ರಾಜ್ಯಸಭೆಯ ಉಪ ಸಭಾಪತಿಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಶ್ರೀ ಹರಿವಂಶ್ ಜೀ ಅವರನ್ನು ನಾನು ಇಡೀ ಸದನದ ಪರವಾಗಿ ಮತ್ತು ಎಲ್ಲ ದೇಶವಾಸಿಗಳ ಪರವಾಗಿ ಅಭಿನಂದಿಸುತ್ತೇನೆ.

ಪತ್ರಿಕೋದ್ಯಮ ಮತ್ತು ಸಮಾಜ ಸೇವೆಯಲ್ಲಿ ಪ್ರಾಮಾಣಿಕತೆಯ ಛಾಪು ಮೂಡಿಸಿರುವ ಹರಿವಂಶ್ ಜೀ ಅವರ ಬಗ್ಗೆ ನನ್ನ ಹೃದಯದಲ್ಲಿ ಅಪಾರವಾದ ಗೌರವವಿದೆ. ಅವರನ್ನು ಆಪ್ತವಾಗಿ ಬಲ್ಲವರೆಲ್ಲರೂ ನಾನು ಅವರ ಬಗ್ಗೆ ಇಟ್ಟಿರುವಂತೆ ಆಪ್ತ ಗೌರವವನ್ನೇ ಹೊಂದಿರುತ್ತಾರೆ; ಸದನದ ಪ್ರತಿಯೊಬ್ಬ ಸದಸ್ಯರೂ ಹಾಗೆ ಭಾವಿಸುತ್ತಾರೆ. ಹರಿವಂಶಜೀ ಸ್ವತಃ ಈ ಗೌರವ ಮತ್ತು ಅನುಬಂಧವನ್ನು ಗಳಿಸಿದ್ದಾರೆ. ಅವರ ಕಾರ್ಯ ಶೈಲಿ ಮತ್ತು ಅವರು ಸದನದ ನಡಾವಳಿಗಳನ್ನು ನಡೆಸುವ ವಿಧಾನವನ್ನೂ ಗಮನಿಸಿದರೆ ಅದು ಸಹಜ. ಸದನದಲ್ಲಿ ನಿಮ್ಮ ನಿಷ್ಪಕ್ಷಪಾತ ಪಾತ್ರವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ.

ಮಾನ್ಯ ಸಭಾಪತಿಯವರೇ, ಈ ಬಾರಿ ಸದನದ ಕಲಾಪವನ್ನು ಹಿಂದೆಂದೂ ಕಾಣದಂತಹ ವಿಪರೀತ ಪರಿಸ್ಥಿತಿಯಲ್ಲಿ ನಡೆಸಲಾಗುತ್ತಿದೆ. ಕರೋನಾದ ಪ್ರಸಕ್ತ ಸಂದರ್ಭಗಳಲ್ಲಿ, ಈ ಸದನವು ಕಾರ್ಯನಿರ್ವಹಿಸುತ್ತಿದೆ ಮತ್ತು ದೇಶದ ಬಗೆಗಿನ ತನ್ನ ಪ್ರಮುಖ ಹೊಣೆಗಾರಿಕೆಗಳನ್ನು ಪೂರೈಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಮಾರ್ಗಸೂಚಿಗಳನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ಮಾನ್ಯ ಅಧ್ಯಕ್ಷರೆ, ರಾಜ್ಯಸಭೆಯ ಸದಸ್ಯರು ಉಪ ಸಭಾಪತಿಯವರಿಗೆ ಸದನವನ್ನು ಸುಗಮವಾಗಿ ನಡೆಸಲು ಹೆಚ್ಚಿನ ಸಹಕಾರ ನೀಡಿದರೆ, ಸಮಯದ ಹೆಚ್ಚಿನ ಸದ್ಬಳಕೆ ಆಗುತ್ತದೆ ಮತ್ತು ಪ್ರತಿಯೊಬ್ಬರೂ ಸುರಕ್ಷಿತವಾಗಿರುತ್ತಾರೆ.

ಮಾನ್ಯ ಅಧ್ಯಕ್ಷರೇ, ಸಂಸತ್ತಿನ ಮೇಲ್ಮನೆಯ ಜವಾಬ್ದಾರಿಗಾಗಿ ನಾವು ಅವರ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಶ್ರೀ ಹರಿವಂಶ್ ಜೀ ಅವರು ಪ್ರತಿ ಹಂತದಲ್ಲೂ ಬದುಕಿ ತೋರಿಸಿದ್ದಾರೆ. ನನ್ನ ಹಿಂದಿನ ಭಾಷಣದಲ್ಲಿ, ದೇವರು ಪ್ರತಿಯೊಬ್ಬರಿಗೂ ಇರುತ್ತಾನೆ ಎಂಬ ದೃಢ ನಂಬಿಕೆ ನನಗಿದೆ, ಅದೇ ರೀತಿ, ಸದನದಲ್ಲೂ ದೇವರು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಗಾಗಿ ಇರುತ್ತಾನೆ ಎಂದು ನಾನು ಹೇಳಿದ್ದೆ. ನಮ್ಮ ಸದನದ ದೇವರು ಹರಿವಂಶಜೀ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಪಕ್ಷಪಾತವಿಲ್ಲದೆ ಇರಬೇಕು ಮತ್ತು ಅವರು ಆಡಳಿತ ಅಥವಾ ವಿರೋಧ ಪಕ್ಷಕ್ಕೆ ಸೇರಬಾರದು.

ಸದನದಲ್ಲಿ ಕ್ಷೇತ್ರದ ಆಟಗಾರರಿಗಿಂತ ಅಂಪೈರ್‌ ಗಳು ಹೆಚ್ಚು ತೊಂದರೆಗೀಡಾಗುತ್ತಾರೆ ಎಂದು ನಾನು ಹೇಳಿದ್ದೆ. ಸಂಸದರನ್ನು ನಿಯಮಗಳ ಪ್ರಕಾರ ನಡೆಯಲು ಒತ್ತಾಯಿಸುವುದು ಬಹಳ ಸವಾಲಿನ ಸಂಗತಿಯಾಗಿದೆ. ಅವರು ಉತ್ತಮ ಅಂಪೈರ್ ಆಗುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿತ್ತು, ಹರಿವಂಶ್ ಜೀ ಅವರ ನಿರ್ಣಾಯಕತೆ ಮತ್ತು ನಿರ್ಧಾರಗಳ ಮೂಲಕ ತಮಗೆ ಚೆನ್ನಾಗಿ ಪರಿಚಯವಿಲ್ಲದವರ ವಿಶ್ವಾಸವನ್ನೂ ಗೆದ್ದಿದ್ದಾರೆ.

ಮಾನ್ಯ ಸಭಾಪತಿಯವರೇ, ಹರಿವಂಶ ಜೀ ಅವರೇ ತಮ್ಮ ಜವಾಬ್ದಾರಿಯನ್ನು ಹೇಗೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂಬುದಕ್ಕೆ ಈ ಎರಡು ವರ್ಷಗಳು ಸಾಕ್ಷಿ. ಹರಿವಂಶಜೀ ಅವರು ಪ್ರಮುಖ ಶಾಸನಗಳ ಬಗ್ಗೆ ಆಳವಾದ ಚರ್ಚೆಗಳನ್ನು ಆಯೋಜಿಸುವ ಮೂಲಕ ಮತ್ತು ಗಂಟೆಗಳ ಕಾಲ ಕುಳಿತು ಮಸೂದೆಗಳನ್ನು ತ್ವರಿತವಾಗಿ ಅಂಗೀಕರಿಸುವ ಮೂಲಕ ಸದನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ಸಮಯದಲ್ಲಿ, ದೇಶದ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ಐತಿಹಾಸಿಕ ಮಸೂದೆಗಳನ್ನು ಈ ಸದನದಲ್ಲಿ ಅಂಗೀಕರಿಸಲಾಗಿದೆ. ಕಳೆದ ವರ್ಷದಲ್ಲಿಯೇ, ಈ ಸದನವು 10 ವರ್ಷಗಳಲ್ಲಿ ಗರಿಷ್ಠ ಫಲಪ್ರದತೆಯ ದಾಖಲೆಯನ್ನು ಸೃಷ್ಟಿಸಿದೆ. ಅದೂ, ಕಳೆದ ವರ್ಷ ಲೋಕಸಭಾ ಚುನಾವಣೆ ನಡೆಯಬೇಗಿದ್ದಾಗ ಈ ಸಾಧನೆ ಮಾಡಿದೆ.!

ಫಲಪ್ರದತೆಯ ಜೊತೆಗೆ ಹೆಚ್ಚು ಸಕಾರಾತ್ಮಕತೆ ಕಂಡುಬಂದಿರುವುದು ಪ್ರತಿಯೊಬ್ಬ ಸದಸ್ಯರಿಗೂ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮಂಡಿಸಬಹುದು. ಸದನದ ಕಲಾಪಕ್ಕೆ ಅಡ್ಡಿಯಾಗದಂತೆ ಸಂಘಟಿತ ಪ್ರಯತ್ನಗಳು ಗಮನಕ್ಕೆ ಬಂದಿವೆ. ಇದು ಸದನದ ಘನತೆಯನ್ನು ಹೆಚ್ಚಿಸಿದೆ. ಇದು ಮೇಲ್ಮನೆಯ ಸಂವಿಧಾನ ನಿರ್ಮಾತೃಗಳ ಆಶಯವೂ ಆಗಿತ್ತು. ಪ್ರಜಾಪ್ರಭುತ್ವದ ನೀತಿ ನಿರೂಪಣೆಗೆ ಹೆಸರುವಾಸಿಯಾದ ಭೂಮಿ ಮತ್ತು ಜೆಪಿ ಮತ್ತು ಕಾರ್ಪುರಿ ಠಾಕೂರ್ ಮತ್ತು ಬಾಪು ಅವರ ಚಂಪಾರಣ್ ಇರುವ ಬಿಹಾರದಿಂದ ಬಂದಿದ್ದು, ಪ್ರಜಾಪ್ರಭುತ್ವದ ಹೇಗೆ ಮುಂದೆ ಸಾಗಬೇಕು ತನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂಬುದಕ್ಕೆ ಹರಿವಂಶಜೀ ಅವರು ದಾರಿ ದೀಪ ತೋರಿಸಿದ್ದಾರೆ.

ಹರಿವಶಜೀ ಬಗ್ಗೆ ನೀವು ಅವರ ಆಪ್ತರೊಂದಿಗೆ ಚರ್ಚಿಸಿದಾಗ, ಅವರು ಯಾಕೆ ಇಷ್ಟು ಭೂಮಿತೂಕದ ವ್ಯಕ್ತಿಯಾಗಿದ್ದಾರೆ ಎಂದು ತಿಳಿಯುತ್ತದೆ. ಅವರ ಆರಂಭಿಕ ಶಿಕ್ಷಣವು ಅವರ ಹಳ್ಳಿಯ ಬೇವಿನ ಮರದ ಕೆಳಗೆ ತಾತ್ಕಾಲಿಕ ಶಾಲೆಯಲ್ಲಿ ನಡೆಯಿತು. ಅವರ ಶಿಕ್ಷಣದ ಪಾಲನೆಯೇ ಅವರನ್ನು ವಾಸ್ತವಿಕತೆಗಳೊಂದಿಗೆ ಸಂಪರ್ಕಿಸಿ ಈ ಎತ್ತರಕ್ಕೆ ಬೆಳೆಸಿದೆ.

