“Environment and sustainable development have been key focus areas for me all through my 20 years in office, first in Gujarat and now at the national level”
“Equitable energy access to the poor has been a cornerstone of our environmental policy”
“India is a mega-diverse country and It is our duty to protect this ecology”
“Environmental sustainability can only be achieved through climate justice”
“Energy requirements of the people of India are expected to nearly double in the next twenty years. Denying this energy would be denying life itself to millions”
“Developed countries need to fulfill their commitments on finance and technology transfer”
“Sustainability requires co-ordinated action for the global commons”
“We must work towards ensuring availability of clean energy from a world-wide grid everywhere at all times. This is the ''whole of the world'' approach that India's values stand for”
 

21ನೇ ಜಾಗತಿಕ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ನಿಮ್ಮೆಲ್ಲರೊಂದಿಗೆ ಸೇರಲು ನನಗೆ ಸಂತೋಷವಾಗಿದೆ. ನನ್ನ 20 ವರ್ಷಗಳ ಸುದೀರ್ಘ ಅಧಿಕಾರಾವಧಿಯಲ್ಲಿ, ಮೊದಲು ಗುಜರಾತ್‌ನಲ್ಲಿ ಮತ್ತು ಈಗ ರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯು ನನ್ನ ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿದೆ.

ಸ್ನೇಹಿತರೆ, ಜನರು ನಮ್ಮ ಪೃಥ್ವಿ(ಗ್ರಹ)ಯನ್ನು ದುರ್ಬಲವೆಂದು ಕರೆಯುವುದನ್ನು ನಾವು ಕೇಳಿದ್ದೇವೆ. ಆದರೆ ಅದು ದುರ್ಬಲವಾದ ಗ್ರಹವಲ್ಲ. ಅದು ನಾವು, ಅಂದರೆ ನಾವು ದುರ್ಬಲರಾಗಿದ್ದೇವೆ. ಗ್ರಹಕ್ಕೆ, ಪ್ರಕೃತಿಗೆ ನಮ್ಮ ಬದ್ಧತೆಗಳು ಸಹ ದುರ್ಬಲವಾಗಿವೆ. 1972ರ ಸ್ಟಾಕ್‌ಹೋಮ್ ಸಮ್ಮೇಳನದಿಂದ ಹಿಡಿದು ಕಳೆದ 50 ವರ್ಷಗಳಿಂದ ಈ ವಿಚಾರವಾಗಿ ಬಹಳಷ್ಟು ಹೇಳುತ್ತಾ ಬರಲಾಗಿದೆ. ಆದರೆ ಮಾಡಿರುವುದು ಮಾತ್ರ ಬಹಳ ಕಡಿಮೆ. ಆದರೂ ಭಾರತದಲ್ಲಿ ನಾವು ಮಾತಿನಂತೆ ನಡೆದುಕೊಂಡಿದ್ದೇವೆ.

