ದೃಢ ಕ್ರಮಗಳನ್ನು ತೆಗೆದುಕೊಳ್ಳಲು ಇಡೀ ಪ್ರಪಂಚಕ್ಕೆ ಸಮಯ ಬಂದಿದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಅದರ ಅಪರಾಧಿಗಳ ವಿರುದ್ಧ ಏಕೀಕರಿಸಿದೆ: ಪ್ರಧಾನಿ
ಭಾರತ ಮತ್ತು ಅರ್ಜೆಂಟೈನಾವು ನಮ್ಮ ಸಂಬಂಧಗಳನ್ನು ಆಯಕಟ್ಟಿನ ಪಾಲುದಾರಿಕೆಗೆ ಹೆಚ್ಚಿಸಲು ಮತ್ತು ಶಾಂತಿ, ಸ್ಥಿರತೆ, ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಿರ್ಧರಿಸಿದೆ: ಪ್ರಧಾನಿ
ಭಾರತ ಮತ್ತು ಅರ್ಜೆಂಟೈನಾವು ಅನೇಕ ವಿಧಗಳಲ್ಲಿ ಪರಸ್ಪರ ಪೂರಕವಾಗಿದ್ದು, ಎರಡೂ ದೇಶಗಳು ಹಂಚಿಕೆಯ ಸಂಬಂಧಗಳ ಲಾಭವನ್ನು ಪಡೆಯಬೇಕು:ಪ್ರಧಾನಿ

ನನ್ನ ಸ್ನೇಹಿತರಾದ ರಾಷ್ಟ್ರಪತಿ ಮಾಕ್ರಿಯವರೇ ಮತ್ತು ಅರ್ಜೇಂಟೀನಾದಿಂದ ಬಂದಂತಹ ಎಲ್ಲ ವಿಶೇಷ ಅತಿಥಿಗಳೇ, ನಮಸ್ಕಾರ,  ನಾನು ರಾಷ್ಟ್ರಪತಿಗಳು, ಅವರ ಕುಟುಂಬ ಮತ್ತು ಗಣ್ಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಬ್ಯೂನಸ್ ಏರಿಸ್ ನಲ್ಲಿ ನಮ್ಮ ಸಮಾಲೋಚನೆಯ 2 ತಿಂಗಳ ನಂತರ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ಅವಕಾಶ ನನಗೆ ಲಭಿಸಿದ್ದು ನಿಜಕ್ಕೂ ಬಹಳ ಸಂತೋಷದ ಸಂಗತಿ. ಈ ಸುಸಂದರ್ಭದಲ್ಲಿ 2018 ರ ಜಿ 20 ಶೃಂಗ ಸಭೆಯ ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ನಾನು ರಾಷ್ಟ್ರಪತಿಗಳಾದ ಮಾಕ್ರಿ ಮತ್ತು ಅವರ ತಂಡವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.  ಸಮ್ಮೇಳನದ ಆತಿಥೇಯವನ್ನು ಯಶಸ್ವಿಗೊಳಿಸುವುದರಲ್ಲಿ ರಾಷ್ಟ್ರಪತಿ ಮಾಕ್ರಿ ಅವರ ನೇತೃತ್ವ ಬಹಳ ಮಹತ್ವದ್ದಾಗಿದೆ. ಬ್ಯೂನಸ್ ಏರಿಸ್ ನ ಶೃಂಗ ಸಭೆಯಲ್ಲಿ ರಾಷ್ಟ್ರಪತಿ ಮಾಕ್ರಿಯವರು ಒಂದು ಆಹ್ಲಾದಕರ ಸುದ್ದಿ ನೀಡಿದರು, 2022ರಲ್ಲಿ ಭಾರತ ತನ್ನ 75ನೇ ಸ್ವಾತಂತ್ರ್ಯ ಆಚರಣೆ ಸಂದರ್ಭದಲ್ಲಿ, ಜಿ 20 ಶೃಂಗ ಸಭೆಯ ಆತಿಥ್ಯವಹಿಸಲಿದೆ ಎಂದರು. ಇದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿರುತ್ತೇನೆ.

