"ಆರೋಗ್ಯ ಸೌಲಭ್ಯಗಳ ಆಧುನೀಕರಣ ಮತ್ತು ಲಭ್ಯತೆಯು ಬಡವರ ಸಬಲೀಕರಣ ಮತ್ತು ಸುಗಮ ಜೀವನಕ್ಕೆ ನಿರ್ಣಾಯಕ"
"ಗುಜರಾತ್ ನಲ್ಲಿನ ನನ್ನ ಅನುಭವವು ಇಡೀ ದೇಶದ ಬಡವರ ಸೇವೆ ಮಾಡಲು ಸಹಾಯ ಮಾಡಿದೆ
"ಸೇವೆಯನ್ನು ದೇಶದ ಶಕ್ತಿಯನ್ನಾಗಿ ಮಾಡಿದ ಬಾಪೂ ಅವರಂತಹ ಮಹಾನ್ ವ್ಯಕ್ತಿಗಳ ಸ್ಫೂರ್ತಿಯನ್ನು ನಾವು ಪಡೆದಿದ್ದೇವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವಸಾರಿಯಲ್ಲಿ ಎ.ಎಂ ನಾಯಕ್ ಆರೋಗ್ಯ ಆರೈಕೆ ಸಂಕೀರ್ಣ ಮತ್ತು ನಿರಾಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಅವರು ಖರೇಲ್ ಶಿಕ್ಷಣ ಸಮುಚ್ಚಯವನ್ನೂ ವರ್ಚುವಲ್ ಆಗಿ ಅವರು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರಲ್ಲಿ ಸೇರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ನವಸಾರಿಗೆ ಈ ಪ್ರದೇಶದ ಜನರ ಜೀವನವನ್ನು ಸುಗಮಗೊಳಿಸುವ ಅನೇಕ ಯೋಜನೆಗಳು ಬಂದಿವೆ ಎಂದರು. ವೈಯಕ್ತಿಕ ದುರಂತವನ್ನು ಅವಕಾಶವಾಗಿ ಪರಿವರ್ತಿಸಿ ಬೇರೆ ಯಾವುದೇ ಕುಟುಂಬವು ಇಂತಹ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳುತ್ತಿರುವ ನಿರಾಲಿ ಟ್ರಸ್ಟ್ ಮತ್ತು ಶ್ರೀ ಎ.ಎಂ.ನಾಯಕ್ ಅವರ ಉತ್ಸಾಹವನ್ನು ಅವರು ಶ್ಲಾಘಿಸಿದರು ಮತ್ತು ಆಧುನಿಕ ಆರೋಗ್ಯ ಸಂಕೀರ್ಣ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನವಸಾರಿಯ ಜನರನ್ನು ಅಭಿನಂದಿಸಿದರು.

ಬಡವರ ಸಬಲೀಕರಣ ಮತ್ತು ಸುಗಮ ಜೀವನಕ್ಕೆ ಆಧುನೀಕರಣ ಮತ್ತು ಆರೋಗ್ಯ ಸೌಲಭ್ಯಗಳ ಲಭ್ಯತೆ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ದೇಶದ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ನಾವು ಕಳೆದ 8 ವರ್ಷಗಳಲ್ಲಿ ಸಮಗ್ರ ವಿಧಾನದ ಮೇಲೆ ಗಮನ ಹರಿಸಿದ್ದೇವೆ" ಎಂದು ಅವರು ಹೇಳಿದರು. ಚಿಕಿತ್ಸಾ ಸೌಲಭ್ಯಗಳ ಆಧುನೀಕರಣದ ಜೊತೆಗೆ, ಪೌಷ್ಟಿಕಾಂಶ ಮತ್ತು ಸ್ವಚ್ಛ ಜೀವನಶೈಲಿಯನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು. "ಬಡವರು ಮತ್ತು ಮಧ್ಯಮ ವರ್ಗದವರನ್ನು ರೋಗಗಳಿಂದ ರಕ್ಷಿಸುವ ಗುರಿಯನ್ನು ನಾವು ಹೊಂದಿದ್ದೇವೆ ಮತ್ತು ರೋಗದ ಸಂದರ್ಭದಲ್ಲಿ, ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು. ಗುಜರಾತ್ ನ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೂಚ್ಯಂಕಗಳಲ್ಲಿನ ಸುಧಾರಣೆಯಿಂದಾಗಿ, ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದರು.

