ಶೇರ್
 
Comments
35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಾಪಿಸಿರುವ 35 ಪಿಎಸ್ ಎ ಆಮ್ಲಜನಕ ಘಟಕಗಳನ್ನು ಸಮರ್ಪಿಸಿದ ಪ್ರಧಾನಮಂತ್ರಿ
ಇದರಿಂದಾಗಿ ದೇಶಾದ್ಯಂತ ಪಿಎಸ್ ಒ ಆಮ್ಲಜನಕ ಘಟಕಗಳ ಕಾರ್ಯಾರಂಭ
ಸರ್ಕಾರದ ನೇತೃತ್ವದ ವಹಿಸಿ 21 ವರ್ಷಗಳ ನಿರಂತರ ಪಯಣ ಮುಂದುವರಿಸಿರುವುದಕ್ಕೆ ದೇಶದ ಹಾಗೂ ಉತ್ತರಾಖಂಡ್ ಜನತೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ
“ಉತ್ತರಾಖಂಡ್ ಭೂಮಿಯೊಂದಿಗಿನ ನನ್ನ ಸಂಬಂಧ ಕೇವಲ ಹೃದಯಕ್ಕೆ ಮಾತ್ರವಲ್ಲ, ಕ್ರಿಯೆಯಲ್ಲೂ ಕೂಡಿದೆ, ಸಾರದಿಂದ ಮಾತ್ರವಲ್ಲ ಅಂಶದಿಂದಲೂ ಕೂಡಿದೆ’’
“ಅತ್ಯಲ್ಪ ಅವಧಿಯಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸೌಕರ್ಯಗಳನ್ನು ಸಿದ್ಧಪಡಿಸಿದ್ದು ದೇಶದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ; ಸಾಂಕ್ರಾಮಿಕದ ಮುನ್ನ ಕೇವಲ ಒಂದೇ ಒಂದು ಪ್ರಯೋಗಾಲಯವಿತ್ತು, ಈಗ ಸುಮಾರು 3ಸಾವಿರ ಪ್ರಯೋಗಾಲಯಗಳ ಜಾಲ ಸೃಷ್ಟಿ”
“ಬೇಡಿಕೆ ಹೆಚ್ಚುತ್ತಿದ್ದಂತೆಯೇ ಭಾರತ ವೈದ್ಯಕೀಯ ಆಮ್ಲಜನಕದ ಉತ್ಪಾದನೆ 10 ಪಟ್ಟು ಅಧಿಕಗೊಳಿಸಿದೆ”
“ಸದ್ಯದಲ್ಲೇ ಭಾರತ 100 ಕೋಟಿ ಲಸಿಕೀಕರಣ ಹೆಜ್ಜೆಯನ್ನು ದಾಟಲಿದೆ”
“ಪ್ರಜೆಗಳು ತಮ್ಮ ಸಮಸ್ಯೆಗಳನ್ನು ಹೊತ್ತು ಬರಬೇಕು ಮತ್ತು ನಂತರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಇದೀಗ ಕಾಯುತ್ತಿಲ್ಲ: ಸರ್ಕಾರದ ವ್ಯವಸ್ಥೆ ಮತ್ತು ಮನೋಭಾವದ ತಪ್ಪುಕಲ್ಪನೆಯನ್ನು ಹೋಗಲಾಡಿಸಲಾಗಿದೆ. ಇದೀಗ ಸರ್ಕಾರವೇ ಪ್ರಜೆಗಳ ಬಳಿ ಹೋಗುತ್ತಿದೆ”
ಕಳೆದ 6-7 ವರ್ಷಗಳ ಹಿಂದಿನವರೆಗೆ ಕ
ಇದರೊಂದಿಗೆ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಿದಂತಾಗಿದೆ. ಕೇಂದ್ರ ಸಚಿವರುಗಳು, ಉತ್ತರಾಖಂಡ್ ಮುಖ್ಯಮಂತ್ರಿ, ರಾಜ್ಯ ಸಚಿವರು ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅವರು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ನಲ್ಲಿ ರಾಜ್ಯ ಅಸಾಧಾರಾಣ ಸಾಧನೆಗೈಯ್ದಿದೆ ಎಂದು ಅಭಿನಂದಿಸಿದರು. ಉತ್ತರಾಖಂಡ್ ಜೊತೆಗಿನ ತಮ್ಮ ಸಂಬಂಧ ಕೇವಲ ಹೃದಯದಲ್ಲಿಲ್ಲ, ಅದು ಕ್ರಿಯೆಯಲ್ಲೂ ಇದೆ, ಅದು ಕೇವಲ ಸಾರದಲ್ಲಲ್ಲ, ಅಂಶಗಳಲ್ಲೂ ಇದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರಾಖಂಡ್ ನ ರಿಷಿಕೇಶದ ಏಮ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ-ಕೇರ್ಸ್ ನಿಧಿಯಿಂದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35 ಒತ್ತಡ ಹೀರಿಕೊಳ್ಳುವ ಆಮ್ಲಜನಕ (ಪಿಎಸ್ ಎ) ಘಟಕಗಳನ್ನು ಲೋಕಾರ್ಪಣೆ ಮಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರಾಖಂಡ್ ನ ರಿಷಿಕೇಶದ ಏಮ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ-ಕೇರ್ಸ್ ನಿಧಿಯಿಂದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35  ಒತ್ತಡ ಹೀರಿಕೊಳ್ಳುವ ಆಮ್ಲಜನಕ (ಪಿಎಸ್ ಎ) ಘಟಕಗಳನ್ನು ಲೋಕಾರ್ಪಣೆ ಮಾಡಿದರು. ಇದರೊಂದಿಗೆ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಿದಂತಾಗಿದೆ. ಕೇಂದ್ರ ಸಚಿವರುಗಳು, ಉತ್ತರಾಖಂಡ್ ಮುಖ್ಯಮಂತ್ರಿ, ರಾಜ್ಯ ಸಚಿವರು ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದಿನಿಂದ ಪವಿತ್ರ ನವರಾತ್ರಿ ಉತ್ಸವ ಆರಂಭವಾಗುತ್ತಿದೆ ಎಂದರು. ನವರಾತ್ರಿಯ ಮೊದಲ ದಿನ ಮಾತೆ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ ಎಂದು ಹೇಳಿದರು. ಶೈಲಪುತ್ರಿ ಹಿಮಾಲಯದ ಪುತ್ರಿ ಎಂದು ಅವರು ತಿಳಿಸಿದರು. “ಈ ದಿನ ನಾನು ಇಲ್ಲಿದ್ದೇನೆ. ಈ ಪವಿತ್ರ ಭೂಮಿಗೆ ನಮಿಸಲು ಬಂದಿದ್ದೇನೆ, ಹಿಮಾಲಯದ ಈ ಭೂಮಿಗೆ ನಮಿಸುತ್ತೇನೆ, ಜೀವನದಲ್ಲಿ ಇದಕ್ಕಿಂತ ದೊಡ್ಡ ಆಶೀರ್ವಾದವೇನಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ನಲ್ಲಿ ರಾಜ್ಯ ಅಸಾಧಾರಾಣ ಸಾಧನೆಗೈಯ್ದಿದೆ ಎಂದು ಅಭಿನಂದಿಸಿದರು. ಉತ್ತರಾಖಂಡ್ ಜೊತೆಗಿನ ತಮ್ಮ ಸಂಬಂಧ ಕೇವಲ ಹೃದಯದಲ್ಲಿಲ್ಲ, ಅದು ಕ್ರಿಯೆಯಲ್ಲೂ ಇದೆ, ಅದು ಕೇವಲ ಸಾರದಲ್ಲಲ್ಲ, ಅಂಶಗಳಲ್ಲೂ ಇದೆ ಎಂದರು.