ಸ್ನೇಹಿತರೇ,

 

ಇಂದು ರಾಷ್ಟ್ರಪತಿ ಮಾಕ್ರಿಯವರ ಜೊತೆಗಿನ ನನ್ನ 5 ನೇ ಸಭೆ, ವೇಗವಾದ ಮತ್ತು ಉಭಯ ರಾಷ್ಟ್ರಗಳ ನಡುವಿನ ಬೆಳೆಯುತ್ತಿರುವ ದ್ವಿಪಕ್ಷೀಯ ಒಪ್ಪಂದದ ವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಎರಡೂ ದೆಶಗಳ ನಡುವಿನ 15,000 ಕಿಲೋ ಮೀಟರ್ ಅಂತರ ಕೇವಲ ಒಂದು ಸಂಖ್ಯೆ ಎಂದು ನಾವು ಸಾಬೀತು ಮಾಡಿದ್ದೇವೆ. ರಾಷ್ಟ್ರಪತಿ ಮಾಕ್ರಿ ಅವರ ಈ ಭೇಟಿ ಒಂದು ವಿಶೇಷ ವರ್ಷದಲ್ಲಿ ನಡೆಯುತ್ತಿದೆ; ಇದು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವರ್ಷ. ಆದರೆ, ನಮ್ಮ ಜನರ ಪರಸ್ಪರ ಸಂಬಂಧಗಳು ಇದಕ್ಕಿಂತಲೂ ಹಳೆಯದು. ಗುರುದೇವ್ ರಬೀಂದ್ರನಾಥ್ ಠಾಗೋರ್ ರವರು 1924ರಲ್ಲಿ ಅರ್ಜೆಂಟಿನಾಗೆ ತೆರಳಿದ್ದರು. ಅವರ ಅಂದಿನ ಪಯಣದ ಅಪಾರ ಪರಿಣಾಮ, ಅವರ ಸೃಷ್ಟಿಗಳಿಂದ ಅಮರವಾಗಿದೆ. ಉಭಯ ದೇಶಗಳು ಉಭಯತ್ರರ ಮೌಲ್ಯಾಧಾರಗಳನ್ನು ಮತ್ತು ಹಿತಾಸಕ್ತಿಗಳನ್ನು ಆಧರಿಸಿ  ಶಾಂತಿ, ಸ್ಥಿರತೆ, ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗೆ ಪ್ರೋತ್ಸಾಹ ನೀಡಲು ಉಭಯ ದೇಶಗಳು ತಮ್ಮ ಸಂಬಂಧಕ್ಕೆ ರಾಜತಾಂತ್ರಿಕ ಪಾಲುದಾರಿಕೆ ರೂಪವನ್ನು ನೀಡಿವೆ. ವಿಶ್ವ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪದನೆ ಬಹು ದೊಡ್ಡ ಮತ್ತು ಗಂಭೀರವಾದ ಅಪಾಯವಾಗಿದೆ ಎಂಬ ವಿಷಯಕ್ಕೆ ನಾನು ಮತ್ತು ರಾಷ್ಟ್ರಪತಿ ಮಾಕ್ರಿಯವರು ಸಮ್ಮತಿಸುತ್ತೇವೆ. ಪುಲ್ವಾಮಾದಲ್ಲಿ ಆದಂತಹ ಭೀಕರ ಭಯೋತ್ಪಾದಕ ದಾಳಿ, ಇನ್ನು ಮಾತಿಗೆ ಅವಕಾಶವಿಲ್ಲ ಎಂಬುದನ್ನು ತೋರಿಸುತ್ತದೆ. ಈಗ ಸಂಪೂರ್ಣ ವಿಶ್ವಕ್ಕೆ ಭಯೋತ್ಪಾದನೆ ಮತ್ತು ಅದನ್ನು ಸಮರ್ಥಿಸುವವರ ವಿರುದ್ಧ ಒಗ್ಗಟ್ಟಿನಿಂದ ದಿಟ್ಟ ಹೆಜ್ಜೆಯನ್ನಿಡುವ ಅವಶ್ಯಕತೆಯಿದೆ. ಭಯೋತ್ಪಾದಕರು ಮತ್ತು ಅವರ ಮಾನವೀಯತೆಗೆ ವಿರುದ್ಧ ಧೋರಣೆಗಳನ್ನು ಸಮರ್ಥಿಸುವವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ಮೀನ ಮೇಷ ಎನಿಸುವುದು ಕೂಡಾ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತೆಯೇ. ಜಿ 20 ರಾಷ್ಟ್ರಗಳ ಸದಸ್ಯರಾಗಿ ನಾವು  ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಹ್ಯಾಂಬರ್ಗ್ ಲೀಡರ್ ಸ್ಟೇಟ್ ಮೆಂಟ್ ನ 11 ಅಂಶಗಳ ಕಾರ್ಯ ಸೂಚಿಯನ್ನು ಜಾರಿಗೆ ತರುವುದು ಕೂಡಾ ಅವಶ್ಯಕವಾಗಿದೆ. ಈ ಸಂಬಂಧ ಇಂದು ನಮ್ಮ ಮಾತುಕತೆ ನಂತರ ಉಭಯ ದೇಶಗಳು ಭಯೋತ್ಪಾದನೆ ವಿರುದ್ಧ ಒಂದು ವಿಶೇಷ ಘೋಷಣೆಯನ್ನು ಹೊರಡಿಸಲಿದ್ದೇವೆ. ಅಂತರಿಕ್ಷ ಮತ್ತು ಪರಮಾಣು ಶಕ್ತಿಯ ಶಾಂತಿಪೂರ್ವಕ ಬಳಕೆಗಾಗಿ ಈ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಸಹಕಾರ ನಿರಂತರವಾಗಿ ವೃದ್ಧಿಸುತ್ತಿದೆ. ಭದ್ರತಾ ಸಹಕಾರಕ್ಕೆ ಸಂಬಂಧಿಸಿದಂತೆ ಇಂದು ಸಹಿ ಹಾಕಲಾದ ಒಪ್ಪಿಗೆ ಪತ್ರ ರಕ್ಷಣಾ ಕ್ಷೇತ್ರದಲ್ಲಿಯ ನಮ್ಮ ಸಹಕಾರಕ್ಕೆ ಒಂದು ಹೊಸ ಸ್ವರೂಪವನ್ನು ನೀಡಲಿದೆ. 