ಬಡವರಿಗೂ ಸಮಾನವಾಗಿ ಇಂಧನ ಲಭ್ಯತೆ ಖಾತ್ರಿಪಡಿಸುವುದು ನಮ್ಮ ಪರಿಸರ ನೀತಿಯ ಮೂಲಾಧಾರವಾಗಿದೆ. ಉಜ್ವಲ ಯೋಜನೆಯ ಮೂಲಕ 90 ದಶಲಕ್ಷಕ್ಕಿಂತಲೂ ಹೆಚ್ಚಿನ ಮನೆಗಳಿಗೆ ಶುದ್ಧ ಅಡುಗೆ ಅನಿಲ ಲಭ್ಯತೆ ಒದಗಿಸಲಾಗಿದೆ. ಪಿಎಂ-ಕುಸುಮ್ ಯೋಜನೆಯಡಿ, ನಾವು ರೈತರಿಗೆ ನವೀಕರಿಸಬಹುದಾದ ಇಂಧನ ಒದಗಿಸುತ್ತಿದ್ದೇವೆ. ನಾವು ಸೌರಶಕ್ತಿ ಪ್ಯಾನಲ್‌ಗಳನ್ನು ಸ್ಥಾಪಿಸಲು, ಅದನ್ನು ಬಳಸಲು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡಲು ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸ್ವತಂತ್ರ ಸೌರಶಕ್ತಿ ಪಂಪ್‌ಗಳು ಮತ್ತು ಅಸ್ತಿತ್ವದಲ್ಲಿರುವ ಪಂಪ್‌ಗಳನ್ನು ಸೌರಶಕ್ತಿಗೆ ಪರಿವರ್ತಿಸುವ ಪ್ರಯತ್ನಗಳನ್ನು ಹೆಚ್ಚಿಸಲಾಗುತ್ತಿದೆ. ''ರಾಸಾಯನಿಕ-ಮುಕ್ತ ನೈಸರ್ಗಿಕ ಕೃಷಿ''ಯ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಸುಸ್ಥಿರತೆ ಮತ್ತು ಸಮಾನತೆ ಉತ್ತೇಜಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ, ನಮ್ಮ ಎಲ್ಇಡಿ ಬಲ್ಬ್ ವಿತರಣಾ ಯೋಜನೆಯು 7 ವರ್ಷಗಳಿಂದ ಚಾಲನೆಯಲ್ಲಿದೆ. ಇದು ವರ್ಷಕ್ಕೆ 220 ಶತಕೋಟಿ ಯೂನಿಟ್ ವಿದ್ಯುತ್ ಮತ್ತು 180 ಶತಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯಲು ಸಹಾಯ ಮಾಡಿದೆ. ನಾವು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಸ್ಥಾಪನೆ ಘೋಷಿಸಿದ್ದೇವೆ. ಇದು ನಮ್ಮ ಭವಿಷ್ಯವನ್ನು ಶಕ್ತಿಯುತಗೊಳಿಸಲು ಅತ್ಯಾಕರ್ಷಕ ತಂತ್ರಜ್ಞಾನವಾದ ಹಸಿರು ಹೈಡ್ರೋಜನ್ ಇಂಧನ ಮೂಲಗಳನ್ನು ಗುರುತಿಸುವ ಗುರಿ ಹೊಂದಿದೆ. ಹಸಿರು ಹೈಡ್ರೋಜನ್‌  ಸಾಮರ್ಥ್ಯವನ್ನು ಅರಿತುಕೊಳ್ಳಲು ಸೂಕ್ತ ಮತ್ತು ಸಮರ್ಥ ಪರಿಹಾರಗಳೊಂದಿಗೆ ಬರಲು ಇಂಧನ ಮತ್ತು ಸಂಶೋಧನಾ ಸಂಸ್ಥೆ (ಟೆರಿ-TERI) ಅಂತಹ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನು ನಾನು ಪ್ರೋತ್ಸಾಹಿಸುತ್ತೇನೆ.

ಸ್ನೇಹಿತರೆ, ಭಾರತವು ಬೃಹತ್ ವೈವಿಧ್ಯಮಯ ದೇಶವಾಗಿದೆ. ವಿಶ್ವದ ಭೂಪ್ರದೇಶದ 2.4%ರಷ್ಟಿರುವ ಭಾರತವು, ವಿಶ್ವದ ಜಾತಿಗಳಲ್ಲಿ ಸುಮಾರು 8%ನಷ್ಟು ಭಾಗ ಹೊಂದಿದೆ. ಈ ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಾವು ನಮ್ಮ ಸಂರಕ್ಷಿತ ಪ್ರದೇಶದ ಜಾಲವನ್ನು ಬಲಪಡಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು(ಐ.ಯು.ಸಿ.ಎನ್.) ನಮ್ಮ ಪ್ರಯತ್ನಗಳನ್ನು ಗುರುತಿಸಿದೆ. ಹರಿಯಾಣದ ಅರಾವಳಿ ಜೀವವೈವಿಧ್ಯ ಉದ್ಯಾನವನ್ನು 'ಇತರ ಪರಿಣಾಮಕಾರಿ ಪ್ರದೇಶ ಆಧಾರಿತ ಸಂರಕ್ಷಣಾ ಕ್ರಮಗಳು'(ಒ.ಇ.ಸಿ.ಎಂ.) ಜೈವಿಕ ವೈವಿಧ್ಯದ ಪರಿಣಾಮಕಾರಿ ಸಂರಕ್ಷಣೆಯ ತಾಣವಾಗಿ ಗುರುತಿಸಿದೆ. ಇತ್ತೀಚಿಗೆ ಭಾರತದ ಇನ್ನೂ 2 ಜೌಗು ಪ್ರದೇಶಗಳನ್ನು “ರಾಮ್ಸಾರ್ ತಾಣ”ಗಳೆಂದು ಗುರುತಿಸಲ್ಪಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ.

