ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ಥಾನದ ಬರ್ಮೆರ್ ನ ಪಚಪಡ್ರಾದಲ್ಲಿ ರಾಜಸ್ಥಾನ ಶುದ್ಧೀಕರಣಾಗಾರದ ಕಾಮಗಾರಿ ಆರಂಭದ ಸಂದರ್ಭದಲ್ಲಿ ಉತ್ಸಾಹಿ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ರಾಜಸ್ಥಾನದ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೆ ಅವರನ್ನು ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ ಪ್ರಧಾನಿ, ಕೆಲವೇ ದಿನಗಳ ಹಿಂದೆ, ದೇಶ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದ್ದನ್ನು ಉಲ್ಲೇಖಿಸಿದರು. ಈ ಹಬ್ಬದ ಋತು ಸಮೃದ್ಧಿಯ ಸುಂಟರಗಾಳಿಯಾಗಿದೆ ಎಂದು ಅವರು ಹೇಳಿದರು. ಈ ಹಬ್ಬದ ಬಳಿಕ, ಹಲವರ ಬದುಕಿನಲ್ಲಿ ಸಂತಸ ಮತ್ತು ಸಮೃದ್ಧಿ ತರಬಹುದಾದ ಯೋಜನೆಗಾಗಿ ರಾಜಸ್ಥಾನದಲ್ಲಿರುವುದು ತಮಗೆ ಹರ್ಷತಂದಿದೆ ಎಂದರು.

ಇದು ಸಂಕಲ್ಪದಿಂದ ಸಿದ್ಧಿಯ ಕಾಲವಾಗಿದೆ, ನಾವು ನಮ್ಮ ಗುರಿಗಳನ್ನು ಗುರುತಿಸಬೇಕು ಮತ್ತು ಅದನ್ನು ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುವ 2022ರ ಹೊತ್ತಿಗೆ ಸಾಧಿಸುವತ್ತ ಶ್ರಮಿಸಬೇಕು ಎಂದು ಪ್ರಧಾನಿ ಹೇಳಿದರು.

ಮಾಜಿ ಉಪರಾಷ್ಟ್ರಪತಿ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಶ್ರೀ ಬೈರೋನ್ ಸಿಂಗ್ ಶೇಖಾವತ್ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ, ಅವರು ರಾಜಸ್ಥಾನವನ್ನು ಆಧುನೀಕರಿಸಲು ಶ್ರಮಿಸಿದರು ಎಂದರು. ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ನಾಯಕ ಶ್ರೀ ಜಸ್ವಂತ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಸ್ಮರಿಸಿ, ಅವರು ಶೀಘ್ರ ಗುಣಮುಖರಾಗಲಿ ಎಂದೂ ಪ್ರಧಾನಿ ಪ್ರಾರ್ಥಿಸಿದರು.

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಮತ್ತು ಸಂಕಷ್ಟದ ಸಂದರ್ಭದಲ್ಲಿ ಜನತೆಗೆ ನೆರವು ನೀಡಿದ ರಾಜಸ್ಥಾನದ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೆ ಮತ್ತು ರಾಜ್ಯ ಸರ್ಕಾರವನ್ನು ಪ್ರಧಾನಿ ಶ್ಲಾಘಿಸಿದರು.

ಕೇಂದ್ರ ಸರ್ಕಾರ, ಸಶಸ್ತ್ರ ಪಡೆಗಳಿಗೆ ಸಮಾನ ಶ್ರೇಣಿ, ಸಮಾನ ಪಿಂಚಣಿಯನ್ನು ಸಾಕಾರಗೊಳಿಸಲು ಬದ್ಧವಾಗಿದೆ ಎಂದ ಪ್ರಧಾನಿ, ಇದನ್ನು ಸಾಧ್ಯಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

ಜನ್ ಧನ್ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಈಗ ಬಡವರೂ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರು. ಅಡುಗೆ ಅನಿಲದ ಉಜ್ವಲ ಯೋಜನೆಯ ಬಗ್ಗೆಯೂ ಮಾತನಾಡಿದ ಅವರು, ವಿದ್ಯುತ್ ರಹಿತ 18 ಸಾವಿರ ಗ್ರಾಮಗಳ ವಿದ್ಯುದ್ದೀಕರಣದಲ್ಲಿ ಗಣನೀಯ ಪ್ರಗತಿ ಆಗಿದೆ ಎಂದರು.

ರಾಜಸ್ಥಾನದ ಪ್ರಗತಿ ಮತ್ತು ಪ್ರಯೋಜನಕ್ಕಾಗಿ ಬದ್ಧವಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೇ ಅವರನ್ನು ಪ್ರಧಾನಿ ಶ್ಲಾಘಿಸಿದರು.

 

 

Click here to read PM's speech 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How ODOP is helping Pratapgarh turn its amla into a bigger business

Media Coverage

How ODOP is helping Pratapgarh turn its amla into a bigger business
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಸೆಪ್ಟೆಂಬರ್ 2026
September 01, 2026

#ModiHaiTohMumkinHai: Economy, Diplomacy and Atmanirbhar Milestones in One Social-Media Sweep