 

ಸ್ನೇಹಿತರೆ, 

 

ಭಾರತ ಮತ್ತು ಅರ್ಜೆಂಟೀನಾ ಹಲವಾರು ವಿಷಯಗಳಲ್ಲಿ ಪರಸ್ಪರ ಪೂರಕವಾಗಿವೆ. ಉಭಯತ್ರರ ಹಿತಕ್ಕಾಗಿ ಇದರ ಸಂಪೂರ್ಣ ಲಾಭ ಪಡೆಯಬೇಕು ಎಂಬುದು ನಮ್ಮ ಪ್ರಯತ್ವಾಗಿದೆ. ಅರ್ಜೆಂಟೀನಾ ಕೃಷಿಯ ಶಕ್ತಿ ಕೇಂದ್ರವಾಗಿದೆ. ತನ್ನ ಆಹಾರ ಭದ್ರತೆಗಾಗಿ ಭಾರತ ಇದನ್ನು ಒಂದು ಮಹತ್ವಪೂರ್ಣ ಪಾಲುದಾರನ ರೂಪದಲ್ಲಿ ಕಾಣುತ್ತದೆ. ಇಂದು ನಮ್ ಮಧ್ಯೆ ನಡೆದ ಆಗ್ರೋ ಇಂಡಸ್ಟ್ರೀಯಲ್ ಕೊ ಆಪರೇಶನ್ ನ ಕಾರ್ಯತಂತ್ರ, ಈ ನಿಟ್ಟಿನಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಐ ಸಿ ಟಿ ಕ್ಷೇತ್ರ, ವಿಶೇಷವಾಗಿ ಜೆ ಎ ಎಂ ಅಂದರೆ ಜನ್ ಧನ್- ಆಧಾರ್- ಮೊಬೈಲ್ ಟ್ರಿನಿಟಿ ಹಾಗೂ ಡಿಜಿಟಲ್ ಪಾವತಿ ಮೂಲಭೂತ ಸೌಲಭ್ಯಗಳ ವಿಷಯದಲ್ಲಿ ಭಾರತದ ಸಫಲತೆಯನ್ನು ಅರ್ಜೆಂಟೀನಾ ಜೊತೆಗೆ ಹಂಚಿಕೊಳ್ಳು ಸಿದ್ಧರಿದ್ದೇವೆ. 2030 ರ ವೇಳೆಗೆ ಕನಿಷ್ಟ 30% ವಾಹನಗಳು ಎಲೆಕ್ಟ್ರಿಕಲ್ ಬ್ಯಾಟರಿ ಚಾಲಿತವಾಗಬೇಕು  ಎಂಬ ಗುರಿಯನ್ನು ಹೊಂದಿದ್ದೇವೆ. ಅರ್ಜೆಂಟೀನಾ ಲಿಥಿಯಮ್ ಟ್ರೈಯಾಂಗಲ್ ನ ಭಾಗವಾಗಿದ್ದು ಇಲ್ಲಿ ವಿಶ್ವದ 54% ದಷ್ಟು ಲಿಥಿಯಮ್ ಭಂಡಾರವಿದೆ. ನಮ್ಮ ಜಂಟಿ  ಉದ್ಯಮ ‘ಕಾಬಿಲ್’ ಗಣಿಗಾರಿಕೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಅರ್ಜೆಂಟೀನಾದೊಂದಿಗೆ ಈಗಾಗಲೇ ಮಾತುಕತೆ ಆರಂಭಿಸಿದೆ. 