ಭಾರತವು ಈಗ 1 ದಶಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಹರಡಿರುವ 49 ರಾಮ್‌ಸರ್ ತಾಣಗಳನ್ನು ಹೊಂದಿದೆ. ಅವನತಿ ಹಾದಿಯಲ್ಲಿರುವ ಕ್ಷೀಣಿಸಿದ ಭೂಮಿಯನ್ನು ಮರುಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಗಮನದ ಕ್ಷೇತ್ರಗಳಲ್ಲಿ ಒಂದಾಗಿದೆ. 2015ರಿಂದ ನಾವು 11.5 ದಶಲಕ್ಷ  ಹೆಕ್ಟೇರ್‌ಗಳಿಗಿಂತ ಹೆಚ್ಚಿನ ಪ್ರದೇಶವನ್ನು ಮರುಅಭಿವೃದ್ಧಿಪಡಿಸಿದ್ದೇವೆ.  ಬಾನ್ ಚಾಲೆಂಜ್ ಅಡಿ, ನಾವು ಭೂ ಅವನತಿ ತಟಸ್ಥತೆಯ ರಾಷ್ಟ್ರೀಯ ಬದ್ಧತೆಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ. ಯುಎನ್ಎಫ್ ಸಿಸಿಸಿ  ಅಡಿ, ಮಾಡಿದ ನಮ್ಮ ಎಲ್ಲಾ ಬದ್ಧತೆಗಳನ್ನು ಪೂರೈಸುವುದನ್ನು ನಾವು ದೃಢವಾಗಿ ನಂಬುತ್ತೇವೆ. ಗ್ಲಾಸ್ಗೋದಲ್ಲಿ ನಡೆದ CoP-26 ಸಮಾವೇಶದಲ್ಲಿ ನಾವು ನಮ್ಮ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಿದ್ದೇವೆ.

ಸ್ನೇಹಿತರೆ, ಪರಿಸರದ ಸುಸ್ಥಿರತೆಯನ್ನು ಹವಾಮಾನ ನ್ಯಾಯದ ಮೂಲಕ ಮಾತ್ರ ಸಾಧಿಸಬಹುದು ಎಂದು ನೀವು ಒಪ್ಪುತ್ತೀರಿ ಎಂದು ನನಗೆ ಖಾತ್ರಿಯಿದೆ, ಇದನ್ನು ನಾನು ದೃಢವಾಗಿ ನಂಬುತ್ತೇನೆ. ಮುಂದಿನ 20 ವರ್ಷಗಳಲ್ಲಿ ಭಾರತದ ಜನರ ಇಂಧನ ಅವಶ್ಯಕತೆಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಈ ಇಂಧನವನ್ನು ನಿರಾಕರಿಸುವುದು ಲಕ್ಷಾಂತರ ಜನರಿಗೆ ಜೀವನವನ್ನು ನಿರಾಕರಿಸಿದಂತಾಗುತ್ತದೆ. ಯಶಸ್ವಿ ಹವಾಮಾನ ಕ್ರಮಗಳಿಗೆ ಸಾಕಷ್ಟು ಹಣಕಾಸಿನ ಅಗತ್ಯವಿರುತ್ತದೆ. ಇದಕ್ಕಾಗಿ, ಅಭಿವೃದ್ಧಿ ಹೊಂದಿದ ದೇಶಗಳು ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿ ತಮ್ಮ ಬದ್ಧತೆಯನ್ನು ಪೂರೈಸುವ ಅಗತ್ಯವಿದೆ.

