ಶೇರ್
 
Comments
We must ensure affordable & quality healthcare for all: PM Modi
Land of Kashi is of spiritual importance and has tremendous tourism potential: PM Modi
Let us make sports an essential part of our lives: PM Modi

ಕಾಶಿಯಲ್ಲಿ ಇಂದು ಲೋಕಾರ್ಪಣೆ, ಶಿಲಾನ್ಯಾಸ ಮತ್ತು ಪ್ರೋತ್ಸಾಹ ಸಮರ್ಪಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಇಂದು ಒಂದೇ ದಿನದಲ್ಲಿ 2100 ಕೋಟಿ ರೂಪಾಯಿಗಳ ಮೊತ್ತದ ವಿವಿಧ ಕಾರ್ಯಕ್ರಮಗಳನ್ನು ಕಾಶಿ ಪಡೆಯುತ್ತಿದೆ. ಆರೋಗ್ಯರಕ್ಷಣೆ ಅದರಲ್ಲೂ ಬಡವರಲ್ಲೇ ಬಡವರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಆರೋಗ್ಯ ರಕ್ಷಣೆ ಸೇವೆಗಳು ದೊರಕಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅವರ ಆರೋಗ್ಯ ರಕ್ಷಣೆಗೆ ಆಧುನಿಕ ಸೌಲಭ್ಯಗಳನ್ನು ಲಾಭ ದೊರಕಬೇಕು ಎಂದು, ಇಎಸ್.ಐ.ಸಿ. ಆಸ್ಪತ್ರೆಯ ಆಧುನೀಕರಣ ಮಾಡುವ, ಹಿಂದೆ ಎಷ್ಟು ಸಾಮರ್ಥ್ಯ ಇತ್ತೋ, ಅದಕ್ಕಿಂತ ಎರಡರಷ್ಟು ಸಾಮರ್ಥ್ಯ ಹೆಚ್ಚಳ ಮಾಡುವ, ಆಧುನಿಕತೆಯ ಜೊತೆಗೆ ಬಡವರಲ್ಲೇ ಬಡ, ಸಾಮಾನ್ಯ ಕೂಲಿ ಕಾರ್ಮಿಕರಿಗೆ, ನಾಳೆ ಕಾರ್ಖಾನೆಯಲ್ಲಿ ತನ್ನ ಜೀವನ ಕಳೆಯುವ ವ್ಯಕ್ತಿಗೆ, ಅಂಥ ವ್ಯಕ್ತಿಗಳಿಗೆ ಆರೋಗ್ಯ ಸೇವೆ ದೊರಕಬೇಕು, ಇದಕ್ಕಾಗಿ ಭಾರತ ಸರ್ಕಾರವು, ಈ ಪೂರ್ಣ ಯೋಜನೆಯನ್ನು ಕೈಗೆತ್ತಿಕೊಂಡು, ಇಲ್ಲಿನ ಬಡವರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ವ್ಯವಸ್ಥೆಯಲ್ಲಿ ಏನು ಬದಲಾವಣೆ ಆಗುತ್ತಿದೆ, ವಿಸ್ತಾರವಾಗುತ್ತಿದೆ, ಆಧುನಿಕ ತಂತ್ರಜ್ಞಾನ, ವಿಜ್ಞಾನವನ್ನು ಜೋಡಿಸುವ ಪ್ರಯತ್ನ ನಡೆಯುತ್ತಿದೆ, ಆರೋಗ್ಯ ಕ್ಷೇತ್ರದಲ್ಲಿ ಒಂದು ಹೊಸ ನೋಟ ಆಯಾಮ ಕಾಣುತ್ತದೆ ಎಂಬ ವಿಶ್ವಾಸ ನನಗಿದೆ.

