ವಿಯೆಟ್ನಾಂನ ಡಾ ನಾಂಗ್‌ ನಲ್ಲಿ ನಡೆದ 2026 ರ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ ಶಿಪ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಕುಸ್ತಿಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಭಾರತದ ಪುರುಷರ ಫ್ರೀಸ್ಟೈಲ್ ಮತ್ತು ಮಹಿಳಾ ಕುಸ್ತಿ ತಂಡಗಳು ಚಾಂಪಿಯನ್‌ ಶಿಪ್‌ ನಲ್ಲಿ ತಂಡ ಪ್ರಶಸ್ತಿ ಜಯಿಸಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪುರುಷರ ಫ್ರೀಸ್ಟೈಲ್ ಕುಸ್ತಿ ತಂಡವು 4 ಚಿನ್ನದ ಪದಕ ಸೇರಿದಂತೆ 9 ಪದಕಗಳನ್ನು ಗೆದ್ದಿದ್ದು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ ಶಿಪ್‌ ನ ಇತಿಹಾಸದಲ್ಲಿ ಭಾರತ ಒಟ್ಟಾರೆ ಅತ್ಯಧಿಕ ಪದಕ ಪಡೆದಿದೆ.

ಮಹಿಳಾ ಕುಸ್ತಿ ತಂಡ 6 ಚಿನ್ನದ ಪದಕ ಸೇರಿದಂತೆ 10 ಪದಕಗಳನ್ನು ಗೆದ್ದಿದೆ ಎಂದು ಅವರು ಹೇಳಿದ್ದಾರೆ.

ಗ್ರೀಕೋ-ರೋಮನ್ ತಂಡವು 8 ಪದಕಗಳೊಂದಿಗೆ ತನ್ನ ಒಟ್ಟಾರೆ ಅತಿ ಹೆಚ್ಚು ಪದಕಗಳನ್ನು ಜಯಿಸಿದೆ ಎಂದು ಪ್ರಧಾನಮಂತ್ರಿ ವಿವರಿಸಿದ್ದಾರೆ.

ಕುಸ್ತಿಪಟುಗಳಿಗೆ ಅಭಿನಂದನೆ ಸಲ್ಲಿಸುತ್ತಾ ಪ್ರಧಾನಮಂತ್ರಿಗಳು, ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ನಮ್ಮ ಕುಸ್ತಿಪಟುಗಳಿಂದ ಅಮೋಘ ಪ್ರದರ್ಶನ!

ವಿಯೆಟ್ನಾಂನ ಡಾ ನಾಂಗ್‌ ನಲ್ಲಿ ನಡೆದ 2026 ರ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ ಶಿಪ್‌ ನಲ್ಲಿ ನಮ್ಮ ಪುರುಷರ ಫ್ರೀಸ್ಟೈಲ್ ಮತ್ತು ಮಹಿಳಾ ಕುಸ್ತಿ ತಂಡಗಳು ತಂಡ ಪ್ರಶಸ್ತಿ ಜಯಿಸಿವೆ.

ಪುರುಷರ ಫ್ರೀಸ್ಟೈಲ್ ಕುಸ್ತಿ ತಂಡವು 4 ಚಿನ್ನ ಸೇರಿದಂತೆ 9 ಪದಕಗಳನ್ನು ಜಯಿಸಿದ್ದು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ ಶಿಪ್ ಇತಿಹಾಸದಲ್ಲಿ ಭಾರತ ಅತ್ಯಧಿಕ ಒಟ್ಟಾರೆ ಪದಕ ಜಯಿಸಿದೆ.

ಮಹಿಳಾ ಕುಸ್ತಿ ತಂಡವು 6 ಸ್ವರ್ಣ ಪದಕ ಸೇರಿದಂತೆ 10 ಪದಕಗಳನ್ನು ಗೆದ್ದಿದೆ.

ಗ್ರೀಕೋ-ರೋಮನ್ ತಂಡವು 8 ಪದಕಗಳೊಂದಿಗೆ ತನ್ನ ಅತ್ಯಧಿಕ ಒಟ್ಟಾರೆ ಪದಕ ಗಳಿಕೆ ದಾಖಲಿಸಿದೆ.

ನಮ್ಮ ಕುಸ್ತಿಪಟುಗಳಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಆಗಸ್ಟ್ 2026
August 26, 2026

Accountability Meets Ambition: Record Low NPAs, Record Defence Output, Record Digital Adoption Under the Leadership of PM Modi