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ವಾಸ್ಥ್ಯ ಗುಜರಾತ್, ಉಜ್ವಲ್ ಗುಜರಾತ್, ಮುಖ್ಯಮಂತ್ರಿ ಅಮೃತಂ ಯೋಜನೆ ಮುಂತಾದ ಯೋಜನೆಗಳಿಗೆ ಚಾಲನೆ ನೀಡಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಅನುಭವವು ಇಡೀ ದೇಶದ ಬಡವರಿಗೆ ಸೇವೆ ಸಲ್ಲಿಸಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಗುಜರಾತ್ ನಲ್ಲಿ 41 ಲಕ್ಷ ರೋಗಿಗಳು ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದಿದ್ದಾರೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು, ವಂಚಿತರು ಮತ್ತು ಬುಡಕಟ್ಟು ಜನರು ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯು 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ರೋಗಿಗಳನ್ನು ಉಳಿಸಿದೆ. ಗುಜರಾತ್ ನಲ್ಲಿ 7.5 ಸಾವಿರಕ್ಕೂ ಹೆಚ್ಚು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಮತ್ತು 600 'ದೀನ್ ದಯಾಳ್ ಔಷಧಾಲಯ' ಕೇಂದ್ರಗಳಿವೆ. ಗುಜರಾತ್ ನ ಸರ್ಕಾರಿ ಆಸ್ಪತ್ರೆಗಳು ಕ್ಯಾನ್ಸರ್ ನಂತಹ ರೋಗಗಳ ಸುಧಾರಿತ ಚಿಕಿತ್ಸೆಯನ್ನು ನೀಡಲು ಸಜ್ಜುಗೊಂಡಿವೆ. ಭಾವನಗರ, ಜಾಮ್ ನಗರ್, ರಾಜ್ಕೋಟ್ ಮುಂತಾದ ಅನೇಕ ನಗರಗಳು ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯಗಳನ್ನು ಕಂಡಿವೆ. ಮೂತ್ರಪಿಂಡ ಚಿಕಿತ್ಸೆಗೆ ಸಂಬಂಧಿಸಿದಂತೆಯೂ ರಾಜ್ಯದಲ್ಲಿ ಮೂಲಸೌಕರ್ಯಗಳ ಅದೇ ವಿಸ್ತರಣೆ ಕಂಡುಬರುತ್ತದೆ ಎಂದರು.

ಪ್ರಧಾನಮಂತ್ರಿಯವರು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೌಷಅಟಿಕಾಂಶ ಮಾನದಂಡಗಳ ಸುಧಾರಣೆಯ ಬಗ್ಗೆಯೂ ಮಾತನಾಡಿದರು. ಸಾಂಸ್ಥಿಕ ಹೆರಿಗೆಗಾಗಿ ಚಿರಂಜೀವಿ ಯೋಜನೆಯನ್ನು ಉಲ್ಲೇಖಿಸಿದ ಅವರು, ಇದು 14 ಲಕ್ಷ ತಾಯಂದಿರಿಗೆ ಪ್ರಯೋಜನವನ್ನು ನೀಡಿದೆ ಎಂದರು. ಗುಜರಾತ್ ನ ಚಿರಂಜೀವಿ ಮತ್ತು ಖಿಖಿಲಾಹತ್ ಯೋಜನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಇಂದ್ರಧನುಷ್ ಅಭಿಯಾನ ಮತ್ತು ಪಿಎಂ ಮಾತೃ ವಂದನಾ ಯೋಜನೆಯಾಗಿ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸುಧಾರಿಸುವ ಕ್ರಮಗಳನ್ನು ಸಹ ಪಟ್ಟಿ ಮಾಡಿದರು. ರಾಜ್ ಕೋಟ್ ನಲ್ಲಿ ಏಮ್ಸ್ ಬರುತ್ತಿದ್ದು, ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 30ಕ್ಕೆ ತಲುಪಿದೆ ಮತ್ತು ಎಂಬಿಬಿಎಸ್ ಸೀಟುಗಳ ಸಂಖ್ಯೆ 1100 ರಿಂದ 5700ಕ್ಕೆ ಮತ್ತು ಪಿಜಿ ಸೀಟುಗಳ ಸಂಖ್ಯೆ ಕೇವಲ 800 ರಿಂದ 2000 ಕ್ಕೆ ಹೆಚ್ಚಾಗಿದೆ ಎಂದರು.

ಪ್ರಧಾನಮಂತ್ರಿಯವರು ಗುಜರಾತಿನ ಜನತೆಯ ಸೇವಾ ಮನೋಭಾವಕ್ಕೆ ವಂದಿಸುವ ಮೂಲಕ ತಮ್ಮ ಮಾತು ಪೂರ್ಣಗೊಳಿಸಿದ ಪ್ರಧಾನಮಂತ್ರಿಯವರು, "ಗುಜರಾತಿನ ಜನರಿಗೆ, ಆರೋಗ್ಯ ಮತ್ತು ಸೇವೆ ಜೀವನದ ಗುರಿಗಳಾಗಿವೆ. ಸೇವೆಯನ್ನು ದೇಶದ ಶಕ್ತಿಯನ್ನಾಗಿ ಮಾಡಿದ ಬಾಪು ಅವರಂತಹ ಮಹಾನ್ ವ್ಯಕ್ತಿಗಳ ಉತ್ಸಾಹ ನಮಗೆ ಇದೆ. ಗುಜರಾತಿನ ಈ ಚೈತನ್ಯವು ಇನ್ನೂ ಶಕ್ತಿಯಿಂದ ತುಂಬಿದೆ. ಇಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಯು ಸಹ ಕೆಲವು ಸೇವಾ ಕಾರ್ಯಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಗುಜರಾತ್ ನ ಚೇತನ ಸೇವೆಯು ಅದರ ಸಾಮರ್ಥ್ಯದ ಹೆಚ್ಚಳದೊಂದಿಗೆ ಹೆಚ್ಚಾಗುತ್ತದೆ ಎಂದೂ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India outpaces global AI adoption: BCG survey

Media Coverage

India outpaces global AI adoption: BCG survey
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಜನವರಿ 2025
January 17, 2025

Appreciation for PM Modi’s Effort taken to Blend Tradition with Technology to Ensure Holistic Growth