ಸೋಮವಾರ ಏಪ್ರಿಲ್ 30, 2018 ರಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುದ್ಧ ಜಯಂತಿ ಅಂಗವಾಗಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.
ಅವರು ಸಂಘ ದಾನ ಮಾಡುವರು. ಹಾಗು ಸಾರನಾಥದ ಉನ್ನತ ಟಿಬೇಟಿಯನ್ ಅಧ್ಯಯನಕ್ಕಾಗಿರುವ ಕೇಂದ್ರೀಯ ಸಂಸ್ಥೆಗೆ ಮತ್ತು ಬೋಧ ಗಯಾದ ಅಖಿಲ ಭಾರತ ಭಿಕ್ಷು ಸಂಘಗಳಿಗೆ ಅವರು ವೈಶಾಖ ಸಮ್ಮಾನ ಪ್ರಶಸ್ತಿ ಪತ್ರವನ್ನು ಪ್ರದಾನಿಸುವರು. ಅಲ್ಲಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುವರು.