ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಪ್ಯಾರಾ ಕ್ಯಾನೋ ಕೆಎಲ್ 3 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನೀಶ್ ಕೌರವ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನ ಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪ್ಯಾರಾ ಕ್ಯಾನೋ ಪುರುಷರ ಕೆಎಲ್ 3 ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದ ಮನೀಶ್ ಕೌರವ್‌ಗೆ ಅಭಿನಂದನೆಗಳು. ಇದು ಮಹೋನ್ನತ ಸಾಧನೆಯಾಗಿದೆ, ಅವರ ಸಂಪೂರ್ಣ ಬದ್ಧತೆಗೆ ದೊರೆತ ಫಲಿತಾಂಶವಾಗಿದೆ! ”.
Congratulations to Manish Kaurav for the phenomenal performance in Para Canoe Men's KL3 event at the Asian Para Games and winning a Bronze Medal. This is an outstanding achievement, a result of his sheer dedication! pic.twitter.com/E0h8j8KYAv
— Narendra Modi (@narendramodi) October 24, 2023


