ಪ್ರಧಾನಮಂತ್ರಿ ಇಂದು ಇಥಿಯೋಪಿಯನ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಇಥಿಯೋಪಿಯಾಕ್ಕೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯಲ್ಲಿರುವ ಪ್ರಧಾನಮಂತ್ರಿಯವರಿಗೆ ಇದು ವಿಶೇಷ ಗೌರವವಾಗಿದೆ.

ಇಥಿಯೋಪಿಯಾದ ಕಾನೂನು ನಿರ್ಮಾಪಕರಿಗೆ  ಭಾರತದ ಜನರಿಂದ ಸ್ನೇಹ ಮತ್ತು ಸದ್ಭಾವನೆಯ ಶುಭಾಶಯಗಳನ್ನು ಕೋರುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸಂಸತ್ತನ್ನು ಉದ್ದೇಶಿಸಿ ಮಾತನಾಡುವುದು ಮತ್ತು ಈ ಪ್ರಜಾಪ್ರಭುತ್ವದ ದೇವಾಲಯದ ಮೂಲಕ ಇಥಿಯೋಪಿಯಾದ ಸಾಮಾನ್ಯ ಜನರನ್ನು ಉದ್ದೇಶಿಸಿ ಮಾತನಾಡುವುದು ಒಂದು ಸೌಭಾಗ್ಯ ಎಂಬುದರತ್ತ ಅವರು ಬೆಟ್ಟು ಮಾಡಿದರು. - ರೈತರು, ಉದ್ಯಮಿಗಳು, ಹೆಮ್ಮೆಯ ಮಹಿಳೆಯರು ಮತ್ತು ಯುವಜನರು - ದೇಶದ ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇಥಿಯೋಪಿಯಾದ ಗ್ರೇಟ್ ಹಾನರ್ ನಿಶಾನ್ ಎಂಬ ಅತ್ಯುನ್ನತ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಅವರು ಇಥಿಯೋಪಿಯಾದ ಜನರು ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಸಂಬಂಧದ ಮಹತ್ವವನ್ನು ಪರಿಗಣಿಸಿ, ಭೇಟಿಯ ಸಮಯದಲ್ಲಿ ಎರಡೂ ದೇಶಗಳ ನಡುವಿನ ಹಳೆಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಉನ್ನತೀಕರಿಸಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು ಇದಕ್ಕೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.

 

ಭಾರತ ಮತ್ತು ಇಥಿಯೋಪಿಯಾ ನಡುವಿನ ನಾಗರಿಕ ಸಂಬಂಧಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಎರಡೂ ದೇಶಗಳು ಪ್ರಾಚೀನ ಜ್ಞಾನ ಮತ್ತು ಆಧುನಿಕ ಮಹತ್ವಾಕಾಂಕ್ಷೆಯನ್ನು ಸಂಯೋಜಿಸುತ್ತವೆ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ, ಭಾರತದ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಮತ್ತು ಇಥಿಯೋಪಿಯನ್ ರಾಷ್ಟ್ರಗೀತೆ ಎರಡೂ ತಮ್ಮ ಭೂಮಿಯನ್ನು ತಾಯಿ ಎಂದು ಉಲ್ಲೇಖಿಸುತ್ತವೆ ಎಂಬುದರತ್ತ ಅವರು ಗಮನ ಸೆಳೆದರು. ಎರಡೂ ದೇಶಗಳ ಹಂಚಿಕೆಯ ಹೋರಾಟವನ್ನು ಉಲ್ಲೇಖಿಸುತ್ತಾ, 1941ರಲ್ಲಿ ಸಹ ಇಥಿಯೋಪಿಯನ್ನರೊಂದಿಗೆ ತಮ್ಮ ವಿಮೋಚನೆಗಾಗಿ ಹೋರಾಡಿದ ಭಾರತೀಯ ಸೈನಿಕರ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಇಥಿಯೋಪಿಯನ್ ಜನರ ತ್ಯಾಗಗಳನ್ನು ಸಂಕೇತಿಸುವ ಅಡ್ವಾ ವಿಜಯ ಸ್ಮಾರಕಕ್ಕೆ ಗೌರವ ಸಲ್ಲಿಸುವುದು ತಮಗೂ ಒಂದು ಗೌರವ ಎಂದು ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

 

ಬಲವಾದ ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ನಿರ್ಮಿಸಲು ಮತ್ತು ವಿಸ್ತರಿಸಲು ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ತಿಳಿಸಿದರು. ಈ ನಿಟ್ಟಿನಲ್ಲಿ, ಇಥಿಯೋಪಿಯಾದ ಬೆಳವಣಿಗೆ ಮತ್ತು ಸಮೃದ್ಧಿಗೆ ಭಾರತೀಯ ಶಿಕ್ಷಕರು ಮತ್ತು ಭಾರತೀಯ ವ್ಯವಹಾರಗಳ ಕೊಡುಗೆಯನ್ನು ಅವರು ನೆನಪಿಸಿಕೊಂಡರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಆಹಾರ ಸಂಸ್ಕರಣೆ ಮತ್ತು ನಾವೀನ್ಯತೆ ಕ್ಷೇತ್ರಗಳು ಸೇರಿದಂತೆ ಭಾರತದ ಅಭಿವೃದ್ಧಿ ಅನುಭವಗಳನ್ನು ಅವರು ಹಂಚಿಕೊಂಡರು ಮತ್ತು ಇಥಿಯೋಪಿಯಾದ ಆದ್ಯತೆಗಳಿಗೆ ಅನುಗುಣವಾಗಿ ಇಥಿಯೋಪಿಯಾಕ್ಕೆ ತನ್ನ ಅಭಿವೃದ್ಧಿ ಬೆಂಬಲವನ್ನು ಮುಂದುವರಿಸಲು ಭಾರತದ ಸಿದ್ಧತೆಯನ್ನು ತಿಳಿಸಿದರು. "ವಸುಧೈವ ಕುಟುಂಬಕಂ" [ಜಗತ್ತು ಒಂದು ಕುಟುಂಬ] ಎಂಬ ತತ್ವದನ್ವಯ ಮಾನವೀಯತೆಗೆ ಸೇವೆ ಸಲ್ಲಿಸುವ ಭಾರತದ ಬದ್ಧತೆಯನ್ನು ತಿಳಿಸಿದ ಅವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇಥಿಯೋಪಿಯಾಕ್ಕೆ ಲಸಿಕೆಗಳನ್ನು ಪೂರೈಸುವ ಅವಕಾಶ ಭಾರತಕ್ಕೆ ಸಿಕ್ಕಿದ ಒಂದು ಸೌಭಾಗ್ಯ ಎಂದು ವಿವರಿಸಿದರು.

 

ಜಾಗತಿಕ ದಕ್ಷಿಣದ ರಾಷ್ಟ್ರಗಳಾಗಿ ಭಾರತ ಮತ್ತು ಇಥಿಯೋಪಿಯಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಧ್ವನಿ ನೀಡಲು ಒಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸುವಲ್ಲಿ ಇಥಿಯೋಪಿಯಾದ ಒಗ್ಗಟ್ಟಿನ ಧ್ವನಿಗೆ  ಅವರು ಧನ್ಯವಾದ ಅರ್ಪಿಸಿದರು.

 

ಆಫ್ರಿಕನ್ ಒಕ್ಕೂಟದ ಪ್ರಧಾನ ಕಚೇರಿಯಾದ ಅಡಿಸ್ ಅಬಾಬಾ, ಆಫ್ರಿಕನ್ ಏಕತೆಯ ಕನಸುಗಳನ್ನು ನನಸಾಗಿಸುವಲ್ಲಿ ವಹಿಸಿದ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತ ತನ್ನ ಜಿ20ರ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ರ ಖಾಯಂ ಸದಸ್ಯನನ್ನಾಗಿ ಸ್ವಾಗತಿಸಿದ  ಗೌರವವನ್ನು ಹೊಂದಿದೆ ಎಂದು ಹೇಳಿದರು. ತಮ್ಮ ಸರ್ಕಾರದ 11 ವರ್ಷಗಳ ಅವಧಿಯಲ್ಲಿ, ಭಾರತ-ಆಫ್ರಿಕಾ ಸಂಪರ್ಕಗಳು ಹಲವು ಪಟ್ಟು ಬೆಳೆದಿವೆ ಮತ್ತು ಎರಡೂ ಕಡೆಯವರು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮಟ್ಟದಲ್ಲಿ 100ಕ್ಕೂ ಹೆಚ್ಚು ಭೇಟಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಆಫ್ರಿಕಾದ ಅಭಿವೃದ್ಧಿಗೆ ಭಾರತದ ಬಲವಾದ ಬದ್ಧತೆಯನ್ನು ಅವರು ಪ್ರತಿಬಿಂಬಿಸಿದರು ಮತ್ತು ಭೂಖಂಡದಲ್ಲಿ ಒಂದು ಮಿಲಿಯನ್ ತರಬೇತುದಾರರಿಗೆ ತರಬೇತಿ ನೀಡಲು "ಆಫ್ರಿಕಾ ಕೌಶಲ್ಯ ಗುಣಕ ಉಪಕ್ರಮ"ವನ್ನು ಪ್ರಾರಂಭಿಸಲು ಜೋಹಾನ್ಸ್‌ಬರ್ಗ್ ಜಿ -20 ಶೃಂಗಸಭೆಯಲ್ಲಿ ಮಾಡಿದ ಪ್ರಸ್ತಾಪವನ್ನು ಒತ್ತಿ ಹೇಳಿದರು.

 

ಜಾಗತಿಕ ದಕ್ಷಿಣವು ತನ್ನ ಭವಿಷ್ಯದ  ಹಣೆಬರಹವನ್ನು ಬರೆಯುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭಾರತದ ಪ್ರಯಾಣವನ್ನು ಸಹ ಪ್ರಜಾಪ್ರಭುತ್ವದೊಂದಿಗೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಗೌರವಾನ್ವಿತ ಸ್ಪೀಕರ್‌ ಅವರಿಗೆ ಧನ್ಯವಾದ ಅರ್ಪಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India attracts $70 billion investment in AI infra, AI Mission 2.0 in 5-6 months: Ashwini Vaishnaw

Media Coverage

India attracts $70 billion investment in AI infra, AI Mission 2.0 in 5-6 months: Ashwini Vaishnaw
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜನವರಿ 2026
January 31, 2026

From AI Surge to Infra Boom: Modi's Vision Powers India's Economic Fortress