ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ ಎಸ್‌ ಪಿ) ಅಧ್ಯಕ್ಷರಾದ ಶ್ರೀ ರಬಿ ಲಾಮಿಚಾನೆ ಮತ್ತು ಆರ್‌ ಎಸ್‌ ಪಿಯ ಹಿರಿಯ ನಾಯಕರಾದ ಶ್ರೀ ಬಾಲೇಂದ್ರ ಶಾ ಅವರೊಂದಿಗೆ ಆತ್ಮೀಯವಾದ ದೂರವಾಣಿ ಸಂಭಾಷಣೆ ನಡೆಸಿದರು.

ನೇಪಾಳ ಚುನಾವಣೆಯಲ್ಲಿ ಆರ್‌ ಎಸ್‌ ಪಿ ಯ ಅಭೂತಪೂರ್ವ ಯಶಸ್ಸಿಗೆ ಮತ್ತು ಚುನಾವಣಾ ವಿಜಯಕ್ಕಾಗಿ ಇಬ್ಬರೂ ನಾಯಕರನ್ನು ಶ್ರೀ ಮೋದಿ ಅವರು ಅಭಿನಂದಿಸಿದ್ದಾರೆ. ಮುಂಬರುವ ಹೊಸ ಸರ್ಕಾರಕ್ಕೆ ತಮ್ಮ ಶುಭಾಶಯ ಕೋರುತ್ತಾ ಪರಸ್ಪರ ಸಮೃದ್ಧಿ, ಪ್ರಗತಿ ಮತ್ತು ಎರಡೂ ದೇಶಗಳ ಜನರ ಯೋಗಕ್ಷೇಮಕ್ಕಾಗಿ ಅವರೊಂದಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದ್ದಾರೆ.

ಭವಿಷ್ಯದ ಭಾರತ-ನೇಪಾಳ ಬಾಂಧವ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾ ಪ್ರಧಾನಮಂತ್ರಿಗಳು, ಜಂಟಿ ಪ್ರಯತ್ನಗಳೊಂದಿಗೆ ಎರಡೂ ರಾಷ್ಟ್ರಗಳ ನಡುವಿನ ಪಾಲುದಾರಿಕೆಯು ಮುಂದಿನ ವರ್ಷಗಳಲ್ಲಿ ಹೊಸ ಎತ್ತರ ತಲುಪಲಿದೆ ಎಂದು ಹೇಳಿದರು.

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: 

“ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ ಎಸ್‌ ಪಿ) ಅಧ್ಯಕ್ಷರಾದ ಶ್ರೀ ರಬಿ ಲಾಮಿಚಾನೆ ಮತ್ತು ಆರ್‌ ಎಸ್‌ ಪಿಯ ಹಿರಿಯ ನಾಯಕರಾದ ಶ್ರೀ ಬಾಲೇಂದ್ರ ಶಾ ಅವರೊಂದಿಗೆ ಆತ್ಮೀಯವಾದ ದೂರವಾಣಿ ಸಂಭಾಷಣೆ ನಡೆಸಿದೆ.

ನೇಪಾಳ ಚುನಾವಣೆಯಲ್ಲಿ ಆರ್‌ ಎಸ್‌ ಪಿ ಯ ಅಭೂತಪೂರ್ವ ಯಶಸ್ಸಿಗೆ ಮತ್ತು ಚುನಾವಣಾ ಗೆಲುವಿಗಾಗಿ ಇಬ್ಬರೂ ನಾಯಕರನ್ನು ಅಭಿನಂದಿಸಿದೆ. ಅವರ ಹೊಸ ಸರ್ಕಾರಕ್ಕೆ ಮತ್ತು ನಮ್ಮ ಎರಡೂ ದೇಶಗಳ ಪರಸ್ಪರ ಸಮೃದ್ಧಿ, ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಅವರೊಂದಿಗೆ ಕಾರ್ಯನಿರ್ವಹಿಸುವ ಭಾರತದ ಬದ್ಧತೆಗೆ ಶುಭ ಕೋರಿದೆ.

ನಮ್ಮ ಜಂಟಿ ಪ್ರಯತ್ನಗಳೊಂದಿಗೆ ಭಾರತ ಮತ್ತು ನೇಪಾಳ ಬಾಂಧವ್ಯ ಮುಂಬರುವ ವರ್ಷಗಳಲ್ಲಿ ಹೊಸ ಎತ್ತರಕ್ಕೇರಲಿದೆ ಎಂದು ನನಗೆ ವಿಶ್ವಾಸವಿದೆ.

@hamrorabi

@ShahBalen

@party_swatantra”

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
But where is India’s economic growth?

Media Coverage

But where is India’s economic growth?
NM on the go

Nm on the go

Always be the first to hear from the PM. Get the App Now!
...
Prime Minister shares moments from his metro journey to and from the SRCC programme
September 05, 2026

Prime Minister Shri Narendra Modi today shared glimpses of his metro journey while traveling to and from the SRCC programme.

In a post on X, the Prime Minister shared:

"Metro moments…

On the way to the SRCC programme and back."