ಇದು ಭಾರತದ ಅದ್ಭುತ ಕ್ರೀಡಾ ಪ್ರತಿಭೆಯ ಆಚರಣೆಯಾಗಿದೆ ಮತ್ತು ದೇಶಾದ್ಯಂತದ ಕ್ರೀಡಾಪಟುಗಳ ಉತ್ಸಾಹವನ್ನು ಪ್ರದರ್ಶಿಸುತ್ತದೆ: ಪ್ರಧಾನಮಂತ್ರಿ
ಭಾರತದ ಸಮಗ್ರ ಅಭಿವೃದ್ಧಿಗೆ ಕ್ರೀಡೆ ಪ್ರಮುಖ ಚಾಲಕ ಎಂದು ನಾವು ಪರಿಗಣಿಸುತ್ತೇವೆ: ಪ್ರಧಾನಮಂತ್ರಿ
ನಾವು ನಮ್ಮ ಕ್ರೀಡಾಪಟುಗಳಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ, ಇದರಿಂದ ಅವರು ತಮ್ಮ ಸಾಮರ್ಥ್ಯ‌ವನ್ನು ಪೂರ್ಣವಾಗಿ ಹೆಚ್ಚಿಸಬಹುದು: ಪ್ರಧಾನಮಂತ್ರಿ
2036ರ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಭಾರತ ಬಲವಾದ ಒತ್ತು ನೀಡುತ್ತಿದೆ: ಪ್ರಧಾನಮಂತ್ರಿ
ರಾಷ್ಟ್ರೀಯ ಕ್ರೀಡಾಕೂಟವು ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ಇದು ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಸ್ಫೂರ್ತಿಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ, ಇದು ಭಾರತದ ಶ್ರೀಮಂತ ವೈವಿಧ್ಯತೆ ಮತ್ತು ಏಕತೆಯ ಆಚರಣೆಯಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರಾಖಂಡ ಇಂದು ಯುವಜನರ ಶಕ್ತಿಯಿಂದ ಬೆಳಗುತ್ತಿದೆ ಎಂದರು. ಬಾಬಾ ಕೇದಾರನಾಥ, ಬದರೀನಾಥ ಮತ್ತು ಗಂಗಾ ಮಾತೆಯ ಆಶೀರ್ವಾದದಿಂದ 38ನೇ ರಾಷ್ಟ್ರೀಯ ಕ್ರೀಡಾಕೂಟ ಇಂದು ಆರಂಭವಾಗುತ್ತಿದೆ ಎಂದರು. ಇದು ಉತ್ತರಾಖಂಡದ ರಚನೆಯ 25ನೇ ವರ್ಷವಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದಾದ್ಯಂತದ ಯುವಕರು ಈ ಯುವ ರಾಜ್ಯದಲ್ಲಿ ತಮ್ಮ ಸಾಮರ್ಥ್ಯ‌ವನ್ನು ಪ್ರದರ್ಶಿಸಲಿದ್ದಾರೆ ಎಂದರು. ಈ ಕಾರ್ಯಕ್ರಮವು ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ನ ಸುಂದರವಾದ ಚಿತ್ರವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟದ ಈ ಆವೃತ್ತಿಯಲ್ಲಿಅನೇಕ ಸ್ಥಳೀಯ ಆಟಗಳನ್ನು ಸೇರಿಸಲಾಗಿದೆ ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆ ಇರುವುದರಿಂದ ‘ಗ್ರೀನ್‌ ಗೇಮ್ಸ್’(ಹಸಿರು ಕ್ರೀಡಾಕೂಟ) ಘೋಷವಾಕ್ಯವಾಗಿದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿ ಅವರು, ಟ್ರೋಫಿಗಳು ಮತ್ತು ಪದಕಗಳನ್ನು ಸಹ ಇ-ತ್ಯಾಜ್ಯದಿಂದ ತಯಾರಿಸಲಾಗಿದೆ ಮತ್ತು ಪ್ರತಿ ಪದಕ ವಿಜೇತರ ಹೆಸರಿನಲ್ಲಿಒಂದು ಮರವನ್ನು ನೆಡಲಾಗುವುದು, ಇದು ಉತ್ತಮ ಉಪಕ್ರಮವಾಗಿದೆ ಎಂದು ಅವರು ಹೇಳಿದರು. ಉತ್ತಮ ಪ್ರದರ್ಶನಕ್ಕಾಗಿ ಅವರು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಇಂತಹ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಉತ್ತರಾಖಂಡ ಸರ್ಕಾರ ಮತ್ತು ಜನರನ್ನು ಅವರು ಅಭಿನಂದಿಸಿದರು.

 

ಬೆಂಕಿಯ ಮೂಲಕ ಚಿನ್ನವು ಪರಿಶುದ್ಧವಾಗುವಂತೆ, ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ‌ಗಳನ್ನು ಪರಿಷ್ಕರಿಸಲು ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದರು. ಈಗ ವರ್ಷವಿಡೀ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಮತ್ತು ಖೇಲೋ ಇಂಡಿಯಾ ಸರಣಿಯಲ್ಲಿ ಹಲವಾರು ಹೊಸ ಕ್ರೀಡಾಕೂಟಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು. ಖೇಲೋ ಇಂಡಿಯಾ ಯೂತ್‌ ಗೇಮ್ಸ್ ಅನೇಕ ಯುವ ಕ್ರೀಡಾಪಟುಗಳಿಗೆ ಮುನ್ನಡೆಯಲು ಅವಕಾಶಗಳನ್ನು ಒದಗಿಸಿದೆ ಮತ್ತು ವಿಶ್ವವಿದ್ಯಾಲಯ ಕ್ರೀಡಾಕೂಟವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಪ್ಯಾರಾ ಅಥ್ಲೀಟ್‌ಗಳಿಗೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಹೊಸ ಸಾಧನೆಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಲಡಾಖ್‌ನಲ್ಲಿ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ 5ನೇ ಆವೃತ್ತಿ ನಡೆಯುತ್ತಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಕಳೆದ ವರ್ಷ ಬೀಚ್‌  ಗೇಮ್ಸ್ ಆಯೋಜಿಸಲಾಗಿತ್ತು ಎಂದರು.

 

ಕ್ರೀಡೆಯನ್ನು ಉತ್ತೇಜಿಸುವ ಪ್ರಯತ್ನಗಳು ಕೇವಲ ಸರ್ಕಾರದಿಂದ ಮಾತ್ರ ನಡೆಯುತ್ತಿಲ್ಲ, ಆದರೆ ಅನೇಕ ಸಂಸತ್‌ ಸದಸ್ಯರು ಹೊಸ ಪ್ರತಿಭೆಗಳನ್ನು ಹೊರತರಲು ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಕಾಶಿ ಸಂಸದರೂ ಆಗಿರುವ ಪ್ರಧಾನಮಂತ್ರಿ, ತಮ್ಮ ಸಂಸದೀಯ ಕ್ಷೇತ್ರವೊಂದರಲ್ಲೇ ಪ್ರತಿ ವರ್ಷ ಸುಮಾರು 2.5 ಲಕ್ಷ  ಯುವಕರು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಉಲ್ಲೇಖಿಸಿದರು. ದೇಶದಲ್ಲಿ ಕ್ರೀಡೆಗಳ ಸುಂದರವಾದ ಹೂಗುಚ್ಛವನ್ನು ರಚಿಸಲಾಗಿದೆ, ಪ್ರತಿ ಋುತುವಿನಲ್ಲಿ ಹೂವುಗಳು ಅರಳುತ್ತವೆ ಮತ್ತು ಪಂದ್ಯಾವಳಿಗಳು ನಿರಂತರವಾಗಿ ನಡೆಯುತ್ತವೆ ಎಂದು ಅವರು ಒತ್ತಿ ಹೇಳಿದರು.

‘‘ಭಾರತದ ಸಮಗ್ರ ಅಭಿವೃದ್ಧಿಗೆ ಕ್ರೀಡೆಯನ್ನು ಪ್ರಮುಖ ಮಾಧ್ಯಮವೆಂದು ಪರಿಗಣಿಸಲಾಗಿದೆ,’’ ಎಂದು ಹೇಳಿದ ಪ್ರಧಾನಮಂತ್ರಿ, ಒಂದು ದೇಶವು ಕ್ರೀಡೆಯಲ್ಲಿಉತ್ತಮ ಸಾಧನೆ ಮಾಡಿದಾಗ, ಅದರ ಖ್ಯಾತಿ ಮತ್ತು ಪ್ರೊಫೈಲ್‌ ಕೂಡ ಹೆಚ್ಚಾಗುತ್ತದೆ ಎಂದು ಒತ್ತಿ ಹೇಳಿದರು. ಆದ್ದರಿಂದ, ಕ್ರೀಡೆಯನ್ನು ಭಾರತದ ಅಭಿವೃದ್ಧಿಯ ಮಾರ್ಗವಾಗಿದೆ ಎಂದು ಅವರು ಹೇಳಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಮುನ್ನಡೆಯುತ್ತಿದೆ ಮತ್ತು ಕ್ರೀಡಾ ಆರ್ಥಿಕತೆಯು ಈ ಪ್ರಯತ್ನದ ಮಹತ್ವದ ಭಾಗವಾಗಿದೆ ಎಂದು ಪ್ರಧಾನಿ ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ಕ್ರೀಡಾಪಟುವಿನ ಹಿಂದೆ, ತರಬೇತುದಾರರು, ಪೌಷ್ಟಿಕಾಂಶ ಮತ್ತು ಫಿಟ್ನೆಸ್‌ ತಜ್ಞರು, ವೈದ್ಯರು ಮತ್ತು ಉಪಕರಣಗಳು ಸೇರಿದಂತೆ ಸಂಪೂರ್ಣ ಪರಿಸರ ವ್ಯವಸ್ಥೆ ಇರುತ್ತದೆ ಎಂದು ಅವರು ಗಮನಿಸಿದರು. ವಿಶ್ವದಾದ್ಯಂತ ಕ್ರೀಡಾಪಟುಗಳು ಬಳಸುವ ಕ್ರೀಡಾ ಸಲಕರಣೆಗಳ ಗುಣಮಟ್ಟದ ತಯಾರಕ ಭಾರತ ಆಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಮೀರತ್‌ನಲ್ಲಿ ಕ್ರೀಡಾ ಉಪಕರಣಗಳನ್ನು ಉತ್ಪಾದಿಸುವ 35,000ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳಿವೆ, 3 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗಮನಸೆಳೆದರು. ಇಂತಹ ಪರಿಸರ ವ್ಯವಸ್ಥೆಯನ್ನು ದೇಶಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

