"ವಿಶ್ವದ ಅತಿದೊಡ್ಡ ಆರ್ಥಿಕತೆಗಳು ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ, ಭಾರತವು ಬಿಕ್ಕಟ್ಟಿನಿಂದ ಹೊರಬಂದು, ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ"
"2014ರ ನಂತರ ನಮ್ಮ ಸರ್ಕಾರ ತಂದ ನೀತಿಗಳಲ್ಲಿ, ಆರಂಭಿಕ ಪ್ರಯೋಜನಗಳಿಗೆ ಮಾತ್ರ ಕಾಳಜಿ ವಹಿಸದೆ, 2ನೇ ಮತ್ತು 3ನೇ ಕ್ರಮಾಂಕದ ಪರಿಣಾಮಗಳಿಗೂ ಆದ್ಯತೆ ನೀಡಲಾಗಿದೆ"
"ದೇಶದಲ್ಲಿ ಮೊದಲ ಬಾರಿಗೆ ಬಡವರಿಗೆ ಭದ್ರತೆ ಮತ್ತು ಘನತೆ ಸಿಕ್ಕಿದೆ"
“ದೇಶವು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಅಧಿಕಾರ ಮನಸ್ಥಿತಿಯನ್ನು ಸೇವಾ ಮನಸ್ಥಿತಿಗೆ ಬದಲಾಯಿಸಿದ್ದೇವೆ, ನಾವು ಬಡವರ ಕಲ್ಯಾಣವನ್ನು ನಮ್ಮ ಮಾಧ್ಯಮವಾಗಿ ಮಾಡಿಕೊಂಡಿದ್ದೇವೆ.
"ಕಳೆದ 9 ವರ್ಷಗಳಲ್ಲಿ ದಲಿತರು, ಸೌಲಭ್ಯವಂಚಿತರು, ಆದಿವಾಸಿಗಳು, ಮಹಿಳೆಯರು, ಬಡವರು, ಮಹಿಳೆಯರು, ಮಧ್ಯಮ ವರ್ಗದ ಎಲ್ಲರೂ ಬದಲಾವಣೆ ಅನುಭವಿಸುತ್ತಿದ್ದಾರೆ"
"ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ದೇಶದ ದೊಡ್ಡ ವರ್ಗದ ಜನರಿಗೆ ರಕ್ಷಣಾತ್ಮಕ ಗುರಾಣಿಯಾಗಿದೆ"
“ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಸ್ವಾವಲಂಬನೆಯ ಮಾರ್ಗ ಆರಿಸಿಕೊಂಡಿದೆ. ಭಾರತವು ವಿಶ್ವದ ಅತಿದೊಡ್ಡ, ಅತ್ಯಂತ ಯಶಸ್ವಿ ಲಸಿಕಾ ಆಂದೋಲನ ಪ್ರಾರಂಭಿಸಿತು”
"ಈ ಪರಿವರ್ತನೆಯ ಪಯಣವು ಸಮಕಾಲೀನವಾಗಿದೆ, ಅದು ಭವಿಷ್ಯದಂತೆಯೇ ಇದೆ" ಭ್ರಷ್ಟಾಚಾರದ ಮೇಲಿನ ದಾಳಿ ಮುಂದುವರಿಯಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ಗಣರಾಜ್ಯ ಶೃಂಗಸಭೆಯಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರಿಗೂ ಪ್ರಧಾನ ಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ ತಿಂಗಳು 6 ವರ್ಷ ಪೂರ್ಣಗೊಳಿಸುತ್ತಿರುವುದಕ್ಕೆ ಅವರು ಇಡೀ ತಂಡವನ್ನು ಅಭಿನಂದಿಸಿದರು. 'ಭಾರತದ ಕ್ಷಣ' ಎಂಬ ವಿಷಯದೊಂದಿಗೆ 2019ರಲ್ಲಿ ಗಣರಾಜ್ಯ ಶೃಂಗಸಭೆಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಪ್ರಧಾನಿ, ಪ್ರಜೆಗಳು ಸತತ 2ನೇ ಬಾರಿಗೆ ಪ್ರಚಂಡ ಬಹುಮತ ಮತ್ತು ಸ್ಥಿರತೆಯೊಂದಿಗೆ ಸರ್ಕಾರವನ್ನು ಆಯ್ಕೆ ಮಾಡಿದಾಗ, ಅದು ಜನಾದೇಶದ ಹಿನ್ನೆಲೆ ಹೊಂದಿದೆ. ಭಾರತದ ಕ್ಷಣ ಈಗ ಬಂದಿದೆ ಎಂಬುದನ್ನು ದೇಶ ಅರಿತುಕೊಂಡಿದೆ. ‘ಪರಿವರ್ತನೆಯ ಸಮಯ’ ಎಂಬ ಈ ವರ್ಷದ ವಿಷಯದ ಮೇಲೆ ಬೆಳಕು ಚೆಲ್ಲಿದ ಅವರು, 4 ವರ್ಷಗಳ ಹಿಂದೆ ಕಲ್ಪಿಸಲಾಗಿದ್ದ ನೆಲದ ಪರಿವರ್ತನೆಯನ್ನು ನಾಗರಿಕರು ಈಗ ವೀಕ್ಷಿಸಬಹುದಾಗಿದೆ ಎಂದರು.

