ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ನ ಶ್ರೀ ವೀಸಾಸೋಲಿ ಲೌಂಗು ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, “ಶ್ರೀ ವೀಸಾಸೋಲಿ ಲೌಂಗು ಕಠಿಣ ಪರಿಶ್ರಮ ಮತ್ತು ಬದ್ಧತೆಯ ವ್ಯಕ್ತಿಯಾಗಿದ್ದು, ಅವರು ನಾಗಾಲ್ಯಾಂಡ್ ಪ್ರಗತಿಗಾಗಿ ಮತ್ತು ನಾಗಾ ಜನರ ಸಬಲೀಕರಣದ ಬಗ್ಗೆ ಉತ್ಸುಕರಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದರು. ಅವರ ನಿಧನದಿಂದ ನೋವಾಗಿದೆ. ಅವರು ಕುಟುಂಬದವರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು, ಚಿರಶಾಂತಿ.”
Shri Visasolie Lhoungu was a hardworking and dedicated person who was passionate about the progress of Nagaland and empowerment of the Naga people. He made noteworthy efforts to strengthen the BJP in the state. Pained by his demise. Condolences to his family and supporters. RIP.
— Narendra Modi (@narendramodi) October 12, 2021