ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೈಬ್ರಿಡ್ ಅನ್ಯುಯಿಟಿ ಮೋಡ್ ಅಡಿಯಲ್ಲಿ ದೆಹಲಿ-ಮುಂಬೈ ಎಕ್ಸ್ ಪ್ರೆಸ್ವೇಯ ದೆಹಲಿ-ಫರಿದಾಬಾದ್-ಬಲ್ಲಭಗಢ-ಸೋಹ್ನಾ ಸ್ಪರ್ ನಿಂದ ಜೇವರ್ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ರೀನ್ಫೀಲ್ಡ್ ಸಂಪರ್ಕದ ನಿರ್ಮಾಣಕ್ಕಾಗಿ 3630.77 ಕೋಟಿ ರೂಪಾಯಿಗಳ ಪರಿಷ್ಕೃತ ಒಟ್ಟು ಬಂಡವಾಳ ವೆಚ್ಚಕ್ಕೆ ಅನುಮೋದನೆ ನೀಡಿದೆ.

31.42 ಕಿಮೀ ಉದ್ದದ ಈ ಯೋಜನಾ ಕಾರಿಡಾರ್ ದಕ್ಷಿಣ ದೆಹಲಿ, ಫರಿದಾಬಾದ್ ಮತ್ತು ಗುರುಗ್ರಾಮದಿಂದ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮತ್ತು ಅತಿ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಆ ಮೂಲಕ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಆರ್ಥಿಕ ಬೆಳವಣಿಗೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಉತ್ತೇಜಿಸುತ್ತದೆ.

ಈ ಕಾರಿಡಾರ್ ಈಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್ ವೇ, ಯಮುನಾ ಎಕ್ಸ್ ಪ್ರೆಸ್ ವೇ ಮತ್ತು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC) ಗಳನ್ನು ಸಂಧಿಸುವ ಮೂಲಕ ಬಹುಮಾದರಿ ಸಾರಿಗೆ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ಈ ಎಲಿವೇಟೆಡ್ ಕಾರಿಡಾರ್ ಕೇವಲ ಒಂದು ರಚನಾತ್ಮಕ ಸುಧಾರಣೆಯಲ್ಲ, ಬದಲಾಗಿ ಇದು ನಗರ ರೂಪಾಂತರ, ಪ್ರಾದೇಶಿಕ ಸಂಪರ್ಕ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ದಕ್ಷತೆಗೆ ಪೂರಕವಾದ ಕಾರ್ಯತಂತ್ರದ ಸೌಲಭ್ಯವಾಗಿದೆ. ಜೇವರ್ ವಿಮಾನ ನಿಲ್ದಾಣ–ದೆಹಲಿ–ಮುಂಬೈ ಎಕ್ಸ್ ಪ್ರೆಸ್ ವೇ ಕಾರಿಡಾರ್ ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಫರಿದಾಬಾದ್ ನಲ್ಲಿ ಸುಸ್ಥಿರ ನಗರಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇದರ ನಿರ್ಮಾಣವು ಅನಿವಾರ್ಯವಾಗಿದೆ.

ಈ ಯೋಜನೆಯ ಸುಮಾರು 11 ಕಿಮೀ ಉದ್ದವನ್ನು ಎಲಿವೇಟೆಡ್ ಹೈವೇ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಡಿ.ಎನ್.ಡಿ (DND)-ಬಲ್ಲಭಗಢ ಬೈಪಾಸ್ ಮತ್ತು ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಗ್ರೀನ್ ಫೀಲ್ಡ್ ಸಂಪರ್ಕದ ನಿರ್ಣಾಯಕ ಭಾಗವಾಗಿದ್ದು, ಇದನ್ನು ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಗೆ ಜೋಡಿಸುತ್ತದೆ. ಈ ಕಾರಿಡಾರ್ ಫರಿದಾಬಾದ್ ಮಾಸ್ಟರ್ ಪ್ಲಾನ್ 2031ರ ಅಡಿಯಲ್ಲಿ ಹೆಚ್ಚಿನ ಸಾಂದ್ರತೆಯ ನಗರಾಭಿವೃದ್ಧಿ ಮತ್ತು ಭವಿಷ್ಯದ ಮೂಲಸೌಕರ್ಯ ವಿಸ್ತರಣೆಗಾಗಿ ಗುರುತಿಸಲಾದ ಪ್ರದೇಶದ ಮೂಲಕ ಹಾದುಹೋಗುತ್ತದೆ. ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್ ನ ಹೆಚ್ಚುವರಿ ವೆಚ್ಚ 689.24 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 450 ಕೋಟಿ ರೂಪಾಯಿಗಳನ್ನು ಭರಿಸಲು ಹರಿಯಾಣ ಸರ್ಕಾರ ಒಪ್ಪಿಗೆ ನೀಡಿದೆ.

ದೆಹಲಿ-ಮುಂಬೈನ ದೆಹಲಿ-ಫರಿದಾಬಾದ್-ಬಲ್ಲಭಗಢ-ಸೋಹ್ನಾ ಸ್ಪರ್ ನಿಂದ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ರೀನ್ಫೀಲ್ಡ್ ಸಂಪರ್ಕಕ್ಕಾಗಿ ಯೋಜನೆಯ ಜೋಡಣೆ ನಕ್ಷೆ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Led by iPhones, ‘Made in India’ smartphone exports grow 28% y-o-y in CY25: Counterpoint

Media Coverage

Led by iPhones, ‘Made in India’ smartphone exports grow 28% y-o-y in CY25: Counterpoint
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಎಪ್ರಿಲ್ 2026
April 24, 2026

Made in India, Built for 2047: PM Modi’s Reforms Turning Rural Hope into National Strength