ಹರಿವಂಶಜೀ ಜಯಪ್ರಕಾಶ್ ಜೀಗೆ ಸೇರಿದ ಸೀತಾಬ್ ದಿಯಾರಾ ಗ್ರಾಮದಿಂದ ಬಂದವರು ಎಂಬುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಈ ಗ್ರಾಮವು ಜಯಪ್ರಕಾಶ್ ಜಿಯವರ ಜನ್ಮಸ್ಥಳ. ಪ್ರತಿವರ್ಷ, ದಿಯಾರಾ, ಗಂಗಾ ಮತ್ತು ಘಾಗ್ರಾ ಎಂಬ ಎರಡು ನದಿಗಳ ನಡುವೆ ಮತ್ತು ಉತ್ತರ ಪ್ರದೇಶದ ಎರಡು ರಾಜ್ಯಗಳು ಮತ್ತು ಬಿಹಾರದ ಮೂರು ಜಿಲ್ಲೆಗಳಾದ ಅರ್ರಾ, ಬಲ್ಲಿಯಾ, ಛಾಪ್ರಾ ನಡುವೆ ವಿಭಾಗಿಸಲ್ಪಟ್ಟಿದೆ, ಅದು ಪ್ರವಾಹಕ್ಕೆ ಒಳಗಾಗುತ್ತಿದ್ದಂತೆ ದ್ವೀಪವಾಗುತ್ತದೆ. ಕೇವಲ, ಒಂದು ಬೆಳೆ ಬೆಳೆಯಬಹುದು. ದೋಣಿಯಲ್ಲಿ ನದಿಯನ್ನು ದಾಟುವ ಮೂಲಕ ಎಲ್ಲಿಯಾದರೂ ಹೋಗಬೇಕು. ಇದು ಏಕೈಕ ಮಾರ್ಗವಾಗಿದೆ.

ಹರಿವಂಶಜೀ ತಮ್ಮ ಹಳ್ಳಿಯ ಮನೆಯಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಂದ ಸಂತೃಪ್ತಿ ಎಂಬ ಪ್ರಾಯೋಗಿಕ ಜ್ಞಾನವನ್ನು ಪಡೆದರು. ಒಮ್ಮೆ, ಯಾರೋ ಒಬ್ಬರು ಅವರ ಹಿನ್ನೆಲೆಯ ಬಗ್ಗೆ ಒಂದು ಘಟನೆಯನ್ನು ನನಗೆ ಹೇಳಿದರು. ಹರಿವಂಶ್ ಅವರಿಗೆ ಪ್ರೌಢ ಶಾಲೆ ತಲುಪಿದಾಗ ಮೊದಲ ಬಾರಿಗೆ ಶೂಗಳ ಅಗತ್ಯವಿತ್ತು. ಅವರು ಎಂದಿಗೂ ಖರೀದಿಸದ ಕಾರಣ ಅವರು ಬೂಟು ಅವರ ಬಳಿ ಇರಲಿಲ್ಲ. ಆದ್ದರಿಂದ, ಹಳ್ಳಿಯಲ್ಲಿ ಬೂಟುಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯನ್ನು ಹರಿವಂಶಜೀ ಬೂಟುಗಳನ್ನು ತಯಾರಿಸಿ ಕೊಡಲು ಕೇಳಿಕೊಂಡರು. ಹರಿವಂಶಜೀ ಅವರು, ಶ್ರೀಮಂತನೊಬ್ಬ ತನ್ನ ಬಂಗಲೆಯ ಪ್ರಗತಿ ನೋಡಲು ಪದೇಪದೇ ಭೇಟಿ ನೀಡುವಂತೆ ತಮ್ಮ ಬೂಟಿನ ಸ್ಥಿತಿ ತಿಳಿಯಲು ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಪ್ರತಿ ದಿನ ಶೂ ಹೊಲೆಯುವಾತನನ್ನು ಯಾವಾಗ ತನ್ನ ಬೂಟು ಸಿದ್ಧವಾಗುತ್ತದೆ ಎಂದು ಕೇಳುತ್ತಿದ್ದರು. ಹರಿವಂಶ್ ಜೀ ಅವರು ಎಷ್ಟು ಮುಗ್ಧರು ಎಂಬುದು ಇದರಿಂದ ವೇದ್ಯವಾಗುತ್ತದೆ.

ಹರಿವಂಶ್ ಅವರು ಜೆ.ಪಿ.ಅವರಿಂದ ತೀವ್ರ ಪ್ರಭಾವಿತರಾಗಿದ್ದಾರೆ. ಆ ಸಮಯದಲ್ಲಿ, ಪುಸ್ತಕಗಳ ಮೇಲಿನ ಅವನ ಪ್ರೀತಿಯೂ ಬೆಳೆಯಿತು. ಅದಕ್ಕೆ ಸಂಬಂಧಿಸಿದ ಘಟನೆಯೊಂದನ್ನು ನಾನು ತಿಳಿದುಕೊಂಡೆದ್ದೇನೆ. ಹರಿವಂಶಜೀ ಅವರು ಮೊದಲ ಬಾರಿಗೆ ಸರ್ಕಾರಿ ವಿದ್ಯಾರ್ಥಿವೇತನವನ್ನು ಪಡೆದಾಗ, ಅವರ ಕುಟುಂಬದ ಕೆಲವು ಸದಸ್ಯರು ಅವರು ಇಡೀ ವಿದ್ಯಾರ್ಥಿವೇತನದ ಹಣವನ್ನು ಮನೆಗೆ ತರುತ್ತಾರೆ ಎಂದು ಆಶಿಸಿದ್ದರು. ವಿದ್ಯಾರ್ಥಿವೇತನದ ಹಣವನ್ನು ಮನೆಗೆ ತರುವ ಬದಲು, ಹರಿವಂಶಜೀ ಇಡೀ ಹಣವನ್ನು ಪುಸ್ತಕಗಳಿಗಾಗಿ ಖರ್ಚು ಮಾಡಿದರು. ಅವರು ಆತ್ಮಚರಿತ್ರೆ ಮತ್ತು ಸಾಹಿತ್ಯ ಸೇರಿದಂತೆ ಹಲವಾರು ಪುಸ್ತಕಗಳನ್ನು ಮನೆಗೆ ತಂದರು. ಅಂದಿನಿಂದ, ಹರಿವಂಶಜೀಯವರ ಪುಸ್ತಕಗಳ ಮೇಲಿನ ಪ್ರೀತಿ ಹಾಗೇ ಉಳಿದಿದೆ.

ಮಾನ್ಯ ಸಭಾಪತಿಯವರೇ, ಹರಿವಂಶ್ ಅವರು ಸುಮಾರು ನಾಲ್ಕು ದಶಕಗಳ ಸಾಮಾಜಿಕ ಕಾರ್ಯಗಳು ಮತ್ತು ಪತ್ರಿಕೋದ್ಯಮದ ನಂತರ 2014 ರಲ್ಲಿ ಸಂಸತ್ತಿಗೆ ಪ್ರವೇಶ ಪಡೆದರು. ಹರಿವಂಶಜೀ ಅವರು ಸದನದ ಉಪಾಧ್ಯಕ್ಷರಾಗಿ ಸ್ವಾಮ್ಯವನ್ನು ಉಳಿಸಿಕೊಂಡ ರೀತಿ, ಸಂಸದರಾಗಿ ಅವರ ಅಧಿಕಾರಾವಧಿಯೂ ಅಷ್ಟೇ ಆಕರ್ಷಕವಾಗಿದೆ. ಸದಸ್ಯರಾಗಿ, ಹರಿವಂಶ್ ಜಿ ಅವರು ತಮ್ಮ ಅಭಿಪ್ರಾಯಗಳನ್ನು ಆರ್ಥಿಕತೆ ಅಥವಾ ಕಾರ್ಯತಂತ್ರದ ಸುರಕ್ಷತೆಯ ಬಗ್ಗೆ ಬಹಳ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ.

ಅವರು ತಮ್ಮ ಅಭಿಪ್ರಾಯಗಳನ್ನು ಮನಮೋಹಕವಾಗಿ ಮಂಡಿಸುವ ಮೂಲಕ ಛಾಪು ಮೂಡಿಸಿದ್ದಾರೆಂಬುದು ನಮಗೆಲ್ಲರಿಗೂ ತಿಳಿದಿದೆ. ಸದನದ ಸದಸ್ಯರಾಗಿ ತಮ್ಮ ಜ್ಞಾನ ಮತ್ತು ಅನುಭವದಿಂದ ರಾಷ್ಟ್ರ ಸೇವೆ ಮಾಡಲು ಎಲ್ಲ ಪ್ರಯತ್ನಗಳನ್ನು ಅವರು ಮಾಡಿದ್ದಾರೆ. ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆ ಮತ್ತು ನಿಲುವನ್ನು ಹೆಚ್ಚಿಸಲು ಹರಿವಂಶ್ ಕೆಲಸ ಮಾಡಿದ್ದಾರೆ, ಇದು ಅಂತರ–ಸಂಸದೀಯ ಒಕ್ಕೂಟದ ಹಲವಾರು ಸಭೆಗಳೇ ಆಗಿರಲಿ, ಅಥವಾ ಇತರ ದೇಶಗಳಲ್ಲಿನ ಭಾರತೀಯ ಸಾಂಸ್ಕೃತಿಕ ನಿಯೋಗಗಳ ಸದಸ್ಯರಾಗಿ ಅವರ ಜವಾಬ್ದಾರಿಯಾಗಿರಲಿ. ಹರಿವಂಶಜೀ ಅಂತಹ ಎಲ್ಲ ಸ್ಥಳಗಳಲ್ಲಿ ಭಾರತದ ಮತ್ತು ದೇಶದ ಸಂಸತ್ತಿನ ಘನತೆಯನ್ನು ಹೆಚ್ಚಿಸಿದ್ದಾರೆ.

ಮಾನ್ಯ ಸಭಾಪತಿಯವರೇ, ಸದನದ ಉಪ ಸಭಾಪತಿಯಾಗಿರುವುದರ ಜೊತೆಗೆ, ಹರಿವಂಶಜೀ ರಾಜ್ಯಸಭೆಯ ಹಲವಾರು ಸಮಿತಿಗಳ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಂತಹ ಹಲವಾರು ಸಮಿತಿಗಳ ಅಧ್ಯಕ್ಷರಾಗಿ, ಹರಿವಂಶ್ ಸಮಿತಿಗಳ ಕಾರ್ಯಚಟುವಟಿಕೆಯನ್ನು ಸುಧಾರಿಸಿದ್ದಾರೆ ಮತ್ತು ಅವರ ಪಾತ್ರವನ್ನು ಪರಿಣಾಮಕಾರಿಯಾಗಿ ಎತ್ತಿ ತೋರಿಸಿದ್ದಾರೆ.

ಸಂಸದರು ಪತ್ರಕರ್ತರಾಗಿರುವವರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಹರಿವಂಶಿ ಯಾವಾಗಲೂ ಒಂದು ದೀಕ್ಷೆಯಲ್ಲಿದ್ದಾರೆ ಎಂದು ನಾನು ಕಳೆದ ಬಾರಿ ಹೇಳಿದ್ದೆ. ಸಂಸದರಾದ ನಂತರ, ಎಲ್ಲಾ ಸಂಸದರನ್ನು ಅವರ ನಡವಳಿಕೆಯಲ್ಲಿ ಹೆಚ್ಚು ಆತ್ಮಸಾಕ್ಷಿ ಉಳಿಯುವಂತೆ ಮಾಡಲು ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು.

ಮಾನ್ಯ ಸಭಾಪತಿಯವರೇ, ಹರಿವಂಶಜೀ ಅವರ ಸಂಸದೀಯ ವ್ಯವಹಾರ ಮತ್ತು ಜವಾಬ್ದಾರಿಗಳ ಜೊತೆಗೆ ಬೌದ್ಧಿಕರಾಗಿ ಮತ್ತು ಚಿಂತಕರಾಗಿ ಅಷ್ಟೇ ಸಕ್ರಿಯರಾಗಿದ್ದಾರೆ. ಅವರು ದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅವರು ಭಾರತದ ಆರ್ಥಿಕ, ಸಾಮಾಜಿಕ, ವ್ಯೂಹಾತ್ಮಕ ಮತ್ತು ರಾಜಕೀಯ ಸವಾಲುಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಅವರಲ್ಲಿರುವ ಪತ್ರಕರ್ತ ಮತ್ತು ಬರಹಗಾರ ಇನ್ನೂ ಜೀವಂತವಾಗಿದೆ. ಅವರ ಪುಸ್ತಕವು ನಮ್ಮ ಮಾಜಿ ಪ್ರಧಾನಿ ಶ್ರೀ ಚಂದ್ರಶೇಖರ್ ಜೀಯವರ ಜೀವನವನ್ನು ನಿಕಟವಾಗಿ ಎತ್ತಿ ತೋರಿಸುತ್ತದೆ ಮತ್ತು ಹರಿವಂಶ್ ಅವರ ಬರವಣಿಗೆಯ ಶೈಲಿಯನ್ನೂ ತೋರಿಸುತ್ತದೆ. ನಾನು ಮತ್ತು ಈ ಸದನದ ಎಲ್ಲ ಸದಸ್ಯರ ಅದೃಷ್ಟ, ಹರಿವಂಶ್ ಜಿ ಅವರು ಉಪಸಭಾಪತಿಯಾಗಿ ಮುಂದುವರಿಯುತ್ತಿದ್ದಾರೆ.

