ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022-23ರ ಹಣಕಾಸು ವರ್ಷದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ಯೋಜನೆ (ಸಿಜಿಟಿಎಂಎಸ್ಇ) ಒಂದು ಲಕ್ಷ ಕೋಟಿ ರೂ.ಗಳ ಖಾತರಿಯನ್ನು ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಆರ್ಥಿಕತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ನಮ್ಮ ಯುವಕರ ಉದ್ಯಮಶೀಲತೆಯ ಉತ್ಸಾಹದ ಮೇಲೆ ಪಣತೊಟ್ಟಿದ್ದೇವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಎಂಎಸ್ಎಂಇ ಸಚಿವಾಲಯದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದರು;
"ನಮ್ಮ ಆರ್ಥಿಕತೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾವು ನಮ್ಮ ಯುವಕರ ಉದ್ಯಮಶೀಲತೆಯ ಉತ್ಸಾಹದ ಮೇಲೆ ಪಣತೊಡ್ಡಿದ್ದೇವೆ,’’ ಎಂದು ಹೇಳಿದ್ದಾರೆ.
We are betting on the entrepreneurial zeal of our youth to propel our economy to even greater heights. https://t.co/58oWmR1D5s
— Narendra Modi (@narendramodi) March 30, 2023