ದೇಶದ ಅಭಿವೃದ್ಧಿಯ ವೇಗವೇ ದೇಶದ ದಿಕ್ಕನ್ನು ಅಳೆಯುವ ಮಾನದಂಡವಾಗಿದೆ. ಭಾರತದ ಆರ್ಥಿಕತೆಯು 1 ಟ್ರಿಲಿಯನ್ ಡಾಲರ್ ಗಡಿ ತಲುಪಲು 60 ವರ್ಷಗಳನ್ನು ತೆಗೆದುಕೊಂಡಿತು. ನಾವು 2014ರಲ್ಲಿ ಬಹಳ ಕಷ್ಟದಿಂದ 2 ಟ್ರಿಲಿಯನ್ ಗೆ ತಲುಪಿದ್ದೇವೆ. ಅಂದರೆ 7 ದಶಕಗಳಲ್ಲಿ ಇದ್ದ 2 ಟ್ರಿಲಿಯನ್ ಆರ್ಥಿಕತೆಯ ಗಾತ್ರ ಹೊಂದಿದ್ದ ಭಾರತವು ಕೇವಲ 9 ವರ್ಷಗಳ ನಂತರ ಅದರ ಗಾತ್ರ ಸುಮಾರು ಮೂರೂವರೆ ಪಟ್ಟು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ ಭಾರತವು 10ನೇ ಶ್ರೇಯಾಂಕದಿಂದ 5 ನೇ ಸ್ಥಾನಕ್ಕೆ ಜಿಗಿದಿದೆ. ಅದು ಸಹ ಶತಮಾನದಲ್ಲಿ ಒಮ್ಮೆ ಸಂಭವಿಸಿದ ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆ. ವಿಶ್ವದ ಬೃಹತ್ ಆರ್ಥಿಕತೆಗಳು ಹೆಣಗಾಡುತ್ತಿರುವಾಗ, ಭಾರತವು ಬಿಕ್ಕಟ್ಟನ್ನು ನಿವಾರಿಸಿದ್ದು ಮಾತ್ರವಲ್ಲದೆ, ಆರ್ಥಿಕ ರಂಗದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

 

ರಾಜಕೀಯ ಪ್ರಭಾವದ ಕ್ರಿಯಾಶೀಲತೆ ಕುರಿತು ಮಾತನಾಡಿದ ಪ್ರಧಾನಿ, ಮೊದಲ ಆದೇಶದ ಪರಿಣಾಮವು ಯಾವುದೇ ನೀತಿಯ ಮೊದಲ ಗುರಿಯಾಗಿರುತ್ತದೆ, ಅದು ಬಹಳ ಕಡಿಮೆ ಸಮಯದಲ್ಲಿ ಗೋಚರಿಸುತ್ತದೆ. ಆದಾಗ್ಯೂ, ಪ್ರತಿ ನೀತಿಯು 2ನೇ ಅಥವಾ 3ನೇ ಪರಿಣಾಮಗಳನ್ನು ಹೊಂದಿರುತ್ತದೆ. ಆದರೆ ಇದು ಆಳವಾದದ್ದು, ಅದು ಗೋಚರಿಸಲು ಸಮಯ ತೆಗೆದುಕೊಳ್ಳುತ್ತದೆ. ಸ್ವಾತಂತ್ರ್ಯಾ ನಂತರ ಅಳವಡಿಸಿಕೊಂಡ ನೀತಿಗಳು ಸರ್ಕಾರವೇ ನಿಯಂತ್ರಕವಾಗುವ ಪರಿಸ್ಥಿತಿಗೆ ಕಾರಣವಾಯಿತು. ಇವು ಪೈಪೋಟಿಯನ್ನು ನಾಶ ಮಾಡಿದವು. ಖಾಸಗಿ ಉದ್ಯಮ ಮತ್ತು ಎಂಎಸ್‌ಎಂಇ ಬೆಳೆಯಲು ಅವಕಾಶ ಸಿಗಲಿಲ್ಲ. ಈ ನೀತಿಗಳ ಮೊದಲ ಕ್ರಮಾಂಕದ ಪರಿಣಾಮಗಳಿಗೆ ತೀವ್ರ ಹಿನ್ನಡೆಯಾಗಿದೆ . ಜತೆಗೆ, 2ನೇ ಕ್ರಮಾಂಕದ ಪರಿಣಾಮಗಳು ಇನ್ನಷ್ಟು ಹಾನಿಕಾರಕವಾದವು. ಅಂದರೆ ಭಾರತದ ಬಳಕೆಯ ಬೆಳವಣಿಗೆಯು ಇಡೀ ವಿಶ್ವಕ್ಕೆ ಹೋಲಿಸಿದರೆ ಕುಗ್ಗಿದೆ. ಉತ್ಪಾದನಾ ವಲಯ ದುರ್ಬಲವಾಯಿತು. ಮತ್ತು ನಾವು ಹೂಡಿಕೆಗೆ ಇರುವ  ಹಲವು ಅವಕಾಶಗಳನ್ನು ಕಳೆದುಕೊಂಡೆವು. ಇವುಗಳ 3ನೇ ಕ್ರಮದ ಪರಿಣಾಮವೆಂದರೆ, ಭಾರತದಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯ ಅನುಪಸ್ಥಿತಿ ಕಾಡತೊಡಗಿತು. ಇದರಿಂದ ನವೀನ ಉದ್ಯಮಗಳು ಕುಗ್ಗುವ ಜತೆಗೆ ಉದ್ಯೋಗಾವಕಾಶಗಳು ಕಡಿಮೆಯಾದವು. ಇದರಿಂದ ಯುವಕರು ಕೇವಲ ಸರ್ಕಾರಿ ಉದ್ಯೋಗಗಳ ಮೇಲೆ ಅವಲಂಬಿತರಾದರು ಎಂದು ಪ್ರಧಾನಿ ತಿಳಿಸಿದರು.

ಪ್ರಸ್ತುತ ಸರ್ಕಾರವು 2014ರ ನಂತರ ರೂಪಿಸಿದ ನೀತಿಗಳು ಆರಂಭಿಕ ಪ್ರಯೋಜನಗಳನ್ನು ಕೊಡುವ ಜತೆಗೆ, 2ನೇ ಮತ್ತು 3ನೇ ಆದೇಶದ ಪರಿಣಾಮಗಳತ್ತ ಗಮನ ಹರಿಸಿವೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ, ಜನರಿಗೆ ಹಸ್ತಾಂತರಿಸಲಾದ ಮನೆಗಳ ಸಂಖ್ಯೆ ಕಳೆದ 4 ವರ್ಷಗಳಲ್ಲಿ 1.5 ಕೋಟಿಯಿಂದ 3.75 ಕೋಟಿಗೆ ಹೆಚ್ಚಾಗಿದೆ. ಈ ಮನೆಗಳ ಮಾಲೀಕತ್ವ ಮಹಿಳೆಯರಿಗೆ ಸೇರಿದೆ. ಮನೆಗಳ ನಿರ್ಮಾಣ ವೆಚ್ಚ ಹಲವು ಲಕ್ಷಗಳಾಗಿದ್ದು, ಈಗ ಕೋಟಿಗಟ್ಟಲೆ ಬಡ ಮಹಿಳೆಯರು ‘ಲಕ್ಷಾಧಿಪತಿ ದೀದಿ’ಯರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಯೋಜನೆಯು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. "ಪ್ರಧಾನಿ ಆವಾಸ್ ಯೋಜನೆಯು ಬಡವರ ಮತ್ತು ಸೌಲಭ್ಯವಂಚಿತರ ಆತ್ಮಸ್ಥೈರ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ" ಎಂದು ಪ್ರಧಾನ ಮಂತ್ರಿ ಹೇಳಿದರು.