ಸ್ನೇಹಿತರೆ, ಜಾಗತಿಕ ಕಾರಣಗಳಿಗಾಗಿ ಸುಸ್ಥಿರತೆಗೆ ಸಂಘಟಿತ ಕ್ರಮಗಳ ಅಗತ್ಯವಿದೆ. ನಮ್ಮ ಪ್ರಯತ್ನಗಳು ಈ ಅಂತರ್-ಅವಲಂಬನೆಯನ್ನು ಗುರುತಿಸಿವೆ. ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಮೂಲಕ, ನಮ್ಮ ಗುರಿ ''ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್'' ಆಗಿದೆ. ಎಲ್ಲಾ ಸಮಯದಲ್ಲೂ ವಿಶ್ವಾದ್ಯಂತ ಗ್ರಿಡ್‌ನಿಂದ ಶುದ್ಧ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಬೇಕು. ಇದು ಭಾರತದ ಮೌಲ್ಯಗಳನ್ನು ಪ್ರತಿನಿಧಿಸುವ ''ಇಡೀ ವಿಶ್ವ'' ಕಾರ್ಯ ವಿಧಾನವಾಗಿದೆ.

ಸ್ನೇಹಿತರೆ, ವಿಪತ್ತು ನಿರ್ವಹಣಾ ಮೂಲಸೌಕರ್ಯಗಳ ಒಕ್ಕೂಟ (ಸಿಡಿಆರ್ ಐ), ಆಗಾಗ್ಗೆ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಗಳಲ್ಲಿ ಬಲವಾದ ಮೂಲಸೌಕರ್ಯವನ್ನು ನಿರ್ಮಿಸುವ ಗುರಿ ಹೊಂದಿದೆ. ಸಿಒಪಿ-26ರ ಬದಿಯಲ್ಲಿ, ನಾವು ''ದ್ವೀಪ ರಾಷ್ಟ್ರಗಳಿಗೆ ವಿಕೋಪ ನಿರ್ವಹಣಾ ಮೂಲಸೌಕರ್ಯ'' ಎಂಬ ಉಪಕ್ರಮ ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಹೊಂದುತ್ತಿರುವ ದ್ವೀಪ ರಾಷ್ಟ್ರಗಳು ಅತ್ಯಂತ ದುರ್ಬಲವಾಗಿವೆ, ಅವುಗಳಿಗೆ  ತುರ್ತು ರಕ್ಷಣೆಯ ಅಗತ್ಯವಿದೆ.

ಸ್ನೇಹಿತರೆ, ಈ 2 ಉಪಕ್ರಮಗಳಿಗೆ ನಾವು ಈಗ ಜೀವನ – ಜೀವನಶೈಲಿಗಾಗಿ ಪರಿಸರ ಉಪಕ್ರಮವನ್ನು ಸೇರಿಸುತ್ತೇವೆ. ನಮ್ಮ ಪೃಥ್ವಿ(ಗ್ರಹ)ಯನ್ನು ಸುಧಾರಿಸಲು ಜೀವನಶೈಲಿಯ ಆಯ್ಕೆಗಳನ್ನು ಮಾಡುವುದೇ ಜೀವನವಾಗಿದೆ. ಜೀವನ-ಸುಸ್ಥಿರ ಜೀವನಶೈಲಿ ಉಪಕ್ರಮವು ಜಾಗತಿಕ ಸಮಾನ ಮನಸ್ಸಿನ ಜನರನ್ನು ಉತ್ತೇಜಿಸುವ ಒಕ್ಕೂಟವಾಗಿದೆ. ನಾನು ಅವರನ್ನು 3ಪಿಎಸ್ ಎಂದು ಕರೆಯುತ್ತೇನೆ - ಪ್ರೊ ಪ್ಲಾನೆಟ್ ಜನರು. ಪ್ರೊ ಪ್ಲಾನೆಟ್ ಜನರ (3-Ps) ಈ ಜಾಗತಿಕ ಚಳುವಳಿಯು ಸುಸ್ಥಿರ ಜೀವನದ ಒಕ್ಕೂಟವಾಗಿದೆ. ಈ ಮೂರು ಜಾಗತಿಕ ಒಕ್ಕೂಟಗಳು ಜಾಗತಿಕ ಕಾರಣಗಳನ್ನು ಸುಧಾರಿಸಲು ನಮ್ಮ ಪರಿಸರ ಪ್ರಯತ್ನಗಳ ತ್ರಿಮೂರ್ತಿಯನ್ನು(ಟ್ರಿನಿಟಿ) ರೂಪಿಸುತ್ತವೆ.

