ದೋಹಾದಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ ಶಿಪ್‌ ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಫಿಡೆ ರ‍್ಯಾಪಿಡ್ ಚೆಸ್ ಚಾಂಪಿಯನ್‌ ಶಿಪ್‌ ನಲ್ಲಿ ಇತ್ತೀಚೆಗಷ್ಟೇ ಕಂಚಿನ ಪದಕ ಜಯಿಸಿದ್ದು ಈಗ ಈ ಸಾಧನೆಯು, ಜಾಗತಿಕ ಚೆಸ್ ರಂಗದಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವಾಗಿದೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ: 

“ಚೆಸ್‌ನಲ್ಲಿ ಭಾರತ ಇನ್ನಷ್ಟು ದಾಪುಗಾಲಿಡುತ್ತಿದೆ!

ಇತ್ತೀಚೆಗೆ FIDE ರ‍್ಯಾಪಿಡ್ ಚೆಸ್ ಚಾಂಪಿಯನ್‌ ಶಿಪ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದು, ಈಗ ದೋಹಾದಲ್ಲಿ ನಡೆದ FIDE ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ ಶಿಪ್‌ ನಲ್ಲಿ ಕೂಡ ಕಂಚಿನ ಪದಕ ಜಯಿಸಿರುವ ಅರ್ಜುನ್ ಎರಿಗೈಸಿ ಅವರಿಗೆ ಅಭಿನಂದನೆಗಳು. ಅವರ ಕೌಶಲ್ಯ, ತಾಳ್ಮೆ ಮತ್ತು ಒಲವು ಅನುಕರಣೀಯ. ಅವರ ಯಶಸ್ಸು ನಮ್ಮ ಯುವಜನರಿಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ. ಅವರಿಗೆ ನನ್ನ ಶುಭ ಹಾರೈಕೆಗಳು.

@ArjunErigaisi”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi offers prayers at Seychelles' Arulmigu Navasakthi Vinayagar temple

Media Coverage

PM Modi offers prayers at Seychelles' Arulmigu Navasakthi Vinayagar temple
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜೂನ್ 2026
June 29, 2026

PM Modi Advancing National Strength Through Unity, Innovation and Janbhagidari