 

ಸಣ್ಣ, ಅತಿಸಣಅಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಮುದ್ರಾ ಯೋಜನೆಯಡಿ 40 ಕೋಟಿಗೂ ಹೆಚ್ಚು ಸಾಲ ವಿತರಿಸಲಾಗಿದ್ದು, ಅದರಲ್ಲಿ ಶೇ.70ರಷ್ಟು ಫಲಾನುಭವಿಗಳು ಮಹಿಳೆಯರಿದ್ದಾರೆ.  ಈ ಯೋಜನೆಯ ಮೊದಲ ಪರಿಣಾಮವೆಂದರೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳ ಹೆಚ್ಚಳವಾಗಿದೆ.  ಮಹಿಳೆಯರಿಗಾಗಿ ಜನ್ ಧನ್ ಖಾತೆಗಳನ್ನು ತೆರೆಯುವ ಮೂಲಕ ಅಥವಾ ಕುಟುಂಬದಲ್ಲಿ ಮಹಿಳೆಯರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸ್ಥಾಪಿಸಿದ ಸ್ವಸಹಾಯ ಗುಂಪುಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಗಿದೆ. ದೇಶದ ಮಹಿಳೆಯರು ಉದ್ಯೋಗ ಸೃಷ್ಟಿಕರ್ತರಾಗುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಆದೇಶದ ಪ್ರಭಾವದ ಬಗ್ಗೆ ವಿವರಿಸಿದ ಪ್ರಧಾನಿ, ತಂತ್ರಜ್ಞಾನ ಬಳಕೆಯ ಮೂಲಕ ಮಾಡಿದ ಆಸ್ತಿ ಕಾರ್ಡ್‌ಗಳು ಆಸ್ತಿ ಭದ್ರತೆಯಲ್ಲಿ ವಿಶ್ವಾಸ ಮೂಡಿಸಿದೆ. ಹೆಚ್ಚಿದ ಬೇಡಿಕೆಯ ಮೂಲಕ ಡ್ರೋನ್ ವಲಯದ ವಿಸ್ತರಣೆಯು ಮತ್ತೊಂದು ಪರಿಣಾಮವಾಗಿದೆ. ಅಲ್ಲದೆ, ಆಸ್ತಿ ಕಾರ್ಡ್‌ಗಳು ಆಸ್ತಿ ವಿವಾದಗಳ ಪ್ರಕರಣಗಳನ್ನು ಕಡಿಮೆ ಮಾಡಿದೆ. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆ ಮಾಡಿದೆ. ಇದಲ್ಲದೆ, ಕಾಗದದ ದಾಖಲೆಗಳನ್ನು ಹೊಂದಿರುವ ಆಸ್ತಿಯು ಹಳ್ಳಿಗಳಲ್ಲಿ ಬ್ಯಾಂಕುಗಳ ಸಹಾಯವನ್ನು ಸಕ್ರಿಯಗೊಳಿಸಿದೆ.

