತು ಶಕ್ತಿಯನ್ನು ಸುಧಾರಿಸಲು ಸರ್ಕಾರವು ಅಹರ್ನಿಶಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ‘ಇಡೀ ಸರ್ಕಾರದ ವಿಧಾನ’ದ ಮೇಲೆ ಒತ್ತಡವಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಮಂತ್ರವು ಭಾರತದ ವಿವಿಧ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಕೆಲವು ಆಯ್ದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದಾಗ ಮತ್ತು ಇತರ ವಲಯಗಳನ್ನು ತಮ್ಮ ದಾರಿ ಕಂಡುಕೊಳ್ಳಲು ಅವುಗಳ ಪಾಡಿಗೆ ಅವುಗಳನ್ನು ಬಿಟ್ಟರೆ, ಪರಿಸ್ಥಿತಿ ಅದಲು ಬದಲಾಗುತ್ತದೆ. ಹಾಗಾಗಿ ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು. ಇಂದು ಪ್ರತಿಯೊಂದು ಕ್ಷೇತ್ರವೂ ದೇಶದ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದ್ದು, ಅದಕ್ಕಾಗಿಯೇ ಪ್ರತಿಯೊಂದು ಕ್ಷೇತ್ರಕ್ಕೂ ‘ಸಾಥ್’ ನೀಡುವುದು ಮತ್ತು ಪ್ರತಿಯೊಂದು ಕ್ಷೇತ್ರದ ‘ವಿಕಾಸ’ ವೂ ಇಂದಿನ ಅಗತ್ಯವಾಗಿದೆ ಎಂದರು. ಆಲೋಚನೆ ಮತ್ತು ವಿಧಾನದಲ್ಲಿನ ಈ ಬದಲಾವಣೆಯು ಫಲಿತಾಂಶಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿರುವುದರಿಂದ ಆಗಿರುವ ಬದಲಾವಣೆಗಳ ಉದಾಹರಣೆಗಳನ್ನು ಅವರು ನೀಡಿದರು. 

ಜೈವಿಕ ತಂತ್ರಜ್ಞಾನ ವಲಯಕ್ಕೂ ಸಹ, ನವೋದ್ಯಮ ಪೂರಕ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಕಂಡುಬರುವ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. “ಕಳೆದ 8 ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಸ್ಟಾರ್ಟ್‌ಅಪ್ಗಳ ಸಂಖ್ಯೆಯು ನೂರರಿಂದ 70 ಸಾವಿರಕ್ಕೆ ಹೆಚ್ಚಳವಾಗಿದೆ. ಈ 70 ಸಾವಿರ ಸ್ಟಾರ್ಟ್‌ಅಪ್‌ಗಳು ನಾನಾ ಕೈಗಾರಿಕೆಗಳಲ್ಲಿ ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಆ ಪೈಕಿ 5 ಸಾವಿರಕ್ಕೂ ಅಧಿಕ ನವೋದ್ಯಮಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಪ್ರತಿ 14ನೇ ಸ್ಟಾರ್ಟ್‌ಅಪ್‌ಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿದ ಒಂದು ಇದೆ ಮತ್ತು 1100 ಕ್ಕೂ ಅಧಿಕ ಜೈವಿಕ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಕಳೆದ ವರ್ಷವೇ ಉದಯವಾಗಿವೆ’’ ಎಂದು ಪ್ರಧಾನಿ ಮಾಹಿತಿ ನೀಡಿದರು. ಪ್ರತಿಭಾವಂತರು ಈ ವಲಯದತ್ತ ಸ್ಥಾನಪಲ್ಲಟ ಮಾಡುತ್ತಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಬಯೋಟೆಕ್ ಕ್ಷೇತ್ರದಲ್ಲಿ ಹೂಡಿಕೆದಾರರ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ ಮತ್ತು ಬಯೋಟೆಕ್ ಸಂಪೋಷಣಾ ಕೇಂದ್ರಗಳು (ಇನ್ಕ್ಯುಬೇಟರ್‌ಗಳು) ಮತ್ತು ಅವರಿಗೆ ಧನಸಹಾಯವು 7 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಜೈವಿಕ ತಂತ್ರಜ್ಞಾನ ಇನ್‌ಕ್ಯುಬೇಟರ್‌ಗಳ ಸಂಖ್ಯೆ 2014 ರಲ್ಲಿ 6 ರಿಂದ ಇದೀಗ 75 ಕ್ಕೆ ಹೆಚ್ಚಳವಾಗಿದೆ. ಬಯೋಟೆಕ್ ಉತ್ಪನ್ನಗಳ ಸಂಖ್ಯೆ 10 ಉತ್ಪನ್ನಗಳನ್ನು ಇಂದು 700 ಕ್ಕಿಂತ  ಅಧಿಕವಾಗಿವೆ" ಎಂದು ಅವರು ಮಾಹಿತಿ ನೀಡಿದರು.

