ಜಪಾನ್‌ನ ಕೆಳಮನೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಶ್ರೀ ಫ್ಯೂಮಿಯೊ ಕಿಶಿದಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ಜಪಾನ್‌ನ ಕೆಳಮನೆ ಚುನಾವಣೆಗಳಲ್ಲಿ ಸಾಧಿಸಿದ ಗೆಲುವಿಗಾಗಿ @kishida230 ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆಗೆ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ." ಎಂದು ಪ್ರಧಾನಿಯವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Heartiest felicitations to @kishida230 for victory in Lower House elections in Japan. Look forward to working together to further strengthen our Special Strategic and Global Partnership and for peace and prosperity in the Indo-Pacific region and beyond.
— Narendra Modi (@narendramodi) November 1, 2021