ಸ್ನೇಹಿತರೆ, 

 

ಕಳೆದ 10 ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರ ದುಪ್ಪಟ್ಟಿಗಿಂತ ಹೆಚ್ಚು ವೃದ್ಧಿಸಿ, 3 ಶತಕೋಟಿ  ಅಮೇರಿಕನ್ ಡಾಲರ್ ಗಿಂತಲೂ ಹೆಚ್ಚಾಗಿದೆ. ಕೃಷಿ, ಲೋಹ ಮತ್ತು ಖನಿಜ, ತೈಲ ಮತ್ತು ಅನಿಲ, ಔಷಧೀಯ ಕ್ಷೇತ್ರ, ರಾಸಾಯನಿಕಗಳು, ಮೋಟರ್ ವಾಹನಗಳು ಮತ್ತು ಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಹಳಷ್ಟು ಮಹತ್ವಪೂರ್ಣವಾದ ಅಭಿವೃದ್ಧಿಯ ಸಾಧ್ಯತೆಗಳಿವೆ. ಇಂದು ನಾವು ನಮ್ಮ ವ್ಯವಹಾರಿಕ ಸಂಬಂಧಕ್ಕೆ ಪುಷ್ಟಿ ನೀಡಲು ವಿಶೇಷ ವಿಧಾನಗಳನ್ನು ಕಂಡುಕೊಂಡಿದ್ದೇವೆ. ರಾಷ್ಟ್ರಪತಿ ಮಾಕ್ರಿಯವರೊಂದಿಗೆ ಅರ್ಜೆಂಟೀನಾದ ಬಹಳಷ್ಟು ಕಂಪನಿಗಳ ಪ್ರತಿನಿಧಿಗಳು ಇಂದು ಭಾರತಕ್ಕೆ ಆಗಮಿಸಿರುವುದು ನನಗೆ ಸಂತೋಷವೆನಿಸುತ್ತಿದೆ. ದೆಹಲಿ ಮತ್ತು ಮುಂಬೈನಲ್ಲಿರುವ ಉದ್ದಿಮೆದಾರರೊಂದಿಗೆ ಅವರ ಮಾತುಕತೆ ಫಲಪ್ರದವಾಗಿರಲಿದೆ ಎಂದು ನನಗೆ ಭರವಸೆಯಿದೆ. ಭಾರತ 2004 ರಲ್ಲಿ ಮೆರ್ಕೋಸುರ್ ನೊಂದಿಗೆ ಆದ್ಯತಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ರಾಷ್ಟ್ರವಾಗಿತ್ತು. ಅರ್ಜೆಂಟೀನಾದ ಪ್ರಸ್ತುತ ರಾಷ್ಟ್ರಪತಿಗಳ ಅವಧಿಯಲ್ಲಿ ಭಾರತ ಮೆರ್ಕೋಸುರ್ ವ್ಯಾಪಾರ ವಿಸ್ತರಣೆಗಾಗಿ ಅನೇಕ ಉಪಾಯಗಳ ಕುರಿತು ಇಂದು ನಾವು ಚರ್ಚಿಸಿದ್ದೇವೆ. 

 

ಸ್ನೇಹಿತರೇ, 

 

ಅರ್ಜೆಂಟೀನಾದಲ್ಲಿ ಭಾರತೀಯ ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಪ್ರಶಂಸಿಸುವವರು ಲಕ್ಷಾಂತರ ಜನರಿದ್ದಾರೆ. ಭಾರತದಲ್ಲಿ ಅರ್ಜೆಂಟೀನಾದ ಟ್ಯಾಂಗೋ ನೃತ್ಯ ಮತ್ತು ಫುಟ್ಬಾಲ್ ಬಹಳ ಜನಪ್ರಿಯವಾಗಿವೆ. ಜನರ ಮಧ್ಯೆ ಇನ್ನಷ್ಟು ಸಂಬಂಧ ವೃದ್ಧಿಗಾಗಿ ಇಂದು ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಪ್ರಸಾರ ಸಂಸ್ಥೆಗಳ ಮಧ್ಯೆ ಸಹಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿನಿಮಯಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ

 

ಸ್ನೇಹಿತರೇ

 

ಭಾರತ ಮತ್ತು ಅರ್ಜೆಂಟೀನಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉತ್ತಮ ಸಹಕಾರ ಹೊಂದಿವೆ. ಜಾಗತಿಕ ಶಾಂತಿ ಮತ್ತು ಸುರಕ್ಷತೆ, ಎಲ್ಲರ ಆರ್ಥಿಕ ಮತ್ತು ಸಾಮಾಜಿಕ ಔನ್ನತ್ಯಕ್ಕಾಗಿ ಬಹುಪಕ್ಷೀಯ ಸುಧಾರಣೆಯ ಅವಶ್ಯಕತೆಯನ್ನು ನಾವು ಪರಿಗಣಿಸುತ್ತೇವೆ. ಅರ್ಜೆಂಟೀನಾ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪಾಲನೆ, ವಾಸೆನಾರ್ ಅರೇಂಜ್ ಮೆಂಟ್ಸ್, ಆಸ್ಟ್ರೇಲಿಯಾ ತಂಡ ಮತ್ತು ಪರಮಾಣು ಸರಬರಾಜು ತಂಡಗಳಿಗೆ ಭಾರತ ಸದಸ್ಯತ್ವ ಪಡೆಯಲು ಅರ್ಜೆಂಟೀನಾ ಸಂಪೂರ್ಣ ಸಹಕಾರ ನೀಡಿದೆ. ದಕ್ಷಿಣ-ದಕ್ಷಿಣ ಸಹಕಾರ ನಮಗೆ ಬಹಳ ಮಹತ್ವಪೂರ್ಣವಾದದ್ದಾಗಿದೆ. 2019 ರಲ್ಲಿ ಬ್ಯೂನಸ್ ಏರಿಸ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ಕುರಿತಾದ 2 ನೇ ಉಚ್ಚಮಟ್ಟದ ಸಮ್ಮೇಳನದಲ್ಲಿ ಭಾರತದ ಸಕ್ರೀಯವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಲು  ನನಗೆ ಬಹಳ ಸಂತೋಷವೆನಿಸುತ್ತಿದೆ. ಜಲ ವಾಯು ಪರಿವರ್ತನೆಯ ವಿರುದ್ಧದ ಸಂಘರ್ಷದಲ್ಲಿ ನಮ್ಮ ವಿಚಾರಗಳು ಏಕರೂಪದ್ದಾಗಿವೆ. ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಯಲ್ಲಿ ಹೊಸ ಸದಸ್ಯ ಅರ್ಜೆಂಟೀನಾವನ್ನು ಸ್ವಾಗತಿಸಲು ನನಗೆ ಬಹಳ ಆನಂದವೆನಿಸುತ್ತಿದೆ. 

 

 

 

ಗೌರವಾನ್ವಿತರೇ ಭಾರತ ಪ್ರವಾಸದ ಆಮಂತ್ರಣವನ್ನು ಸ್ವೀಕರಿಸಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬವರ್ಗಕ್ಕೆ ಈ ಪ್ರವಾಸ ಆನಂದಮಯವಾಗಿರಲಿ ಎಂದು ಆಶಿಸುತ್ತೇನೆ. 

 

ಧನ್ಯವಾದ. 

 

ಮ್ಯುಚಸ್ ಗ್ರಾಸಿಯಾಸ್

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Silicon Sprint: Why Google, Microsoft, Intel And Cognizant Are Betting Big On India

Media Coverage

Silicon Sprint: Why Google, Microsoft, Intel And Cognizant Are Betting Big On India
NM on the go

Nm on the go

Always be the first to hear from the PM. Get the App Now!
...
PM Modi speaks with PM Netanyahu of Israel
December 10, 2025
The two leaders discuss ways to strengthen India-Israel Strategic Partnership.
Both leaders reiterate their zero-tolerance approach towards terrorism.
PM Modi reaffirms India’s support for efforts towards a just and durable peace in the region.

Prime Minister Shri Narendra Modi received a telephone call from the Prime Minister of Israel, H.E. Mr. Benjamin Netanyahu today.

Both leaders expressed satisfaction at the continued momentum in India-Israel Strategic Partnership and reaffirmed their commitment to further strengthening these ties for mutual benefit.

The two leaders strongly condemned terrorism and reiterated their zero-tolerance approach towards terrorism in all its forms and manifestations.

They also exchanged views on the situation in West Asia. PM Modi reaffirmed India’s support for efforts towards a just and durable peace in the region, including early implementation of the Gaza Peace Plan.

The two leaders agreed to remain in touch.