ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛ ನಗರ ಸಾರಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ದೆಹಲಿ ಸರ್ಕಾರದ ಉಪಕ್ರಮದಡಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯುತ್ ಚಾಲಿತ ಬಸ್ ಸೇವೆಗೆ ಚಾಲನೆ ನೀಡಿದರು.
ಸ್ವಚ್ಛ ಮತ್ತು ಹಸಿರು ದೆಹಲಿಯನ್ನು ನಿರ್ಮಿಸಲು ಈ ಉಪಕ್ರಮವು ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಹಂತವು ದೆಹಲಿಯ ಜನರಿಗೆ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;
"ಸ್ವಚ್ಛ ಮತ್ತು ಹಸಿರು ದೆಹಲಿಯನ್ನು ನಿರ್ಮಾಣ !
ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛ ನಗರ ಸಾರಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ದೆಹಲಿ ಸರ್ಕಾರದ ಉಪಕ್ರಮದಡಿಯಲ್ಲಿ ವಿದ್ಯುತ್ ಚಾಲಿತ ಬಸ್ಗಳ ಸೇವೆಗೆ ಚಾಲನೆ ನೀಡಲಾಗಿದೆ. ಹೆಚ್ಚುವರಿಯಾಗಿ, ಇದು ದೆಹಲಿಯ ಜನರಿಗೆ ಜೀವನವನ್ನು ಮತ್ತಷ್ಟು ಸುಗಮಗೊಳಿಸುತ್ತದೆ."
Building a clean and green Delhi!
— Narendra Modi (@narendramodi) June 5, 2025
Flagged off Electric Buses under an initiative of the Delhi Government aimed at boosting sustainable development and clean urban mobility. Additionally, this will also improve 'Ease of Living' for the people of Delhi. pic.twitter.com/q7mOdaVjAG


