ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 37ನೇ ಆವೃತ್ತಿಯ ಪ್ರಗತಿ ಸಭೆ ನಡೆಯಿತು. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಕ್ರಿಯ ಮತ್ತು ಕ್ರಿಯಾಶೀಲ ಆಡಳಿತ, ಯೋಜನೆ ಮತ್ತು ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನ ಕುರಿತು ಚರ್ಚಿಸುವ ಬಹು-ಮಾದರಿ ವೇದಿಕೆ ಇದಾಗಿದೆ.

ಪ್ರಗತಿ ಸಭೆಯಲ್ಲಿ ಪ್ರಮುಖ 9 ಕಾರ್ಯಸೂಚಿಗಳ ಪರಾಮರ್ಶೆ ನಡೆಸಲಾಯಿತು. ಅವುಗಳಲ್ಲಿ 8 ಯೋಜನೆಗಳು ಮತ್ತು 1 ಕಾರ್ಯಕ್ರಮದ ಪರಾಮರ್ಶೆ ನಡೆಯಿತು. 8 ಯೋಜನೆಗಳಲ್ಲಿ ರೈಲ್ವೆ ಸಚಿವಾಲಯಕ್ಕೆ ಸೇರಿದ 3, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 3 ಹಾಗೂ ಇಂಧನ ಸಚಿವಾಲಯದ 2 ಯೋಜನೆಗಳ ಪರಾಮರ್ಶೆ ನಡೆಸಲಾಯಿತು. ಈ 8 ಯೋಜನೆಗಳ ಯೋಜನಾ ವೆಚ್ಚದ ಗಾತ್ರ ಒಟ್ಟು 1,26,000 ಕೋಟಿ ರೂಪಾಯಿ ಆಗಿದ್ದು, 14 ರಾಜ್ಯಗಳು ಅಂದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ, ಛತ್ತೀಸ್ ಗಢ, ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ, ಮಣಿಪುರ ಮತ್ತು ದೆಹಲಿ ರಾಜ್ಯಗಳಿಗೆ ಸಂಬಂಧಿಸಿದ್ದಾಗಿವೆ.

ಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಈ ಎಲ್ಲಾ ಯೋಜನೆಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಅತ್ಯಗತ್ಯ ಎಂದು ಒತ್ತು ನೀಡಿದರು. ಸಂವಾದ ಸಂದರ್ಭದಲ್ಲಿ ಅವರು ‘ಒಂದು ರಾಷ್ಟ್ರ – ಒಂದು ಪಡಿತರ ಚೀಟಿ’ ಯೋಜನೆಯ ಪರಾಮರ್ಶೆ ನಡೆಸಿದರು. ದೇಶದ ನಾಗರೀಕರಿಗೆ ವ್ಯಾಪಕ ಪ್ರಯೋಜನ ಒದಗಿಸುವುದನ್ನು ಖಚಿತಪಡಿಸಲು ಈ ಯೋಜನೆಯ ಅಡಿ ಅಭಿವೃದ್ಧಿಪಡಿಸಿದ ತಾಂತ್ರಿಕ ವೇದಿಕೆಯ ಬಹು ಉಪಯುಕ್ತತೆಗಳನ್ನು ಅನ್ವೇಷಿಸುವಂತೆ ಪ್ರಧಾನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗಳಲ್ಲಿ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕಗಳು ಮತ್ತು ಹಾಸಿಗೆಗಳ ಲಭ್ಯತೆ ಮೇಲೆ ನಿಗಾ ವಹಿಸುವಂತೆ ಪ್ರಧಾನಿ ಅವರು ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಿದರು.

ಈ ಮುನ್ನ ನಡೆದಿದ್ದ 36ನೇ ಪ್ರಗತಿ ಸಭೆಯಲ್ಲಿ ಒಟ್ಟು 13.78 ಲಕ್ಷ ಕೋಟಿ ರೂ. ವೆಚ್ಚದ 292 ಯೋಜನೆಗಳ ಪರಾಮರ್ಶೆ ನಡೆಸಲಾಗಿತ್ತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Current growth trajectory paves way for India to be a developed nation by 2047: Jeffrey Sachs

Media Coverage

Current growth trajectory paves way for India to be a developed nation by 2047: Jeffrey Sachs
NM on the go

Nm on the go

Always be the first to hear from the PM. Get the App Now!
...
ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯು ಯಶಸ್ಸಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
April 30, 2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತಂ ಪುಸ್ತಕವನ್ನು ಹಂಚಿಕೊಂಡಿದ್ದು, ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯು ವ್ಯಕ್ತಿಯು ತಮ್ಮ ಕಾರ್ಯಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

ಈ ಅಚಲ ಉತ್ಸಾಹವು ಒಬ್ಬ ವ್ಯಕ್ತಿಯು ಸಾಧಿಸಲು ನಿರ್ಧರಿಸುವ ಎಲ್ಲಾ ಪ್ರಯತ್ನಗಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ;

"कर्मशील और ऊर्जावान देशवासी ही राष्ट्र की सबसे बड़ी शक्ति हैं, जिनके परिश्रम से विकास की नई राहें तय होती हैं। इनके प्रयासों से देश समृद्धि, आत्मनिर्भरता और उन्नति के शिखर को छूता है।

अनिर्वेदो हि सततं सर्वार्थेषु प्रवर्तकः।

करोति सफलं जन्तोः कर्म यच्च करोति सः॥"

ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯು ವ್ಯಕ್ತಿಯನ್ನು ತಮ್ಮ ಕ್ರಿಯೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ. ಈ ಅಚಲ ಉತ್ಸಾಹವು ಒಬ್ಬ ವ್ಯಕ್ತಿಯು ಸಾಧಿಸಲು ನಿರ್ಧರಿಸುವ ಎಲ್ಲಾ ಪ್ರಯತ್ನಗಳನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ.