ಶೇರ್
 
Comments

ಸದನದಲ್ಲಿ ಮಂಡಿಸಲಾಗಿರುವ ಗೊತ್ತುವಳಿಯನ್ನು ತಿರಸ್ಕರಿಸಬೇಕು ಎಂದು ನಾನು ಎಲ್ಲಾ ಪಕ್ಷಗಳಿಗೂ ಮನವಿ ಮಾಡುತ್ತೇನೆ.

ಕೆಲವು ಸದಸ್ಯರು ವ್ಯಕ್ತಪಡಿಸಿರುವ ಋಣಾತ್ಮಕ ನಿಲುವನ್ನು ಇಂದು ಇಡೀ ದೇಶ ನೋಡಿದೆ. ಕೆಲವು ವ್ಯಕ್ತಿಗಳು ಅಭಿವೃದ್ದಿಯನ್ನು ಹೇಗೆ ಬಲವಾಗಿ ವಿರೋಧಿಸುತ್ತಿದ್ದಾರೆ ಎಂಬುದನ್ನು ಭಾರತ ಈಗ ನೋಡುವಂತಾಗಿದೆ.

ನೀವು ಚರ್ಚೆಗೆ ತಯಾರಾಗಿರದಿದ್ದರೆ ನೀವು ಗೊತ್ತುವಳಿಯನ್ನೇಕೆ ತಂದಿರಿ ?. ಗೊತ್ತುವಳಿಯನ್ನು ವಿಳಂಬ ಮಾಡಲು ನೀವೇಕೆ ಪ್ರಯತ್ನಿಸಿದಿರಿ.

ಅವರಿಗೆ ಹೇಳಲಿಕ್ಕಿದ್ದುದು ಒಂದೇ ಅಂಶ-"ಮೋದಿ"ಯನ್ನು ತೊಲಗಿಸಿ.

ನಾವು ವಿಪಕ್ಷಗಳ ಸದಸ್ಯರಲ್ಲಿ ಕಂಡದ್ದೇನೆಂದರೆ ಬಲವಾದ ಅಹಂಕಾರ,ಸಿಟ್ಟು. ನಾನು ಅವರಿಗೆ ಹೇಳಬಯಸುತ್ತೇನೆ ಏನೆಂದರೆ , ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಅದರಿಂದಾಗಿ ನಾವು ಇಲ್ಲಿಗೆ ಬಂದಿದ್ದೇವೆ.

ಅಧಿಕಾರಕ್ಕೆ ಬರಲು ಅವರ ಅವಸರ ಏನು?.

ಬೆಳಿಗ್ಗೆ , ಮತದಾನ ಮುಕ್ತಾಯಗೊಳ್ಳುವುದಕ್ಕೆ ಮೊದಲೇ , ಚರ್ಚೆ ಮುಕ್ತಾಯಗೊಳ್ಳುವುದಕ್ಕೆ ಮೊದಲೇ, ಓರ್ವ ವ್ಯಕ್ತಿ ನನ್ನತ್ತ ಓಡಿ ಬಂದು ಹೇಳಿದರು-ಉಟೋ, ಉಟೋ, ಉಟೋ…

ಓರ್ವ ಮೋದಿಯನ್ನು ಕೆಳಗಿಳಿಸಲು , ನೋಡಿ ಅವರು ಯಾರು ಯಾರನ್ನೆಲ್ಲ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ:

ನಾವು ಇಲ್ಲಿ ಸ್ವಾರ್ಥ ಸಾಧನೆಗಾಗಿ ಇರುವುದಲ್ಲ.

ನಾವು ಇಲ್ಲಿ ಇರುವುದಕ್ಕೆ ಕಾರಣ 125 ಕೋಟಿ ಜನರ ಆಶೀರ್ವಾದ.

ನಾವು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್”  ಮಂತ್ರದೊಂದಿಗೆ ದೇಶ ಸೇವೆ ಮಾಡುತ್ತಿದ್ದೇವೆ.

ಈ ಗ್ರಾಮಗಳಲ್ಲಿ ಬಹುತೇಕ ಗ್ರಾಮಗಳು ಪೂರ್ವ ಭಾರತ ಮತ್ತು ಈಶಾನ್ಯ ಭಾರತದಲ್ಲಿವೆ.

ನಮ್ಮ ಸರಕಾರ ಕಳೆದ 70 ವರ್ಷಗಳಿಂದ ಕತ್ತಲೆಯಲ್ಲಿದ್ದ 18,000 ಗ್ರಾಮಗಳನ್ನು ವಿದ್ಯುದ್ದೀಕರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಗೌರವಕ್ಕೆ ಪಾತ್ರವಾಗಿದೆ.

ದಾಖಲೆ ರೀತಿಯಲ್ಲಿ ಭಾರತದಾದ್ಯಂತ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

ಉಜ್ವಲಾ ಯೋಜನೆಯಿಂದಾಗಿ ಮಹಿಳೆಯರು ಹೊಗೆ ಮುಕ್ತ ಜೀವನ ನಡೆಸುವಂತಾಗಿದೆ.

ನಮ್ಮ ಸರಕಾರ ಬಡವರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಇದಕ್ಕೆ ಮೊದಲು ಬ್ಯಾಂಕುಗಳ ಬಾಗಿಲುಗಳು ಬಡವರಿಗಾಗಿ ತೆರೆದಿರಲಿಲ್ಲ.

ಈ ಸರಕಾರ ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಒದಗಿಸುವ  ಆಯುಷ್ಮಾನ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. : 

ಪ್ರಧಾನ ಮಂತ್ರಿ ಯೂರಿಯಾಕ್ಕೆ ಬೇವು ಲೇಪನ ಮಾಡುವ ನಿರ್ಧಾರದಿಂದ ಭಾರತದ ರೈತರಿಗೆ ಲಾಭವಾಗಿದೆ.

ನವೋದ್ಯಮ ಪರಿಸರ ಕ್ಷೇತ್ರದಲ್ಲಿ ಭಾರತ ತನ್ನದೇ ಗುರುತನ್ನು ಮೂಡಿಸಿದೆ. ಮುದ್ರಾ ಯೋಜನೆ ಹಲವಾರು ಯುವಕರ ಕನಸುಗಳನ್ನು ಈಡೇರಿಸುತ್ತಿದೆ.

ಭಾರತದ ಆರ್ಥಿಕತೆ ಬಲಿಷ್ಟಗೊಳ್ಳುತ್ತಿದೆ ಮತ್ತು ಭಾರತವು ಜಾಗತಿಕ ಆರ್ಥಿಕತೆಯನ್ನು ಬಲಗೊಳಿಸುತ್ತಿದೆ.

ಕಪ್ಪು ಹಣದ ವಿರುದ್ದದ ಹೋರಾಟ ಮುಂದುವರಿಯುತ್ತದೆ. ನನಗೆ ಗೊತ್ತಿದೆ, ನಾನಿದರಿಂದ ಹಲವು ವೈರಿಗಳನ್ನು ಸೃಷ್ಟಿಸಿಕೊಂಡಿದ್ದೇನೆ. ಆದರೆ ಅದೆಲ್ಲ ಒಳ್ಳೆಯದಕ್ಕೆ. ಕಾಂಗ್ರೆಸ್ಸಿಗೆ ಇ .ಸಿ.ಐ., ನ್ಯಾಯಾಂಗ, ಆರ್.ಬಿ.ಐ., ಅಂತಾರಾಷ್ಟ್ರೀಯ ಏಜೆನ್ಸಿಗಳ್ಯಾವುದರಲ್ಲೂ ನಂಬಿಕೆ ಇಲ್ಲ. ಅವರಿಗೆ ಯಾವುದರಲ್ಲೂ ವಿಶ್ವಾಸ ಇಲ್ಲ.

ನಾವು ಯಾವುದಕ್ಕಾಗಿ ಬಂದಿದ್ದೇವೆ. ಪ್ರತಿಯೊಂದಕ್ಕೂ ಮಕ್ಕಳಾಟಿಕೆ ಒಳ್ಳೆಯದಲ್ಲ.

ಒಬ್ಬರು ನಾಯಕರು ಧೋಕ್ಲಾಂ ಬಗ್ಗೆ ಮಾತನಾಡಿದರು. ಅದೇ ನಾಯಕರು ಚೀನಾ ರಾಯಭಾರಿಯನ್ನು ನಂಬಿದ್ದರು.

