ಭಾರತದ ಹಣಕಾಸಿನ ವಾಸ್ತುಶಿಲ್ಪ ಮತ್ತು ಜಾಗತಿಕ ನಿಲುವನ್ನು ಪುನರ್ ರೂಪಿಸಿದ ದಿಟ್ಟ ಆರ್ಥಿಕ ಸುಧಾರಣೆಗಳು ಸರ್ಕಾರದ ದಶಕದ ಬದ್ಧತೆಯಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಹೂಡಿಕೆಯನ್ನು ವೇಗವರ್ಧಿಸಿದ ಕಾರ್ಪೊರೇಟ್ ತೆರಿಗೆ ಕಡಿತಗಳಿಂದ ಹಿಡಿದು, ರಾಷ್ಟ್ರೀಯ ಮಾರುಕಟ್ಟೆಯನ್ನು ಏಕೀಕರಿಸಿದ ಜಿ.ಎಸ್.ಟಿ ಅನುಷ್ಠಾನ ಮತ್ತು ಜೀವನ ಸುಲಭತೆಯನ್ನು ಹೆಚ್ಚಿಸಿದ ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳವರೆಗೆ - ಸುಧಾರಣಾ ಪಥವು ಸ್ಥಿರ ಮತ್ತು ನಾಗರಿಕ ಕೇಂದ್ರಿತವಾಗಿದೆ ಎಂದು ಅವರು ಹೇಳಿದ್ದಾರೆ.
ತೆರಿಗೆ ರಚನೆಗಳನ್ನು ಸರಳೀಕರಿಸುವ, ದರಗಳನ್ನು ತರ್ಕಬದ್ಧಗೊಳಿಸುವ ಮತ್ತು ವ್ಯವಸ್ಥೆಯನ್ನು ಹೆಚ್ಚು ಸಮಾನ ಮತ್ತು ಬೆಳವಣಿಗೆ-ಆಧಾರಿತವಾಗಿಸುವ ಮೂಲಕ ಈ ಪ್ರಯಾಣವನ್ನು ಮುಂದುವರಿಸುವ #NextGenGST ಸುಧಾರಣೆಗಳ ಇತ್ತೀಚಿನ ಹಂತವನ್ನು ಅವರು ಶ್ಲಾಘಿಸಿದ್ದಾರೆ. ಈ ಕ್ರಮಗಳು ಭಾರತದ ಬಲವಾದ ಹಣಕಾಸಿನ ಶಿಸ್ತಿನಿಂದ ಪೂರಕವಾಗಿದ್ದು, ಜಾಗತಿಕ ವಿಶ್ವಾಸವನ್ನು ಗಳಿಸಿ, ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ಗಳನ್ನು ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.
ಎಕ್ಸ ನಲ್ಲಿ ಶ್ರೀ ವಿಜಯ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು,
"ಕಳೆದ ದಶಕವು ಭಾರತದ ಆರ್ಥಿಕ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ದಿಟ್ಟ ಸುಧಾರಣೆಗಳು, ಹೂಡಿಕೆಯನ್ನು ಉತ್ತೇಜಿಸುವ ಕಾರ್ಪೊರೇಟ್ ತೆರಿಗೆ ಕಡಿತಗಳಿಂದ ಹಿಡಿದು, ಏಕೀಕೃತ ಮಾರುಕಟ್ಟೆಯನ್ನು ಸೃಷ್ಟಿಸುವ ಜಿಎಸ್‌ಟಿವರೆಗೆ, ಜೀವನ ಸುಲಭತೆಯನ್ನು ಹೆಚ್ಚಿಸುವ ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳವರೆಗೆ ಪ್ರಬುದ್ದವಾಗಿವೆ.
#NextGenGST ಸುಧಾರಣೆಗಳು ಈ ಪ್ರಯಾಣವನ್ನು ಮುಂದುವರೆಸಿ, ವ್ಯವಸ್ಥೆಯನ್ನು ಸರಳ, ನ್ಯಾಯಯುತ ಮತ್ತು ಹೆಚ್ಚು ಬೆಳವಣಿಗೆ-ಆಧಾರಿತವಾಗಿಸುತ್ತದೆ, ಆದರೆ ನಮ್ಮ ಹಣಕಾಸಿನ ಶಿಸ್ತು ಜಾಗತಿಕ ವಿಶ್ವಾಸ ಮತ್ತು ಉತ್ತಮ ಕ್ರೆಡಿಟ್ ರೇಟಿಂಗ್‌ಗಳನ್ನು ಗಳಿಸಿದೆ.
ಈ ಪ್ರಯತ್ನಗಳೊಂದಿಗೆ, ನಾವು ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.”
We are lucky to have witnessed Finance history in last 5-10 yrs - Corp Tax reduction, GST intro and #NextGenGSTReforms along with Personal Income Tax Changes and moving to New Tax Regime and higher exemption slabs , Rating improvements by keeping Fiscal deficit in control pic.twitter.com/iFaLRJZTvH
— Vijay (@centerofright) September 3, 2025