ಗೌರವಾನ್ವಿತ ಸಭಾಪತಿಯವರೇ, ಸಂಸತ್ತಿನ ಈ ಮೇಲ್ಮನೆ 250 ಕ್ಕೂ ಹೆಚ್ಚು ಅಧಿವೇಶನಗಳನ್ನು ನಡೆಸುವ ಮೂಲಕ ಪ್ರಯಾಣವನ್ನು ಮುಂದುವರಿಸಿದೆ. ಈ ಪ್ರಯಾಣ ನಮ್ಮ ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಪುರಾವೆಯಾಗಿದೆ. ಮತ್ತೊಮ್ಮೆ, ಈ ಮಹತ್ವದ ಮತ್ತು ದೊಡ್ಡ ಜವಾಬ್ದಾರಿಗಾಗಿ ಹರಿವಂಶ್ ಅವರಿಗೆ ತುಂಬಾ ಶುಭಾಶಯಗಳು. ನೀವು ಆರೋಗ್ಯಕರವಾಗಿರುತ್ತೀರಿ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವ ಮೂಲಕ ಮೇಲ್ಮನೆಯ ನಿರೀಕ್ಷೆಗಳಿಗೆ ಅನುಗುಣವಾಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ. ಹರಿವಂಶ್ ಅವರಿಗೆ ಸ್ಪರ್ಧೆ ಒಡ್ಡಿದ ಮನೋಜ್ ಝಾ ಅವರಿಗೂ ನನ್ನ ಶುಭಾಶಯಗಳು. ಪ್ರಜಾಪ್ರಭುತ್ವದ ಘನತೆಗೆ ಚುನಾವಣಾ ಪ್ರಕ್ರಿಯೆಯು ಸಹ ಮುಖ್ಯವಾಗಿದೆ. ನಮ್ಮ ಬಿಹಾರ ಪ್ರಜಾಪ್ರಭುತ್ವದ ನೀತಿಯ ಭೂಮಿಯಾಗಿದೆ. ಹರಿವಂಶ್ ಜೀ ಈ ಸದನದ ಮೂಲಕ ವೈಶಾಲಿಯ ಸಂಪ್ರದಾಯ, ಬಿಹಾರದ ವೈಭವ ಮತ್ತು ಆದರ್ಶಗಳನ್ನು ಹೆಚ್ಚಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ.

ಈ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಸದನದ ಎಲ್ಲ ಗೌರವಾನ್ವಿತ ಸದಸ್ಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಮತ್ತೊಮ್ಮೆ ಹರಿವಂಶಜೀ ಅವರಿಗೆ ಮತ್ತು ಎಲ್ಲ ಸದಸ್ಯರಿಗೆ ತುಂಬಾ ತುಂಭಾ ಅಭಿನಂದನೆಗಳು

ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
Prime Minister Narendra Modi pays tributes to Freedom Fighter, Shri Pingali Venkayya on his 150th birth anniversary
August 02, 2026

The Prime Minister, Shri Narendra Modi, paid tributes to freedom fighter, Shri Pingali Venkayya on his 150th birth anniversary.

The Prime Minister remembered Pingali Venkayya for his invaluable role in giving the nation the Tricolour and said that his efforts continue to inspire people to serve the country with dedication and patriotic fervour.

Shri Modi said that the Tiranga fills every Indian heart with immense pride and inspires the nation to work towards nation-building.

The Prime Minister wrote on X;

“Tributes to Pingali Venkayya Ji on his 150th birth anniversary. He is remembered for his invaluable role in giving our nation the Tricolour. May his efforts always inspire people to serve our country with dedication and patriotic fervour.

The Tiranga fills every Indian heart with immense pride and inspires us to work towards nation building.”