"ಭಾರತದ ಯುವಕರಿರುವ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸ ತಂದಿದೆ"
"ಭಾರತಿದಾಸನ್ ವಿಶ್ವವಿದ್ಯಾಲಯವು ಸದೃಢ ಮತ್ತು ಬಲಿಷ್ಠ ಬುನಾದಿಯೊಂದಿಗೆ ಪ್ರಾರಂಭವಾಯಿತು"
"ಯಾವುದೇ ರಾಷ್ಟ್ರಕ್ಕೆ ನಿರ್ದೇಶನ ನೀಡುವಲ್ಲಿ ವಿಶ್ವವಿದ್ಯಾಲಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ"
"ನಮ್ಮ ರಾಷ್ಟ್ರ ಮತ್ತು ಅದರ ನಾಗರಿಕತೆಯು ಯಾವಾಗಲೂ ಜ್ಞಾನದ ಸುತ್ತ ಕೇಂದ್ರೀಕೃತವಾಗಿದೆ"
"2047ರ ವರೆಗಿನ ವರ್ಷಗಳನ್ನು ನಮ್ಮ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿಸುವ ಯುವಜನರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ"
“ಯೌವನ ಎಂದರೆ ಶಕ್ತಿ. ಇದರರ್ಥ ವೇಗ, ಕೌಶಲ್ಯ ಮತ್ತು ಪ್ರಮಾಣದಲ್ಲಿ ಕೆಲಸ ಮಾಡುವ ಸಾಮರ್ಥ್ಯ"
"ಪ್ರತಿ ಜಾಗತಿಕ ಪರಿಹಾರದ ಭಾಗವಾಗಿ ಭಾರತವನ್ನು ಸ್ವಾಗತಿಸಲಾಗುತ್ತಿದೆ"
"ಹಲವು ರೀತಿಯಲ್ಲಿ, ಸ್ಥಳೀಯ ಮತ್ತು ಜಾಗತಿಕ ಅಂಶಗಳಿಂದಾಗಿ, ಭಾರತದಲ್ಲಿ ಯುವಕ(ಯುವಶಕ್ತಿ)ರಾಗಲು ಇದು ಅತ್ಯುತ್ತಮ ಸಮಯ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭವು 2024ರ ಹೊಸ ವರ್ಷದಲ್ಲಿ ನನ್ನ ಮೊದಲ ಸಾರ್ವಜನಿಕ ಸಂವಾದ ಆಗಿರುವುದರಿಂದ ಇದು ಅತ್ಯಂತ ವಿಶೇಷವಾಗಿದೆ. ಸುಂದರ ತಮಿಳುನಾಡಿನಲ್ಲಿ ಮತ್ತು ಯುವಜನರ ನಡುವೆ ಇರುವುದಕ್ಕೆ ನನಗೆ ಸಂತಸ ತಂದಿದೆ. ಭಾರತಿದಾಸನ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಸಂದರ್ಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು, ಅವರ ಶಿಕ್ಷಕರು ಮತ್ತು ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ವಿಶ್ವವಿದ್ಯಾಲಯವನ್ನು ಸ್ಥಾಪಿಸಿವುದು ಸಾಮಾನ್ಯವಾಗಿ ಶಾಸನಾತ್ಮಕ ಪ್ರಕ್ರಿಯೆಯಾಗಿದೆ, ಕ್ರಮೇಣ ಹೊಸ ಕಾಲೇಜುಗಳು ಸಂಯೋಜಿತವಾಗುತ್ತವೆ, ಜತೆಗೆ ವಿಶ್ವವಿದ್ಯಾಲಯವು ಬೆಳೆಯುತ್ತದೆ, ಆದಾಗ್ಯೂ, ಈ ವಿಶ್ವವಿದ್ಯಾನಿಲಯವನ್ನು ಸದೃಢವಾಗಿ, ಭದ್ರ ಬುನಾದಿ ಹಾಕಿ, ಅಸ್ತಿತ್ವದಲ್ಲಿರುವ ಅನೇಕ ಪ್ರಸಿದ್ಧ ಕಾಲೇಜುಗಳನ್ನು ಒಟ್ಟುಗೂಡಿಸಿ ಭಾರತಿದಾಸನ್ ವಿಶ್ವವಿದ್ಯಾಲಯವನ್ನು ವಿಭಿನ್ನವಾಗಿ ಸ್ಥಾಪಿಸಲಾಗಿದೆ. ಇಲ್ಲಿ ಹಾಕಿರುವ ಭದ್ರ ಬುನಾದಿಯು ವಿಶ್ವವಿದ್ಯಾಲಯವನ್ನು ಅನೇಕ ರಂಗಗಳಲ್ಲಿ ಪ್ರಭಾವಶಾಲಿಯಾಗಿಸಿದೆ.

