ಪ್ರಧಾನಮಂತ್ರಿ ಅವರು ಇಂದು ದೇಶವಾಸಿಗಳಿಗೆ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ಶುಭಾಶಯ ಕೋರಿದ್ದಾರೆ. "ಈ ಸಂದರ್ಭವು, ರಾಷ್ಟ್ರದ ಹೆಮ್ಮೆಯನ್ನು ರಕ್ಷಿಸಲು ತಮ್ಮ ಜೀವನ ಮುಡಿಪಾಗಿಟ್ಟ ಭಾರತ ಮಾತೆಯ ಆ ಧೈರ್ಯಶಾಲಿ ಪುತ್ರರ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ನೆನಪಿಸುತ್ತದೆ." ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"ದೇಶವಾಸಿಗಳಿಗೆ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ಶುಭಾಶಯಗಳು. ಈ ಸಂದರ್ಭವು ಭಾರತ ಮಾತೆಯ ಅಪ್ರತಿಮ ವೀರರ ಸಾಹಸ ಹಾಗೂ ಶೌರ್ಯವನ್ನು ನಮಗೆ ನೆನಪಿಸುತ್ತದೆ, ಅವರು ದೇಶದ ಹೆಮ್ಮೆಯನ್ನು ರಕ್ಷಿಸಲು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ತಮ್ಮ ಮಾತೃಭೂಮಿಗಾಗಿ ಮರಣ ಹೊಂದುವ ಅವರ ಉತ್ಸಾಹವು ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ. ಜೈ ಹಿಂದ್!.
देशवासियों को कारगिल विजय दिवस की ढेरों शुभकामनाएं। यह अवसर हमें मां भारती के उन वीर सपूतों के अप्रतिम साहस और शौर्य का स्मरण कराता है, जिन्होंने देश के आत्मसम्मान की रक्षा के लिए अपना जीवन समर्पित कर दिया। मातृभूमि के लिए मर-मिटने का उनका जज्बा हर पीढ़ी को प्रेरित करता रहेगा। जय…
— Narendra Modi (@narendramodi) July 26, 2025


