ಇಂದು ಸಹಿ ಮಾಡಲಾದ ಐತಿಹಾಸಿಕ ಬೋಡೋ ಒಪ್ಪಂದವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಒಪ್ಪಂದವು ಬೋಡೋ ಜನರ ಪರಿವರ್ತನೆಗೆ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ. “ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಹೊಸ ಉದಯವಾಗಿದೆ. ಇಂದು ಭಾರತಕ್ಕೆ ಬಹಳ ವಿಶಿಷ್ಟವಾದ ದಿನ. ಬೋಡೋ ಗುಂಪುಗಳೊಂದಿಗಿನ ಒಪ್ಪಂದಕ್ಕೆ ಇಂದು ಸಹಿ ಮಾಡಲಾಗಿದೆ. ಇದು ಬೋಡೋ ಜನರ ಪರಿವರ್ತಕ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ಇಂದು ಸಹಿ ಮಾಡಿದ ಬೋಡೋ ಒಪ್ಪಂದವು ಅನೇಕ ಕಾರಣಗಳಿಗಾಗಿ ಪ್ರಮುಖವಾಗುತ್ತದೆ. ಇದು ಪ್ರಮುಖ ಪಾಲುದಾರರನ್ನು ಒಂದೇ ಚೌಕಟ್ಟಿನಡಿ ಒಟ್ಟುಗೂಡಿಸುತ್ತದೆ. ಈ ಹಿಂದೆ ಸಶಸ್ತ್ರ ಪ್ರತಿರೋಧ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವರು ಈಗ ಮುಖ್ಯವಾಹಿನಿಗೆ ಸೇರಿ ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡಲಿದ್ದಾರೆ.

ಬೋಡೋ ಗುಂಪುಗಳೊಂದಿಗಿನ ಒಪ್ಪಂದವು ಬೋಡೋ ಜನರ ವಿಶಿಷ್ಟ ಸಂಸ್ಕೃತಿಯನ್ನು ಮತ್ತಷ್ಟು ರಕ್ಷಿಸುತ್ತದೆ ಮತ್ತು ಜನಪ್ರಿಯಗೊಳಿಸುತ್ತದೆ. ಅವರು ವ್ಯಾಪಕವಾದ ಅಭಿವೃದ್ಧಿ ಆಧಾರಿತ ಉಪಕ್ರಮಗಳಿಗೆ ಪ್ರವೇಶ ಪಡೆಯುತ್ತಾರೆ. ಬೋಡೋ ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ” ಎಂದು ಪ್ರಧಾನ ಮಂತ್ರಿಯವರು ತಿಳಿಸಿದ್ದಾರೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India remains fastest-growing major economy, domestic investors power market resilience

Media Coverage

India remains fastest-growing major economy, domestic investors power market resilience
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಮಾರ್ಚ್ 2026
March 15, 2026

Empowering Bharat: From Loans to Global Leadership Under PM Modi