ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಮಂಗಳವಾರದಂದು ಇಂಧನ, ನವೀಕರಿಸಬಹುದಾದ ಇಂಧನ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಗಣಿ  ಮುಂತಾದ ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.  ಎರಡು ಗಂಟೆಗಳ ಕಾಲ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಪ್ರಧಾನ ಮಂತ್ರಿ ಕಾರ್ಯಾಲಯ, ಮೂಲಸೌಕರ್ಯ ವಲಯ ಸಂಬಂಧಿತ ಸಚಿವಾಲಯಗಳು ಮತ್ತು ನೀತಿ ಆಯೋಗದ  ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  
 
ಸಭೆಯಲ್ಲಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಅಮಿತಾಬ್ ಕಾಂತ್  ಕಾರ್ಯ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 344 ಗಿಗಾವ್ಯಾಟ್  ಏರಿಕೆಯಾಗಿರುವ ಕುರಿತು ಗಮನ ಹರಿಸಲಾಯಿತು.   2014ರಲ್ಲಿ ಶೇಕಡಾ 4ರಷ್ಟಿದ್ದ ಭಾರತದ ಇಂಧನ ಕೊರತೆ 2018ರಲ್ಲಿ ಶೇಕಡಾ 1 ಕ್ಕೆ ಇಳಿಕೆಯಾಗಿದೆ.  ಪ್ರಸರಣ ಮಾರ್ಗಗಳು, ಟ್ರಾನ್ಸ್ ಫಾರ್ಮರ್ ಸಾಮರ್ಥ್ಯ ಮತ್ತು ಅಂತರ್ –ಪ್ರಾದೇಶಿಕ ಪ್ರಸರಣದಲ್ಲಿ ಗಮನಾರ್ಹ ಸಾಮರ್ಥ್ಯ ಸೇರ್ಪಡೆಯಾಗಿದೆ.
|

 ವರ್ಲ್ಡ್  ಬ್ಯಾಂಕ್ ನ  ‘ಈಸ್ ಆಫ್ ಗೆಟಿಂಗ್ ಎಲೆಕ್ಟ್ರಿಸಿಟಿ’  ಸೂಚ್ಯಾಂಕದಲ್ಲಿ 2014ರಲ್ಲಿ 99ನೆಯ ಸ್ಥಾನದಲ್ಲಿದ್ದ ಭಾರತ  ಈಗ 26ನೆಯ ಸ್ಥಾನಕ್ಕೇರಿದೆ.  ಸೌಭಾಗ್ಯ ಯೋಜನೆಯಡಿ ನಡೆದ ವಸತಿ ವಿದ್ಯುದೀಕರಣದ ಪ್ರಗತಿಯನ್ನೂ ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕಟ್ಟಕಡೆಯವರೆಗಿನ ಸಂಪರ್ಕ ಮತ್ತು ವಿತರಣೆ ಕುರಿತು ಚರ್ಚೆ ನಡೆಸಲಾಯಿತು.

|
ಹೊಸ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿನ ಸಂಚಿತ ಸ್ಥಾಪಿತ ಸಾಮರ್ಥ್ಯ  ಸರಿಸುಮಾರು ದ್ವಿಗುಣಗೊಂಡಿದೆ.  2013-14ನೆಯ ಸಾಲಿನಲ್ಲಿ 35.5 ಗಿಗಾವ್ಯಾಟ್  ಇದ್ದ ಸಾಮರ್ಥ್ಯ 2017-18ನೆಯ ಸಾಲಿನಲ್ಲಿ 70 ಗಿಗಾವ್ಯಾಟ್ ಗೇರಿದೆ.  ಇದೇ ಅವಧಿಯಲ್ಲಿ ಸೌರಶಕ್ತಿ ವಲಯದಲ್ಲಿ ಸ್ಥಾಪಿತ ಸಾಮರ್ಥ್ಯ 2.6 ಗಿಗಾವ್ಯಾಟ್ ನಿಂದ 22 ಗಿಗಾವ್ಯಾಟ್ ಗೇರಿದೆ.  2022ರೊಳಗೆ 175 ಗಿಗಾವ್ಯಾಟ್  ನವೀಕರಿಸಬಹುದಾದ ಇಂಧನ ಸಾಮರ್ಥ್ಯ  ಸಾಧಿಸುವ ಪ್ರಧಾನಮಂತ್ರಿಯವರ ಗುರಿ ಸಾಧನೆ ಹಾದಿಯೆಡೆ ಭಾರತ ಸಾಗುತ್ತಿರುವ   ಕುರಿತು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.  
 
ಸೋಲಾರ್ ಪಂಪುಗಳು ಮತ್ತು ಬಳಕೆದಾರ ಸ್ನೇಹಿ ಸೌರ  ಅಡುಗೆ ಪರಿಕರಗಳ ಮೂಲಕ ಸೌರ ಶಕ್ತಿ ಸಾಮರ್ಥ್ಯದಲ್ಲಾದ ಹೆಚ್ಚಳದ ಲಾಭ ರೈತರನ್ನು ತಲುಪುವ ಕುರಿತು ಖಾತ್ರಿ ಪಡಿಸಕೊಳ್ಳಲು ಪ್ರಧಾನಮಂತ್ರಿ ಅಧಿಕಾರಿಗಳನ್ನು ಒತ್ತಾಯಿಸಿದರು.  
|

ಮುಂಬರುವ ಹಣಕಾಸು ವರುಷದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ  ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಇರಿಸಿರುವ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾದ ಅಂಶ ತಿಳಿಯಿತು. ಕಲ್ಲಿದ್ದಲು ವಲಯದಲ್ಲಿ ಕುರಿತು ನಡೆದ ಚರ್ಚೆ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸುವ ಕುರಿತು ಕೇಂದ್ರೀಕೃತವಾಗಿತ್ತು. 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s Economic Momentum Holds Amid Global Headwinds: CareEdge

Media Coverage

India’s Economic Momentum Holds Amid Global Headwinds: CareEdge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಮೇ 2025
May 18, 2025

Aatmanirbhar Bharat – Citizens Appreciate PM Modi’s Effort Towards Viksit Bharat