ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ರೇಲ್ ನ ಪ್ರಧಾನಮಂತ್ರಿ ಗೌರವಾನ್ವಿತ ನಫ್ತಾಲಿ ಬೆನೆಟ್ ರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಈ ವರ್ಷದ ಆರಂಭದಲ್ಲಿ ಇಸ್ರೇಲ್ ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಗೌರವಾನ್ವಿತ ಬೆನೆಟ್ ಅವರಿಗೆ ಪ್ರಧಾನಮಂತ್ರಿ ಶುಭಾಶಯಗಳನ್ನು ಪುನರುಚ್ಚರಿಸಿದರು.
ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಗಮನಾರ್ಹ ಪ್ರಗತಿ ಆಗಿರುವುದಕ್ಕೆ ಉಭಯ ನಾಯಕರು ತೃಪ್ತಿವ್ಯಕ್ತಪಡಿಸಿದರು. ಕೃಷಿ, ಜಲ, ರಕ್ಷಣೆ ಮತ್ತು ಭದ್ರತೆ ಹಾಗೂ ಸೈಬರ್ ಭದ್ರತೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಇಸ್ರೇಲ್ ಜೊತೆಗಿನ ತನ್ನ ಬಲವಾದ ಸಹಕಾರವನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಸಹಕಾರವನ್ನು ವಿಶೇಷವಾಗಿ ಉನ್ನತ ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯಗಳಲ್ಲಿ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಸಾಮರ್ಥ್ಯವನ್ನು ಉಭಯ ನಾಯಕರು ಒಪ್ಪಿಕೊಂಡರು. ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು ಮತ್ತು ಭಾರತ-ಇಸ್ರೇಲ್ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎರಡು ವಿದೇಶಾಂಗ ಸಚಿವಾಲಯಗಳು ನೀಲನಕ್ಷೆಯನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು.
ಮುಂದಿನ ವರ್ಷ ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 30ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದನ್ನು ನೆನಪು ಮಾಡಿಕೊಂಡ ಅವರು, ಪ್ರಧಾನಮಂತ್ರಿ ಗೌರವಾನ್ವಿತ ಬೆನೆಟ್ ಅವರಿಗೆ ಆಹ್ವಾನ ನೀಡಿದರು.
ಮುಂಬರುವ ಯಹೂದಿಯ ಹಬ್ಬ ರೋಶ್ ಹಶಾನ್ಹಾ ಹಬ್ಬಕ್ಕಾಗಿ ಇಸ್ರೇಲ್ ಜನತೆಗೆ ಮತ್ತು ಗೌರವಾನ್ವಿತ ಬೆನಟ್ ಅವರಿಗೆ ಪ್ರಧಾನಮಂತ್ರಿ ಶುಭಾಶಯಗಳನ್ನು ತಲುಪಿಸಿದರು.


