ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಎಂ.ಜಿ. ವೈದ್ಯ ಜಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಶ್ರೀ ಎಂ. ಜಿ. ವೈದ್ಯ ಜಿ ಅವರು ಹೆಸರಾಂತ ಬರಹಗಾರರು ಮತ್ತು ಪತ್ರಕರ್ತರಾಗಿದ್ದರು. ಅವರು ಆರ್ ಎಸ್ ಎಸ್ ಗೆ ದಶಕಗಳ ಕಾಲ ತಮ್ಮ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ಬಲವರ್ಧನೆಗೆ ದುಡಿದಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅನುಯಾಯಿಗಳಿಗೆ ಸಂತಾಪಗಳು. ಓಂ ಶಾಂತಿ.” ಎಂದು ಹೇಳಿದ್ದಾರೆ.
Shri MG Vaidya Ji was a distinguished writer and journalist. He contributed extensively to the RSS for decades. He also worked to strengthen the BJP. Saddened by his demise. Condolences to his family and admirers. Om Shanti.
— Narendra Modi (@narendramodi) December 19, 2020