ಸ್ನೇಹಿತರೆ, ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು ನನ್ನ ಸ್ಫೂರ್ತಿಯ ಸೆಲೆಗಳಾಗಿವೆ. 2021ರಲ್ಲಿ, ಜನರು ಮತ್ತು ಪೃಥ್ವಿಯ  ಆರೋಗ್ಯ ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಭಾರತೀಯರು ಯಾವಾಗಲೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ನಮ್ಮ ಸಂಸ್ಕೃತಿ, ಆಚರಣೆಗಳು, ದೈನಂದಿನ ಆಚರಣೆಗಳು ಮತ್ತು ಹಲವಾರು ಸುಗ್ಗಿಯ ಹಬ್ಬಗಳು ಪ್ರಕೃತಿಯೊಂದಿಗೆ ನಮ್ಮ ಬಲವಾದ ಬಂಧಗಳನ್ನು ಪ್ರದರ್ಶಿಸುತ್ತವೆ. ಕಡಿಮೆ ಮಾಡಿ, ಮರುಬಳಕೆ ಮಾಡಿ, ಮರುಬಳಕೆ ಮಾಡಿ, ಚೇತರಿಸಿಕೊಳ್ಳಿ, ಮರು-ವಿನ್ಯಾಸಗೊಳಿಸಿ ಮತ್ತು ಮರುಉತ್ಪಾದನೆ ಭಾರತದ ಸಾಂಸ್ಕೃತಿಕ ನೀತಿಯ ಭಾಗವಾಗಿದೆ. ನಾವು ಯಾವಾಗಲೂ ಮಾಡಿದಂತೆ ಹವಾಮಾನ ಸೂಕ್ತ ನೀತಿಗಳು ಮತ್ತು ಅಭ್ಯಾಸಗಳಿಗಾಗಿ ಭಾರತ ಸದಾ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತದೆ.

ನನ್ನ ಈ ಮಾತುಗಳೊಂದಿಗೆ ಮತ್ತು ಅಪಾರ ಭರವಸೆಗಳೊಂದಿಗೆ, ನಾನು ಇಂಧನ ಮತ್ತು ಸಂಶೋಧನಾ ಸಂಸ್ಥೆ(ಟೆರಿ)ಗೆ ಮತ್ತು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಜಾಗತಿಕ ಪ್ರತಿನಿಧಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು!

ಮತ್ತೊಮ್ಮೆ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Wed in India’ Initiative Fuels The Rise Of NRI And Expat Destination Weddings In India

Media Coverage

'Wed in India’ Initiative Fuels The Rise Of NRI And Expat Destination Weddings In India
NM on the go

Nm on the go

Always be the first to hear from the PM. Get the App Now!
...
Prime Minister Congratulates Indian Squash Team on World Cup Victory
December 15, 2025

Prime Minister Shri Narendra Modi today congratulated the Indian Squash Team for creating history by winning their first‑ever World Cup title at the SDAT Squash World Cup 2025.

Shri Modi lauded the exceptional performance of Joshna Chinnappa, Abhay Singh, Velavan Senthil Kumar and Anahat Singh, noting that their dedication, discipline and determination have brought immense pride to the nation. He said that this landmark achievement reflects the growing strength of Indian sports on the global stage.

The Prime Minister added that this victory will inspire countless young athletes across the country and further boost the popularity of squash among India’s youth.

Shri Modi in a post on X said:

“Congratulations to the Indian Squash Team for creating history and winning their first-ever World Cup title at SDAT Squash World Cup 2025!

Joshna Chinnappa, Abhay Singh, Velavan Senthil Kumar and Anahat Singh have displayed tremendous dedication and determination. Their success has made the entire nation proud. This win will also boost the popularity of squash among our youth.

@joshnachinappa

@abhaysinghk98

@Anahat_Singh13”