ನಾನು ಕಾಶಿಯಲ್ಲಿ ಬನಾರಸ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ, ಅಲ್ಲಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಿದೆ. ಈ ಕ್ಷೇತ್ರದಲ್ಲಿ ವಾಸಿಸುವ ಜನರು ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಮುಂಬೈಗೆ ಹೋಗಬೇಕಾಗಿತ್ತು. ಮುಂಬೈ ಸುಸಜ್ಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ದೊರಕಲು ಎಷ್ಟು ದೀರ್ಘ ಸಮಯ ಕಾಯಬೇಕು ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಮುಂಬೈ ರೀತಿಯಲ್ಲೇ ಉತ್ತರ ಪ್ರದೇಶದಲ್ಲಿ ಕೂಡ ಏಕೆ ಕ್ಯಾನ್ಸರ್ ಕಾಯಿಲೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸುಸಜ್ಜಿತ, ಉತ್ತಮ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆ ಇರಬೇಕು. ಇದರ ಲಾಭ ಪಕ್ಕದ ಜಾರ್ಖಂಡ್, ಬಿಹಾರದ ಜನತೆಗೂ ದೊರಕಬೇಕು ಎಂಬ ಉದ್ದೇಶದಿಂದ ಇಂದು ಬನಾರಸ್ ವಿಶ್ವವಿದ್ಯಾಲಯದಲ್ಲಿ ನಾನು ಇಂದು ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದೇನೆ. ಇದು ಇಡೀ ಪ್ರದೇಶಕ್ಕೆ ದೊಡ್ಡ ರೀತಿಯಲ್ಲಿ ಉಪಯೋಗವಾಗಲಿದೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಮಾದರಿ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಎಷ್ಟು ಮಹತ್ವವಾದ್ದು ಎಂಬುದು ನಿಮಗೆ ತಿಳಿದಿದೆ. ಈ ಪ್ರದೇಶದಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತದ ಅಂಥ ಒಬ್ಬ ಪುತ್ರ ಶ್ರೀಮಾನ್ ಶೆಟ್ಟಿ ಅವರು ಒಬ್ಬರು. ಅವರು ಕರ್ನಾಟಕದವರು, ಆದರೆ ಗಲ್ಫ್ ರಾಷ್ಟ್ರದಲ್ಲಿ ನೆಲೆಸಿದ್ದಾರೆ. ಆದರೆ ಅವರು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಆಸ್ಪತ್ರೆಗಳು ದೇಶದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿವೆ. ಕಾಶಿಯಿಂದ ಆಕರ್ಷಿತರಾದ ಅವರು ಕಾಶಿಯಲ್ಲಿ ಒಂದು ಖಾಸಗಿ ಆಸ್ಪತ್ರೆಯನ್ನು ಆರಂಭಿಸುತ್ತಿದ್ದಾರೆ. ಇಂದು ನನಗೆ ಆ ಆಸ್ಪತ್ರೆಗೂ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ದೊರಕಿತು. 500 ಹಾಸಿಗೆಗಳ ಬೃಹತ್ ಆಸ್ಪತ್ರೆ ನಿಜಕ್ಕೂ ಕಾಶಿಗೆ ಒಂದು ಕೊಡುಗೆಯೇ ಸರಿ. ಈ 500 ಹಾಸಿಗೆಗಳ ಆಸ್ಪತ್ರೆಯಲ್ಲಿ 200 ಹಾಸಿಗೆಗಳು ಸಂಪೂರ್ವಾಗಿ ಬಡ ರೋಗಿಗಳಿಗೇ ಮೀಸಲಾಗಿದೆ. ಇನ್ನು ಉಳಿದ 300 ಹಾಸಿಗೆಗಳ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲಿದೆ. ಒಂದು ರೀತಿಯಲ್ಲಿ ಬಡವರ ಸೇವೆ ಮಾಡುವ ಜೊತೆಗೆ ಇಷ್ಟು ದೊಡ್ಡ ಆಸ್ಪತ್ರೆ ನಿರ್ಮಿಸುವುದರಿಂದ ಸಾವಿರಾರು ಯುವಜನರಿಗೆ ಉದ್ಯೋಗಾವಕಾಶವೂ ಲಭಿಸಲಿದೆ.ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೂ ಅನುಕೂಲ ಆಗಲಿದೆ. ಅರೆ ವೈದ್ಯಕೀಯ ಸಿಬ್ಬಂದಿ ಇರಲಿ, ನರ್ಸಿಂಗ್ ಸಿಬ್ಬಂದಿಯೇ ಇರಲಿ ಮತ್ತು ಆಸ್ಪತ್ರೆಯ ನಿರ್ವಹಣೆ ಸಿಬ್ಬಂದಿಯೇ ಇರಲಿ ಒಟ್ಟಾರೆ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡುವ ಕೌಶಲ ಅಭಿವೃದ್ದಿಯೂ ಆಗಲಿದೆ. ಇಷ್ಟು ದೊಡ್ಡ ಬಂಡವಾಳ ಹೂಡಿಕೆಯು ಪ್ರದೇಶಕ್ಕೆ ದೊಡ್ಡ ಪ್ರಯೋಜನ ತರಲಿದೆ.