 

"ನಮ್ಮ ರಾಷ್ಟ್ರ ಮತ್ತು ಅದರ ನಾಗರಿಕತೆಯು ಯಾವಾಗಲೂ ಜ್ಞಾನದ ಸುತ್ತ ಕೇಂದ್ರೀಕೃತವಾಗಿದೆ", ನಳಂದಾ ಮತ್ತು ತಕ್ಷಿಲಾ ಪ್ರಾಚೀನ ವಿಶ್ವವಿದ್ಯಾಲಯಗಳ ಮೇಲೆ ಬೆಳಕು ಚೆಲ್ಲಿದಾಗ ಪ್ರಧಾನಮಂತ್ರಿ, ಕಾಂಚೀಪುರಂ, ಗಂಗೈಕೊಂಡ ಚೋಳಪುರಂ ಮತ್ತು ಮಧುರೈ ಮಹಾನ್ ವಿಶ್ವವಿದ್ಯಾಲಯಗಳಿಗೆ ಇವು ನೆಲೆಯಾಗಿವೆ. ಇವುಗಳಿಗೆ ವಿಶ್ವಾದ್ಯಂತದ ವಿದ್ಯಾರ್ಥಿಗಳು ಆಗಾಗ್ಗೆ ಆಗಮಿಸುತ್ತಾರೆ.

ಘಟಿಕೋತ್ಸವದ ಪರಿಕಲ್ಪನೆಯು ಪ್ರಾಚೀನವಾದುದು ಎಂಬ ಪರಿಕಲ್ಪನೆಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಕವಿಗಳು, ಸಾಧು ಸಂತರು ಮತ್ತು ಬುದ್ಧಿಜೀವಿಗಳು ಕಾವ್ಯ ಮತ್ತು ಸಾಹಿತ್ಯವನ್ನು ವಿಶ್ಲೇಷಣೆಗಾಗಿ ಪ್ರಸ್ತುತಪಡಿಸಿದ ತಮಿಳು ಸಂಗಮಂನ ಉದಾಹರಣೆ ನೀಡಿದರು, ಇದು ಬಹುದೊಡ್ಡ ಸಮಾಜದಿಂದ ಕೃತಿಗಳನ್ನು ಗುರುತಿಸಲು ಕಾರಣವಾಯಿತು. ಈ ತರ್ಕವನ್ನು ಇಂದಿಗೂ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಬಳಸಲಾಗುತ್ತಿದೆ . "ಯುವ ವಿದ್ಯಾರ್ಥಿಗಳು ಜ್ಞಾನದ ಶ್ರೇಷ್ಠ ಐತಿಹಾಸಿಕ ಸಂಪ್ರದಾಯದ ಒಂದು ಭಾಗವಾಗಿದ್ದಾರೆ" ಎಂದು ಅವರು ಹೇಳಿದರು.

 

ರಾಷ್ಟ್ರಕ್ಕೆ ನಿರ್ದೇಶನ ನೀಡುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ರೋಮಾಂಚಕ ವಿಶ್ವವಿದ್ಯಾಲಯಗಳ ಉಪಸ್ಥಿತಿಯಿಂದಾಗಿ ರಾಷ್ಟ್ರ ಮತ್ತು ನಾಗರಿಕತೆಯು ಹೇಗೆ ರೋಮಾಂಚಕವಾಗಿದೆ ಎಂಬುದನ್ನು ಸ್ಮರಿಸಿದರು. ದೇಶವು ದಾಳಿಗೆ ಒಳಗಾದಾಗ ರಾಷ್ಟ್ರದ ಜ್ಞಾನ ವ್ಯವಸ್ಥೆಯನ್ನು ಗುರಿಯಾಗಿಸಲಾಯಿತು.  ಮಹಾತ್ಮ ಗಾಂಧಿ, ಪಂಡಿತ್ ಮದನ್ ಮೋಹನ್ ಮಾಳವೀಯ ಮತ್ತು ಸರ್ ಅಣ್ಣಾಮಲೈ ಚೆಟ್ಟಿಯಾರ್ ಅವರನ್ನು ಪ್ರಸ್ತಾಪಿಸಿದ ಪ್ರಧಾನಿ, ಅವರು 20ನೇ ಶತಮಾನದ ಆರಂಭದಲ್ಲಿ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಿದರು, ಅದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜ್ಞಾನ ಮತ್ತು ರಾಷ್ಟ್ರೀಯತೆಯ ಕೇಂದ್ರವಾಯಿತು. ಅದೇ ರೀತಿ, ಭಾರತದ ಉದಯದ ಹಿಂದಿನ ಒಂದು ಅಂಶವೆಂದರೆ, ವಿಶ್ವವಿದ್ಯಾಲಯಗಳ ಉದಯವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಆರ್ಥಿಕ ಬೆಳವಣಿಗೆಯಲ್ಲಿ ದಾಖಲೆಗಳನ್ನು ಸ್ಥಾಪಿಸುತ್ತಿದೆ, 5ನೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತೀಯ ವಿಶ್ವವಿದ್ಯಾಲಯಗಳು ದಾಖಲೆ ಸಂಖ್ಯೆಯಲ್ಲಿ ಜಾಗತಿಕ ಶ್ರೇಯಾಂಕದಲ್ಲಿ ಗುರುತು ಮಾಡುತ್ತಿವೆ ಎಂದು ಅವರು ಉಲ್ಲೇಖಿಸಿದರು.