ನೆಲಮಟ್ಟದಲ್ಲಿ ಕ್ರಾಂತಿ ತಂದಿರುವ ನೇರ ನಗದು ವರ್ಗಾವಣೆ(ಡಿಬಿಟಿ), ವಿದ್ಯುತ್ ಮತ್ತು ನೀರಿನ ಸೌಲಭ್ಯಗಳಿಂದ ದೇಶದಲ್ಲಿ ಮೊದಲ ಬಾರಿಗೆ ಬಡವರಿಗೆ ಭದ್ರತೆ ಮತ್ತು ಘನತೆ ಸಿಕ್ಕಿದೆ. ಒಂದು ಕಾಲದಲ್ಲಿ ಹೊರೆ ಎನಿಸಿದ್ದವರು ಇಂದು ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾರೆ. "ಈ ಎಲ್ಲಾ ಯೋಜನೆಗಳು ಈಗ ವಿಕ್ಷಿತ್ ಭಾರತ್‌ಗೆ ಆಧಾರವಾಗಿವೆ" ಎಂದರು.

 

ಕಳೆದ 9 ವರ್ಷಗಳಲ್ಲಿ ದಲಿತರು, ಸೌಲಭ್ಯವಂಚಿತರು, ಆದಿವಾಸಿಗಳು, ಮಹಿಳೆಯರು, ಬಡವರು, ಮಹಿಳೆಯರು, ಮಧ್ಯಮ ವರ್ಗದ ಎಲ್ಲರೂ ಬದಲಾವಣೆ ಅನುಭವಿಸುತ್ತಿದ್ದಾರೆ. ದೇಶವು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ವ್ಯವಸ್ಥಿತವಾಗಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. “ನಾವು ಅಧಿಕಾರ ಮನಸ್ಥಿತಿಯನ್ನು ಸೇವಾ ಮನಸ್ಥಿತಿಗೆ ಬದಲಾಯಿಸಿದ್ದೇವೆ. ನಾವು ಬಡವರ ಕಲ್ಯಾಣವನ್ನು ನಮ್ಮ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದೇವೆ. ‘ತುಷ್ಟಿಕರಣ’ದ ಬದಲು ‘ಸಂತುಷ್ಟಿಕರಣ’ವನ್ನು ಆಧಾರವಾಗಿ ಮಾಡಿಕೊಂಡಿದ್ದೇವೆ. ಈ ವಿಧಾನವು ಮಧ್ಯಮ ವರ್ಗದವರಿಗೆ ರಕ್ಷಣಾ ಕವಚವನ್ನು ಸೃಷ್ಟಿಸಿದೆ. ಆಯುಷ್ಮಾನ್ ಯೋಜನೆ, ಕೈಗೆಟುಕುವ ಔಷಧಿ, ಉಚಿತ ಲಸಿಕೆ, ಉಚಿತ ಡಯಾಲಿಸಿಸ್ ಮತ್ತು ಕೋಟ್ಯಂತರ ಕುಟುಂಬಗಳಿಗೆ ಅಪಘಾತ ವಿಮೆಯಂತಹ ಯೋಜನೆಗಳಿಂದ ಉತ್ತೇಜಿತವಾದ ಉಳಿತಾಯ ಆಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಕೊರೊನಾ ಸಾಂಕ್ರಾಮಿಕ ಸಂಕಷ್ಟ ಸಮಯದಲ್ಲಿ ಯಾವುದೇ ಕುಟುಂಬವನ್ನು ಖಾಲಿ ಹೊಟ್ಟೆಯಲ್ಲಿ ಮಲಗಲು ಬಿಡದೆ, ಬೃಹತ್ ಜನಸಂಖ್ಯೆಗೆ ಈ ಯೋಜನೆಯು ಮತ್ತೊಂದು ರಕ್ಷಣಾತ್ಮಕ ಗುರಾಣಿಯಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯಾಗಲಿ, ಜಾಮ್ ಟ್ರಿನಿಟಿಯಾಗಲಿ ಈ ಅನ್ನ ಯೋಜನೆಗೆ ಸರಕಾರ 4 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಬಡವರು ಸರ್ಕಾರದಿಂದ ಅರ್ಹ ಪಾಲು ಪಡೆದಾಗ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ. ಐಎಂಎಫ್ ನ ಇತ್ತೀಚಿನ ಕಾರ್ಯಾಗಾರದ ಪ್ರಕಾರ, ಕೊರೊನಾ ಅವಧಿಯಲ್ಲೂ ಸಹ ಇಂತಹ ನೀತಿಗಳಿಂದಾಗಿ ಭಾತವು ತೀವ್ರ ಬಡತನ ನಿರ್ಮೂಲನೆಯ ಅಂಚಿನಲ್ಲಿದೆ ಎಂದು ಪ್ರಧಾನಿ ಹೇಳಿದರು.

