ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಲಾಂಗ್ ಜಂಪ್-ಟಿ64 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಧರ್ಮರಾಜ್ ಸೊಲೈರಾಜ್ ಅವರನ್ನು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ʻಎಕ್ಸ್ʼ ವೇದಿಕೆಯಲ್ಲಿ ಈ ಕುರಿತು ಹೀಗೆ ಹೇಳಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಲಾಂಗ್ ಜಂಪ್-ಟಿ 64 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಧರ್ಮರಾಜ್ ಸೊಲೈರಾಜ್ ಅವರಿಗೆ ಅಭಿನಂದನೆಗಳು. ಇವರ ಜಯವನ್ನು ಭಾರತವೇ ಸಂಭ್ರಮಿಸಿದೆ. ಅವರು ಇತಿಹಾಸವನ್ನು ನಿರ್ಮಿಸಿದ್ದಾರೆ ಮತ್ತು ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದ್ದಾರೆ.”
Congratulations to Dharmaraj Solairaj for his Golden leap and securing the coveted Gold in Men's Long Jump-T64 at the Asian Para Games. India is elated. He has made history and inspired the nation. pic.twitter.com/LMERPMuu5I
— Narendra Modi (@narendramodi) October 27, 2023