ಈ ಮಧ್ಯೆ ಇಂದು ನನಗೆ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಅವಕಾಶ ದೊರೆತಿದೆ. ಇನ್ನು ಮುಂದೆ ನಮ್ಮ ಸಚಿವರಾದ ಸ್ಮೃತಿ ಇರಾನಿ ಅವರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಹೃತ್ಫೂರ್ವಕವಾಗಿ ಈ ಯೋಜನೆಗಳನ್ನು ಮುಂದೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಈಗಾಗಲೇ ಅವರ ನಿರಂತರ ಶ್ರಮದ ಫಲವಾಗಿ ಅತಿ ಅಲ್ಪಾವಧಿಯಲ್ಲೇ, ನನಗೆ ಅವುಗಳ ಪ್ರಥಮ ಹಂತದ ಯೋಜನೆಗಳನ್ನು ಉದ್ಘಾಟಿಸುವ ಅವಕಾಶವೂ ದೊರಕಿದೆ. ನಾನು ಹೃದಯಪೂರ್ವಕವಾಗಿ ಸ್ಮೃತಿಜೀ ಹಾಗೂ ಈ ಇಲಾಖೆಯ ಸಚಿವರಾದ ಗಂಗ್ವಾರ್ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಷ್ಟು ವೇಗವಾಗಿ, ಇಷ್ಟು ಉತ್ತಮವಾಗಿ ಕಾರ್ಯ ಮಾಡಿದ ಎಲ್ಲರಿಗೂ ಅಭಿನಂದನೆಗಳು. ಪ್ರಥಮ ಹಂತದ ಯೋಜನೆಯು ಇಂದು ಪೂರ್ಣವಾಗಿರುವುದು ಕೇವಲ ಕಾಶಿಯ ಜನತೆಗೆ ಮಾತ್ರವೇ ಅಲ್ಲ, ಜೊತೆಗೆ ಇಡೀ ಪ್ರದೇಶದ ಜನತೆಗೆ ಅನುಕೂಲವಾಗಲಿದೆ. ಇದರಿಂದ ದೊಡ್ಡ ಸಂಖ್ಯೆಯ ಜನರು ಪ್ರಯೋಜನ ಪಡೆಯಲಿದ್ದಾರೆ. ಕಾಶಿ ಒಂದು ಪವಿತ್ರ ಪ್ರವಾಸಿ ತಾಣವಾಗಿದೆ. ಕಾಶಿಯಲ್ಲಿ ಇಂಥ ಸೌಲಭ್ಯಗಳು ಇರುವುದು ಕಾಶಿಗೆ ಒಂದು ಜಾಗತಿಕ ಪರಿಚಯ ಒದಗಿಸುತ್ತದೆ, ಆಧಾರವಾಗುತ್ತದೆ. ಈಗ ಟ್ಸಾಕ್ಸಿ ಮತ್ತು ರಿಕ್ಷಾ ಚಾಲಕರಿಗೆ ಇದರ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ, ಆಗ ಅವರು ಕಾಶಿ ಭೇಟಿ ನೀಡುವವರನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕಿ. ಈ ಮೂಲಕ ಸ್ಥಳೀಯ ಜನರ ಕಲೆ, ಕೌಶಲ ಹಾಗೂ ಅವರ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇದು ಜಾಗತಿಕವಾಗಿ ಕಾಶಿ ಗುರುತಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದರಿಂದ ಅವರಿಗೆ ಕಾಶಿಯ ಜನತೆ ಹೇಗೆ ತಮ್ಮ ಶ್ರೇಷ್ಠ ಬಾರತದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂಬುದು ತಿಳಿಯುತ್ತದೆ. ಈ ವಾಣಿಜ್ಯ ಕೇಂದ್ರ ಮತ್ತು ವಸ್ತು ಪ್ರದರ್ಶನದ ಗುರಿಯೇ ಇಡೀ ವಿಶ್ವಕ್ಕೆ ಇದರ ಪರಿಚಯ ಮಾಡಿಸುವುದಾಗಿದೆ. ಕೆಲವು ಜನರು ನನಗೆ ಇಲ್ಲಿನ ಕೆಲವು ಚಿತ್ರಗಳನ್ನು ಕಳುಸಿದ್ದಾರೆ. ಅವು ಅತ್ಯಂತ ಅಪರೂಪದ ಚಿತ್ರಗಳು. ಇಷ್ಟು ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಈಗ ಈ ಆಧುನಿಕ ಕಟ್ಟಡದೊಂದಿಗೆ ಮತ್ತು ಆಧುನಿಕ ಕಲೆಯೊಂದಿಗೆ ಈ ಪುರಾತನ ನಗರಿಗೆ ಆಧುನಿಕ ಪರಿಚಯ ಲಭಿಸುತ್ತದೆ. ಈ ಉಪಕ್ರಮದೊಂದಿಗೆ ಇಡೀ ವಿಶ್ವ ಸೂಕ್ತವಾಗಿ ಮತ್ತು ಸಾಮಿಪ್ಯದಿಂದ ಜವಳಿಯ ವಿಧಗಳನ್ನು, ವೈವಿಧ್ಯತೆಯನ್ನು, ಕರಕುಶಲ ವಸ್ತುಗಳನ್ನು ಮತ್ತು ಈ ನೆಲದ ಜನರ ಸಾಮರ್ಥ್ಯ ಮತ್ತು ಬೆರಳ ತುದಿಯಲ್ಲೇ ಹೊಸ ವಸ್ತುಗಳನ್ನು ಸೃಷ್ಟಿಸುವ ಕೈಚಳಕವನ್ನು ಗಮನಿಸುವ ಮತ್ತು ಗುರುತಿಸಬಹುದಾಗಿದೆ. ಇದೆಲ್ಲವೂ ವಿಶೇಷವಾಗಿ ಕಾಶಿಯ ಪರಿಚಯವಾಗಿವೆ.