ಸದನದಲ್ಲಿ ರಾಫೆಲ್ ಬಗ್ಗೆ ಒಂದು ಬೇಜವಾಬ್ದಾರಿಯ ಆಪಾದನೆಯಿಂದಾಗಿ ಎರಡೂ ರಾಷ್ಟ್ರಗಳು ಹೇಳಿಕೆಗಳನ್ನು ಬಿಡುಗಡೆ ಮಾಡಬೇಕಾಯಿತು.

ಕಾಂಗ್ರೆಸ್ಸಿಗೆ ನನ್ನ ಕಳಕಳಿಯ ಮನವಿ ಏನೆಂದರೆ ದಯವಿಟ್ಟು ದೇಶದ ಭದ್ರತೆಯ ವಿಷಯದಲ್ಲಿ ರಾಜಕೀಯ ತರಬೇಡಿ.

ನಮ್ಮ ಸಶಸ್ತ್ರ ಪಡೆಗಳಿಗೆ ಮಾಡುವ ಈ ಅವಮಾನವನ್ನು ನಾನು ಸಹಿಸಿಕೊಳ್ಳುವುದಿಲ್ಲ.

ನೀವು ನನ್ನನ್ನು ನಿಮಗಿಷ್ಟ ಬಂದಂತೆ ಎಷ್ಟು ಬೇಕಾದರೂ ನಿಂದಿಸಬಹುದು, ಭಾರತದ ಜವಾನರನ್ನು ಅವಮಾನ ಮಾಡುವುದನ್ನು ನಿಲ್ಲಿಸಿ.

ನೀವು ಸರ್ಜಿಕಲ್ ಧಾಳಿಯನ್ನು ಜುಮ್ಲಾ ಧಾಳಿ ಎಂದಿದ್ದೀರಿ.

ನಾನು 1999ನ್ನು ನೆನಪಿಸಬಯುಸುತ್ತೇನೆ.  ಆಕೆ ರಾಷ್ಟ್ರಪತಿ ಭವನದ ಹೊರಗೆ ನಿಂತು ಹೇಳಿದ್ದರು-ನಾವು 272 ಮಂದಿ ಇದ್ದೇವೆ ಮತ್ತು ಇನ್ನಷ್ಟು ಮಂದಿ ನಮ್ಮನ್ನು ಸೇರುತ್ತಾರೆ ಎಂದು. ಆಕೆ ಅಟಲ್ ಜೀ ಅವರ ಸರಕಾರವನ್ನು ಅಸ್ಥಿರಗೊಳಿಸಿದರು ಮತ್ತು ಆಕೆಯದೇ ಸರಕಾರವನ್ನೂ ರಚಿಸಲಿಲ್ಲ.

ನಾನು ಹೇಳಿಕೆಯನ್ನು ಓದುತ್ತೇನೆ-“ ನಮಗೆ ಸಂಖ್ಯಾಬಲ ಇಲ್ಲವೆಂದು ಯಾರು ಹೇಳುತ್ತಾರೆ”

ಚರಣ್ ಸಿಂಗ್ ಜೀ ಅವರಿಗೆ ಕಾಂಗ್ರೆಸ್ಸು ಏನು ಮಾಡಿತು, ಅವರು ಚಂದ್ರಶೇಖರ್ ಜೀ ಅವರಿಗೆ ಏನು ಮಾಡಿದರು? ದೇವೇಗೌಡಜೀ ಅವರಿಗೆ ಏನು ಮಾಡಿದರು, ಐ.ಕೆ. ಗುಜ್ರಾಲ್ ಜೀ ಅವರಿಗೆ ಏನು ಮಾಡಿದರು. ಎರಡು ಬಾರಿ ನೋಟುಗಳ ಬಲದಿಂದ ಮತಗಳನ್ನು ಖರೀದಿಸುವಲ್ಲಿ ಕಾಂಗ್ರೆಸ್ಸು ಭಾಗಿಯಾಗಿತ್ತು.

ಇಂದು  ಏನು ಮಾಡಲಾಯಿತು ಎಂಬುದನ್ನು ಇಡೀಯ ದೇಶವೇ ನೋಡಿದೆ. ಅದು ಪ್ರತಿಯೊಬ್ಬರ ಎದುರು ನಡೆದ ಸ್ಪಷ್ಟ ಘಟನೆಯಾಗಿದೆ.

ಕಾಂಗ್ರೆಸ್ಸು ಆಂಧ್ರ ಪ್ರದೇಶವನ್ನು ವಿಭಜಿಸಿತು ಮತ್ತು ಆಗ ಅವರ ನಡತೆ ನಾಚಿಕೆಗೇಡಿನದಾಗಿತ್ತು.

ಎನ್.ಡಿ.ಎ. ಸರಕಾರ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅಭಿವೃದ್ದಿಗೆ ಬದ್ದವಾಗಿದೆ.

 

ವೈ.ಎಸ್.ಆರ್.ಸಿ.ಪಿ. ಜೊತೆಗಿನ  ನಿಮ್ಮ ಆಂತರಿಕ ರಾಜಕೀಯಕ್ಕಾಗಿ ನೀವಿದನ್ನು ಮಾಡುತ್ತಿದ್ದೀರಿ ಎಂದು ಎ.ಪಿ.ಸಿ.ಎಂ. ನನಗೆ ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಜನರಿಗೆ ನಾನು ಹೇಳಲಿಚ್ಚಿಸುತ್ತೇನೆ ಏನೆಂದರೆ ನಾವು ಅವರಿಗಾಗಿ ಕೆಲಸ ಮಾಡುತ್ತಿರುತ್ತೇವೆ. ಆಂಧ್ರ ಪ್ರದೇಶದ ಅಭಿವೃದ್ದಿಗೆ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ.

ಒಂದು ದೂರವಾಣಿ ಕರೆ ಅವರ ಹಿಂಬಾಲಕರಿಗೆ ಸಾಲ ಕೊಡಿಸುತ್ತಿತ್ತು ಮತ್ತು ದೇಶ ಸಂಕಷ್ಟಕ್ಕೆ ತುತ್ತಾಗುತ್ತಿತ್ತು.

ನಾನು ನಿಮಗೆ ಎನ್.ಪಿ.ಎ. ಸಮಸ್ಯೆಯನ್ನು ತಿಳಿಸಲು ಬಯಸುತ್ತೇನೆ. ಇಂಟರ್ ನೆಟ್ ಬ್ಯಾಂಕಿಂಗ್ ಬರುವುದಕ್ಕೆ ಮೊದಲು , ಕಾಂಗ್ರೆಸ್ಸು ಫೋನ್ ಬ್ಯಾಂಕಿಂಗ್ ಅನ್ನು ಸಂಶೋಧಿಸಿತ್ತು ಮತ್ತು ಇದು ಎನ್.ಪಿ.ಎ. ಗೊಂದಲಕ್ಕೆ ಕಾರಣವಾಯಿತು.

ಈ ಸರಕಾರ ಮುಸ್ಲಿಂ ಮಹಿಳೆಯರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ.

ಯಾವುದೇ ಹಿಂಸಾಚಾರ ದೇಶಕ್ಕೆ ಅವಮಾನ ಉಂಟು ಮಾಡುತ್ತದೆ. ನಾನು ಮತ್ತೊಮ್ಮೆ ರಾಜ್ಯ ಸರಕಾರಗಳಿಗೆ ಮನವಿ ಮಾಡುತ್ತೇನೆ-ಹಿಂಸಾಚಾರದಲ್ಲಿ ತೊಡಗಿಕೊಂಡಿರುವವರನ್ನು ಶಿಕ್ಷಿಸಿ.

ರಸ್ತೆ ನಿರ್ಮಾಣದಲ್ಲಿ, ಗ್ರಾಮಗಳಿಗೆ ಸಂಪರ್ಕ ಒದಗಿಸುವಲ್ಲಿ , ಐ-ವೇಗಳ ನಿರ್ಮಾಣದಲ್ಲಿ , ರೈಲ್ವೇ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರತ ದಾಖಲೆ ನಿರ್ಮಿಸುತ್ತಿದೆ.

 

 

Click here to read full text speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India exports Rs 27,575 cr worth of marine products in Apr-Sept: Centre

Media Coverage

India exports Rs 27,575 cr worth of marine products in Apr-Sept: Centre
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಡಿಸೆಂಬರ್ 2021
December 08, 2021
ಶೇರ್
 
Comments

The country exported 6.05 lakh tonnes of marine products worth Rs 27,575 crore in the first six months of the current financial year 2021-22

Citizens rejoice as India is moving forward towards the development path through Modi Govt’s thrust on Good Governance.