ಶೇರ್
 
Comments
“ದೇಶದ ಅಮೃತ ಕಾಲದಂತೆಯೇ, ನಿಮ್ಮ ಜೀವನದಲ್ಲೂ ಇದು ಅಮೃತಕಾಲವಾಗಿದೆ’’
“ಇಂದು ದೇಶದ ಚಿಂತನೆ ಮತ್ತು ಮನೋಭಾವ ನಿಮ್ಮಂತೆಯೇ ಇದೆ. ಮೊದಲು ಚಿಂತನೆಯು ಕಾರ್ಯಸಾಧ್ಯವಾದ ಕೆಲಸವಾಗಿದ್ದರೆ, ಇಂದು ಅದು ಕ್ರಿಯೆ ಮತ್ತು ಫಲಿತಾಂಶ ಆಧರಿಸಿದೆ’’
“ದೇಶ ಸಾಕಷ್ಟು ಸಮಯವನ್ನು ಕಳೆದಿದೆ. ಅದರ ನಡುವೆ ಎರಡು ಪೀಳಿಗೆಗಳು ಬಂದು ಹೋಗಿವೆ, ಹಾಗಾಗಿ ಈಗ ನಮಗೆ ಕಳೆದುಕೊಳ್ಳಲು ಎರಡು ನಿಮಿಷಗಳೂ ಇಲ್ಲ’’
“ನಾನು ಅಸಹನೆಯಿಂದ ಧ್ವನಿಸುತ್ತಿದ್ದರೆ, ಅದೇ ರೀತಿಯಲ್ಲಿ ಸ್ವಾವಲಂಬಿ ಭಾರತಕ್ಕಾಗಿ ನೀವು ಅಸಹನೆ ಹೊಂದಬೇಕೆಂದು ನಾನು ಬಯಸುತ್ತೇನೆ. ಸ್ವಾವಲಂಬಿ ಭಾರತವು ಸಂಪೂರ್ಣ ಭಾರತದ ಮೂಲಕ ಸ್ವರೂಪವಾಗಿದೆ, ಅಲ್ಲಿ ಯಾರನ್ನೂ ಅವಲಂಬಿಸಬೇಕಿಲ್ಲ’’
“ನೀವು ಸವಾಲುಗಳನ್ನು ಎದುರು ನೋಡುತ್ತಿದ್ದರೆ, ನೀವು ಬೇಟೆಗಾರ ಮತ್ತು ಸವಾಲನ್ನು ಬೇಟೆಯಾಡುತ್ತದೆ’’
“ಸಂತೋಷ ಮತ್ತು ದಯೆಯನ್ನು ಹಂಚಿಕೊಳ್ಳುವಾಗ ನೀವು ಯಾವುದೇ ಪಾಸ್ ವರ್ಡ್ ಇಟ್ಟುಕೊಳ್ಳಬೇಡಿ ಮತ್ತು ಮುಕ್ತ ಮನಸ್ಸನಿಂದ ಜೀವನ ಆನಂದಿಸಿ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ಕಾನ್ಪುರದ 54ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಸಂಸ್ಥೆಯೇ ರೂಪಿಸಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಆಧರಿಸಿದ ಡಿಜಿಟಲ್ ಪದವಿಗಳನ್ನು ವಿತರಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಬೋಧಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಾನ್ಪುರಕ್ಕೆ ಇಂದು ಮಹಾ ದಿನವಾಗಿದೆ, ಏಕೆಂದರೆ ನಗರ ಮೆಟ್ರೊ ಸೌಕರ್ಯವನ್ನು ಪಡೆಯುತ್ತಿದೆ ಮತ್ತು ಕಾನ್ಪುರವು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ರೂಪದಲ್ಲಿ ವಿಶ್ವಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ ಎಂದರು. ಪ್ರತಿಷ್ಠಿತ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪಯಣದ ಕುರಿತಂತೆ, ಪ್ರಧಾನಮಂತ್ರಿ ಅವರು “ಐಐಟಿ ಕಾನ್ಪುರದ ಪ್ರವೇಶ ಮತ್ತು ತೇರ್ಗಡೆ ಹೊಂದಿ ಹೊರಹೋಗುತ್ತಿರುವುದರ ನಡುವೆ ನೀವು ನಿಮ್ಮಲ್ಲಿ ಭಾರಿ ಬದಲಾವಣೆಗಳನ್ನು ಅನುಭವಿಸುತ್ತಿದ್ದೀರಿ. ನೀವು ಇಲ್ಲಿಗೆ ಬರುವ ಮುನ್ನ ನಿಮ್ಮಲ್ಲಿ ಅಜ್ಞಾತ ಭಯ ಅಥವಾ ಅಜ್ಞಾತ ಪ್ರಶ್ನೆ ಇದ್ದೀರಬಹುದು. ಆದರೆ ಈಗ ಅಜ್ಞಾತದ ಭಯವಿಲ್ಲ, ಇಡೀ ಜಗತ್ತನ್ನು ಅನ್ವೇಷಿಸುವ ಧೈರ್ಯವನ್ನು ಹೊಂದಿದ್ದೀರಿ. ಇನ್ನು ಮುಂದೆ ಆಜ್ಞಾತದ ಪ್ರಶ್ನೆಗಳು ಇರುವುದಿಲ್ಲ,ಈಗ ಅದು ಅತ್ಯುತ್ತಮವಾದುದನ್ನು ಹುಡುಕುತ್ತದೆ ಮತ್ತು ಇಡೀ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುವ ಕನಸು ಕಾಣುತ್ತಿದೆ’’ಎಂದು ಹೇಳಿದರು.

ಕಾನ್ಪುರದ ಐತಿಹಾಸಿಕ ಹಾಗೂ ಸಾಮಾಜಿಕ ಪರಂಪರೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಕಾನ್ಪುರವು ವೈವಿಧ್ಯಮಯವಾದ ಭಾರತದ ಕೆಲವೇ ನಗರಗಳಲ್ಲಿ ಒಂದಾಗಿದೆ. “ಸತ್ತಿ ಚೌರಾ ಘಾಟ್ ನಿಂದ ಮದರಿ ಪಾಸಿವರೆಗೆ, ನಾನಾ ಸಾಹೇಬ್ ನಿಂದ ಬಟುಕೇಶ್ವರ ದತ್ತವರೆಗೆ, ನಾವು ಈ ನಗರವನ್ನು ನೋಡುತ್ತಿದ್ದರೆ ನಾವು ಭವ್ಯವಾದ ಗತಕಾಲಕ್ಕೆ ಪಯಣಿಸುತ್ತಿರುವಂತೆ ಮತ್ತು ಸ್ವಾತಂತ್ರ್ಯ ಹೋರಾಟದ ತ್ಯಾಗದ ವೈಭವವನ್ನು ಸ್ಪರ್ಶಿಸುತ್ತಿರುವಂತೆ ತೋರುತ್ತದೆ’’ ಎಂದು ಪ್ರಧಾನಮಂತ್ರಿ ಅವರು ಸ್ಮರಿಸಿದರು.

ಇದೀಗ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಜೀವನದ ಸದ್ಯದ ಹಂತದ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಅವರು 1930ರ ದಶಕದ ಸಮಯವನ್ನು ಉಲ್ಲೇಖಿಸುವ ಮೂಲಕ ವಿವರಿಸಿದರು. “ಆ ಸಮಯದಲ್ಲಿ 20-25 ವರ್ಷ ವಯಸ್ಸಿನ ಯುವಕರಾಗಿದ್ದವರು 1947ರಲ್ಲಿ ಸ್ವಾತಂತ್ರ್ಯ ಗಳಿಸುವವರೆಗೆ ಸಾಕಷ್ಟು ಪ್ರಯಾಣವನ್ನು ಕೈಗೊಂಡಿರುತ್ತಾರೆ. ಅದು ಅವರ ಜೀವನದ ಸುವರ್ಣ ಕಾಲ. ಇಂದು ನೀವು ಕೂಡ ಅಂತಹುದೇ ಸುವರ್ಣ ಯುಗವನ್ನು ಪ್ರವೇಶಿಸುತ್ತಿದ್ದೀರಿ. ದೇಶದ ಅಮೃತ ಕಾಲದಂತೆಯೇ, ನೀವು ಕೂಡ ನಿಮ್ಮ ಜೀವನದ ಅಮೃತ ಕಾಲದಲ್ಲಿದ್ದೀರಿ’’ ಎಂದು ಅವರು ಹೇಳಿದರು. 

ಐಐಟಿ ಕಾನ್ಪುರದ ಸಾಧನೆಗಳ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ, ಸದ್ಯದ ತಂತ್ರಜ್ಞಾನದ ಬೆಳವಣಿಗೆಯು ಇಂದಿನ ವೃತ್ತಿಪರರಿಗೆ ನೀಡುವ ಸಾಧ್ಯತೆಗಳ ಕುರಿತು ವಿವರಿಸಿದರು. ಕೃತಕ ಬುದ್ಧಿಮತ್ತೆ, ಇಂಧನ, ಹವಾಮಾನ ಪರಿಹಾರ, ಆರೋಗ್ಯ ಪರಿಹಾರಗಳಿಗೆ ತಂತ್ರಜ್ಞಾನ ಬಳಕೆ ಮತ್ತು ವಿಪತ್ತು ನಿರ್ವಹಣೆ ಮತ್ತಿತರ ವಲಯಗಳಲ್ಲಿನ ವ್ಯಾಪ್ತಿಯನ್ನು ಸೂಚಿಸಿದ ಪ್ರಧಾನಮಂತ್ರಿ ಅವರು “ಇವು ಕೇವಲ ನಿಮ್ಮ ಜವಾಬ್ದಾರಿಗಳಲ್ಲ, ಆದರೆ ನೀವು ಪೂರೈಸುವ ಅದೃಷ್ಟವನ್ನು ಹೊಂದಿರುವ ಹಲವು ತಲೆಮಾರುಗಳ ಕನಸುಗಳಾಗಿವೆ’’ಎಂದರು.

21ನೇ ಶತಮಾನವು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಈ ದಶಕದಲ್ಲೂ ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಹೊರಟಿದೆ. ತಂತ್ರಜ್ಞಾನವಿಲ್ಲದೆ ಜೀವನ ಯಾವ ವಿಧದಲ್ಲೂ ಪರಿಪೂರ್ಣವಾಗುವುದಿಲ್ಲ. ಜೀವನ ಮತ್ತು ತಂತ್ರಜ್ಞಾನದ ಪೈಪೋಟಿಯ ಈ ಯುಗದಲ್ಲಿ ವಿದ್ಯಾರ್ಥಿಗಳು ಖಂಡಿತವಾಗಿ ಮುಂದೆ ಬರಲಿ ಎಂದು ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.  ಪ್ರಧಾನಮಂತ್ರಿಯವರು ತಾವು ಗ್ರಹಿಸಿರುವಂತೆ ದೇಶದ ಸದ್ಯದ ಮನಸ್ಥಿತಿಯನ್ನು ವಿದ್ಯಾರ್ಥಿಗಳನ್ನು ವಿವರಿಸಿದರು. ಅವರು ““ಇಂದು ದೇಶದ ಚಿಂತನೆ ಮತ್ತು ಮನೋಭಾವ ನಿಮ್ಮಂತೆಯೇ ಇದೆ. ಮೊದಲು ಚಿಂತನೆಯು ಕಾರ್ಯಸಾಧ್ಯವಾದ ಕೆಲಸವಾಗಿದ್ದರೆ, ಇಂದು ಅದು ಕ್ರಿಯೆ ಮತ್ತು ಫಲಿತಾಂಶ ಆಧರಿಸಿದೆ. ಮೊದಲು ಸಮಸ್ಯೆಗಳಿಂದ ದೂರವುಳಿಯುವ ಪ್ರಯತ್ನಗಳು ನಡೆಯುತ್ತಿದ್ದವು,ಆದರೆ ಇಂದು ಸಮಸ್ಯೆಗಳನ್ನು ಪರಿಹರಿಸುವ ಸಂಕಲ್ಪಗಳನ್ನು ಮಾಡಲಾಗುತ್ತಿದೆ’’ಎಂದರು.
ಸ್ವಾತಂತ್ರ್ಯದ 25ನೇ ವರ್ಷಾಚರಣೆಯಿಂದ ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕಾಗಿದ್ದ ಸಮಯವನ್ನು ಕಳೆದುಕೊಂಡಿರುವುದಕ್ಕೆ ಪ್ರಧಾನಮಂತ್ರಿ ವಿಷಾಧಿಸಿದರು. “ದೇಶದ ಸ್ವಾತಂತ್ರ್ಯ ಪಡೆದು 25 ವರ್ಷ ಪೂರ್ಣಗೊಳಿಸಿದಾಗ ನಮ್ಮ ಕಾಲ ಮೇಲೆ ನಾವು ನಿಲ್ಲಲು ಸಾಕಷ್ಟು ಕೆಲಸ ಮಾಡಬೇಕಿತ್ತು. ಅಂದಿನಿಂದ ತುಂಬಾ ತಡವಾಗಿದೆ. ದೇಶ ಸಾಕಷ್ಟು ಸಮಯವನ್ನು ಕಳೆದುಕೊಂಡಿದೆ. ಅದರ ನಡುವೆ ಎರಡು ತಲೆಮಾರುಗಳು ಬಂದು ಹೋಗಿವೆ. ಹಾಗಾಗಿ ನಾವು ಇದೀಗ ಎರಡು ಲಕ್ಷಣಗಳನ್ನೂ ಸಹ ಕಳೆದುಕೊಳ್ಳುವಂತಿಲ್ಲ’’ ಎಂದು ಹೇಳಿದರು.

ತಾವು ಅಸಹನೆ ತೋರುತ್ತಿದ್ದರೆ, ಇದೀಗ ತೇರ್ಗಡೆಯಾಗಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳೂ ಸಹ ಸ್ವಾವಲಂಬಿ ಭಾರತಕ್ಕೆ ಅದೇ ರೀತಿಯಲ್ಲಿ ಅಸಹನೆಯನ್ನು ಹೊಂದಬೇಕೆಂದು ಬಯಸುವುದಾಗಿ ಪ್ರಧಾನಮಂತ್ರಿ ಹೇಳಿದರು. “ಸ್ವಾವಲಂಬಿ ಭಾರತ ಸಂಪೂರ್ಣ ಸ್ವಾತಂತ್ರ್ಯದ ಮೂಲ ಸ್ವರೂಪ, ಅಲ್ಲಿ ನಾವು ಯಾರೊಬ್ಬರ ಮೇಲೂ ಅವಲಂಬಿತರಾಗಬೇಕಿಲ್ಲ’’ಎಂದರು. ಸ್ವಾಮಿ ವಿವೇಕಾನಂದರು “ಪ್ರತಿ ರಾಷ್ಟ್ರಕ್ಕೂ ತಲುಪಿಸಲು ಒಂದು ಸಂದೇಶವಿದೆ, ಈಡೇರಿಸುವ ಒಂದು ಧೇಯವಿದೆ, ತಲುಬೇಕಾದ ಗಮ್ಯವಿದೆ. ನಾವು ಸ್ವಾವಲಂಬಿಗಳಾಗದಿದ್ದರೆ ಹೇಗೆ ನಮ್ಮ ರಾಷ್ಟ್ರ ತನ್ನ ಗುರಿಗಳನ್ನು ತಲುಪಲು ಸಾಧ್ಯ? ಅದು ಹೇಗೆ ಗಮ್ಯ ಸ್ಥಾನವನ್ನು ತಲುಪುತ್ತದೆ’’ ಎಂದು ಹೇಳಿದ್ದರೆಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಅಟಲ್ ಇನ್ನೋವೇಷನ್ ಮಿಷನ್, ಪಿಎಂ ಸಂಶೋಧನಾ ಫೆಲೋಶಿಪ್ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳಂತಹ ಉಪಕ್ರಮಗಳೊಂದಿಗೆ ಹೊಸ ಮನೋಭಾವ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವ್ಯಾಪಾರಕ್ಕೆ ಸುಗಮ ವಾತಾವರಣ ಸುಧಾರಣೆ ಮತ್ತು ನೀತಿ ನಿರ್ಬಂಧಗಳನ್ನು ತೆಗೆದುಹಾಕಿರುವುದರ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸ್ವಾತಂತ್ರೋತ್ಸವದ 75ನೇ ವರ್ಷದಲ್ಲಿ ದೇಶದಲ್ಲಿ 75ಕ್ಕೂ ಅಧಿಕ ಯೂನಿಕಾರ್ನ್ ಗಳಿವೆ, 50,000ಕ್ಕೂ ಅಧಿಕ ನವೋದ್ಯಮಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ಪೈಕಿ ಕಳೆದ ಆರು ತಿಂಗಳಲ್ಲಿಯೇ 10,000ಕ್ಕೂ ಅಧಿಕ ನವೋದ್ಯಮಗಳು ಸ್ಥಾಪನೆಯಾಗಿವೆ. ಭಾರತ ಇಂದು ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ನವೋದ್ಯಮಗಳ ತಾಣವಾಗಿ ರೂಪುಗೊಂಡಿದೆ. ಐಐಟಿಗಳಿಂದ ಬಂದ ಯುವಕರೇ ಹಲವು ನವೋದ್ಯಮಗಳನ್ನು ಆರಂಭಿಸಿದ್ದಾರೆ. ದೇಶ ಜಾಗತಿಕ ಮಟ್ಟದಲ್ಲಿ ಸ್ಥಾನಗಳಿಸಲು ವಿದ್ಯಾರ್ಥಿ ಸಮುದಾಯ ತನ್ನ ಕೊಡುಗೆ ನೀಡಬೇಕೆಂದು ತಾವು ಬಯಸುತ್ತಿರುವುದಾಗಿ ಪ್ರಧಾನಮಂತ್ರಿ ತಮ್ಮ ಆಶಯವನ್ನು ತಿಳಿಸಿದರು. ಅವರು “ಭಾರತೀಯ ಕಂಪನಿಗಳು ಮತ್ತು ಭಾರತೀಯ ಉತ್ಪನ್ನಗಳು ಜಾಗತಿಕವಾಗಲು ಯಾವ ಭಾರತೀಯರು ಬಯಸುವುದಿಲ್ಲ. ಯಾರಿಗೆ ಐಐಟಿಗಳ ಬಗ್ಗೆ ಗೊತ್ತೋ, ಅವರಿಗೆ ಅಲ್ಲಿನ ಪ್ರತಿಭೆಗಳ ಬಗ್ಗೆ ತಿಳಿದಿರುತ್ತದೆ ಮತ್ತು ಅಲ್ಲಿನ ಪ್ರೊಫೆಸರ್ ಗಳ ಪರಿಶ್ರಮ ತಿಳಿದಿರುತ್ತದೆ. ಈ ಐಐಟಿಗಳ ಯುವಜನತೆ ಖಂಡಿತವಾಗಿಯೂ ಅದನ್ನು ಮಾಡುತ್ತಾರೆ’’ಎಂದು ಹೇಳಿದರು.

ಸವಾಲಿನ ಬದಲು ಆರಾಮವನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಪ್ರಧಾನಮಂತ್ರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಏಕೆಂದರೆ “ನಿಮಗೆ ಬೇಕೋ, ಬೇಡವೋ ಜೀವನದಲ್ಲಿ ಸವಾಲುಗಳು ಇದ್ದೇ ಇರುತ್ತವೆ. ಅವುಗಳಿಂದ ಓಡಿ ಹೋಗುವವರು ಅವುಗಳಿಂದ ಸಂತ್ರಸ್ತರಾಗುತ್ತಾರೆ. ಆದರೆ ನೀವು ಸವಾಲುಗಳನ್ನು ಎದುರು ನೋಡುವವರಾಗಿದ್ದರೆ, ನೀವು ಬೇಟೆಗಾರರಾಗಿದ್ದರೆ ಮತ್ತು ನೀವು ಸವಾಲನ್ನು ಬೇಟೆಯಾಡಬಹುದು’’ಎಂದು ಪ್ರಧಾನಮಂತ್ರಿ ಹೇಳಿದರು.

ವೈಯಕ್ತಿಕ ಟಿಪ್ಪಣಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸೂಕ್ಷ್ಮತೆ, ಕುತೂಹಲ, ಕಲ್ಪನೆ ಮತ್ತು ಸೃಜನಶೀಲತೆಯನ್ನು ಜೀವಂತವಾಗಿಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಮತ್ತು ತಾಂತ್ರಿಕವಲ್ಲದ ಜೀವನದ ವಿಷಯಗಳ ಬಗ್ಗೆ ಸಂವೇದನಾಶೀಲರಾಗಿರುವಂತೆ ಸೂಚಿಸಿದರು. “ಆನಂದ ಮತ್ತು ದಯೆಯನ್ನು ಹಂಚಿಕೊಳ್ಳುವ ವಿಷಯಕ್ಕೆ ಬಂದರೆ, ನೀವು ಯಾವುದೇ ಪಾಸ್ ವರ್ಡ್ ಇಟ್ಟುಕೊಳ್ಳಬೇಡಿ ಮತ್ತು ಮುಕ್ತ ಮನಸ್ಸನಿಂದ ಜೀವನವನ್ನು ಆನಂದಿಸಿ’’ ಎಂದು ಪ್ರಧಾನಮಂತ್ರಿ ಹೇಳಿದರು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
PM-KISAN helps meet farmers’ non-agri expenses too: Study

Media Coverage

PM-KISAN helps meet farmers’ non-agri expenses too: Study
...

Nm on the go

Always be the first to hear from the PM. Get the App Now!
...
PM congratulates Tamil Nadu for PM MITRA mega textiles park at Virudhunagar
March 22, 2023
ಶೇರ್
 
Comments

The Prime Minister, Shri Narendra Modi has said that PM MITRA mega textiles park will boost the local economy of aspirational district of Virudhunagar.

The Prime Minister was replying to a tweet by the Union Minister, Shri Piyush Goyal announcing the launch of the mega textile park.

The Prime Minister tweeted :

"Today is a very special day for my sisters and brothers of Tamil Nadu! The aspirational district of Virudhunagar will be home to a PM MITRA mega textiles park. This will boost the local economy and will prove to be beneficial for the youngsters of the state.

#PragatiKaPMMitra"