ಶೇರ್
 
Comments

ಬಾಂಗ್ಲಾದೇಶದ ಪ್ರಧಾನಮಂತ್ರಿ ಗೌರವಾನ್ವಿತ ಷೇಕ್ ಹಸೀನಾ ಅವರ ಆಹ್ವಾನದ ಮೇರೆಗೆ ನಾನು 2021ರ ಮಾರ್ಚ್ 26 ಮತ್ತು 27ರಂದು ಬಾಂಗ್ಲಾ ಭೇಟಿ ಕೈಗೊಳ್ಳುತ್ತಿದ್ದೇನೆ.

ಕೋವಿಡ್ -19 ಸಾಂಕ್ರಾಮಿಕದ ನಂತರ ಭಾರತದೊಂದಿಗೆ ಸಾಂಸ್ಕೃತಿಕ, ಭಾಷಾ ಮತ್ತು ಜನರ ನಡುವೆ ಆಳವಾದ ಸಂಬಂಧ ಹಂಚಿಕೊಂಡಿರುವ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಮೊದಲ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ನನಗೆ ಸಂತಸ ತಂದಿದೆ. 

ಬಾಂಗ್ಲಾದೇಶದ ರಾಷ್ಟ್ರಪಿತ ಬಂಗಬಂಧು ಷೇಕ್ ಮುಜಿಬುರ್ ರೆಹಮಾನ್ ಅವರ ಶತಮಾನೋತ್ಸವದ ಅಂಗವಾಗಿ ನಾಳೆ ನಡೆಯಲಿರುವ ರಾಷ್ಟ್ರೀಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಬಂಗಬಂಧು ಕಳೆದ ಶತಮಾನದ ಅತಿ ಶ್ರೇಷ್ಠ ನಾಯಕರಿದ್ದಾರೆ, ಅವರ ಜೀವನ ಮತ್ತು ಆದರ್ಶಗಳು ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದೆ.  ತುಂಗಿಪಾರಾದಲ್ಲಿರುವ ಬಂಗಬಂಧು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ

ಪುರಾಣಕಥೆಗಳ ಪರಂಪರೆಯಲ್ಲಿ 51 ಶಕ್ತಿ ಪೀಠಗಳಿದ್ದು, ಅವುಗಳಲ್ಲಿ ಒಂದಾಗಿರುವ ದೇವತೆ ಕಾಳಿ ನೆಲೆಸಿರುವ ಪುರಾತನ ಜಶೋರೇಶ್ವರಿ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ನಾನು ಕಾಯುತ್ತಿದ್ದೇನೆ.  ಎದುರು ನೋಡುತ್ತಿದ್ದೇನೆ.

ಅಲ್ಲದೆ, ವಿಶೇಷವಾಗಿ ನಾನು ಶ್ರೀ ಹರಿಚಂದ್ರ ಠಾಕೂರ್ ಜಿ ಅವರು ಧಾರ್ಮಿಕ ಸಂದೇಶವನ್ನು ಪಸರಿಸಿದ ಒರಾಕಂಡಿಯಲ್ಲಿ ಮತುವಾ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವುದನ್ನು ಎದುರು ನೋಡುತ್ತಿದ್ದೇನೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದ ಅತ್ಯಂತ ಪಲಪ್ರಧ ಮಾತುಕತೆಯ ಮುಂದುವರಿದ ಭಾಗವಾಗಿ ಪ್ರಧಾನಮಂತ್ರಿ ಷೇಕ್ ಹಸೀನಾ ಅವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಲಿದ್ದೇನೆ. ಅಲ್ಲದೆ, ಗೌರವಾನ್ವಿತ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮತ್ತು ಇತರೆ ಬಾಂಗ್ಲಾದೇಶದ ಗಣ್ಯರೊಂದಿಗೆ ಸಮಾಲೋಚನೆಗಳನ್ನು ಎದುರು ನೋಡುತ್ತಿದ್ದೇನೆ.

ಪ್ರಧಾನಮಂತ್ರಿ ಷೇಕ್ ಹಸೀನಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಾಂಗ್ಲಾದೇಶ ಗಮನಾರ್ಹ ಆರ್ಥಿಕ ಮತ್ತು ಅಭಿವೃದ್ಧಿ ಸಾಧಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಷ್ಟೇ ನನ್ನ ಭೇಟಿಯ ಉದ್ದೇಶವಲ್ಲ, ಜೊತೆಗೆ ಆ ದೇಶದ ಸಾಧನೆಗಳಿಗೆ ಭಾರತದ ನಿರಂತರ ಬೆಂಬಲ ನೀಡುವ ಬದ್ಧತೆಯಾಗಿದೆ. ಕೋವಿಡ್ -19 ವಿರುದ್ಧ ಬಾಂಗ್ಲಾದೇಶ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಮತ್ತು ಒಗ್ಗಟ್ಟನ್ನು ನಾನು  ವ್ಯಕ್ತಪಡಿಸುತ್ತೇನೆ.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Govt saved ₹1.78 lakh cr via direct transfer of subsidies, benefits: PM Modi

Media Coverage

Govt saved ₹1.78 lakh cr via direct transfer of subsidies, benefits: PM Modi
...

Nm on the go

Always be the first to hear from the PM. Get the App Now!
...
NaMo App Abhiyaan In Full Gear, Delhi BJP Karyakartas Puts Pedal To The Metal
August 04, 2021
ಶೇರ್
 
Comments

Energetic Delhi Karyakartas turn the #NaMoAppAbhiyaan drive kinetic. From Yuva to Buzurg, a large no. of Dilli-wallahs are getting on the NaMo App!