ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ 2025ರಲ್ಲಿ ಅಸಾಧಾರಣ, ದಾಖಲೆ ಮಾಡಿದ ಪ್ರದರ್ಶನಕ್ಕಾಗಿ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಭಾರತೀಯ ಬಾಕ್ಸಿಂಗ್ ಗೆ ಐತಿಹಾಸಿಕ ಸಾಧನೆಯಾಗಿರುವ 9 ಚಿನ್ನ ಸೇರಿದಂತೆ 20 ಪದಕಗಳ ಅಭೂತಪೂರ್ವ ಒಟ್ಟು ಪದಕಗಳನ್ನು ಕ್ರೀಡಾಪಟುಗಳು ದೇಶಕ್ಕೆ ತಂದಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಈ ಯಶಸ್ಸಿಗೆ ದೇಶದ ಬಾಕ್ಸರ್ ಗಳ ಸಂಕಲ್ಪ, ದೃಢನಿಶ್ಚಯ ಮತ್ತು ನಿರಂತರ ಮನೋಭಾವ ಕಾರಣ ಎಂದು ಅವರು ಹೇಳಿದರು.
ಎಕ್ಸ್ ನ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ನಮ್ಮ ಅದ್ಭುತ ಕ್ರೀಡಾಪಟುಗಳು ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ 2025ರಲ್ಲಿ ಅಸಾಧಾರಣ, ದಾಖಲೆ ಮಾಡಿದ ಪ್ರದರ್ಶನವನ್ನು ನೀಡಿದರು! ಅವರು 9 ಚಿನ್ನ ಸೇರಿದಂತೆ 20 ಪದಕಗಳನ್ನು ಅಭೂತಪೂರ್ವವಾಗಿ ದೇಶಕ್ಕೆ ತಂದರು. ಇದು ನಮ್ಮ ಬಾಕ್ಸರ್ಗಳ ಸಂಕಲ್ಪ ಮತ್ತು ದೃಢಸಂಕಲ್ಪದಿಂದಾಗಿ ಆಗಿದೆ. ಅವರಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು."
Our phenomenal athletes delivered an extraordinary, record-breaking performance at the World Boxing Cup Finals 2025! They brought home an unprecedented 20 medals including 9 Golds. This is due to the resolve and determination of our boxers. Congratulations to them. Best wishes… pic.twitter.com/jTLeJntODZ
— Narendra Modi (@narendramodi) November 24, 2025