 

ಇತ್ತೀಚೆಗೆ ದೆಹಲಿಯ ತಮ್ಮ ನಿವಾಸದಲ್ಲಿ ಭಾರತದ ಒಲಿಂಪಿಕ್‌ ತಂಡವನ್ನು ಭೇಟಿ ಮಾಡುವ ಅವಕಾಶ ತಮಗೆ ದೊರೆತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಸಂಭಾಷಣೆಯ ವೇಳೆ ಕ್ರೀಡಾಪಟುಗಳಲ್ಲಿ ಒಬ್ಬರು ‘‘ಪಿಎಂ’’ ಅನ್ನು ‘‘ಪ್ರಧಾನ ಮಂತ್ರಿ’’ ಬದಲಿಗೆ ‘‘ಪರಮ ಮಿತ್ರ’’ (ಉತ್ತಮ ಸ್ನೇಹಿತ) ಎಂದು ಮರು ವ್ಯಾಖ್ಯಾನಿಸಿದರು ಎಂದು ಹೇಳಿದರು. ಈ ನಂಬಿಕೆ ಅವರಿಗೆ ಶಕ್ತಿಯನ್ನು ನೀಡುತ್ತದೆ ಎಂದು ಅವರು ವ್ಯಕ್ತಪಡಿಸಿದರು. ಕ್ರೀಡಾಪಟುಗಳ ಪ್ರತಿಭೆ ಮತ್ತು ಸಾಮರ್ಥ್ಯ‌ದ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಅವರ ಪ್ರತಿಭೆಯನ್ನು ಬೆಂಬಲಿಸುವತ್ತ ನಿರಂತರ ಗಮನ ಹರಿಸಲಾಗಿದೆ ಮತ್ತು ಕಳೆದ ದಶಕದಲ್ಲಿ ಕ್ರೀಡಾ ಬಜೆಟ್‌ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಟಾಪ್ಸ್ ಯೋಜನೆಯಡಿ, ಡಜನ್‌ಗಟ್ಟಲೆ ಕ್ರೀಡಾಪಟುಗಳಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಖೇಲೋ ಇಂಡಿಯಾ ಕಾರ್ಯಕ್ರಮವು ದೇಶಾದ್ಯಂತ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಶಾಲೆಗಳಲ್ಲಿ ಕ್ರೀಡೆಯನ್ನು ಮುಖ್ಯವಾಹಿನಿಗೆ ತರಲಾಗಿದೆ ಮತ್ತು ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು.

ಸರ್ಕಾರದ ಪ್ರಯತ್ನಗಳ ಫಲಿತಾಂಶಗಳು ನೆಲದ ಮೇಲೆ ಮತ್ತು ಪದಕಗಳ ಸಂಖ್ಯೆಯಲ್ಲಿ ಗೋಚರಿಸುತ್ತಿವೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭಾರತೀಯ ಕ್ರೀಡಾಪಟುಗಳು ಪ್ರತಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು. ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಉತ್ತರಾಖಂಡದ ಅನೇಕ ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದಾರೆ ಎಂದು ಹೇಳಿದರು. ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ಅನೇಕ ಪದಕ ವಿಜೇತರು ಸ್ಥಳದಲ್ಲಿ ಹಾಜರಿದ್ದರು ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಹಾಕಿಯ ವೈಭವಯುತ ದಿನಗಳು ಮರಳುತ್ತಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತದ ಖೋ-ಖೋ ತಂಡ ಇತ್ತೀಚೆಗೆ ವಿಶ್ವಕಪ್‌ ಗೆದ್ದಿದೆ ಮತ್ತು ಗುಕೇಶ್‌ ಡಿ. ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಜಗತ್ತನ್ನು ದಿಗ್ಭ್ರಮೆಗೊಳಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, ಕೊನೇರು ಹಂಪಿ ಮಹಿಳಾ ವಿಶ್ವ ರಾರ‍ಯಪಿಡ್‌ ಚೆಸ್‌ ಚಾಂಪಿಯನ್‌ ಆದರು. ಈ ಯಶಸ್ಸು ಭಾರತದಲ್ಲಿ ಕ್ರೀಡೆಗಳು ಇನ್ನು ಮುಂದೆ ಕೇವಲ ಪಠ್ಯೇತರ ಚಟುವಟಿಕೆಗಳಾಗಿ ಉಳಿದಿಲ್ಲ ಆದರೆ ಯುವಕರು ಈಗ ಕ್ರೀಡೆಯನ್ನು ಪ್ರಮುಖ ವೃತ್ತಿಜೀವನದ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