ಸರ್ಕಾರ- ಕೇಂದ್ರಿತ ವಿಧಾನವನ್ನು ಬದಲಿರುವ ಉದ್ದೇಶದಿಂದ ಹೊಸ ಸಕ್ರಿಯ ಇಂಟರ್‌ಫೇಸ್‌ (ಮುಖಾಮುಖಿ) ಸಂಸ್ಕೃತಿಯನ್ನು ಸರ್ಕಾರವು ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಿರಾಕ್ ನಂತಹ ವೇದಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿದೆ ಮತ್ತು ಇತರ ಹಲವು ಕ್ಷೇತ್ರಗಳು ಈ ವಿಧಾನದತ್ತ ದೃಷ್ಟಿನೆಟ್ಟಿವೆ. ನವೋದ್ಯಮಗಳಿಗಾಗಿ ಸ್ಟಾರ್ಟ್‌ಅಪ್ ಇಂಡಿಯಾದ ಉದಾಹರಣೆಯನ್ನು ಅವರು ನೀಡಿದರು. ಬಾಹ್ಯಾಕಾಶ ಕ್ಷೇತ್ರಕ್ಕೆ ಇನ್-ಸ್ಪೇಸ್ (ಐಎನ್-ಎಸ್ ಪಿಎಸಿಇ), ರಕ್ಷಣಾ ಸ್ಟಾರ್ಟ್‌ಅಪ್‌ಗಳಿಗೆ ಐಡಿಇಎಕ್ಸ್, ಸೆಮಿ ಕಂಡಕ್ಟರ್‌ಗಳಿಗಾಗಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಯುವಜನರಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗಳು ಮತ್ತು ಬಯೋಟೆಕ್ ಸ್ಟಾರ್ಟ್-ಅಪ್ ಎಕ್ಸ್‌ಪೋ ಆರಂಭಿಸಲಾಗಿದೆ ಎಂದರು. 

“ಹೊಸ ಸಂಸ್ಥೆಗಳ ಮೂಲಕ ಸರ್ಕಾರವು ಸಬ್ ಕಾ ಪ್ರಾಯಸ್‌  ಮನೋಭಾವ ಬೆಳೆಸಲು ಉದ್ಯಮದ ಅತ್ಯುತ್ತಮ ಮನಸುಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ. ಇದು ದೇಶಕ್ಕೆ ಮತ್ತೊಂದು ದೊಡ್ಡ ಲಾಭವಾಗಲಿದೆ. ಸಂಶೋಧನೆ ಮತ್ತು ಶೈಕ್ಷಣಿಕವಾಗಿ ದೇಶವು ಹೊಸ ಪ್ರಗತಿಯನ್ನು ಸಾಧಿಸುತ್ತದೆ, ಉದ್ಯಮವು ವಿಶ್ವದ ವಾಸ್ತವ ದೃಷ್ಟಿಕೋನದಲ್ಲಿ ಸಹಾಯ ಮಾಡುತ್ತದೆ ಮತ್ತು ಸರ್ಕಾರವು ಅಗತ್ಯವಾದ ನೀತಿ, ಪೂರಕ ವಾತಾವರಣ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸುತ್ತದೆ’’ ಎಂದು ಪ್ರಧಾನಮಂತ್ರಿ ವಿವರಿಸಿದರು. 

“ಬಯೋಟೆಕ್ ವಲಯವು ಹೆಚ್ಚು ಬೇಡಿಕೆಯಿರುವ ವಲಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ವ್ಯಾಪಾರಕ್ಕೆ ಪೂರಕ ವಾತಾವರಣ (ಈಸ್ ಆಫ್ ಲಿವಿಂಗ್ )ಅಭಿಯಾನಗಳು ಜೈವಿಕ ತಂತ್ರಜ್ಞಾನ ವಲಯದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿವೆ’’ ಎಂದು ಎಂದು ಪ್ರಧಾನ ಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಆರೋಗ್ಯ, ಕೃಷಿ, ಇಂಧನ, ನೈಸರ್ಗಿಕ ಕೃಷಿ, ಜೈವಿಕ ಸಾರವರ್ಧಿತ ಬೀಜಗಳ ಮತ್ತಿತರ ಬೆಳವಣಿಗೆಗಳು ಕ್ಷೇತ್ರಕ್ಕೆ ಹೊಸ ಅವಕಾಶಗಳ ಮಾರ್ಗಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ತಿಳಿಸಿ ಭಾಷಣ ಮುಕ್ತಾಯಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
At G20, India can show the way: PM Modi’s welfare, empowerment schemes should be a blueprint for many countries

Media Coverage

At G20, India can show the way: PM Modi’s welfare, empowerment schemes should be a blueprint for many countries
...

Nm on the go

Always be the first to hear from the PM. Get the App Now!
...
PM condoles loss of lives due to a tourist vehicle falling into gorge in Kullu, Himachal Pradesh
September 26, 2022
ಶೇರ್
 
Comments

The Prime Minister, Shri Narendra Modi has expressed deep grief over the loss of lives as a tourist vehicle fell into a gorge in Kullu district of Himachal Pradesh. Shri Modi said that all possible assistance is being provided to the injured. He also wished speedy recovery of the injured.

The Prime Minister Office tweeted;

"हिमाचल प्रदेश के कुल्लू में टूरिस्ट वाहन के खाई में गिरने की घटना अत्यंत दुखदायी है। इस दुर्घटना में जिन्होंने अपनों को खो दिया है, उनके परिजनों के प्रति मैं गहरी संवेदना प्रकट करता हूं। इसके साथ ही घायलों की हरसंभव मदद की जा रही है। उनके शीघ्र स्वस्थ होने की कामना करता हूं: PM"