ನಾವು ಪುರಾತನ ರೀತಿಯ ಸಂಪನ್ಮೂಲದಿಂದ ಸಜ್ಜಾಗಿದ್ದೇವೆ ಮತ್ತು ಈಗ ಅದಕ್ಕ ಬದಲಾವಣೆ ತರುವ ಅಗತ್ಯವಿದೆ. ತಾಂತ್ರಿಕ ಮಧ್ಯಪ್ರವೇಶ ಮತ್ತು ಸಂಶೋಧನೆಗಳ ಅಗತ್ಯವೂ ಇದೆ. ಇಂದು ನನಗೆ ಕೆಲವು ಸ್ನೇಹಿತರಿಗೆ ಕೈಮಗ್ಗಗಳನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡುವ ಅವಕಾಶ ದೊರಕಿತು. ವಿವಿಧ ಕೈಮಗ್ಗಗಳನ್ನು ಬಳಕೆದಾರರ ಸ್ನೇಹಿಗೊಳಿಸಲು, ಹೆಚ್ಚು ಉತ್ಪಾದನೆ ಹಾಗೂ ಆದಾಯ ಹೆಚ್ಚಿಸಲು ಅವುಗಳಿಗೆ ಆಧುನಿಕ ತಂತ್ರಜ್ಞಾನವನ್ನು ಸೇರಿಸುವುದಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಗುರುತಿನ ಚೀಟಿಗಳನ್ನು ನೀಡುವ ಆಂದೋಲನ ದೇಶದಾದ್ಯಂತ ನಡೆಯುತ್ತಿದೆ. ನಮ್ಮ ದೇಶದಲ್ಲಿ ದೊಡ್ಡ ಸಾಮರ್ಥ್ಯ ಇದೆ. ಆದರೆ ಅದು ಚದುರಿಹೋಗಿದೆ. ಇಂತ ಕೆಲಸ ಮಾಡುವವ ಗುರುತೂ ಸಿಗುವುದಿಲ್ಲ,  ಅಥವಾ ಅವರ ಬಗ್ಗೆ ದಾಖಲೆಗಳಾಗಳೂ ಲಭ್ಯವಾಗುವುದಿಲ್ಲ. ಇಂಥ ಗುರುತಿಸುವಿಕೆಯ ಕೊರತೆ ನಮಗೆ ದೊಡ್ಡ ನಷ್ಟ ಉಂಟು ಮಾಡಿದೆ. ಮತ್ತೊಂದೆಡೆ,  ಯಾರಿಗೆ ಹೆಸರು ಬರುತ್ತದೋ, ಯಾರಿಗೆ ಬ್ರಾಂಡ್ ಸಿಗುತ್ತದೋ ಅದರ ಮೌಲ್ಯ ತಂತಾನೆ ಹೆಚ್ಚಾಗುತ್ತದೆ. ಭಾರತದಲ್ಲಿ ಬಡವರಲ್ಲೇ ಬಡವ್ಯಕ್ತಿಗೆ ಕೌಶಲ ಇದೆಯೋ, ಕಲೆ ಇದೆಯೋ, ಕೆಲಸ ಮಾಡುವ ಉತ್ಸಾಹ ಇದೆಯೋ ಅವರಿಗೆ ಒಂದು ಐಡೆಂಟಿಟಿ ಬೇಕು. ಅವರೇ ಸ್ವತಃ ಒಂದು ಬ್ರಾಂಡ್. ನಮ್ಮ ದೇಶದಲ್ಲಿ ಅಂಥ ಕಾರ್ಯ ಮಾಡುವ ಕೋಟಿ ಕೋಟಿ  ಜನರಿದ್ದಾರೆ.  