ಶಿಕ್ಷಣದ ಉದ್ದೇಶ ಮತ್ತು ಸಮಾಜವು ವಿದ್ವಾಂಸರನ್ನು ಹೇಗೆ ನೋಡುತ್ತದೆ ಎಂಬುದರ ಕುರಿತು ಆಳವಾಗಿ ಯೋಚಿಸುವಂತೆ ಪ್ರಧಾನಿ ಯುವ ವಿದ್ವಾಂಸರಿಗೆ ಮನವಿ ಮಾಡಿದರು. ಶಿಕ್ಷಣವು ಹೇಗೆ ಎಲ್ಲಾ ಅಸ್ತಿತ್ವದೊಂದಿಗೆ ಸಾಮರಸ್ಯದಿಂದ ಬದುಕಲು ಕಲಿಸುತ್ತದೆ ಎಂಬುದರ ಕುರಿತು ಅವರು ಗುರುದೇವ ರವೀಂದ್ರನಾಥ ಠಾಗೋರ್ ಅವರನ್ನು ಉಲ್ಲೇಖಿಸಿದರು. ವಿದ್ಯಾರ್ಥಿಗಳನ್ನು ಇಂದಿನವರೆಗೆ ಕರೆತರುವಲ್ಲಿ ಇಡೀ ಸಮಾಜ ಪಾತ್ರ ವಹಿಸಿದೆ. ಉತ್ತಮ ಸಮಾಜ ಮತ್ತು ದೇಶವನ್ನು ನಿರ್ಮಿಸುವ ಮೂಲಕ ಅವರಿಗೆ ಮರಳಿ ನೀಡುವ ಮಹತ್ವವನ್ನು ಒತ್ತಿ ಹೇಳಿದರು. “ಒಂದು ರೀತಿಯಲ್ಲಿ, ಇಲ್ಲಿನ ಪ್ರತಿಯೊಬ್ಬ ಪದವೀಧರರು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬಹುದು ಎಂದರು.

 