ಇಂದಿನ ದಿನ ತಮ್ಮ ಜೀವನದ ಮಹತ್ವದ ದಿನವಾಗಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, 20 ವರ್ಷಗಳ ಹಿಂದೆ ಇದೇ ದಿನ ನನಗೆ ಸಾರ್ವಜನಿಕರ ಸೇವೆಗೈಯ್ಯುವ ಹೊಸ ಜವಾಬ್ದಾರಿ ದೊರಕಿತ್ತು ಎಂದು ನೆನಪು ಮಾಡಿಕೊಂಡರು. ಜನರಿಗೆ ಸೇವೆ ಮಾಡುವುದು, ಜನರೊಂದಿಗೆ ಜೀವಿಸುವುದು ಹಲವು ದಶಕಗಳಿಂದ ನಡೆದಿದೆ, ಆದರೆ 20 ವರ್ಷಗಳ ಹಿಂದೆ ಇದೇ ದಿನ ನನಗೆ ಗುಜರಾತ್ ಮುಖ್ಯಮಂತ್ರಿಯಾಗುವ ಹೊಸ ಜವಾಬ್ದಾರಿ ದೊರಕಿತ್ತು ಎಂದರು. ಈ ಪ್ರಯಾಣದ ಆರಂಭವು ತಾವು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳ ಬಳಿಕ ಉತ್ತರಾಖಂಡ್ ರಾಜ್ಯ ರಚನೆಯೊಂದಿಗೆ ಹೊಂದಿಕೆಯಾಯಿತು ಎಂದು ಅವರು ಉಲ್ಲೇಖಿಸಿದರು. ಜನರ ಆಶೀರ್ವಾದದಿಂದ ತಾವು ಪ್ರಧಾನಮಂತ್ರಿಯ ಸ್ಥಾನಕ್ಕೆ ಏರುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದರು. ಸರ್ಕಾರದ ಮುಖ್ಯಸ್ಥರಾಗಿ 21ನೇ ವರ್ಷಕ್ಕೆ ನಿರಂತರ ಪಯಣ ಮುಂದುವರಿಸಿರುವುದಕ್ಕಾಗಿ ದೇಶದ ಮತ್ತು ಉತ್ತರಾಖಂಡ್ ಜನತೆಗೆ ಪ್ರಧಾನಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಯೋಗ ಮತ್ತು ಆಯುರ್ವೇದದಂತಹ ಜೀವಶಕ್ತಿಯನ್ನು ಒಳಗೊಂಡ ಭೂಮಿಯಿಂದ ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಅತ್ಯಲ್ಪ ಅವಧಿಯಲ್ಲಿಯೇ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ದೇಶದಲ್ಲಿ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ನಮ್ಮ ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕದ ಮುನ್ನ ದೇಶದಲ್ಲಿ ಕೇವಲ ಒಂದೇ ಒಂದು ಪ್ರಯೋಗಾಲಯವಿತ್ತು, ಇದೀಗ ಸುಮಾರು 3ಸಾವಿರ ಪ್ರಯೋಗಾಲಯಗಳ ಜಾಲವೇ ಸೃಷ್ಟಿಯಾಗಿದೆ ಎಂದರು. ಭಾರತವು ಮಾಸ್ಕ್ ಮತ್ತು ಪಿಪಿಇ ಕಿಟ್ ಗಳು ಆಮದುದಾರನಿಂದ ರಫ್ತುದಾರನಾಗಿ ಬದಲಾಗಿದೆ. ದೇಶದ ದುರ್ಗಮ ಪ್ರದೇಶದಲ್ಲೂ ಹೊಸ ವೆಂಟಿಲೇಟರ್ ಗಳ ಸೌಕರ್ಯ ಒದಗಿಸಲಾಗಿದೆ. ಭಾರತವು ಮೇಡ ಇನ್ ಇಂಡಿಯಾ ಲಸಿಕೆಯನ್ನು ತ್ವರಿತ ಹಾಗೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಭಾರತ ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೀಕರಣ ಅಭಿಯಾನವನ್ನು ಜಾರಿಗೊಳಿಸಿದೆ. ಭಾರತ ಏನು ಸಾಧನೆ ಮಾಡಿದೆಯೋ ಅದು ನಮ್ಮ ದೃಢನಿಶ್ಚಯ, ನಮ್ಮ ಸೇವೆ ಮತ್ತು ನಮ್ಮ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಾಮಾನ್ಯ ದಿನಗಳಲ್ಲಿ ಭಾರತ ಪ್ರತಿದಿನ ಸುಮಾರು 900 ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನೆ ಮಾಡುತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಉತ್ಪಾದನೆ ಪ್ರಮಾಣವನ್ನು 10ಪಟ್ಟು ಅಧಿಕಗೊಳಿಸಲಾಗಿದೆ. ಇದು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಊಹಿಸಲಾಗದ ಗುರಿ, ಆದರೆ ಭಾರತ ಅದನ್ನು ಸಾಧಿಸಿ ತೋರಿಸಿದೆ ಎಂದರು.