‘‘ಕ್ರೀಡಾಪಟುಗಳು ಸದಾ ದೊಡ್ಡ ಗುರಿಗಳನ್ನು ಗುರಿಯಾಗಿಸಿಕೊಳ್ಳುವಂತೆ, ಭಾರತವೂ ಉತ್ತಮ ಸಂಕಲ್ಪಗಳೊಂದಿಗೆ ಮುಂದುವರಿಯುತ್ತಿದೆ,’’ ಎಂದು ಪ್ರಧಾನಿ ಹೇಳಿದರು. 2036ರ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಭಾರತ ಮಹತ್ವದ ಪ್ರಯತ್ನಗಳನ್ನು ಮಾಡುತ್ತಿದೆ, ಇದು ಭಾರತೀಯ ಕ್ರೀಡೆಯನ್ನು ಹೊಸ ಎತ್ತರಕ್ಕೆ ಏರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಒಲಿಂಪಿಕ್ಸ್‌ ಕೇವಲ ಕ್ರೀಡಾ ಘಟನೆಯಲ್ಲ ಎಂದು ಒತ್ತಿ ಹೇಳಿದರು; ಆದರೆ ಆತಿಥೇಯ ದೇಶದಲ್ಲಿಅನೇಕ ಕ್ಷೇತ್ರಗಳನ್ನು ಮುನ್ನಡೆಸುತ್ತಿರುವ ಶ್ರೀ ನರೇಂದ್ರ ಮೋದಿ, ಒಲಿಂಪಿಕ್ಸ್‌ಗಾಗಿ ನಿರ್ಮಿಸಲಾದ ಕ್ರೀಡಾ ಮೂಲಸೌಕರ್ಯಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಭವಿಷ್ಯದ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತವೆ ಎಂದರು. ಒಲಿಂಪಿಕ್ಸ್‌ ಆತಿಥ್ಯ ವಹಿಸುವ ನಗರವು ಹೊಸ ಸಂಪರ್ಕ ಮೂಲಸೌಕರ್ಯಗಳನ್ನು ನೋಡುತ್ತದೆ, ನಿರ್ಮಾಣ ಮತ್ತು ಸಾರಿಗೆ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ ಮತ್ತು ದೇಶದ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಯೋಜನವಾಗಿದೆ, ಹೊಸ ಹೋಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ವಿಶ್ವದಾದ್ಯಂತದ ಜನರು ಕ್ರೀಡಾಕೂಟದಲ್ಲಿ ಭಾಗವಹಿಸಲು ಮತ್ತು ವೀಕ್ಷಿಸಲು ಬರುತ್ತಾರೆ ಎಂದು ಅವರು ಹೇಳಿದರು. ಉತ್ತರಾಖಂಡದ ದೇವಭೂಮಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟವು ಸ್ಥಳೀಯ ಆರ್ಥಿಕತೆಗೂ ಪ್ರಯೋಜನಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದರು. ದೇಶದ ಇತರ ಭಾಗಗಳಿಂದ ಪ್ರೇಕ್ಷಕರು ಉತ್ತರಾಖಂಡದ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ, ಕ್ರೀಡಾ ಕಾರ್ಯಕ್ರಮಗಳು ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೂ ಪ್ರಯೋಜನವನ್ನು ನೀಡುತ್ತವೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.

21ನೇ ಶತಮಾನವನ್ನು ಭಾರತದ ಶತಮಾನ ಎಂದು ಶ್ಲಾಘಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಬಾಬಾ ಕೇದಾರನಾಥಕ್ಕೆ ಭೇಟಿ ನೀಡಿದ ನಂತರ, ಇದು ಉತ್ತರಾಖಂಡದ ದಶಕ ಎಂದು ಸ್ವಯಂಪ್ರೇರಿತವಾಗಿ ಭಾವಿಸಿದರು. ಉತ್ತರಾಖಂಡದ ತ್ವರಿತ ಪ್ರಗತಿಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು, ಇದು ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರ ಗೌರವಯುತ ಜೀವನಕ್ಕೆ ಅಡಿಪಾಯವನ್ನು ರೂಪಿಸುತ್ತದೆ. ಇದು ಪ್ರಜಾಪ್ರಭುತ್ವದ ಸ್ಫೂರ್ತಿ ಮತ್ತು ಸಂವಿಧಾನದ ಸಾರವನ್ನು ಬಲಪಡಿಸುತ್ತದೆ. ಕ್ರೀಡಾ ಮನೋಭಾವವು ತಾರತಮ್ಯದ ಎಲ್ಲಭಾವನೆಗಳನ್ನು ತೆಗೆದುಹಾಕುತ್ತದೆ ಎಂದು ಹೇಳಿದ ಪ್ರಧಾನಿ ಅವರು ಅವರು ಇದನ್ನು ಕ್ರೀಡಾ ಕಾರ್ಯಕ್ರಮದೊಂದಿಗೆ ಸಂಪರ್ಕಿಸಿದರು. ಪ್ರತಿಯೊಂದು ಗೆಲುವು ಮತ್ತು ಪದಕವನ್ನು ಸಾಮೂಹಿಕ ಪ್ರಯತ್ನದ ಮೂಲಕ ಸಾಧಿಸಲಾಗುತ್ತದೆ ಮತ್ತು ಕ್ರೀಡೆಗಳು ತಂಡದ ಕೆಲಸವನ್ನು ಪ್ರೇರೇಪಿಸುತ್ತವೆ ಎಂದು ಅವರು ಹೇಳಿದರು. ಏಕರೂಪ ನಾಗರಿಕ ಸಂಹಿತೆಗೂ ಇದೇ ಮನೋಭಾವ ಅನ್ವಯಿಸುತ್ತದೆ, ಅಲ್ಲಿಯಾವುದೇ ತಾರತಮ್ಯವಿಲ್ಲ ಮತ್ತು ಎಲ್ಲರೂ ಸಮಾನರು ಎಂದು ಅವರು ಹೇಳಿದರು. ಈ ಐತಿಹಾಸಿಕ ಹೆಜ್ಜೆ ಇಟ್ಟಿದ್ದಕ್ಕಾಗಿ ಉತ್ತರಾಖಂಡ ರಾಜ್ಯ ಸರ್ಕಾರವನ್ನು ಅವರು ಅಭಿನಂದಿಸಿದರು.