ಅವರೇ ಸ್ವತಃ ಒಂದು ಬ್ರಾಂಡ್. ಅವರನ್ನು ನಾವು ಈ ವರೆಗೆ ಜಗತ್ತಿಗೆ ಪರಿಚಯ ಮಾಡಿಸಿಲ್ಲ. ನಾವು ಒಮ್ಮೆ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ  ಶಕ್ತಿ ತುಂಬಿ, ಅವರನ್ನು ಆಯಾ ಕ್ಷೇತ್ರದಲ್ಲಿ ತೊಡಗಿಸಿದರೆ, ಅದರ ಬಗ್ಗೆ ತ್ವರಿತವಾಗಿ ಯೋಜನೆ ರೂಪಿಸಲು ನಮಗೆ ಅವಕಾಶ ಆಗುತ್ತದೆ. ಜೊತೆಗೆ ಅವರಿಗೆ ಅವಕಾಶ ಒದಗಿಸಲೂ ಸಾಧ್ಯವಾಗುತ್ತದೆ. ನಮಗೆ ಆ ಕ್ಷೇತ್ರದಲ್ಲಿ ದಿಢೀರ್ ವೃದ್ಧಿ ತರಲೂ ಸಾಧ್ಯವಾಗುತ್ತದೆ. ಅಂಥ ಕೌಶಲವಂತರನ್ನು ಗುರುತಿಸಿ, ಅವರಿಗೆ ಇತ್ತೀಚಿನ ತಂತ್ರಜ್ಞಾನದ ನೆರವಿನಿಂದ ಬ್ರಾಂಡಿಂಗ್ ಸಾಮರ್ಥ್ಯದೊಂದಿಗೆ ಅಂತ ಜನರಿಗೆ ಗುರುತಿನ ಚೀಟಿ ವಿತರಿಸುವ ಅವಕಾಶ ನನಗೆ ಇಂದು ಸಿಕ್ಕಿತು. ಅಲ್ಲದೆ ಇತ್ತೀಚಿನ ಹೊಸ ಕೈಮಗ್ಗಗಳನ್ನು ಕುಶಲಕರ್ಮಿಗಳಿಗೆ ವಿತರಿಸುವ ಅವಕಾಶವೂ ನನ್ನದಾಯಿತು. ಅವು ಬಳಕೆದಾರರ ಸ್ನೇಹಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಉತ್ತಮ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ನಮ್ಮ ರಫ್ತನ್ನೂ ಹೆಚ್ಚಿಸಲಿದೆ. ನಾವೀಗ ಜಗತ್ತಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಬಹುದಾಗಿದೆ.

ಇಲ್ಲಿನ ಅನೇಕ ಯುವಕರಿಗೆ ಕ್ರೀಡಾ ಕಿಟ್ ವಿತರಿಸುವ ಅವಕಾಶವೂ ಇಂದು ನನ್ನದಾಯಿತು. ಇದು ಕುಸ್ತಿಪಟುಗಳ ನೆಲವಾದರೂ, ನಮ್ಮ ದೇಶದ ಯುವಜನರು ಕ್ರೀಡೆಯನ್ನು ತಮ್ಮ ಬದುಕಿನ ಭಾಗವಾಗಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.  ಅದು ನಮ್ಮ ಸಾಮಾಜಿಕ ಬದುಕಿನ ನಡತೆಯಾಗಬೇಕು. ಕ್ರೀಡೆಗಳು, ನಮ್ಮ ನೆಲದಲ್ಲಿ ವಿಶಿಷ್ಠ ವಾತಾವರಣವನ್ನು ಸೃಷ್ಟಿಸುತ್ತವೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಇಷ್ಟಪಡುತ್ತಾರೆ. ಕ್ರೀಡೆ ಇಲ್ಲದೆ, ಕ್ರೀಡಾ ಸ್ಫೂರ್ತಿ ಬರಲು ಸಾಧ್ಯವಿಲ್ಲ. ಹೀಗಾಗಿ ನಾವು ಕ್ರೀಡೆಗೆ ಉತ್ತೇಜನ ನೀಡುತ್ತಿದ್ದೇವೆ. ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಕ್ರೀಡೆಗಷ್ಟೇ ಅಲ್ಲ ಭಾರತದಲ್ಲಿ ವೈವಿಧ್ಯತೆಯಿಂದ ಕೂಡಿದ ಸಾಮರ್ಥ್ಯವೇನಿದೆ ಅದನ್ನು ಉತ್ತೇಜಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನಶೀಲರಾಗಿದ್ದೇವೆ. ನಾನು ಇಂದು ನಿಮ್ಮೊಂದಿಗಿದ್ದು, ಇಷ್ಟು ದೊಡ್ಡ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದಕ್ಕೆ ಸಂತೋಷ ಪಡುತ್ತೇನೆ. ಇಂದು ಶಂಕುಸ್ಥಾಪನೆ ಮಾಡಲಾಗಿರುವ  ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ನಿಗದಿತ ಅವಧಿಗೂ ಮೊದಲೇ ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಇದನ್ನು ಜನರ ಬಳಕೆಗೆ ಅಲ್ಪಾವಧಿಯಲ್ಲೇ ಲೋಕಾರ್ಪಣೆ ಮಾಡಲು ಇಚ್ಛಿಸುತ್ತವೆ. ನಾನು ನಿಮ್ಮೆಲ್ಲರಿಗೂ ಆಭಾರಿ.

ಧನ್ಯವಾದಗಳು.!

 

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Nearly 400.70 lakh tons of foodgrain released till 14th July, 2021 under PMGKAY, says Centre

Media Coverage

Nearly 400.70 lakh tons of foodgrain released till 14th July, 2021 under PMGKAY, says Centre
...

Nm on the go

Always be the first to hear from the PM. Get the App Now!
...
Contribute your inputs for PM Modi's Independence Day address
July 30, 2021
ಶೇರ್
 
Comments

As India readies to mark 75th Independence Day on August 15th, 2021, here is an opportunity for you to contribute towards nation building by sharing your valuable ideas and suggestions for PM Modi's address.

Share your inputs in the comments section below. The Prime Minister may mention some of them in his address.

You may share your suggestions on the specially created MyGov forum as well. Visit