ಭಾರತ ಈವರೆಗೆ 93 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರ ಎಂದು ಪ್ರಧಾನಮಂತ್ರಿ ಹೇಳಿದರು. ಸದ್ಯದಲ್ಲೇ ಭಾರತ ಲಸಿಕೆ ನೀಡಿಕೆಯಲ್ಲಿ 100 ಕೋಟಿ  ಗಡಿ ದಾಟಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೇಗೆ ಲಸಿಕೆ ನೀಡಲಾಗುತ್ತದೆ ಎಂಬುದನ್ನು ಕೋವಿನ್ ವೇದಿಕೆಯನ್ನು ನಿರ್ಮಿಸುವ ಮೂಲಕ ಇಡೀ ಜಗತ್ತಿಗೆ ದಾರಿ ತೋರಿಸಲಾಗಿದೆ ಎಂದು ಅವರು ಹೇಳಿದರು.

ನಾಗರಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಬರುವವರೆಗೂ ಮತ್ತು ನಂತರ ಕ್ರಮ ಕೈಗೊಳ್ಳುವವರೆಗೆ ಸರ್ಕಾರ ಕಾಯುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರದ ವ್ಯವಸ್ಥೆ ಮತ್ತು ಮನೋಭಾವದಲ್ಲಿದ್ದ ತಪ್ಪುಕಲ್ಪನೆಯನ್ನು ಹೋಗಲಾಡಿಸಿದೆ ಎಂದರು. ಇದೀಗ ಸರ್ಕಾರವೇ ಪ್ರಜೆಗಳ ಬಳಿ ಹೋಗುತ್ತಿದೆ ಎಂದು ಹೇಳಿದರು.

ಕಳೆದ 6-7 ವರ್ಷಗಳವರೆಗೆ ಕೇವಲ ಕೆಲವೇ ರಾಜ್ಯಗಳಲ್ಲಿ ಮಾತ್ರ ಏಮ್ಸ್ ಸೌಕರ್ಯವಿತ್ತು, ಆದರೆ ಇಂದು ಬಹುತೇಕ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪನೆ ನಿಟ್ಟಿನಲ್ಲಿ ಕಾರ್ಯ ನಡೆದಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ನಾವು 6 ಏಮ್ಸ್ ಆಸ್ಪತ್ರೆಗಳಿಂದ 22 ಏಮ್ಸ್ ಗಳ ಬಲಿಷ್ಠ ಜಾಲ ನಿರ್ಮಾಣದತ್ತ ವೇಗವಾಗಿ ಸಾಗಿದ್ದೇವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಇರಬೇಕೆಂಬುದು ಸರ್ಕಾರದ ಗುರಿಯಾಗಿದೆ. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಾಖಂಡ್ ರಾಜ್ಯ ರಚನೆಯ ಕನಸನ್ನು ನನಸಾಗಿಸಿದರು ಎಂದು ಅವರು ಸ್ಮರಿಸಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಸಂಪರ್ಕ, ಅಭಿವೃದ್ಧಿ ಜೊತೆ ನೇರ ಸಂಬಂಧ ಹೊಂದಿದೆ ಎಂದು ನಂಬಿದ್ದರು. ಅವರ ಸ್ಫೂರ್ತಿಯಿಂದಾಗಿ ಇಂದು ದೇಶದಲ್ಲಿ ಅನಿರೀಕ್ಷಿತ ವೇಗ ಮತ್ತು ವ್ಯಾಪ್ತಿಯಲ್ಲಿ ಸಂಪರ್ಕ ಮೂಲಸೌಕರ್ಯ ವೃದ್ಧಿ ಕಾರ್ಯ ನಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

2019ರಲ್ಲಿ ಜಲಜೀವನ್ ಮಿಷನ್ ಗೆ ಚಾಲನೆ ನೀಡಿದಾಗ ಉತ್ತರಾಖಂಡ್ ನಲ್ಲಿ 1,30,000 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಉತ್ತರಾಖಂಡ್ ನಲ್ಲಿ 7,10,000ಕ್ಕೂ ಅಧಿಕ ಮನೆಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು. ಎರಡೇ ವರ್ಷದಲ್ಲಿ ಸಮಾರು 6 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಪ್ರತಿಯೊಬ್ಬ ಯೋಧ , ಪ್ರತಿಯೊಬ್ಬ ಮಾಜಿ ಯೋಧರ ಹಿತ ಕಾಯಲು ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಶ್ರೇಣಿ- ಒಂದು ಪಿಂಚಣಿ ಯೋಜನೆ ಜಾರಿಗೊಳಿಸುವ ಮೂಲಕ ಸಶಸ್ತ್ರ ಪಡೆಗಳ 40 ವರ್ಷಗಳ ಹಿಂದಿನ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದು ಅವರು ಹೇಳಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Opinion: Modi government has made ground-breaking progress in the healthcare sector

Media Coverage

Opinion: Modi government has made ground-breaking progress in the healthcare sector
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಮಾರ್ಚ್ 2023
March 30, 2023
ಶೇರ್
 
Comments

Appreciation For New India's Exponential Growth Across Diverse Sectors with The Modi Government