 

ಇದೇ ಮೊದಲ ಬಾರಿಗೆ ಉತ್ತರಾಖಂಡವು ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಇದು ಮಹತ್ವದ ಸಾಧನೆಯಾಗಿದ್ದು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ ಎಂದು ಶ್ಲಾಘಿಸಿದರು. ಉತ್ತರಾಖಂಡದ ಆರ್ಥಿಕತೆಯು ಚಾರ್‌ ಧಾಮ್‌ ಯಾತ್ರೆಯನ್ನು ಮಾತ್ರ ಅವಲಂಬಿಸಲು ಸಾಧ್ಯವಿಲ್ಲವಾದ್ದರಿಂದ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ಅವರು ಒತ್ತಾಯಿಸಿದರು. ಈ ತೀರ್ಥಯಾತ್ರೆಗಳ ಆಕರ್ಷಣೆಯನ್ನು ಹೆಚ್ಚಿಸಲು ಸರ್ಕಾರವು ನಿರಂತರವಾಗಿ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ, ಪ್ರತಿ ಋುತುವಿನಲ್ಲಿಯಾತ್ರಾರ್ಥಿಗಳ ಸಂಖ್ಯೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು. ಆದಾಗ್ಯೂ, ಇದು ಸಾಕಾಗುವುದಿಲ್ಲಎಂದು ಅವರು ಗಮನಿಸಿದರು. ಉತ್ತರಾಖಂಡದಲ್ಲಿ ಚಳಿಗಾಲದ ಆಧ್ಯಾತ್ಮಿಕ ಪ್ರಯಾಣವನ್ನು ಉತ್ತೇಜಿಸುವ ಅಗತ್ಯವನ್ನು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಈ ದಿಕ್ಕಿನಲ್ಲಿ ಹೊಸ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಈ ಚಳಿಗಾಲದ ಪ್ರಯಾಣದ ಭಾಗವಾಗಲು ತಮ್ಮ ಬಯಕೆಯನ್ನು ಹಂಚಿಕೊಂಡರು. ಯಾತ್ರಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಸಾಹಸ ಚಟುವಟಿಕೆಗಳಿಗೆ ಅನೇಕ ಅವಕಾಶಗಳಿರುವುದರಿಂದ ಚಳಿಗಾಲದಲ್ಲಿ ಉತ್ತರಾಖಂಡಕ್ಕೆ ಭೇಟಿ ನೀಡುವಂತೆ ಅವರು ದೇಶಾದ್ಯಂತದ ಯುವಕರನ್ನು ಪ್ರೋತ್ಸಾಹಿಸಿದರು. ರಾಷ್ಟ್ರೀಯ ಕ್ರೀಡಾಕೂಟದ ನಂತರ ಈ ಅವಕಾಶಗಳನ್ನು ಅನ್ವೇಷಿಸುವಂತೆ ಮತ್ತು ದೇವಭೂಮಿಯ ಆತಿಥ್ಯವನ್ನು ದೀರ್ಘಕಾಲದವರೆಗೆ ಆನಂದಿಸುವಂತೆ ಅವರು ಎಲ್ಲಾ ಕ್ರೀಡಾಪಟುಗಳನ್ನು ಒತ್ತಾಯಿಸಿದರು.

ಕ್ರೀಡಾಪಟುಗಳು ತಮ್ಮ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಮುಂಬರುವ ದಿನಗಳಲ್ಲಿ ತೀವ್ರವಾಗಿ ಸ್ಪರ್ಧಿಸುತ್ತಾರೆ, ರಾಷ್ಟ್ರೀಯ ದಾಖಲೆಗಳನ್ನು ಮುರಿಯುತ್ತಾರೆ ಮತ್ತು ಹೊಸದನ್ನು ಸ್ಥಾಪಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವಂತೆ ಒತ್ತಾಯಿಸಿದರು. ರಾಷ್ಟ್ರೀಯ ಕ್ರೀಡಾಕೂಟವು ಕೇವಲ ಕ್ರೀಡಾ ಸ್ಪರ್ಧೆ ಮಾತ್ರವಲ್ಲ, ಭಾರತದ ವೈವಿಧ್ಯತೆಯನ್ನು ಆಚರಿಸುವ ‘‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’’ಗೆ ವೇದಿಕೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಕ್ರೀಡಾಪಟುಗಳು ತಮ್ಮ ಪದಕಗಳು ಭಾರತದ ಏಕತೆ ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ವಿವಿಧ ರಾಜ್ಯಗಳ ಭಾಷೆಗಳು, ಪಾಕಪದ್ಧತಿಗಳು ಮತ್ತು ಸಂಗೀತದ ಬಗ್ಗೆ ಕಲಿಯುವಂತೆ ಅವರು ಒತ್ತಾಯಿಸಿದರು. ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಉತ್ತರಾಖಂಡವು ಪ್ಲಾಸ್ಟಿಕ್‌ ಮುಕ್ತವಾಗುವತ್ತ ಮುನ್ನಡೆಯುತ್ತಿದೆ ಮತ್ತು ಕ್ರೀಡಾಪಟುಗಳ ಸಹಕಾರವಿಲ್ಲದೆ ಈ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಈ ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