ನರೇಗಾ(ಎಂಎನ್‌ಆರ್‌ಇಜಿಎ) ಕುರಿತು ಮಾತನಾಡಿದ ಪ್ರಧಾನಿ, 2014ಕ್ಕಿಂತ ಮೊದಲು ಹಲವಾರು ಅಕ್ರಮಗಳು ಮತ್ತು ಯಾವುದೇ ಶಾಶ್ವತ ಆಸ್ತಿ ಅಭಿವೃದ್ಧಿ ಇರಲಿಲ್ಲ. ಈಗ, ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಕಳುಹಿಸಲಾಗುತ್ತಿದೆ. ಮನೆ, ಕಾಲುವೆಗಳು, ಕೆರೆಗಳಂತಹ ಹಳ್ಳಿಗಳ ಸಂಪನ್ಮೂಲ ಸೃಷ್ಟಿಸುವ ಮೂಲಕ ಪಾರದರ್ಶಕತೆ ಕಾಪಾಡಲಾಗುತ್ತಿದೆ. ಬಹುತೇಕ ಪಾವತಿಗಳನ್ನು ಈಗ 15 ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಶೇಕಡ 90ಕ್ಕಿಂತ ಹೆಚ್ಚಿನ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ. ಇದು ಜಾಬ್ ಕಾರ್ಡ್ ಹಗರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಇದು ಸುಮಾರು 40 ಸಾವಿರ ಕೋಟಿ ರೂಪಾಯಿ ವಂಚನೆ ತಡೆಗಟ್ಟಲು ಕಾರಣವಾಗಿದೆ" ಎಂದರು.

 

"ಪರಿವರ್ತನೆಯ ಈ ಪಯಣವು ಸಮಕಾಲೀನವಾಗಿದೆ, ಉಜ್ವಲ ಭವಿಷ್ಯಕ್ಕೂ ಕಾರಣವಾಗಲಿದೆ". ಈ ಪರಿವರ್ತನೆಗೆ ಈಗಾಗಲೇ ಹಲವು ದಶಕಗಳಿಂದ ಸಿದ್ಧತೆ ನಡೆಯುತ್ತಿದೆ. ವರ್ಷಗಳು ಅಥವಾ ದಶಕಗಳ ನಂತರ ಹೊಸ ತಂತ್ರಜ್ಞಾನ ಬರಬಹುದು. ತಂತ್ರಜ್ಞಾನ ಸಂಬಂಧಿತ ವಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು, ದೇಶದ ಅಗತ್ಯಗಳಿಗೆ ಅನುಗುಣವಾಗಿ ಭಾರತದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಒತ್ತಾಯಿಸುವುದು ಮತ್ತು ಕೊನೆಯದಾಗಿ, ಭವಿಷ್ಯದ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಿಷನ್-ಮೋಡ್ ವಿಧಾನ ಅಳವಡಿಸಿಕೊಳ್ಳುವುದು ಅಗತ್ಯ. 5ಜಿ ತಂತ್ರಜ್ಞಾನದ ಉದಾಹರಣೆ ನೀಡಿದ ಅವರು, ಭಾರತವು ತನ್ನ ಅಭಿವೃದ್ಧಿಯಲ್ಲಿ ತೋರುತ್ತಿರುವ ವೇಗವು ಇಡೀ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ ಎಂದರು.

ಕೊರೊನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲೂ ಭಾರತವು ‘ಆತ್ಮನಿರ್ಭರ್’ ಅಥವಾ ಸ್ವಾವಲಂಬನೆಯ ಮಾರ್ಗ ಆರಿಸಿಕೊಂಡಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಸ್ಥಳೀಯವಾಗಿ ತಯಾರಿಸಲಾದ ಪರಿಣಾಮಕಾರಿ ಲಸಿಕೆಗಳು ಮತ್ತು ಅತ್ಯಂತ ಯಶಸ್ವಿ ಲಸಿಕೆ ಅಭಿಯಾನ ನಡೆಸಿದ ವಿಶ್ವದ ಅತಿದೊಡ್ಡ ರಾಷ್ಟ್ರ ಭಾರತ. "ಕೆಲವರು ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ತಿರಸ್ಕರಿಸಿದಾಗ ಮತ್ತು ವಿದೇಶಿ ಲಸಿಕೆಗಳ ಆಮದು ಪ್ರತಿಪಾದಿಸುತ್ತಿದ್ದಾಗಲೂ ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಸಂಭವಿಸಿದವು" ಎಂದು ಹೇಳಿದರು.

ಹಲವಾರು ಅಡೆತಡೆಗಳು ಮತ್ತು ಹಳಿತಪ್ಪಿಸುವ ಪ್ರಯತ್ನಗಳ ಹೊರತಾಗಿಯೂ, ಡಿಜಿಟಲ್ ಇಂಡಿಯಾ ಅಭಿಯಾನದ ಬಗ್ಗೆ ಎಲ್ಲೆಡೆ ಮಾತನಾಡಲಾಗುತ್ತಿದೆ. ಡಿಜಿಟಲ್ ಪಾವತಿಯನ್ನು ಅಪಹಾಸ್ಯ ಮಾಡುವ ಜಾಮ್ ಟ್ರಿನಿಟಿ ಮತ್ತು ಹುಸಿ ಬುದ್ಧಿಜೀವಿಗಳನ್ನು ತಡೆಯುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಇಂದು  ಭಾರತವು ಹೆಚ್ಚಿನ ಸಂಖ್ಯೆಯ ಡಿಜಿಟಲ್ ಪಾವತಿಗಳಿಗೆ ಸಾಕ್ಷಿಯಾಗಿದೆ ಎಂದರು.

 

ತಮ್ಮ ಟೀಕಾಕಾರರ ಅತೃಪ್ತ ಹೇಳಿಕೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ಜನರ ಕಪ್ಪುಹಣದ ಮೂಲಗಳನ್ನು ಶಾಶ್ವತವಾಗಿ ಕಡಿತಗೊಳಿಸಿದ ನಿರ್ಧಾರವೇ ಇಂತಹ ಹೇಳಿಕೆಗಳಿಗೆ ಕಾರಣ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾವುದೇ ಅರೆಮನಸ್ಸಿನ, ಪ್ರತ್ಯೇಕವಾದ ವಿಧಾನವಿಲ್ಲ. "ಈಗ, ಒಂದು ಸಂಯೋಜಿತ, ಸಾಂಸ್ಥಿಕ ವಿಧಾನವಿದೆ. ಇದು ನಮ್ಮ ಬದ್ಧತೆ” ಎಂದು ಪ್ರಧಾನಿ ಹೇಳಿದರು. ದೆಹಲಿ, ಪಂಜಾಬ್ ಮತ್ತು ಹರಿಯಾಣದ ಒಟ್ಟು ಜನಸಂಖ್ಯೆಗಿಂತ ಸರ್ಕಾರಿ ಯೋಜನೆಗಳ ಸುಮಾರು 10 ಕೋಟಿ ನಕಲಿ ಫಲಾನುಭವಿಗಳನ್ನು ಕಿತ್ತೊಗೆಯಲಾಗಿದೆ ಎಂದು ಅವರು ತಿಳಿಸಿದರು.

 

ಈಗಿನ ಸರ್ಕಾರವು ಈ 10 ಕೋಟಿ ನಕಲಿ ಹೆಸರುಗಳನ್ನು ವ್ಯವಸ್ಥೆಯಿಂದ ತೆಗೆದುಹಾಕದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದಿತ್ತು. ಇದನ್ನು ಸಾಧಿಸಲು ಕೈಗೊಂಡಿರುವ ವಿವಿಧ ಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಆಧಾರ್‌ಗೆ ಸಾಂವಿಧಾನಿಕ ಸ್ಥಾನಮಾನ ನೀಡಿ 45 ಕೋಟಿಗೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಡಿಬಿಟಿ ಮೂಲಕ ಇದುವರೆಗೆ ಕೋಟ್ಯಂತರ ಫಲಾನುಭವಿಗಳಿಗೆ 28 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ. “ಡಿಬಿಟಿ ಎಂದರೆ ಕಮಿಷನ್ ಇಲ್ಲ, ಸೋರಿಕೆ ಇಲ್ಲ. ಈ ಒಂದು ವ್ಯವಸ್ಥೆಯಿಂದಾಗಿ ಹತ್ತಾರು ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಬಂದಿದೆ” ಎಂದು ಶ್ರೀ ಮೋದಿ ಹೇಳಿದರು.

ಅದೇ ರೀತಿ, ಸರ್ಕಾರಿ ಖರೀದಿ ಕೂಡ ದೇಶದಲ್ಲಿ ಭ್ರಷ್ಟಾಚಾರದ ದೊಡ್ಡ ಮೂಲವಾಗಿದೆ. ಈಗ ಜಿಇಎಂ ಪೋರ್ಟಲ್ ಅದನ್ನು ಮಾರ್ಪಡಿಸಿದೆ. ಮುಖರಹಿತ ತೆರಿಗೆ ಮತ್ತು ಜಿಎಸ್‌ಟಿವ್ಯವಸ್ಥೆಯು ಭ್ರಷ್ಟ ಪದ್ಧತಿಗಳನ್ನು ತಡೆಹಿಡಿದಿವೆ. “ಅಂತಹ ಪ್ರಾಮಾಣಿಕತೆ ಮೇಲುಗೈ ಸಾಧಿಸಿದಾಗ, ಭ್ರಷ್ಟರಿಗೆ ಅಸ್ವಸ್ಥತೆ ಉಂಟಾಗುವುದು ಸಹಜ ಮತ್ತು ಅವರು ಪ್ರಾಮಾಣಿಕ ವ್ಯವಸ್ಥೆಯನ್ನು ನಾಶ ಮಾಡಲು ಯೋಜಿಸುತ್ತಾರೆ. ಇದು ಕೇವಲ ಮೋದಿ ವಿರುದ್ಧವಾಗಿದ್ದರೆ ಬಹುಶಃ ಯಶಸ್ವಿಯಾಗಬಹುದಿತ್ತು, ಆದರೆ ಅವರು ಸಾಮಾನ್ಯ ನಾಗರಿಕರನ್ನು ಎದುರಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿದೆ. "ಈ ಭ್ರಷ್ಟರು ಎಷ್ಟೇ ದೊಡ್ಡ ಮೈತ್ರಿ ಮಾಡಿಕೊಂಡರೂ ಭ್ರಷ್ಟಾಚಾರದ ಮೇಲಿನ ದಾಳಿ ಮುಂದುವರಿಯುತ್ತದೆ" ಎಂದು ಪ್ರಧಾನಿ ಹೇಳಿದರು.

"ಈ ಅಮೃತ ಕಾಲವು 'ಸಬ್ಕಾ ಪ್ರಯಾಸ್' ಆಗಿದೆ. ಪ್ರತಿಯೊಬ್ಬ ಭಾರತೀಯನ ಕಠಿಣ ಪರಿಶ್ರಮ ಮತ್ತು ಶಕ್ತಿಯನ್ನು ಅನ್ವಯಿಸಿದಾಗ, ನಾವು ಶೀಘ್ರದಲ್ಲೇ 'ವಿಕ್ಷಿತ್ ಭಾರತ್'ನ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s digital PRAGATI

Media Coverage

India’s digital PRAGATI
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಡಿಸೆಂಬರ್ 2024
December 07, 2024

PM Modi’s Vision of an Inclusive, Aatmanirbhar and Viksit Bharat Resonating with Citizens