ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೇಶವನ್ನು ಕಾಡುತ್ತಿರುವ ಹಲವು ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಬೇಕಿದೆ. ಸದನದ ಹಿರಿಯ ಹಾಗೂ ಅನುಭವಿ ಸದಸ್ಯರ ಜತೆಗಿನ ವ್ಯಾಪಕ ಚರ್ಚೆಯಿಂದ ಸದನ ಮತ್ತು ರಾಷ್ಟ್ರಕ್ಕೆ ಲಾಭವಾಗಲಿದೆ. ಅವರುಗಳ ಉತ್ತಮ ಸಲಹೆಯಿಂದ ಸರ್ಕಾರಕ್ಕೆ ಉತ್ತಮ ನೀತಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಸಮಯದ ಸದುಪಯೋಗವನ್ನು ಅತಿ ಹೆಚ್ಚಿನ ರೀತಿಯಲ್ಲಿ ಪಡೆದುಕೊಂಡು ಪ್ರಮುಖ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತವೆಂಬ ಎಂಬ ವಿಶ್ವಾಸ ನನಗಿದೆ. ಸದನದ ಕಾರ್ಯ ಕಲಾಪಗಳಲ್ಲಿ ಎಲ್ಲರೂ ಸಹಕರಿಸಿ ರಾಜ್ಯ ಶಾಸಕಾಂಗ ಸಭೆಗಳಿಗೆ ಸಂಸತ್ ಕಾರ್ಯ ಕಲಾಪ ಪ್ರೇರಣೆಯಾಗಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಇದನ್ನು ನೆರೆವೇರಿಸುತ್ತಾರೆಂಬ ವಿಶ್ವಾಸ ನನಗಿದೆ. ನಾನು ನನ್ನ ಆಸೆ ಆಕಾಂಕ್ಷೆಗಳ ಅನುರೂಪ ಸದನದ ಕಾರ್ಯ ಕಲಾಪ ಸುಗಮವಾಗಿರುವಂತೆ ನೋಡಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಈ ಬಾರಿಯೂ ನಾನು ನನ್ನ ಬಯಕೆಯನ್ನು ತಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ. ಈ ಬಗ್ಗೆ ನಾವು ಮತ್ತೊಮ್ಮೆ ಪ್ರಯತ್ನ ಪಡಬೇಕು ಮತ್ತು ನಿರಂತರ ಪ್ರಯತ್ನಶೀಲರಾಗಿರಬೇಕು. ಸರ್ಕಾರ ಸದಸ್ಯರು ಬಯಸುವ ಎಲ್ಲ ರೀತಿಯ ಚರ್ಚೆಗಳಿಗೆ ಸಿದ್ಧವಾಗಿದೆ. ಈ ಬಾರಿಯ ಅತಿಯಾದ ಮುಂಗಾರು ಮಳೆಯಿಂದಾಗಿ ದೇಶದ ಹಲವು ಭಾಗಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಈ ಬಗ್ಗೆ ಚರ್ಚೆ ಪ್ರಸ್ತುತವೆಂದು ನಾನು ಭಾವಿಸುತ್ತೇನೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Portraits of PVC recipients replace British officers at Rashtrapati Bhavan

Media Coverage

Portraits of PVC recipients replace British officers at Rashtrapati Bhavan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2025
December 17, 2025

From Rural Livelihoods to International Laurels: India's Rise Under PM Modi