ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಏಳು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಪೈಕಿ ನಾಲ್ಕು ಯೋಜನೆಗಳು ನೀರು ಸರಬರಾಜಿಗೆ ಸಂಬಂಧಿಸಿವೆ, ಎರಡು ಒಳಚರಂಡಿ ಸಂಸ್ಕರಣೆಗೆ ಮತ್ತು ಒಂದು ನದಿ ತಟದ ಅಭಿವೃದ್ಧಿಗೆ ಸಂಬಂಧಿಸಿದೆ. ಈ ಯೋಜನೆಗಳ ಒಟ್ಟು ವೆಚ್ಚ 541 ಕೋಟಿ ರೂ. ಈ ಯೋಜನೆಗಳ ಅನುಷ್ಠಾನವನ್ನು ಬಿಹಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯಡಿ BUIDCO ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ಕೂಡ ಉಪಸ್ಥಿತರಿರುತ್ತಾರೆ.
ವಿವರಗಳು
ನಮಾಮಿ ಗಂಗೆ ಯೋಜನೆಯಡಿಯಲ್ಲಿ ಪಾಟ್ನಾ ಮಹಾನಗರ ಪಾಲಿಕೆಯ ಬಿಯೂರ್ ಮತ್ತು ಕರ್ಮಲಿಚಕ್ ನಲ್ಲಿ ನಿರ್ಮಿಸಲಾದ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಸಿವಾನ್ ಪುರಸಬೆ ಮತ್ತು ಚಾಪ್ರಾ ನಗರಸಭೆಗಳಲ್ಲಿ ಅಮೃತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ನೀರು ಸರಬರಾಜು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಎರಡೂ ಯೋಜನೆಗಳು ಸ್ಥಳೀಯರಿಗೆ ದಿನದ 24 ಗಂಟೆಯೂ  ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ
ಅಮೃತ್ ಮಿಷನ್ ಅಡಿಯಲ್ಲಿ ಮುಂಗೇರ್ ನೀರು ಸರಬರಾಜು ಯೋಜನೆಗೆ ಪ್ರಧಾನಿಯವರು ಶಿಲಾನ್ಯಾಸ ಮಾಡಲಿದ್ದಾರೆ. ಮುಂಗೇರ್ ಮುನ್ಸಿಪಲ್ ಕಾರ್ಪೊರೇಶನ್ನ ನಿವಾಸಿಗಳಿಗೆ ಪೈಪ್ಲೈನ್ಗಳ ಮೂಲಕ ಶುದ್ಧ ನೀರು ಪಡೆಯಲು ಈ ಯೋಜನೆ ಸಹಾಯ ಮಾಡುತ್ತದೆ. ಅಮೃತ್ ಮಿಷನ್ ಅಡಿಯಲ್ಲಿ ಜಮಾಲ್ಪುರ್ ನೀರು ಸರಬರಾಜು ಯೋಜನೆಗೂ ಅಡಿಪಾಯ ಹಾಕಲಾಗುವುದು.
ನಮಾಮಿ ಗಂಗೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮುಜಾಫರ್ ಪುರ್ ನದಿ ತಟದ ಅಭಿವೃದ್ಧಿ ಯೋಜನೆಗೆ ಪ್ರಧಾನಿಯವರು ಶಿಲಾನ್ಯಾಸ ಮಾಡಲಿದ್ದಾರೆ. ಯೋಜನೆಯಡಿ ಮುಜಾಫರ್ಪುರದ ಮೂರು ಘಾಟ್ಗಳನ್ನು (ಪೂರ್ವಿ ಅಖಾಡ ಘಾಟ್, ಸೀಧಿ ಘಾಟ್ ಮತ್ತು ಚಂದ್ವಾರ ಘಾಟ್) ಅಭಿವೃದ್ಧಿಪಡಿಸಲಾಗುವುದು. ಶೌಚಾಲಯಗಳು, ಮಾಹಿತಿ ಕಿಯೋಸ್ಕ್, ಉಡುಪು ಬದಲಿಸುವ ಕೊಠಡಿಗಳು, ಪಾದಚಾರಿ ಮಾರ್ಗ, ವಾಚ್ ಟವರ್ ಮುಂತಾದ ಮೂಲ ಸೌಲಭ್ಯಗಳನ್ನು ಲಭ್ಯಗೊಳಿಸಲಾಗುವುದು. ಈ ಘಟ್ಟಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮತ್ತು ಸಾಕಷ್ಟು ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುವುದು. ನದಿ ತಟದ ಅಭಿವೃದ್ಧಿಯು ಪ್ರವಾಸೋದ್ಯಮವನ್ನು ವೃದ್ಧಿಸುತ್ತದೆ ಮತ್ತು ಭವಿಷ್ಯದಲ್ಲಿ ಇದನ್ನು ಆಕರ್ಷಣೀಯ ಕೇಂದ್ರವನ್ನಾಗಿ ಮಾಡುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bumper Apple crop! India’s iPhone exports pass Rs 1 lk cr

Media Coverage

Bumper Apple crop! India’s iPhone exports pass Rs 1 lk cr
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಜನವರಿ 2025
January 13, 2025

#Kumbh2025: Citizens Appreciate PM Modi’s Effort taken to Celebrate Indias Biggest Cultural Gathering

Appreciation for PM Modi’s Effort to Delivery on Promises to Ensure Holistic Growth in all Sectors