 

ಫಿಟ್‌ನೆಸ್‌ನ ಮಹತ್ವ ಮತ್ತು ದೇಶದಲ್ಲಿಹೆಚ್ಚುತ್ತಿರುವ ಸ್ಥೂಲಕಾಯತೆಯ ಸಮಸ್ಯೆಯನ್ನು ಒತ್ತಿ ಹೇಳಿದ ಪ್ರಧಾನಿ, ಬೊಜ್ಜು ಯುವಕರು ಸೇರಿದಂತೆ ಎಲ್ಲಾ ವಯೋಮಾನದವರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ ಎಂದರು. ಫಿಟ್‌ ಇಂಡಿಯಾ ಆಂದೋಲನದ ಮೂಲಕ ದೇಶವು ಫಿಟ್‌ನೆಸ್‌ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಹೆಚ್ಚು ಜಾಗೃತವಾಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ತೃಪ್ತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಕ್ರೀಡಾಕೂಟವು ದೈಹಿಕ ಚಟುವಟಿಕೆ, ಶಿಸ್ತು ಮತ್ತು ಸಮತೋಲಿತ ಜೀವನದ ಮಹತ್ವವನ್ನು ಕಲಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ವ್ಯಾಯಾಮ ಮತ್ತು ಆಹಾರ ಎಂಬ ಎರಡು ವಿಷಯಗಳ ಬಗ್ಗೆ ಗಮನ ಹರಿಸುವಂತೆ ಪ್ರಧಾನಮಂತ್ರಿ ಅವರು ನಾಗರಿಕರನ್ನು ಒತ್ತಾಯಿಸಿದರು. ವಾಕಿಂಗ್‌ ಅಥವಾ ವರ್ಕೌಟ್‌ ಆಗಿರಲಿ, ಪ್ರತಿದಿನ ವ್ಯಾಯಾಮಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಅವರು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು. ಸಮತೋಲಿತ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಅವರು ಒತ್ತಿಹೇಳಿದರು, ಅನಾರೋಗ್ಯಕರ ಕೊಬ್ಬುಗಳು ಮತ್ತು ಎಣ್ಣೆಗಳನ್ನು ಕಡಿಮೆ ಮಾಡಲು ಸಲಹೆ ನೀಡಿದರು. ಸಣ್ಣ ಹೆಜ್ಜೆಗಳು ಗಮನಾರ್ಹ ಆರೋಗ್ಯ ಸುಧಾರಣೆಗಳಿಗೆ ಕಾರಣವಾಗುವುದರಿಂದ ಅಡುಗೆ ಎಣ್ಣೆಯ ಬಳಕೆಯನ್ನು ಪ್ರತಿ ತಿಂಗಳು ಕನಿಷ್ಠ ಶೇ.10 ರಷ್ಟು ಕಡಿಮೆ ಮಾಡಬೇಕೆಂದು ಅವರು ಸಲಹೆ ನೀಡಿದರು. ಆರೋಗ್ಯಕರ ದೇಹವು ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ರಾಷ್ಟ್ರಕ್ಕೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಫಿಟ್‌ನೆಸ್‌ ಮತ್ತು ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರಗಳು, ಶಾಲೆಗಳು, ಕಚೇರಿಗಳು ಮತ್ತು ಸಮುದಾಯದ ಮುಖಂಡರಿಗೆ ಶ್ರೀ ನರೇಂದ್ರ ಮೋದಿ ಕರೆ ನೀಡಿದರು. ಪ್ರತಿಯೊಬ್ಬರೂ ತಮ್ಮ ಪ್ರಾಯೋಗಿಕ ಅನುಭವಗಳನ್ನು ಮತ್ತು ಸರಿಯಾದ ಪೌಷ್ಠಿಕಾಂಶದ ಬಗ್ಗೆ ಜ್ಞಾನವನ್ನು ಹಂಚಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು. ಫಿಟ್‌ ಇಂಡಿಯಾ ನಿರ್ಮಿಸಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡುವ ಮೂಲಕ ಅವರು ಮುಕ್ತಾಯಗೊಳಿಸಿದರು ಮತ್ತು 38ನೇ ರಾಷ್ಟ್ರೀಯ ಕ್ರೀಡಾಕೂಟದ ಪ್ರಾರಂಭವನ್ನು ಘೋಷಿಸಿದರು, ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.

ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್‌ ಸಿಂಗ್‌ ಧಾಮಿ, ಕೇಂದ್ರ ರಾಜ್ಯ ಸಚಿವರಾದ ಶ್ರೀ ಅಜಯ್‌ ತಮ್ಟಾ, ಶ್ರೀಮತಿ ರಕ್ಷಾ ಖಾಡ್ಸೆ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಹಿನ್ನೆಲೆ

38ನೇ ರಾಷ್ಟ್ರೀಯ ಕ್ರೀಡಾಕೂಟವು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿಅದರ ರಜತ ಮಹೋತ್ಸವ ವರ್ಷದಲ್ಲಿಆತಿಥ್ಯ ವಹಿಸಿದೆ ಮತ್ತು ಉತ್ತರಾಖಂಡದ 8 ಜಿಲ್ಲೆಗಳ 11 ನಗರಗಳಲ್ಲಿ ಜನವರಿ 28ರಿಂದ ಫೆಬ್ರವರಿ 14ರವರೆಗೆ ನಡೆಯಲಿದೆ.

36 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. 17 ದಿನಗಳ ಕಾಲ 35 ಕ್ರೀಡಾ ವಿಭಾಗಗಳಲ್ಲಿಸ್ಪರ್ಧೆಗಳು ನಡೆಯಲಿವೆ. ಇವುಗಳಲ್ಲಿ33 ಕ್ರೀಡೆಗಳಿಗೆ ಪದಕಗಳನ್ನು ನೀಡಲಾಗುವುದು, ಎರಡು ಪ್ರದರ್ಶನ ಕ್ರೀಡೆಗಳಿಗೆ ನೀಡಲಾಗುವುದು. ಯೋಗ ಮತ್ತು ಮಲ್ಲಕಂಬವನ್ನು ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ದೇಶಾದ್ಯಂತ 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಿ, ಈ ವರ್ಷದ ರಾಷ್ಟ್ರೀಯ ಕ್ರೀಡಾಕೂಟದ ಘೋಷವಾಕ್ಯ ‘‘ಗ್ರೀನ್‌ ಗೇಮ್ಸ್‌’’(ಹಸಿರು ಕ್ರೀಡೆ). ಕ್ರೀಡಾ ಅರಣ್ಯ ಎಂದು ಕರೆಯಲ್ಪಡುವ ವಿಶೇಷ ಉದ್ಯಾನವನವನ್ನು ಸ್ಥಳದ ಬಳಿ ಅಭಿವೃದ್ಧಿಪಡಿಸಲಾಗುವುದು, ಅಲ್ಲಿ ಕ್ರೀಡಾಪಟುಗಳು ಮತ್ತು ಅತಿಥಿಗಳು 10,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲಿದ್ದಾರೆ. ಕ್ರೀಡಾಪಟುಗಳಿಗೆ ಪದಕಗಳು ಮತ್ತು ಪ್ರಮಾಣಪತ್ರಗಳನ್ನು ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಲಾಗುವುದು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
BAPS Swaminarayan Temple in Paris: PM Modi calls pran pratishtha a new era for India-France cultural relations

Media Coverage

BAPS Swaminarayan Temple in Paris: PM Modi calls pran pratishtha a new era for India-France cultural relations
NM on the go

Nm on the go

Always be the first to hear from the PM. Get the App Now!
...
The inauguration of Swaminarayan Temple is a new milestone in the cultural relations between India and France: PM Modi
September 06, 2026
It is a matter of great joy that BAPS Swaminarayan Hindu Mandir is being inaugurated in Paris: PM
This temple will surely enrich the diversity of France and energize our cultural relations: PM
India-France Strategic Partnership is special as it rests on the strong foundation of old cultural and political bonds: PM

पूज्य महंत स्वामी, फ्रांस सरकार के सम्मानित प्रतिनिधिगण, उपस्थित अतिथिगण, इंडियन कम्युनिटी के मेरे साथी, देश दुनिया से जुड़े सभी हरि भक्त, देवियों और सज्जनों, जय स्वामीनारायण!

आज फ्रांस की राजधानी पेरिस में भव्य स्वामीनारायण मंदिर का लोकार्पण हो रहा है। यह लोकार्पण भारत और फ्रांस के सांस्कृतिक संबंधों का नया युग स्तंभ है। पूज्य संत जनों और सनातन परंपरा के श्रेष्ठ जनों के आशीर्वाद के साथ आज इस लोकार्पण का मंच ‘वसुधैव कुटुम्बकम’ के भाव का मंच बन गया है। भगवान स्वामीनारायण की कृपा और हमारे संतों का स्नेह, संतों का आशीर्वाद, मेरा सौभाग्य है कि मुझे ऐसे पुण्य अवसरों से जुड़ने का अवसर हमेशा मिलता रहता है। आज भी मैं भले ही पेरिस में आप सबके बीच उपस्थित नहीं हूं, लेकिन मन से और हृदय से, मैं स्वयं को आपके बीच ही अनुभव कर रहा हूं।

साथियों,

आज इस अवसर पर मैं परम पूज्य प्रमुख स्वामी जी महाराज का भी श्रद्धापूर्वक स्मरण करता हूं। प्राचीन काल में भारत का जो सांस्कृतिक आध्यात्मिक वैभव था, उन्होंने उसके पुनर्जागरण का एक अभियान शुरू किया था। आज उसका प्रकाश यूरोप समेत पूरी दुनिया में फैल रहा है। 2024 में अबू धाबी में भव्य मंदिर का लोकार्पण हुआ था। आज वहां हजारों लोग दर्शन करने जाते हैं और अब यहां पेरिस में स्वामीनारायण मंदिर का निर्माण सृजन की यह निरंतरता, यह संतों की संकल्प शक्ति का ही प्रमाण है। मैं पुनीत कार्य के लिए पूज्य महंत स्वामी का आभार प्रकट करता हूं, मैं उनके चरणों में प्रणाम करता हूं। मैं BAPS स्वामीनारायण संस्था को और करोड़ों हरि भक्तों को इस अवसर पर हृदय की गहराई से बधाई देता हूं।

साथियों,

BAPS के माध्यम से जब अलग-अलग देश में मंदिरों की प्राण प्रतिष्ठा होती है, तो वहां भारत के प्राचीन विचार और मानवीय मूल्य भी साथ-साथ ही जाते हैं और भारत का विचार कहता है ‘समानं मनः सह चित्तमेषाम्’ अर्थात हमारे मन समान हो, हमारे हृदय साथ जुड़े। इसलिए आज जब फ्रांस में इतना भव्य मंदिर बनकर तैयार हुआ है, यह फ्रांस की विविधता को तो समृद्ध करेगा ही, इससे भारत और फ्रांस के सांस्कृतिक संबंधों को भी ऊर्जा मिलेगी।

साथियों,

बीते वर्षों में भारत और फ्रांस के संबंध नई ऊंचाइयों तक पहुंचे हैं। मेरे मित्र, प्रेसिडेंट मैक्रों के साथ मिलकर दोनों देश एक Special Global Strategic Partnership बना रहे हैं। Technology, AI और Defence से लेकर Space और Climate Action तक हम एक नई गति और नई ऊर्जा के साथ मिलकर के आगे बढ़ रहे हैं। हम 2026 को India-France Year of Innovation के रूप में भी सेलिब्रेट कर रहे हैं। भारत-फ्रांस की ये Strategic Partnership इसलिए भी खास है, क्योंकि ये हमारे पुराने सांस्कृतिक-राजनैतिक सम्बन्धों की मजबूत बुनियाद पर टिकी है। इतिहास गवाह है, फ्रांस में भारतीय सैनिकों के बलिदान का इतिहास आज भी मन-मंदिर में जीवित है। भाषा से जुड़े विषयों में रुचि रखने वाले लोग यह भी जानते हैं कि फ्रेंच स्कॉलर्स ने संस्कृत को लोकप्रिय बनाने में कितनी अहम भूमिका निभाई है। रामकृष्ण परमहंस और स्वामी विवेकानंद पर रोमाँ रोलाँ की की लेखनी हमारी सोसाइटीज़ को और करीब लाई है। पेरिस से पुडुचेरी के अरबिंदो आश्रम तक 'The mother' की spiritual journey, उसने कितने ही भारतीय और फ्रेंच साधकों को inspire किया है।

साथियों,

दशकों पहले श्रील प्रभुपाद स्वामी भी फ्रांस आए थे। इस्कॉन के जरिए भारत फ्रांस के बीच आध्यात्मिक सम्बन्धों का नया अध्याय उन्होंने शुरू किया था। आज योग भी भारत-फ्रांस के people to people कनेक्ट का एक माध्यम बन चुका है। 'इंटरनेशनल योगा डे' पर एफिल टॉवर के सामने से आने वाली तस्वीरें फ्रांस में योग की लोकप्रियता का उदाहरण बनती हैं और अब BAPS के इस भव्य मंदिर के जरिए, हमारे उन सांस्कृतिक सम्बन्धों में एक नया अध्याय जुड़ रहा है।

साथियों,

इन दिनों, भारत फ्रांस Joint Ventures की संभावनाओं पर बातें होती हैं। स्वामीनारायण मंदिर ने इस संभावना में भी एक नया आयाम जोड़ा है। यह मंदिर 'मेड इन इंडिया' है और 'बिल्ट इन फ्रांस' है। इसके काफी पत्थरों को भारत में तराशा गया है। भारत की प्राचीन प्रतिभा यहाँ फ्रांस में आधुनिक इंजीनियरिंग से आकर जुड़ चुकी है। पेरिस में इस भव्य मंदिर ने आकार लिया है। इसलिए, मैं आशा करता हूँ, यह मंदिर सदियों तक भारत और फ्रांस के बीच सहयोग और संभावनाओं का भी प्रतीक बनकर उभरेगा।

साथियों,

स्वामीनारायण मंदिर हमेशा से भक्ति के साथ-साथ सेवा का माध्यम भी रहे हैं। मुझे बताया गया है, यह मंदिर भी सेवा प्रकल्पों का वैसा ही केंद्र बनेगा। मुझे विश्वास है कि यहाँ से भारतीय संस्कृति के जो स्वर निकलेंगे, उनका लाभ पूरे यूरोप में लोगों को मिलेगा। भविष्य में मुझे जब भी समय मिलेगा, मैं इस मंदिर में दर्शन करने का प्रयास अवश्य करूंगा। इन्हीं शब्दों के साथ, एक बार फिर आज के इस लोकार्पण समारोह में सम्मिलित सभी अतिथिगणों को, सभी परिवारों को, सभी हरि भक्तों को और पूरी Indian Diaspora को मेरी ओर से इस शुभारंभ पर्व की ढेरों शुभकामनाएं!

बहुत-बहुत धन्यवाद!

मर्सी बोकू!

जय स्वामीनारायण!