2047ರ ವರೆಗಿನ ವರ್ಷವನ್ನು ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವರ್ಷವನ್ನಾಗಿ ಮಾಡುವ ಯುವಜನರ ಸಾಮರ್ಥ್ಯದ ಬಗ್ಗೆ ತಮ್ಮ ವಿಶ್ವಾಸವನ್ನು ಪ್ರಧಾನಿ ಪುನರುಚ್ಚರಿಸಿದರು. ವಿಶ್ವವಿದ್ಯಾಲಯದ ಧ್ಯೇಯವಾಕ್ಯ ಉಲ್ಲೇಖಿಸಿದ ಅವರು - ‘ನಾವು ಬ್ರೇವ್ ನ್ಯೂ ವರ್ಲ್ಡ್ ಅನ್ನು ನಿರ್ಮಿಸೋಣ, ಭಾರತೀಯ ಯುವಜನರು ಈಗಾಗಲೇ ಅಂತಹ ಜಗತ್ತನ್ನು ಸೃಷ್ಟಿಸಿದ್ದಾರೆ. ಸಾಂಕ್ರಾಮಿಕ ರೋಗ, ಚಂದ್ರಯಾನ ಮತ್ತು 2014ರಲ್ಲಿ 4,000ದಿಂದ ಇದೀಗ ಸುಮಾರು 50,000 ಹಕ್ಕುಸ್ವಾಮ್ಯಗಳ ಸಂಖ್ಯೆ ಹೆಚ್ಚಳ ಕಂಡಿದೆ. ಲಸಿಕೆಗಳನ್ನು ತಯಾರಿಸುವಲ್ಲಿ ಯುವ ಭಾರತೀಯರ ಕೊಡುಗೆಯನ್ನು ಅವರು ಪಟ್ಟಿ ಮಾಡಿದರು. ಭಾರತದ ಮಾನವಿಕ ವಿದ್ವಾಂಸರು ಹಿಂದೆಂದಿಗಿಂತಲೂ ಭಾರತದ ಕಥೆಯನ್ನು ಪ್ರದರ್ಶಿಸುತ್ತಿದ್ದಾರೆ. ಕ್ರೀಡಾಪಟುಗಳು, ಸಂಗೀತಗಾರರು, ಕಲಾವಿದರ ಸಾಧನೆಗಳನ್ನು ಅವರು ಎತ್ತಿ ತೋರಿಸಿದರು. "ಪ್ರತಿಯೊಂದು ವಲಯದಲ್ಲಿಯೂ ಎಲ್ಲರೂ ಹೊಸ ಭರವಸೆಯಿಂದ ನಿಮ್ಮನ್ನು ನೋಡುತ್ತಿರುವಾಗ ನೀವು ಜಗತ್ತನ್ನು ಪ್ರವೇಶಿಸುತ್ತಿದ್ದೀರಿ" ಎಂದು ಅವರು ಹೇಳಿದರು.

“ಯೌವನ ಎಂದರೆ ಶಕ್ತಿ. ಇದರರ್ಥ ವೇಗ, ಕೌಶಲ್ಯ ಮತ್ತು ಪ್ರಮಾಣದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ”. ಕಳೆದ ಕೆಲವು ವರ್ಷಗಳಲ್ಲಿ ಅದೇ ವೇಗ ಮತ್ತು ಪ್ರಮಾಣದೊಂದಿಗೆ ವಿದ್ಯಾರ್ಥಿಗಳನ್ನು ಕೂಡಿಸಲು ಸರ್ಕಾರವು ಕೆಲಸ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ, ದೇಶದ ವಿಮಾನ ನಿಲ್ದಾಣಗಳನ್ನು 74ರಿಂದ ಸುಮಾರು 150ಕ್ಕೆ ದ್ವಿಗುಣಗೊಳಿಸಲಾಗಿದೆ. ಎಲ್ಲಾ ಪ್ರಮುಖ ಬಂದರುಗಳ ಸರಕು ನಿರ್ವಹಣೆ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಹೆದ್ದಾರಿಗಳ ನಿರ್ಮಾಣದ ವೇಗ ಮತ್ತು ಪ್ರಮಾಣವನ್ನು ದ್ವಿಗುಣಗೊಳಿಸಲಾಗಿದೆ. ಸ್ಟಾರ್ಟಪ್‌ಗಳ ಸಂಖ್ಯೆ ಹೆಚ್ಚಳವನ್ನು ಪ್ರಧಾನಿ ಪ್ರಸ್ತಾಪಿಸಿದರು. 2014ರಲ್ಲಿ 100ಕ್ಕಿಂತ ಕಡಿಮೆ ಇದ್ದ ಸ್ಟಾರ್ಟಪ್ ಗಳ ಸಂಖ್ಯೆ ಇದೀಗ ಸುಮಾರು 1 ಲಕ್ಷಕ್ಕೆ ಬೆಳೆಯುತ್ತಿದೆ. ಭಾರತವು ಪ್ರಮುಖ ಆರ್ಥಿಕತೆಗಳೊಂದಿಗೆ ಹಲವಾರು ವ್ಯಾಪಾರ ಒಪ್ಪಂದಗಳನ್ನು ಸಾಧಿಸುವ ಮೂಲಕ ಭಾರತದ ಸರಕು ಮತ್ತು ಸೇವೆಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವ ಮೂಲಕ ಯುವಜನರಿಗೆ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸಲಾಗಿದೆ. ಜಿ-20ರಂತಹ ಸಂಸ್ಥೆಗಳನ್ನು ಬಲಪಡಿಸುವುದು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ದೊಡ್ಡ ಪಾತ್ರ ವಹಿಸಿರುವುದನ್ನು ಪ್ರಸ್ತಾಪಿಸಿದ ಅವರು, ಪ್ರತಿ ಜಾಗತಿಕ ಪರಿಹಾರದ ಭಾಗವಾಗಿ ಭಾರತವನ್ನು ಸ್ವಾಗತಿಸಲಾಗುತ್ತಿದೆ. "ಅನೇಕ ವಿಧಗಳಲ್ಲಿ, ಸ್ಥಳೀಯ ಮತ್ತು ಜಾಗತಿಕ ಅಂಶಗಳಿಂದಾಗಿ, ಭಾರತದಲ್ಲಿ ಯುವಕ(ಯುವಶಕ್ತಿ)ರಾಗಲು ಇದು ಅತ್ಯುತ್ತಮ ಸಮಯ"ವಾಗಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೀವೆಲ್ಲಾ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.

 

ವಿಶ್ವವಿದ್ಯಾಲಯದ ನಿಮ್ಮೆಲ್ಲರ ಪಯಣ ಇಂದಿಗೆ ಮುಕ್ತಾಯವಾಗುತ್ತಿರುವುದನ್ನು ಗಮನಿಸಿದ ಪ್ರಧಾನಿ, ಆದರೆ ಕಲಿಕೆಯ ಪಯಣಕ್ಕೆ ಅಂತ್ಯವಿಲ್ಲ.  "ಜೀವನವೇ ಈಗ ನಿಮ್ಮ ಗುರುವಾಗುತ್ತದೆ". ನಿರಂತರ ಕಲಿಕೆಯ ಉತ್ಸಾಹದಲ್ಲಿ ಕಲಿಕೆ ಮುಂದುವರಿಸುವುದು, ಮರುಕೌಶಲ್ಯ ಮತ್ತು ಕೌಶಲ್ಯ ಬಲವರ್ಧನೆಗೆ ಪೂರ್ವಭಾವಿಯಾಗಿ ಕೆಲಸ ಮಾಡುವುದು ಮುಖ್ಯ. "ಶೀಘ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಒಂದೋ ನೀವು ಬದಲಾವಣೆಯನ್ನು ಚಾಲನೆ ಮಾಡುತ್ತೀರಿ ಅಥವಾ ಬದಲಾವಣೆಯು ನಿಮ್ಮನ್ನು ಪ್ರೇರೇಪಿಸುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

 

ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲ ಮತ್ತು ಭಾರತಿದಾಸನ್ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಆರ್ ಎನ್ ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ ಕೆ ಸ್ಟಾಲಿನ್, ಉಪಕುಲಪತಿ ಡಾ ಎಂ ಸೆಲ್ವಂ ಮತ್ತು ಚಾನ್ಸಲರ್ ಪ್ರೊ ಶ್ರೀ ಆರ್ ಎಸ್ ರಾಜಕಣ್ಣಪ್ಪನ್ ಉಪಸ್ಥಿತರಿದ್ದರು.  ತಿರುಚಿರಾಪಳ್ಳಿಯಲ್ಲಿರುವ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಲು ಸಂತಂಸವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian Constitution as an aesthetic document

Media Coverage

Indian Constitution as an aesthetic document
NM on the go

Nm on the go

Always be the first to hear from the PM. Get the App Now!
...
PM Modi congratulates Shri Devendra Fadnavis on taking oath as Maharashtra's Chief Minister
December 05, 2024
Congratulates Shri Eknath Shinde and Shri Ajit Pawar on taking oath as Deputy Chief Ministers
Assures all possible support from Centre in furthering development in Maharashtra

The Prime Minister, Shri Narendra Modi has congratulated Shri Devendra Fadnavis on taking oath as Chief Minister of Maharashtra. He also congratulated Shri Eknath Shinde and Shri Ajit Pawar on taking oath as Deputy Chief Ministers. Shri Modi assured all possible support from the Centre in furthering development in Maharashtra.

The Prime Minister posted on X:

“Congratulations to Shri Devendra Fadnavis Ji on taking oath as Maharashtra's Chief Minister.

Congratulations to Shri Eknath Shinde Ji and Shri Ajit Pawar Ji on taking oath as the Deputy Chief Ministers of the state.

This team is a blend of experience and dynamism, and it is due to this team's collective efforts that the Mahayuti has got a historic mandate in Maharashtra. This team will do everything possible to fulfil the aspirations of the people of the state and to ensure there is good governance.

I assure all possible support from the Centre in furthering development in Maharashtra.”